ಮೈಸೂರು: ನಾನು ಕೇಂದ್ರ ಕೇಂದ್ರಕ್ಕೆ ಹೋಗಿಲ್ಲ ಅಂದಮೇಲೆ ರಾಜ್ಯದಲ್ಲಿ ಇರಲೇಬೇಕಲ್ಲವಾ.? ಚಾಮರಾಜ ಕ್ಷೇತ್ರದಲ್ಲಿ ಹಾಲಿ ಕಾಂಗ್ರೆಸ್ ಶಾಸಕರಿದ್ದಾರೆ.
ಚಾಮರಾಜ ಕ್ಷೇತ್ರದಿಂದ ನನ್ನನ್ನು ಬಿಜೆಪಿ ಅಭ್ಯರ್ಥಿಯಾಗಿ ಮಾಡಬೇಕು ಎನ್ನುವುದು ಕ್ಷೇತ್ರದ ಜನರ ಆಸೆಯೂ ಕೂಡ ಆಗಿದೆ. ಹಾಗಾಗಿ ನಾನು ಅದಕ್ಕೆ ಬೇಕಾದ ತಯಾರಿಗಳನ್ನು ಮಾಡಿಕೊಳ್ಳುತ್ತೇನೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ರಾಜ್ಯ ರಾಜಕಾರಣಕ್ಕೆ ಬರುವ ಆಸಕ್ತಿಯನ್ನು ಬಹಿರಂಗವಾಗಿಯೇ ಹೇಳಿಕೊಂಡರು.
ಸೋಮವಾರ ನಗರದ ಖಾಸಗಿ ಹೋಟೆಲ್ ನಲ್ಲಿ ಚಾಮರಾಜ ಸ್ನೇಹ ಬಳಗ ಮತ್ತು ಪ್ರತಾಪ್ ಸಿಂಹ ಸ್ನೇಹ ಬಳಗದ ವತಿಯಿಂದ ಹೊರ ತಂದಿರುವ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಕ್ಯಾಲೆಂಡರ್ ಬಿಡುಗಡೆ ಮಾಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ತಾನು ಸಂಸದನಾಗಿ ಎರಡು ಅವಧಿಯ 10 ವರ್ಷಗಳಲ್ಲಿ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಕ್ಯಾಲೆಂಡರ್ ನಲ್ಲಿ ಮುದ್ರಣ ಮಾಡುವ ಮೂಲಕ ಅಭಿವೃದ್ಧಿ ಕೆಲಸಗಳ ಜನರಿಗೆ ಸಾರುವ ಮೂಲಕ ಜನರ ಮನಸ್ಸಿನಲ್ಲಿ ನಮ್ಮ ಕೆಲಸ ಕಾರ್ಯಗಳ ಮಾಸದೆ ನೆನಪಿಸುವ ಕೆಲಸ ಮಾಡಿದ್ದಾರೆ. ಹೌದು ನಾನು ಚಾಮರಾಜ ಕ್ಷೇತ್ರದ ಆಕಾಂಕ್ಷಿ ಎಂದು ಹಲವು ದಿನಗಳಿಂದ ಹೇಳಿಕೊಂಡು ಬಂದಿದ್ದೇನೆ. ಮತ್ತು ಕ್ಷೇತ್ರದ ಜನರ ಆಸೆಯೂ ಆಗಿದೆ.ಚಾಮರಾಜ ಕ್ಷೇತ್ರ ಹಿಂದೆ ಬಿಜೆಪಿ ಭದ್ರಕೋಟೆಯಾಗಿತ್ತು.
