By using this site, you agree to the Privacy Policy and Terms of Use.
Accept
VarthamanVarthamanVarthaman
Notification Show More
Font ResizerAa
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
    ArticlesShow More
    ತನು -ಮನ ತಂಪಾಗಿಸೋ ತಂಪು ಬೀಜಗಳು
    March 21, 2026
    ಪತ್ರಿಕೋದ್ಯಮದ ದಿಗ್ಗಜ ಬ್ರಹ್ಮಪುರಿಯ ಅಲೆಮಾರಿ
    March 17, 2026
    ಅತಿಥಿ ದೇವೋಭವ 
    March 15, 2026
    ಖನಿಜದ ಆಗರ ಅಳಿವೆ ( ಹಲೀಮ್ ಸೀಡ್ಸ್ )
    March 15, 2026
    ದ್ವೇಷಕ್ಕೆ ಬೆಂಕಿ ಹಚ್ಚಬೇಕು
    March 8, 2026
  • Sports
  • National
  • International
  • Crime
Reading: ಕೋಮಲವಾದ ತ್ವಚೆಗೆ ಹಾಲಿನ ಕೆನೆ
Share
Font ResizerAa
VarthamanVarthaman
  • Home
  • Karnataka
  • Articles
  • Sports
  • National
  • International
  • Crime
Search
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
  • Sports
  • National
  • International
  • Crime
Follow US
Varthaman > Karnataka – Latest Breaking News > Articles > ಕೋಮಲವಾದ ತ್ವಚೆಗೆ ಹಾಲಿನ ಕೆನೆ
Articles

ಕೋಮಲವಾದ ತ್ವಚೆಗೆ ಹಾಲಿನ ಕೆನೆ

Team Varthaman
Last updated: January 17, 2026 10:24 AM
Team Varthaman
Published: January 17, 2026
Share
SHARE

ಪೋಷಕಾಂಶಗಳ ನಿಧಿಯಾಗಿರುವ ಮತ್ತು ಅಡುಗೆ ಮನೆಯಲ್ಲಿ ಸಿಗುವ ಸುಲಭ ಪದಾರ್ಥಗಳಲ್ಲಿ ನಮ್ಮ ತ್ವಚೆಯ ಆರೈಕೆಗೆ ಸಹಾಯ ಮಾಡುವ ಒಂದು ನೈಸರ್ಗಿಕ ಪದಾರ್ಥವೆಂದರೆ ಹಾಲಿನ ಕೆನೆ.

ಈಗಂತೂ ಚಳಿಗಾಲ ಈ ಸಮಯದಲ್ಲಿ ತ್ವಚೆಯ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಹೀಗಾಗಿ ಜನ ತಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳಲು ಮಾರುಕಟ್ಟೆಯಲ್ಲಿ ಸಿಗುವ ದುಬಾರಿ ಉತ್ಪನ್ನಗಳನ್ನು ಖರೀದಿಸಿ ಬಳಸುತ್ತಾರೆ. ಆದರೆ ಇವುಗಳ ಬಳಕೆಯಿಂದ ಯಾವುದೇ ರೀತಿಯ ಫಲಿತಾಂಶ ಕಾಣದೇ ನಿರಾಸೆಗೊಳ್ಳುತ್ತಾರೆ. ಸೌಂದರ್ಯ ವರ್ಧನೆಗಾಗಿ ನಾವು ಅನೇಕ ಸೌಂದರ್ಯ ವರ್ಧಕಗಳಿಗೆ ಮೊರೆ ಹೋಗುತ್ತೇವೆ. ಮನೆಯಲ್ಲಿ ಸಿಗುವ ಅನೇಕ ಪದಾರ್ಥಗಳಿಂದ ಸೌಂದರ್ಯ ವದ್ದಿಸಿಕೊಳ್ಳಬಹುದು.ಅದರಲ್ಲಿ ಹೆಚ್ಚಿನದು ಹಾಲುಗಳ ಉತ್ಪನ್ನವೇ. ಎರಡು ದಿನಗಳಿಂದ ಸಂಗ್ರಹಿಸಿದ ಹಾಲಿನ ಕೆನೆ ಸೌಂದರ್ಯವರ್ಧಕವಾಗಿ ಕೆಲಸ ಮಾಡುತ್ತದೆ.

