By using this site, you agree to the Privacy Policy and Terms of Use.
Accept
VarthamanVarthamanVarthaman
Notification Show More
Font ResizerAa
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
    ArticlesShow More
    ತನು -ಮನ ತಂಪಾಗಿಸೋ ತಂಪು ಬೀಜಗಳು
    March 21, 2026
    ಪತ್ರಿಕೋದ್ಯಮದ ದಿಗ್ಗಜ ಬ್ರಹ್ಮಪುರಿಯ ಅಲೆಮಾರಿ
    March 17, 2026
    ಅತಿಥಿ ದೇವೋಭವ 
    March 15, 2026
    ಖನಿಜದ ಆಗರ ಅಳಿವೆ ( ಹಲೀಮ್ ಸೀಡ್ಸ್ )
    March 15, 2026
    ದ್ವೇಷಕ್ಕೆ ಬೆಂಕಿ ಹಚ್ಚಬೇಕು
    March 8, 2026
  • Sports
  • National
  • International
  • Crime
Reading: ಕಿತ್ತು ಬಂದ ಅರಮನೆ ವರಾಹ ಪ್ರವೇಶ ಛಾವಣಿ
Share
Font ResizerAa
VarthamanVarthaman
  • Home
  • Karnataka
  • Articles
  • Sports
  • National
  • International
  • Crime
Search
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
  • Sports
  • National
  • International
  • Crime
Follow US
Varthaman > Karnataka – Latest Breaking News > Karnataka > Mysore > ಕಿತ್ತು ಬಂದ ಅರಮನೆ ವರಾಹ ಪ್ರವೇಶ ಛಾವಣಿ
KarnatakaMysoreTrending

ಕಿತ್ತು ಬಂದ ಅರಮನೆ ವರಾಹ ಪ್ರವೇಶ ಛಾವಣಿ

Team Varthaman
Last updated: December 11, 2025 7:31 PM
Team Varthaman
Published: December 11, 2025
Share
SHARE

ಮೈಸೂರು: ಅರಮನೆಯ ಪಶ್ಚಿಮಕ್ಕೆ ಇರುವ ವರಾಹ ಪ್ರವೇಶದ್ವಾರಗಳ ಛಾವಣಿಯ ಮೇಲ್ಪದರದ ಗಾರೆ ಕುಸಿದಿದೆ. ಅದೃಷ್ಟ ವಶಾತ್ ಪ್ರವಾಸಿಗರಿಗೆ ಯಾವುದೇ ಅಪಾಯ ಸಂಭವಿಸಿಲ್ಲ.


ಅರಮನೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಅನೇಕ ಗುಮ್ಮಟಗಳು, ಕಮಾನುಗಳು, ಗೋಪುರಗಳಲ್ಲಿ ಬಿರುಕುಗಳು ಕಾಣಿಸಿಕೊಂಡಿದೆ. ಹಿಂದೊಮ್ಮೆ ಮಳೆ ಬಂದಾಗ ಅರಮನೆ ಸೋರುತ್ತಿದ್ದ ಉದಾಹರಣೆ ಸಹ ಇದೆ. ಇಂದು ಬೆಳಗ್ಗೆ ವರಾಹ ದ್ವಾರದ ಛಾವಣಿ ಗಾರೆಯ ಪದರಗಳು ಕೆಳಗೆ ಬಿದ್ದಿದೆ. ಅದೃಷ್ಟ ವಶಾತ್ ಕೆಳಗೆ ಬೈಕ್ ನಿಲ್ಲಿಸಿದ್ದರಿಂದ ಪದರಗಳು ಬೈಕ್ ಮೇಲೆ ಬಿದ್ದಿದೆ. ಬಿದ್ದ ರಭಸಕ್ಕೆ ಬೈಕ್ ಹ್ಯಾಂಡಲ್ ಬೆಂಡಾಗಿದೆ. ಅರಮನೆ ಮಂಡಳಿಗೆ ವಿಷಯ ತಿಳಿಯುತ್ತಿದ್ದಂತೆಯೆ ಪದರಗಳ ಅವಶೇಷಗಳನ್ನು ತೆರವುಗೊಳಿಸಿ ಸುತ್ತ ಬ್ಯಾರಿಕ್ಯಾಡ್ ನಿಲ್ಲಿಸಿ ಏನೂ ನಡೆದೇ ಇಲ್ಲವೆಂಬಂತೆ ತೋರ್ಪಡಿಸಿಕೊಳ್ಳಲಾಗಿದೆ.

