- ತವರೂರಿಗೆ ಸಂಕ್ರಾಂತಿ ಗಿಪ್ಟ್ ನೀಡಿದ ಸಿಎಂ
- ಮೈಸೂರು ಪಾಲಿಕೆಗೆ ‘ಬೃಹತ್ ಮೈಸೂರು ಮಹಾನಗರ ಪಾಲಿಕೆ’ ಎಂದು ಮರು ನಾಮಕರಣ
ಬೆಂಗಳೂರು: ಮೈಸೂರು ಮಹಾನಗರ ಪಾಲಿಕೆಗೆ ಬೃಹತ್ ಮೈಸೂರು ಮಹಾನಗರ ಪಾಲಿಕೆ ಎಂದು ಮರು ನಾಮಕರಣ ಮಾಡಲಾಗಿದೆ. ಸಿ ಎಂ ಸಿದ್ದರಾಮಯ್ಯ ನವರ ಕನಸಿನ ಗ್ರೇಟರ್ ಮೈಸೂರು ಗೆ ಮಾನ್ಯತೆ ಸಿಕ್ಕಂತಾಗಿದೆ. ಇದು ಮೈಸೂರಿಗರಿಗೆ ಸಿಎಂ ನೀಡಿದ ಸಂಕ್ರಾಂತಿ ಗಿಷ್ಟ್ ಇದಾಗಿದೆ
ಬೃಹತ್ ಮೈಸೂರು ಮಹಾನಗರ ಪಾಲಿಕೆ ಎಂದು ಮರು ನಾಮಕರಣ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಪಾಲಿಕೆಯ ವ್ಯಾಪ್ತಿಗೆ ಹೂಟಗಳ್ಳಿ ನಗರಸಭೆ, ಶ್ರೀರಾಮಪುರ, ಕಡಕೊಳ, ರಮ್ಮನಹಳ್ಳಿ ಮತ್ತು ಬೋಗಾದಿ ಪಟ್ಟಣ ಪಂಚಾಯಿತಿಗಳನ್ನು ಸೇರ್ಪಡೆ ಮಾಡಲಾಗಿದೆ
ಚಾಮುಂಡಿ ಬೆಟ್ಟ ಸೇರಿ ಕೆಲವು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳನ್ನು ಕೂಡ ಸೇರ್ಪಡೆ ಮಾಡಲಾಗಿದೆ.ಇದನ್ನು ಓದಿ –ಮೂರು ದಿನಗಳ ದೇಸಿ ಎಣ್ಣೆ ಮೇಳಕ್ಕೆ ಚಾಲನೆ
ಮೈಸೂರು ಪಾಲಿಕೆಯ ಒಟ್ಟು ವಿಸ್ತೀರ್ಣ 341.44 ಕಿ.ಮೀ.ಗೆ ಏರಿಕೆಯಾಗಿದೆ. ಸಲಹೆ ಮತ್ತು ಆಕ್ಷೇಪಣೆ ಸಲ್ಲಿಸಲು ಸಾರ್ವಜನಿಕರಿಗೆ 30 ದಿನಗಳ ಅವಕಾಶ ಕಲ್ಪಿಸಲಾಗಿದೆ.