Join WhatsApp Group

ಪ್ರಾಚೀನ ಕಾಲದಿಂದಲೂ ಹಾಲಿನ ಕೆನೆಯು ಪ್ರಮುಖವಾದ ಸೌಂದರ್ಯವರ್ಧಕ ಸಾಮಗ್ರಿಯಾಗಿದೆ. ಇದು ತ್ವಚೆಯನ್ನು ಒಣ ತ್ವಚೆಯಿಂದ ಮೃದು ತ್ವಚೆಯನ್ನಾಗಿ ಮಾಡಲು ಸಹಕರಿಸುತ್ತದೆ. ಹಾಲಿನಲ್ಲಿರುವ ಪ್ರತಿಯೊಂದು ಅಂಶಗಳು ಮುಖದ ಸೌಂದರ್ಯಕ್ಕೆ ಕಳೆಯನ್ನು ನೀಡುತ್ತವೆ. ಹಾಲಿನ ಕೆನೆಯಿಂದ ಹಲವಾರು ಪ್ರಯೋಜನಗಳು ತ್ವಚೆಗೆ ಲಭಿಸುತ್ತವೆ. ಇದು ತ್ವಚೆಗೆ ಸುರಕ್ಷಿತವಾದ ಮತ್ತು ಅಗ್ಗವಾದ ಮನೆ ಮದ್ದಾಗಿರುತ್ತದೆ.

ಹಾಲಿನ ಕೆನೆಯನ್ನು ಆರೋಗ್ಯದ ಕಾರಣಗಳಿಗಾಗಿ ಬಹುತೇಕ ಮಂದಿ ಸುಮ್ಮನೆ ಕಸದ ಬುಟ್ಟಿಗೆ ಹಾಕುತ್ತಾರೆ. ಆದರೆ ಅದರ ಪ್ರಯೋಜನ ತಿಳಿದಿದ್ದರೆ, ಪವಾಡಗಳನ್ನು ನಮ್ಮದಾಗಿಸಿಕೊಳ್ಳಬಹುದು. ಹಾಲಿನ ಕೆನೆಯ ಫೇಸ್ ಪ್ಯಾಕ್ ತ್ವಚೆಯನ್ನು ಹೊಳೆಯುವಂತೆ ಮಾಡುತ್ತದೆ, ಮೊಡವೆಗಳನ್ನು ನಿವಾರಿಸುತ್ತದೆ, ಜೊತೆಗೆ ತ್ವಚೆಯನ್ನು ಮೃದುವಾಗಿಸುತ್ತದೆ.
ಅಲ್ಲದೆ ಇದು ತ್ವಚೆಯಲ್ಲಿರುವ ಸುಕ್ಕುಗಳು ಮತ್ತು ಗೆರೆಗಳನ್ನು ನಿವಾರಿಸುತ್ತದೆ. ಆದ್ದರಿಂದ ಪ್ರತಿದಿನ ಮುಖಕ್ಕೆ ಕೆನೆಯನ್ನು ಹಚ್ಚಿಕೊಳ್ಳುವ ಅಭ್ಯಾಸವನ್ನು ಇರಿಸಿಕೊಂಡರೆ ಅಂದವಾದ ತ್ವಚೆಯುಳ್ಳ ಮುಖಾರವಿಂದವನ್ನು ಪಡೆಯಬಹುದು.


ಹಾಲಿನ ಕೆನೆ’ ಬಳಸುವ ಸೂಕ್ತ ವಿಧಾನ

  1. ಹುಳಿ ಇಲ್ಲದ ಕೆನೆಯನ್ನು ಮಸಾಜ್‌ಗಾಗಿ ಉಪಯೋಗಿಸಿ. ಒಣ, ಸಾಮಾನ್ಯ ಚರ್ಮದವರು ಕೆನೆ ಮಸಾಜ್ ಮಾಡಿಕೊಳ್ಳಬಹುದು. ಎಣ್ಣೆ ಚರ್ಮದವರು ಕೆನೆ ಉಪಯೋಗಿಸದಿರುವುದು ಒಳ್ಳೆಯದು.
  2. ಶುಷ್ಕಗೊಂಡ ಮುಖದ ಕಾಂತಿ ಹೆಚ್ಚಿಸಲು ಒಂದು ಚಮಚ ಕೆನೆಗೆ ಚಿಟಕಿ ಉಪ್ಪು ಹಾಕಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ ವತ್ತಾಕಾರವಾಗಿ ಮಸಾಜ್ ಮಾಡಿ. ನಂತರ ಹೆಸರುಹಿಟ್ಟು ಹಚ್ಚಿ ಮುಖ ತೊಳೆಯಿರಿ.
  3. ಮೇಕಪ್‌ನಿಂದಾಗಿ ಅಲರ್ಜಿ ಆಗಿದ್ದಲ್ಲಿ ಕೆನೆಗೆ ಅರಿಶಿಣ ಹಾಕಿ ಮುಖಕ್ಕೆ ಮಸಾಜ್ ಮಾಡಿಕೊಳ್ಳಿ.