Join WhatsApp Group

ದಾಖಲೆ ಪ್ರವಾಸಿಗರ ಭೇಟಿ: ಅಂಬಾವಿಲಾಸ ಅರಮನೆಗೆ 2023-24ರಲ್ಲಿ ಸುಮಾರು 40,56,975 ಪ್ರವಾಸಿಗರು ಭೇಟಿ ನೀಡಿದ್ದು, ಈ ಪೈಕಿ 34,604 ಮಂದಿ ವಿದೇಶಿ ಪ್ರವಾಸಿಗರಿದ್ದರು. ಇನ್ನು ಏಪ್ರಿಲ್ 2024ರಿಂದ ಮಾರ್ಚ್ 2025ರವರೆಗೆ 39,35,108 ಪ್ರವಾಸಿಗರು ಭೇಟಿ ನೀಡಿದ್ದು ಈ ಪೈಕಿ 44,788 ಮಂದಿ ವಿದೇಶಿ ಪ್ರವಾಸಿಗರಿದ್ದಾರೆ. ಮೈಸೂರಿನ ಪ್ರವಾಸೋದ್ಯಮ ಅಭಿವೃದ್ಧಿಯಲ್ಲಿ ಅಂಬಾವಿಲಾಸ ಅರಮನೆಯ ಕೊಡುಗೆ ಅಪಾರವಾಗಿದೆ.ಇದನ್ನು ಓದಿ –ಮೆದುಳಿನ ಕ್ಯಾನ್ಸರ್‌ಗೆ ಭಾರತದಲ್ಲಿ ಹೊಸ ಔಷಧ ಲಭ್ಯ

ಇಂತಹ ಅರಮನೆಯ ಹೊರ ಭಾಗದ ಗೋಡೆಗಳು ಬಿರುಕು ಬಿಡುತ್ತಿದ್ದು, ಇಂದು ವರಾಹ ಪ್ರವೇಶ ದ್ವಾರದ ಛಾವಣಿಯ ಮೇಲ್ಪದರದ ಗಾರೆ ಭಾಗಗಳು ಉದುರುತ್ತಿದ್ದು, ಕೆಲವು ಕಡೆ ಬಿರುಕುಗಳು ಕಾಣಿಸಿಕೊಂಡಿದೆ. ಚಾರಿತ್ರಿಕ ನಗರಿ ಮೈಸೂರಿಗೆ ಅರಮನೆಗಳ ನಗರಿ ಎಂಬ ಬಿರುದು ತಂದುಕೊಟ್ಟ ಅಂಬಾವಿಲಾಸ ಅರಮನೆಯ ಅಂದಕ್ಕೆ ಮತ್ತೊಂದು ಅರಮನೆ ಇಲ್ಲ. ಇಲ್ಲಿನ ವಾಸ್ತುಶಿಲ್ಪ, ದೀಪಾಲಂಕಾರ, ದರ್ಬಾರ್ ಹಾಲ್ ಹಾಗೂ ಐತಿಹಾಸಿಕ ಹಿನ್ನಲ್ಲೆಯಿಂದಾಗಿ ಅಂಬಾವಿಲಾಸ ಅರಮನೆ ಜಗತ್ತನ್ನು ಆಕರ್ಷಿಸುತ್ತಿದೆ. ವರ್ಷದಿಂದ ವರ್ಷಕ್ಕೆ ಅರಮನೆಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಪ್ರತಿ ವರ್ಷ ಲಕ್ಷಾಂತರ ಪ್ರವಾಸಿಗರನ್ನು ತನ್ನೆಡೆಗೆ ಸೆಳೆಯುವ ಈ ಅಂದದ ಅರಮನೆ ಕಟ್ಟಡಗಳ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಲರಾಮ ದ್ವಾರದ ಬಳಿ ಅರಮನೆ ಕಟ್ಟದ ಭಾಗಗಳು ಕುಸಿದು ಬಿದ್ದಿದ್ದು, ಅರಮನೆಯ ಅಂದಕ್ಕೆ ಅಡ್ಡಿಯುಂಟು ಮಾಡಿದೆ. ಸರಕಾರ ಈ ಕೂಡಲೇ ಅರಮನೆಯ ಕಟ್ಟಡ ಸಂರಕ್ಷಣೆಗೆ ಗಮನಹರಿಸಬೇಕೆಂಬುದೇ ಮೈಸೂರಿಗರ ಒತ್ತಾಸೆಯಾಗಿದೆ. 

