ವಾಷಿಂಗ್ಟನ್: ಇರಾನ್ ಜೊತೆ ಕದನ ವಿರಾಮಕ್ಕೆ ತಯಾರಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.
ಯುದ್ಧಕ್ಕೆ ಸರಿಯಾದ ಬೆಂಬಲ ಸಿಗದ ಹಿನ್ನೆಲೆ NATO ಮಿತ್ರ ರಾಷ್ಟ್ರಗಳನ್ನು ಟೀಕಿಸಿದ ಅವರು, ಅಮೆರಿಕವಿಲ್ಲದ ಪಾಶ್ಚಿಮಾತ್ಯ ಮಿಲಿಟರಿ ಮೈತ್ರಿಕೂಟವನ್ನು ‘ಪೇಪರ್ ಹುಲಿ’ ಎಂದು ವ್ಯಂಗ್ಯವಾಡಿದರು.
ಅಮೆರಿಕ ತನ್ನ ಗುರಿ ಸಾಧಿಸಲು ಬಹಳ ಸಮೀಪದಲ್ಲಿದ್ದು, ಮಧ್ಯಪ್ರಾಚ್ಯದಲ್ಲಿನ ಮಿಲಿಟರಿ ಕಾರ್ಯಾಚರಣೆಗಳನ್ನು ಶೀಘ್ರದಲ್ಲೇ ಮುಗಿಸುವ ಬಗ್ಗೆ ಪರಿಗಣಿಸಲಾಗುತ್ತಿದೆ ಎಂದು ಟ್ರಂಪ್ ಹೇಳಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಇರಾನ್ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ, ತಮ್ಮ ದೇಶ ಶತ್ರುಗಳಿಗೆ ತಿರುಗೇಟು ನೀಡಿದೆ ಎಂದು ಹೇಳಿ, ಇಸ್ರೇಲ್–ಅಮೆರಿಕ ದಾಳಿ ತಪ್ಪು ಲೆಕ್ಕಾಚಾರವಾಗಿತ್ತು ಎಂದು ಅಭಿಪ್ರಾಯಪಟ್ಟರು.ಇದನ್ನು ಓದಿ –ಪ್ರೀಮಿಯಂ ಪೆಟ್ರೋಲ್ ದರ ಏರಿಕೆ
ಇನ್ನೊಂದೆಡೆ, ಇರಾನ್ ವಿರುದ್ಧದ ಯುದ್ಧದ ಹಿನ್ನೆಲೆ ಸ್ವಿಟ್ಜರ್ಲೆಂಡ್ ಅಮೆರಿಕಕ್ಕೆ ಶಸ್ತ್ರಾಸ್ತ್ರ ರಫ್ತು ನಿಲ್ಲಿಸಿದ್ದು, ಅಮೆರಿಕದ ಎರಡು ಯುದ್ಧ ವಿಮಾನಗಳನ್ನು ಇಳಿಸುವ ಮನವಿಯನ್ನು ಶ್ರೀಲಂಕಾ ನಿರಾಕರಿಸಿದೆ.