4.ಪ್ರತಿನಿತ್ಯ ಕೆನೆಗೆ ಕೇಸರಿ ದಳ ಹಾಕಿಕೊಂಡು ಮುಖ, ಕತ್ತು, ಕೈಗಳಿಗೆ ಮಸಾಜ್ ಮಾಡಿಕೊಳ್ಳುವುದರಿಂದ ಸನ್ ಬರ್ನ್ ಹೋಗುವುದು.

5.ಆರುತಿಂಗಳ ಮಗುವಿನಿಂದ ಹಿಡಿದು ಅರವತ್ತರ ಅಜ್ಜಿಯೂ ಕೆನೆ ಮಸಾಜ್ ಮಾಡಿಕೊಳ್ಳಬಹುದು.

6.ಮಗುವಿನ ಚರ್ಮ ಹೆಚ್ಚು ಕಪ್ಪಗಿದ್ದಲ್ಲಿ ಕೆನೆಗೆ ಶಿಗೇಕಾಯಿ ಹಾಗೂ ತುಸು ಅಡುಗೆ ಸೋಡಾ ಹಾಕಿ ಮೈಗೆ ಹಚ್ಚಿ ಸ್ನಾನ ಮಾಡಿಸುವುದರಿಂದ ಚರ್ಮದ ಬಣ್ಣ ಬದಲಾಗುವುದು.

7.ಮೊಣಕೈ, ಮೊಣಕಾಲು ಒರಟಾಗಿ ಕಪ್ಪಗಿದ್ದಲ್ಲಿ ಪ್ರತಿನಿತ್ಯ ಕೆನೆಗೆ ನಿಂಬೆರಸ ಸೇರಿಸಿ ಮಸಾಜ್ ಮಾಡಿಕೊಳ್ಳಿ.

8.ಕೆನೆ ಹಚ್ಚಿ ಬಾಡಿ ಮಸಾಜ್ ಮಾಡಿಕೊಂಡು ಪರಿಮಳಯುಕ್ತ ನೀರಿನಲ್ಲಿ ಮುಳುಗಿ ಅರ್ಧಗಂಟೆ ಬಿಟ್ಟು ಸ್ನಾನ ಮಾಡುವುದರಿಂದ ಮೈ ಪೂರ ಹಗುರವಾಗುವುದು. ಮೂಳೆಯ ನೋವು ಕಡಿಮೆಯಾಗುವುದು. ತುಟಿಗಳು ಕಪ್ಪಗಿದ್ದು ಅಥವಾ ಬಿರುಕು ಬಿಡುತ್ತಿದ್ದರೆ ಕೆನೆಗೆ ಜೇನುತುಪ್ಪ ಸೇರಿಸಿ ರಾತ್ರಿ ತುಟಿಗಳಿಗೆ ಹಚ್ಚಿಕೊಳ್ಳಿ. ಕ್ರಮೇಣ ಸಮಸ್ಯೆ ನಿವಾರಣೆ ಆಗುವುದು.

