ವಾಷಿಂಗ್ಟನ್: ಹೊರ್ಮುಜ್ ಜಲಸಂಧಿ ಸಮೀಪದಲ್ಲಿರುವ ಇರಾನ್‌ನ ಕ್ಷಿಪಣಿ ತಾಣಗಳನ್ನು ಗುರಿಯಾಗಿಸಿ ಅಮೆರಿಕ ಸೇನೆ ಬಾಂಬ್ ದಾಳಿ ನಡೆಸಿದೆ ಎಂದು ಅಮೆರಿಕ ಸೆಂಟ್ರಲ್ ಕಮಾಂಡ್ ತಿಳಿಸಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊರ್ಮುಜ್ ಜಲಸಂಧಿಯಲ್ಲಿ ಸಂಪೂರ್ಣ ನಿಯಂತ್ರಣ ಸಾಧಿಸುವುದಾಗಿ ಹೇಳಿಕೆ ನೀಡಿದ ಕೆಲವೇ ಗಂಟೆಗಳ ಬಳಿಕ ಈ ದಾಳಿ ನಡೆದಿರುವುದು ಗಮನಾರ್ಹವಾಗಿದೆ.
ಅಮೆರಿಕ ಸೇನೆ ‘ಬಂಕರ್ ಬಸ್ಟರ್’ ಬಾಂಬ್‌ಗಳನ್ನು ಬಳಸಿಕೊಂಡು ದಾಳಿ ನಡೆಸಿದ್ದು, ಸುಮಾರು 5,000 ಪೌಂಡ್ (2,268 ಕೆ.ಜಿ) ತೂಕದ ಬಾಂಬ್‌ಗಳನ್ನು ಬಳಸಿ ಕ್ಷಿಪಣಿ ತಾಣಗಳನ್ನು ಧ್ವಂಸಗೊಳಿಸಲಾಗಿದೆ ಎಂದು ತಿಳಿಸಿದೆ.
ಹೊರ್ಮುಜ್ ಜಲಸಂಧಿಯಲ್ಲಿ ಅಂತರರಾಷ್ಟ್ರೀಯ ಹಡಗುಗಳ ಸಂಚಾರಕ್ಕೆ ಇರಾನ್‌ನ ಹಡಗು ವಿರೋಧಿ ಕ್ರೂಸ್ ಕ್ಷಿಪಣಿಗಳು ಅಪಾಯಕಾರಿಯಾಗಿವೆ ಎಂದು ಅಮೆರಿಕ ತಿಳಿಸಿದೆ.ಇದನ್ನು ಓದಿ –ಜೆಡಿಎಸ್‌ನಲ್ಲೇ ಮುಂದುವರಿಯುತ್ತೇನೆ: ಜಿ.ಟಿ.ದೇವೇಗೌಡ ಭಾವನಾತ್ಮಕ ಹೇಳಿಕೆ
ಇರಾನ್ ಈಗಾಗಲೇ ಹೊರ್ಮುಜ್ ಜಲಸಂಧಿಯ ಮೇಲಿನ ನಿಯಂತ್ರಣ ಬಿಗಿಗೊಳಿಸಿ ಅಂತರರಾಷ್ಟ್ರೀಯ ಇಂಧನ ಸಾಗಣೆ ಮಾರ್ಗವನ್ನು ಅಸ್ತವ್ಯಸ್ತಗೊಳಿಸಿರುವ ಹಿನ್ನೆಲೆಯಲ್ಲಿ, ಹಲವು ದೇಶಗಳಿಗೆ ಇಂಧನ ಪೂರೈಕೆಯಲ್ಲಿ ತೊಂದರೆ ಉಂಟಾಗಿದೆ. ಇದರಿಂದ ಜಾಗತಿಕ ಮಟ್ಟದಲ್ಲಿ ಇಂಧನ ದರಗಳು ಏರಿಕೆಯಾಗಿರುವುದಾಗಿ ವರದಿಯಾಗಿದೆ.