  • ತನು -ಮನ ತಂಪಾಗಿಸೋ ತಂಪು ಬೀಜಗಳು
    by Team Varthaman
    March 21, 2026
  • ಕಿರುಕುಳ ಆರೋಪ: ಕಚೇರಿಯಲ್ಲೇ ಅಧಿಕಾರಿ ಆತ್ಮಹತ್ಯೆ
    by Team Varthaman
    March 21, 2026
  • ಇರಾನ್ ಜೊತೆ ಕದನ ವಿರಾಮ ಇಲ್ಲ: ಟ್ರಂಪ್ ಹೇಳಿಕೆ
    by Team Varthaman
    March 21, 2026
  • ಪ್ರೀಮಿಯಂ ಪೆಟ್ರೋಲ್ ದರ ಏರಿಕೆ
    by Team Varthaman
    March 20, 2026
  • RCB ಟಿಕೆಟ್ ಇದ್ದರೆ ಮೆಟ್ರೋ ಪ್ರಯಾಣ ಉಚಿತ
    by Team Varthaman
    March 20, 2026

 

ಶ್ರೀರಂಗಪಟ್ಟಣ ದಸರಾ ಭವ್ಯವಾಗಿ ಆರಂಭ – ಅಂಬಾರಿಗೆ ಪುಷ್ಪಾರ್ಚನೆ ಮಾಡಿ ಜಂಬೂ ಸವಾರಿ ಚಾಲನೆ
ಹಿಂಗಾರು ಚುರುಕು – KRS ಡ್ಯಾಂನಿಂದ ನೀರು ಬಿಡುವ ಸಾಧ್ಯತೆ
20 ಮಕ್ಕಳಿಗೆ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ
ಹರಿಯಾಣದಲ್ಲೂ ಮತ ಕಳ್ಳತನ : ರಾಗಾ ಗಂಭೀರ ಆರೋಪ
ಶಾಲಿನಿ ರಜನೀಶ್ ಬಗ್ಗೆ ಅಸಭ್ಯ ಹೇಳಿಕೆ: MLC ರವಿಕುಮಾರ್ ವಿರುದ್ಧ FIR ದಾಖಲು
TAGGED:breakingnewslatestnewsMysore NewsMysore palace
Share This Article
Facebook Email Print
Leave a Comment

Leave a Reply Cancel reply

Your email address will not be published. Required fields are marked *

Follow US

Find US on Social Medias
FacebookLike
XFollow
YoutubeSubscribe
TelegramFollow

Weekly Newsletter

Subscribe to our newsletter to get our newest articles instantly!
[mc4wp_form]
Popular News
Trending

ಕದನ ವಿರಾಮ: ಒಂದೇ ದಿನದಲ್ಲಿ 16 ಲಕ್ಷ ಕೋಟಿ ರೂ ಗಳಿಕೆ

Team Varthaman
Team Varthaman
May 12, 2025
ಪೊಲೀಸರಿಗೆ 1 ಲಕ್ಷ ವಸತಿಗೃಹ ನಿರ್ಮಾಣ ಗುರಿ: ಗೃಹ ಸಚಿವ ಪರಮೇಶ್ವರ್
19 ವರ್ಷದ ಯುವಕನಿಗೆ ಹೃದಯಾಘಾತ – ಸ್ಥಳದಲ್ಲೇ ದುರ್ಮರಣ
ತಿರುಪತಿ ಲಡ್ಡು ಕಲಬೆರಕೆ ಪ್ರಕರಣ: ₹234 ಕೋಟಿ ವಂಚನೆ ಬಯಲು
ನಾಲ್ಕು ದಿನಗಳ ಸಿಎಂ ಸಭೆ: ಶಾಸಕರಿಗೆ 50 ಕೋಟಿ ಅನುದಾನ
- Advertisement -
Ad imageAd image
Global Coronavirus Cases

Confirmed

0

Death

0

More Information:Covid-19 Statistics

Categories

  • Articles
  • Sports
  • Latest News
  • Karnataka News

About US

Since its inception in 1957, Varthamana has stood tall as one of the most trusted and respected Kannada daily newspapers. With deep roots in the rich cultural landscape of Karnataka, Varthamana continues to be the voice of the people, championing truth, transparency, and the values that define the region. Established with a strong commitment to ethical journalism, our newspaper has consistently provided comprehensive coverage, authentic news, and insightful editorials for over six decades. Today, under the dynamic leadership of Editor K. N. Ravi, Varthamana shines even brighter, blending a proud heritage with a modern outlook to meet the evolving needs of readers across the state. Our presence in the digital space, through Varthamana Digital, ensures that our trusted news and regional stories reach a wider audience faster and with greater impact.

Contact Us

© Varthaman. All Rights Reserved.
Welcome Back!

Sign in to your account

Username or Email Address
Password

Lost your password?