  1. ಎರಡು ಟೀ ಚಮಚ ಹಾಲಿನ ಕೆನೆಯ ಜೊತೆಗೆ ಒಂದು ಟೀ ಚಮಚ ಗಂಧದ ಪುಡಿ, ಒಂದು ಟೀ ಚಮಚ ಕಡಲೆ ಹಿಟ್ಟು, ಒಂದು ಚಿಟಿಕೆ ಅರಿಶಿನವನ್ನು ಬೆರೆಸಿಕೊಳ್ಳಿ. ಇದರ ಮೇಲೆ ಕೆಲವು ಹನಿಗಳಷ್ಟು ರೋಸ್ ವಾಟರ್ ಚಿಮುಕಿಸಿ. ಇವನ್ನೆಲ್ಲ ಸೇರಿಸಿ, ಗಟ್ಟಿಯಾದ ಪೇಸ್ಟ್ ತಯಾರಿಸಿಕೊಳ್ಳಿ. ಇದನ್ನು ನಿಮ್ಮ ಮುಖ ಮತ್ತು ಕುತ್ತಿಗೆ ಮೇಲೆ ಲೇಪಿಸಿ ಉಜ್ಜಿಕೊಳ್ಳಿ. 10 ನಿಮಿಷ ಬಿಟ್ಟು, ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ಇದನ್ನು ತೊಳೆಯಿರಿ.
  2. ಒಣ ತ್ವಚೆಯ ಸಮಸ್ಯೆಯಿಂದ ಬಳಲುತ್ತಿರುವವರು ಈ ಫೇಸ್ ಪ್ಯಾಕ್ ಅನ್ನು ಬಳಸಬಹುದು. ಇದಕ್ಕಾಗಿ ನಾಲ್ಕು ಟೀ ಚಮಚ ಹಾಲಿನ ಕೆನೆಯ ಜೊತೆಗೆ ಎರಡು ಟೀ ಚಮಚ ರೋಸ್ ವಾಟರ್ ಬೆರೆಸಿಕೊಳ್ಳಿ. ಇದನ್ನು ಕಾಲುಗಳು, ಕೈಗಳು ಮತ್ತು ಮುಖದ ಮೇಲೆ ಹಚ್ಚಿಕೊಂಡು, ನಂತರ ಸ್ನಾನ ಮಾಡಿ.
  3. ಒಂದು ಚಿಟಿಕೆ ಕೇಸರಿಯನ್ನು ಒಂದು ಟೀ ಚಮಚ ಜೇನು ತುಪ್ಪ ಮತ್ತು ಒಂದು ಟೀ ಚಮಚ ಹಾಲಿನ ಕೆನೆಯ ಜೊತೆಗೆ ಮಿಶ್ರಣ ಮಾಡಿಕೊಳ್ಳಿ.ಈ ಪೇಸ್ಟನ್ನು ನಿಮ್ಮ ಮುಖಕ್ಕೆ ಹಚ್ಚಿಕೊಂಡು 30 ನಿಮಿಷ ಬಿಟ್ಟು, ನಂತರ ತೊಳೆಯಿರಿ. ಇದು ಅತ್ಯಂತ ಪರಿಣಾಮಕಾರಿಯಾದ ಫೇಸ್ ಪ್ಯಾಕ್ ಆಗಿದ್ದು, ಇದರಿಂದ ತ್ವಚೆ ಸುಂದರವಾಗಿ ಕಾಣುತ್ತದೆ.
  4. ಒಂದು ಟೀ ಚಮಚ ಹಾಲಿನ ಕೆನೆಯ ಜೊತೆಗೆ ಒಂದು ಟೀ ಚಮಚ ಓಟ್ಸ್, ಒಂದು ಟೀ ಚಮಚ ಅರಿಶಿನ ಮತ್ತು ಒಂದು ಟೀ ಚಮಚ ರೋಸ್ ವಾಟರ್ ಬೆರೆಸಿಕೊಳ್ಳಿ. ಇದನ್ನು ನಿಮ್ಮ ಮುಖಕ್ಕೆ ಲೇಪಿಸಿಕೊಳ್ಳಿ ಮತ್ತು ವೃತ್ತಾಕಾರವಾಗಿ ಐದು ನಿಮಿಷಗಳ ಕಾಲ ಉಜ್ಜಿ. ಇದನ್ನು 15 ನಿಮಿಷ ಬಿಟ್ಟು, ನಂತರ ತೊಳೆಯಿರಿ.

ಔಷಧವಾಗಿ ಕೆನೆಯ ಉಪಯೋಗಗಳು.

