By using this site, you agree to the Privacy Policy and Terms of Use.
Accept
VarthamanVarthamanVarthaman
Notification Show More
Font ResizerAa
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
    ArticlesShow More
    PUC ಯಲ್ಲಿ ಕಡಿಮೆ ಅಂಕ ಬಂದಿವೆಯಾ..? ಡೋಂಟ್ ವರೀ……ಬೀ ಹ್ಯಾಪ್ಪೀ.
    April 12, 2026
    ನಾವೇನು ಕೊಟ್ವಿ
    April 6, 2026
    ನೇರವಾಗಿ ಮಾತನಾಡೋರು ಎಲ್ಲರ ಪಾಲಿನ ಡಾರ್ಲಿಂಗ್ ಆಗಲು ಸಾಧ್ಯವೇ….?
    April 4, 2026
    “ಈ ಸಮಯ ಕಳೆದು ಹೋಗುತ್ತದೆ”
    March 29, 2026
    ಬೇಸಿಗೆಯ ತಂಪಿಗೆ ಬಾರ್ಲಿ ಎಂಬ ಸಂಜೀವಿನಿ
    March 28, 2026
  • Sports
  • National
  • International
  • Crime
Reading: ಮಧುಮೇಹವನ್ನ ಬುಡದಿಂದಲೇ ಕಿತ್ತೆಸೆಯುವ ದಿವೌಷಧ ಹಸಿರು ಹಲಸಿನ ಪುಡಿ
Share
Font ResizerAa
VarthamanVarthaman
  • Home
  • Karnataka
  • Articles
  • Sports
  • National
  • International
  • Crime
Search
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
  • Sports
  • National
  • International
  • Crime
Follow US
Varthaman > Karnataka – Latest Breaking News > Blog > ಮಧುಮೇಹವನ್ನ ಬುಡದಿಂದಲೇ ಕಿತ್ತೆಸೆಯುವ ದಿವೌಷಧ ಹಸಿರು ಹಲಸಿನ ಪುಡಿ
Blog

ಮಧುಮೇಹವನ್ನ ಬುಡದಿಂದಲೇ ಕಿತ್ತೆಸೆಯುವ ದಿವೌಷಧ ಹಸಿರು ಹಲಸಿನ ಪುಡಿ

Team Varthaman
Last updated: April 12, 2026 11:15 AM
Team Varthaman
Published: April 12, 2026
Share
SHARE

ಭಾರತೀಯರನ್ನು ಕಾಡುತ್ತಿರುವ ಒಂದು ಪ್ರಮುಖ ಆರೋಗ್ಯ ಸಮಸ್ಯೆಗಳಲ್ಲಿ ಮಧುಮೇಹ ಸಹ ಒಂದಾಗಿದೆ. ಅದು ಎಷ್ಟರ ಮಟ್ಟಿಗೆ ಎಂದರೆ ಭಾರತವನ್ನು ಮಧುಮೇಹದ ರಾಜಧಾನಿ ಎಂದು ಕರೆಯಲಾಗುವಷ್ಟು . ಇಂದು ವಿಶ್ವದ ಮಧುಮೇಹಿಗಳಲ್ಲಿ ನಮ್ಮ ದೇಶವು ಸರಿಸುಮಾರು ಶೇ. 17 ರಷ್ಟಿದೆ. ಅನೇಕ ಮಂದಿಗೆ ಮಧುಮೇಹ ಬಾರ್ಡರ್ನಲ್ಲಿದೆ. ಸಾಕಷ್ಟು ಮಂದಿಗೆ ತಾವು ಮೇಧುಮೇಹಕ್ಕೆ ಒಳಗಾಗಿದ್ದೇವೆ ಎಂಬ ಅರಿವು ಸಹ ಇಲ್ಲ. ಹಾಗಾಗಿ ಮಧುಮೇಹ ಸಮಸ್ಯೆಯಿಂದ ಪಾರಾಗಲು 40 ವರ್ಷವಾಗುತ್ತಿದ್ದಂತೆ ಆಗಾಗ ಸಕ್ಕರೆ ಮಟ್ಟವನ್ನು ಕಾಲಕಾಲಕ್ಕೆ ಪರೀಕ್ಷಿಸಿಕೊಳ್ಳಬೇಕು. ಅಲ್ಲದೇ ಮಧುಮೇಹ ಗುಣಪಡಿಸಲು ಸಾಧ್ಯವಿಲ್ಲ. ಹಾಗಾಗಿ ಇದನ್ನು ಔಷಧಿಗಳು, ಸರಿಯಾದ ಆಹಾರ ಪದ್ಧತಿ ಮತ್ತು ಜೀವನ ಶೈಲಿಯಿಂದ ಮಾತ್ರ ನಿಯಂತ್ರಿಸಬಹುದು. ಮೊದಲೆಲ್ಲಾ ವಯಸ್ಸಾದವರನ್ನು ಮಾತ್ರ ಕಾಡುತ್ತಿದ್ದ ಮಧುಮೇಹ ಈಗ ಚಿಕ್ಕ ಮಕ್ಕಳನ್ನು ಸಹ ಕಾಡಲು ಆರಂಭಿಸಿದೆ. ಯಾರಿಗೆ ಯಾವಾಗ ಬೇಕಾದರೂ ಮಧುಮೇಹ ಬರಬಹುದು. ಅನೇಕ ಜನರು ಈ ಸಮಸ್ಯೆಯನ್ನು ತಡೆಗಟ್ಟಲು ವಿವಿಧ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಆದರೆ ಕೆಲವು ಆಹಾರ ಮತ್ತು ಉತ್ತಮ ಜೀವನಶೈಲಿಯ ಮೇಲೆ ಕೇಂದ್ರೀಕರಿಸುವ ಮೂಲಕ ಈ ರೋಗವನ್ನು ತಡೆಗಟ್ಟಬಹುದಾಗಿದೆ.