ಶಂಕರಲಿಂಗೇಗೌಡರನ್ನು ಸತತ ನಾಲ್ಕು ಬಾರಿ ಗೆಲ್ಲಿಸಿ ಕಳಿಸಿದ್ದ ಕ್ಷೇತ್ರ ಇದು.ಈಗ ಕಾಂಗ್ರೆಸ್ ಶಾಸಕರಿದ್ದಾರೆ.ಮುಂದೆ ಇಲ್ಲಿಂದ ಸ್ಪರ್ಧೆ ಮಾಡುವ ಆಸೆ ಸಹಜವಾಗಿ ನಾನು ಇಟ್ಟುಕೊಂಡಿದ್ದೇನೆ.ಅದಕ್ಕೆ ಬೇಕಾದ ಯೋಜನೆ, ತಯಾರಿಯನ್ನೂ ಮಾಡಿಕೊಂಡಿದ್ದೇನೆ. ಕೆ.ಆರ್ ಕ್ಷೇತ್ರಕ್ಕೆ ಶ್ರೀವತ್ಸ ಇದ್ದಾರೆ. ಚಾಮುಂಡೇಶ್ವರಿಗೆ ಜಿಟಿಡಿ ಇದ್ದಾರೆ.ಅದೇ ರೀತಿ ಚಾಮರಾಜ ಕ್ಷೇತ್ರಕ್ಕೆ ನಾನು ಒಬ್ಬ ಪ್ರಬಲ ಆಕಾಂಕ್ಷಿಯಾಗಿದ್ದೇನೆ. ಈ ಕ್ಷೇತ್ರ ಅತೀ ಹೆಚ್ಚು ವಿದ್ಯಾವಂತರು, ಸರ್ಕಾರಿ ಉದ್ಯೋಗಿಗಳು, ಶಿಕ್ಷಣ ಸಂಸ್ಥೆಗಳು ಸರ್ಕಾರಿ ಕಚೇರಿಗಳನ್ನು ಒಳಗೊಂಡಿರುವ ಕ್ಷೇತ್ರ ಈ ಕ್ಷೇತ್ರದ ಜನ ಆಮೀಷಗಳಿಗೆ ಒಳಗಾಗುವವರಲ್ಲ ಹಾಗಾಗಿ ಸ್ವಾಭಾವಿಕವಾಗಿ ಈ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದೇನೆ ಎಂದರು.
ಬಳ್ಳಾರಿ ಗಲಭೆ ವಿಚಾರವಾಗಿ ಮಾತನಾಡಿ, ಕರ್ನಾಟಕ ಈಗ ಯುಪಿಯಂತೆ ಕಾಣಿಸುತ್ತಿದೆ. ಇದೊಂದು ತಲೆ ತಗ್ಗಿಸುವ ಘಟನೆ. ಅಲ್ಲಿನ ಶಾಸಕ ಭರತ್ ರೆಡ್ಡಿಯ ಆಟೋಟೋಪ ಸೇವಿಸಲಾಗುತ್ತಿಲ್ಲ. ವಯಸ್ಸಿನಲ್ಲಿ ಈತನಿಗಿಂತ ಹಿರಿಯರಾದ ಜನಾರ್ದನರೆಡ್ಡಿಯನ್ನು ಏಕ ವಚನದಲ್ಲಿ ನಿಂಧಿಸುತ್ತಾನೆ. ದುಡ್ಡಿನ ಮಧದಿಂದ ಹೀಗೆ ಆಡುತ್ತಿದ್ದಾನೆ.ನನಗೂ 2008 ರಲ್ಲೇ ಗನ್ ಲೈಸೆನ್ಸ್ ಕೊಟ್ಟಿದ್ದಾರೆ. 2014 ರಿಂದ ನನಗೂ ಗನ್ ಮ್ಯಾನ್ ಇದ್ದಾರೆ. ಭರತ್ ರೆಡ್ಡಿ ಮತ್ತು ಸತೀಶ್ ರೆಡ್ಡಿ ಅವರ ಗೂಂಡಾ ವರ್ತನೆಯಿಂದ ಒಬ್ಬ ಆಮಾಯಕನ ಜೀವ ಹೋಗಿದೆ.ಈಗ ಬಿಜೆಪಿಯ ಜನಾರ್ದನ ರೆಡ್ಡಿ ಅವರನ್ನು ಹತ್ತಿಕ್ಕಲು ಅವರನ್ನೇ ಎ1 ಆರೋಪಿ ಮಾಡಿದ್ದಾರೆ. ಇದೆಲ್ಲದಕ್ಕೀ ಸಿದ್ದರಾಮಯ್ಯ ಅವರೇ ನೇರಹೊಣೆ.ಭರತ್ ರೆಡ್ಡಿ ಬಾಯಿಗೆ ಬಂದಹಾಗೆ ಮಾತನಾಡಿದರೂ ಅವನ ಮೇಲೆ ಕ್ರಮ ಕೈಗೊಳ್ಳದೇ ಹಾಗೆ ಬಿಟ್ಟಿದ್ದೀರಿ. ಇದು ಸಿದ್ದರಾಮಯ್ಯ ಅವರು ಮಾಡಿದ ತಪ್ಪು ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.








