ನವದೆಹಲಿ, ಮಾರ್ಚ್ 23: ಅಮೆರಿಕನ್ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ ಕುಸಿತ ಮುಂದುವರಿದಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ 94 ಮಟ್ಟದ ಸಮೀಪಕ್ಕೆ ಇಳಿದಿದೆ.
ಸೋಮವಾರ ವಹಿವಾಟಿನಲ್ಲಿ ಡಾಲರ್ ಎದುರು ರೂಪಾಯಿ 93.83ರಲ್ಲಿ ಆರಂಭಗೊಂಡು, ನಂತರ 94 ಮಟ್ಟದ ಮೇಲೂ ಹೋಗಿದೆ.
ರೂಪಾಯಿ ಮೌಲ್ಯ ಕುಸಿತಕ್ಕೆ ಪ್ರಮುಖ ಕಾರಣಗಳಲ್ಲಿ ಕಚ್ಚಾ ತೈಲದ ಬೆಲೆ ಏರಿಕೆ ಪ್ರಮುಖವಾಗಿದೆ. ಇದರಿಂದ ಭಾರತದ ಆಮದು ವೆಚ್ಚ ಹೆಚ್ಚಾಗಿ, ಡಾಲರ್‌ಗೆ ಬೇಡಿಕೆ ಹೆಚ್ಚಾಗಿದೆ.
ಇದರ ಜೊತೆಗೆ, ಭಾರತೀಯ ಮಾರುಕಟ್ಟೆಗಳಿಂದ ವಿದೇಶಿ ಹೂಡಿಕೆದಾರರ ಹಣ ಹೊರಹರಿವು ಹೆಚ್ಚುತ್ತಿರುವುದು ಮತ್ತು ಬಾಂಡ್ ಯೀಲ್ಡ್‌ಗಳು ಹೆಚ್ಚಿರುವುದೂ ರೂಪಾಯಿಗೆ ಒತ್ತಡ ತಂದಿವೆ ಎಂದು ತಜ್ಞರು ಹೇಳಿದ್ದಾರೆ.
ವಿದೇಶಿ ಹೂಡಿಕೆದಾರರು ತಮ್ಮ ಹೂಡಿಕೆಗಳನ್ನು ಹಿಂತೆಗೆದು ಡಾಲರ್‌ಗೆ ಪರಿವರ್ತಿಸುತ್ತಿರುವುದರಿಂದ ಡಾಲರ್ ಬೇಡಿಕೆ ಹೆಚ್ಚಿ, ರೂಪಾಯಿ ಮೌಲ್ಯ ಕುಸಿಯುತ್ತಿದೆ.ಇದನ್ನು ಓದಿ –ಹೋಟೆಲ್‌ಗಳಿಗೆ ಹೆಚ್ಚುವರಿ 1,000 ಕಮರ್ಷಿಯಲ್ ಸಿಲಿಂಡರ್: ಸಚಿವ ಮುನಿಯಪ್ಪ
ಜಾಗತಿಕ ಅನಿಶ್ಚಿತ ಪರಿಸ್ಥಿತಿಗಳಲ್ಲಿ ಹೂಡಿಕೆದಾರರು ಸುರಕ್ಷಿತ ಕರೆನ್ಸಿಯಾಗಿರುವ ಡಾಲರ್‌ನ್ನು ಹೆಚ್ಚು ಆರಿಸುವುದು ಕೂಡ ರೂಪಾಯಿ ಕುಸಿತಕ್ಕೆ ಕಾರಣವಾಗಿದೆ.