Join WhatsApp Group

ಮಧುಮೇಹಿಗಳಿಗೆ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲು ಹಲವಾರು ರೀತಿಯ ಮುನ್ನೆಚ್ಚರಿಕೆಗಳ ಅಗತ್ಯವಿದೆ. ಔಷಧಿಯ ಜೊತೆಗೆ ಕೆಲವು ಹಣ್ಣು-ತರಕಾರಿಗಳನ್ನು ತಿಂದರೇ ಮಧುಮೇಹವನ್ನು ಹೆಚ್ಚಾಗದಂತೆ ತಡೆಯಬಹುದು.. ಈ ರೀತಿ ಶುಗರ್‌ ರೋಗಿಗಳಿಗೆ ಉಪಯುಕ್ತವಾಗುವ ಹಣ್ಣುಗಳಲ್ಲಿ ಹಲಸು ಕೂಡ ಒಂದು..

ಅದರಂತೆ ಕೆಲವು ಆರೋಗ್ಯ ತಜ್ಞರು ಹೇಳುವ ಪ್ರಕಾರ ಹಲಸು ಮಧುಮೇಹದಿಂದ ಪರಿಹಾರ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಂತೆ. ಹೌದು, ಹಲಸಿನ ಹಣ್ಣಿನಲ್ಲಿರುವ ಬೀಜಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವಲ್ಲಿ ಬಹಳ ಸಹಾಯಕವಾಗಿವೆ ಎಂದು ಹೇಳಲಾಗುತ್ತದೆ. ಜೊತೆಗೆ ಇವು ಕೆಲವು ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಕೂಡ ಪರಿಹಾರ ನೀಡುತ್ತವೆ ಎನ್ನಲಾಗಿದೆ.

ಹಲಸಿನ ಹಣ್ಣಿನ ಬಗ್ಗೆ ನಡೆಸಲಾದ ಇತ್ತೀಚಿನ ಅಧ್ಯಯನಗಳ ಪ್ರಕಾರ, ಇದರಲ್ಲಿ ಕಂಡು ಬರುವ ಕೆಲವು ಶಕ್ತಿಶಾಲಿ ಅಂಶಗಳು HbA1c ‘ಗ್ಲೈಕೋಸೈಲೇಟೆಡ್ ಹಿಮೋಗ್ಲೋಬಿನ್’ ಹಾಗೂ PPG-ಪೋಸ್ಟ್‌ಪ್ರಾಂಡಿಯಲ್ ಗ್ಲೂಕೋಸ್, FBG-ಫಾಸ್ಟಿಂಗ್ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಕಡಿಮೆ ಮಾಡಲು ಬಹಳ ಸಹಾಯಕವಾಗಿವೆ.