  1. ಹಾಲಿನ ಕೆನೆಯು ಅತ್ಯಂತ ಸತ್ವಭರಿತವಾಗಿದ್ದು ವ್ಯಕ್ತಿಯ ಶರೀರ ತೂಕವನ್ನು ಹೆಚ್ಚಿಸಲು ಸಹಕರಿಸುತ್ತದೆ. ಪ್ರತಿನಿತ್ಯ ಹಾಲಿನ ಕೆನೆಗೆ ಸಕ್ಕರೆ ಸೇರಿಸಿ ತಿಂದರೆ ಶರೀರದ ತೂಕ ಅಧಿಕವಾಗುತ್ತದೆ.
  2. ಹಾಲಿನ ಕೆನೆಯನ್ನು ಸಕ್ಕರೆಯೊಂದಿಗೆ ಸೇರಿಸಿ ತಿಂದರೆ ಎಸಿಡಿತಿ ಸಮಸ್ಯೆಯು ಕಡಿಮೆಯಾಗುತ್ತದೆ.
  3. ಹಾಲಿನ ಕೆನೆಯನ್ನು ಸೇವಿಸುವುದರಿಂದ ಮಲಬದ್ಧತೆ ನಿವಾರಣೆಯಾಗುತ್ತದೆ.
  4. ಹಾಲಿನ ಕೆನೆಯನ್ನು ಸೇವಿಸುವುದರಿಂದ ದೇಹದ ಮೂಳೆಗಳು ದ್ರುಢವಾಗುತ್ತವೆ.
  5. ಕಣ್ಣಿನ ರೆಪ್ಪೆಯಲ್ಲಿ ಕುರ ಮೂಡಿದಾಗ ಹಾಲಿನ ಕೆನೆಯನ್ನು ಕುರದ ಮೇಲೆ ಲೇಪಿಸಬೇಕು
  6. ಸುಟ್ಟ ಗಾಯದ ಮೇಲೆ ಹಾಲಿನ ಕೆನೆಯನ್ನು ಲೇಪಿಸಿದರೆ ಉರಿ ಹಾಗು ನೋವು ಕಡಿಮೆಯಾಗುತ್ತದೆ.
  7. ಚೇಳು, ಶತಪದಿ ಇತ್ಯಾದಿಗಳು ಕಡಿದಾಗ ಹಾಲಿನೆ ಕೆನೆಗೆ ಸ್ವಲ್ಪ ಅರಸಿನ ಪುಡಿ ಸೇರಿಸಿ ಲೇಪಿಸಬೇಕು.
  8. ಬಿಸಿ ಪದಾರ್ಥಗಳನ್ನು ಕುಡಿದು ತುಟಿ ಸುಟ್ಟರೆ ತುಟಿಯಮೇಲೆ ಹಾಲಿನ ಕೆನೆಯನ್ನು ಹಚ್ಚಬೇಕು.


ಗಮನಿಸಬೇಕಾದ ಅಂಶಗಳು

ಹೊಳೆಯುವಂಥ ತ್ವಚೆಯನ್ನು ಹೊಂದಲು ಹಾಲಿನ ಕೆನೆಯನ್ನು ಅನ್ವಯಿಸುತ್ತಾರೆ, ಇದು ಎಲ್ಲರ ತ್ವಚೆಗೂ ಹೊಂದುವುದಿಲ್ಲ ಬದಲಾಗಿ ಇದರಿಂದ ಆಗುವ ಅಡ್ಡಪರಿಣಾಮಗಳೇ ಹೆಚ್ಚು. ಹಾಗಾಗಿ ಎಣ್ಣೆ ಚರ್ಮ, ಮೊಡವೆ ಇರುವವರು ಹಾಗೂ ಸೂಕ್ಷ್ಮ ಚರ್ಮ ಹೊಂದಿದವರು ತ್ವಚೆಗೆ ಹಾಲಿನ ಕೆನೆ ಹಚ್ಚಲೇಬಾರದು.

ಸೌಮ್ಯ ಸನತ್.

  • ಮುಡಾ ಹಗರಣ : ಸಿದ್ದರಾಮಯ್ಯ ದಂಪತಿಗೆ ಹೈಕೋರ್ಟ್ ನೋಟಿಸ್
    by Team Varthaman
  • ರಾಜ್ಯದಲ್ಲಿ ಏ.1ರವರೆಗೆ ಆಲಿಕಲ್ಲು ಮಳೆ: ಹಲವು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್
    by Team Varthaman
  • ಏ.1ರಿಂದ ನೀರಿನ ದರ ಏರಿಕೆ
    by Team Varthaman
  • ಹಾರ್ಮುಜ್ ಜಲಸಂಧಿ ತೆರೆ :ಭಾರತಕ್ಕೆ ಇರಾನ್ ಸಡಿಲಿಕೆ
    by Team Varthaman
  • ಹೈಕಮಾಂಡ್ ತೀರ್ಮಾನದವರೆಗೆ ನಾನೇ ಸಿಎಂ: ಸಿದ್ದರಾಮಯ್ಯ ಸ್ಪಷ್ಟನೆ
    by Team Varthaman
ಸ್ನಾಯು ನೋವಿನಿಂದ ಒತ್ತಡ ನಿಯಂತ್ರಣದವರೆಗೆ ಬಳಸಿ ಎಪ್ಸಮ್ ಲವಣ
ಪವಿತ್ರ ಪುರಿ: ಜಗತ್ತಿಗೆ ಜಗನ್ನಾಥನ ದರ್ಶನ
“ಅರಿವಿನೊಂದಿಗೆ ಶಿವರಾತ್ರಿ”
ದೇಹದಲ್ಲಿ ವಿಟಮಿನ್ D ಕೊರತೆ ಲಕ್ಷಣಗಳು ಪರಿಹಾರಗಳು
ಸಂಕ್ರಾತಿ ವರ್ಷ ಭವಿಷ್ಯ
TAGGED:beautyKannada Articlemilk creamಹಾಲಿನ ಕೆನೆ
Share This Article
Facebook Email Print
Leave a Comment

Leave a Reply Cancel reply

Your email address will not be published. Required fields are marked *

Follow US

Find US on Social Medias
FacebookLike
XFollow
YoutubeSubscribe
TelegramFollow

Weekly Newsletter

Subscribe to our newsletter to get our newest articles instantly!
[mc4wp_form]
Popular News
BengaluruKarnatakaPolitics

ಸ್ಥಳೀಯ ಸಂಸ್ಥೆ ಚುನಾವಣೆ ಒಂದೇ ಬಾರಿಗೆ ನಡೆಸಲು ಚಿಂತನೆ: ಡಿ ಕೆ ಶಿವಕುಮಾರ್

Team Varthaman
Team Varthaman
January 19, 2026
ಬಿಕ್ಲು ಶಿವ ಕೊಲೆ ಪ್ರಕರಣ: ಬೈರತಿ ಬಸವರಾಜ್‌ಗೆ ಷರತ್ತುಬದ್ಧ ಜಾಮೀನು
ರಾಜ್ಯದಲ್ಲಿ 51,000 ಅತಿಥಿ ಶಿಕ್ಷಕರ ನೇಮಕಾತಿಗೆ ಸರ್ಕಾರದ ಒಪ್ಪಿಗೆ
ಮುಡಾ ಪ್ರಕರಣ: ಕೋರ್ಟ್‌ಗೆ ಕೇಸ್ ಡೈರಿ ಸಲ್ಲಿಕೆ
IPL 2025 ಒಂದು ವಾರ ಸ್ಥಗಿತ; ಇಂಗ್ಲೆಂಡ್‌ನಲ್ಲಿ ಉಳಿದ ಪಂದ್ಯಗಳ ಆಯೋಜನೆ ಸಾಧ್ಯತೆ
- Advertisement -
Ad imageAd image
Global Coronavirus Cases

Confirmed

0

Death

0

More Information:Covid-19 Statistics

Categories

  • Articles
  • Sports
  • Latest News
  • Karnataka News

About US

Since its inception in 1957, Varthamana has stood tall as one of the most trusted and respected Kannada daily newspapers. With deep roots in the rich cultural landscape of Karnataka, Varthamana continues to be the voice of the people, championing truth, transparency, and the values that define the region. Established with a strong commitment to ethical journalism, our newspaper has consistently provided comprehensive coverage, authentic news, and insightful editorials for over six decades. Today, under the dynamic leadership of Editor K. N. Ravi, Varthamana shines even brighter, blending a proud heritage with a modern outlook to meet the evolving needs of readers across the state. Our presence in the digital space, through Varthamana Digital, ensures that our trusted news and regional stories reach a wider audience faster and with greater impact.

Contact Us

© Varthaman. All Rights Reserved.
Welcome Back!

Sign in to your account

Username or Email Address
Password

Lost your password?