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಕೂಡ ಮಧುಮೇಹ ರೋಗಿಗಳು ವಿಶೇಷವಾಗಿ ಹಲಸಿನ ಬೀಜಗಳನ್ನು ನಿಯಮಿತವಾಗಿ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು ಎಂದು ತಿಳಿಸಿದೆ. ಈ ಹಲಸಿನ ಬೀಜಗಳನ್ನು ಒಣಗಿಸಿ ಪುಡಿ ಮಾಡಿ ಬೆಚ್ಚಗಿನ ನೀರಿನೊಂದಿಗೆ ಬೆರೆಸಿ ಕುಡಿಯುವುದರಿಂದ ಅತ್ಯುತ್ತಮ ಫಲಿತಾಂಶಗಳನ್ನು ಪಡೆಯಬಹುದು.

ಮಾಗಿದ ಹಲಸಿನ ಹಣ್ಣಿನಂತಲ್ಲದೆ, ಕಚ್ಚಾ ಹಲಸಿನ ಹಣ್ಣು ಕಡಿಮೆ ಗ್ಲೈಸೆಮಿಕ್ ಸೂಚಿಯನ್ನು ಹೊಂದಿದ್ದು, ತೂಕ ನಿರ್ವಹಣೆ ಮತ್ತು ರಕ್ತದಲ್ಲಿನ ಸಕ್ಕರೆ ನಿಯಂತ್ರಣದ ಮೇಲೆ ಕೇಂದ್ರೀಕರಿಸುವ ಜನರಿಗೆ ಈ ಪುಡಿ ಸೂಕ್ತವಾಗಿದೆ
ಹಸಿ ಹಸಿರು ಹಲಸಿನ ಪುಡಿಯನ್ನು ಬಲಿಯದ ಹಲಸಿನ ಬೀಜಗಳಿಂದ ತಯಾರಿಸಲಾಗುತ್ತದೆ, ಅವುಗಳನ್ನು ಹೋಳುಗಳಾಗಿ ಕತ್ತರಿಸಿ, ಬಿಸಿಲಿನಲ್ಲಿ ಒಣಗಿಸಿ ಅಥವಾ ನಿರ್ಜಲೀಕರಣಗೊಳಿಸಿ, ಉತ್ತಮವಾದ ಹಿಟ್ಟಾಗಿ ಪುಡಿಮಾಡಲಾಗುತ್ತದೆ.ಇದನ್ನು ಹಸಿ ಹಲಸಿನ ಹಣ್ಣಿನಿಂದ ತಯಾರಿಸಲಾಗಿರುವುದರಿಂದ, ಇದು ಹೆಚ್ಚಿನ ಪ್ರಮಾಣದ ಆಹಾರದ ನಾರು, ಸಸ್ಯ ಆಧಾರಿತ ಪ್ರೋಟೀನ್, ಜೀವಸತ್ವಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಉಳಿಸಿಕೊಳ್ಳುತ್ತದೆ.

ಹಲಸಿನ ಹಣ್ಣನ್ನು ನಿಯಮಿತವಾಗಿ ಸೇವಿಸುವುದು ಮತ್ತು ಅದರ ಬೀಜವನ್ನು ಸುಟ್ಟು ತಿನ್ನುವುದು ಮಧುಮೇಹಕ್ಕೆ ರಾಮಬಾಣ ಎಂದು ಹೇಳಲಾಗುತ್ತದೆ.. ಇದನ್ನು ಅನೇಕ ರೀತಿಯಲ್ಲಿ ನಮ್ಮ ದೈನಂದಿನ ಆಹಾರದಲ್ಲಿ ಸೇರಿಸಿಕೊಳ್ಳಬಹುದಾಗಿದೆ. ಇದೀಗ ಹಲಸಿನ ಹಣ್ಣನ್ನು ಮಧುಮೇಹಿಗಳು ಹೇಗೆ ಸೇವಿಸಬೇಕು ಎಂದು ಇಲ್ಲಿ ತಿಳಿಯೋಣ..

ಈ ಹಲಸಿನ ಹಣ್ಣನ್ನು ಪುಡಿಯ ರೂಪದಲ್ಲಿಯೂ ಸೇವಿಸಬಹುದಾಗಿದೆ. ಇದು ಪೌಷ್ಟಿಕಾಂಶಗಳ ಆಗರವಾಗಿದ್ದು, ಫೈಬರ್, ಪ್ರೋಟೀನ್ ಮತ್ತು ಕಬ್ಬಿಣಾಂಶದಿಂದ ಸಮೃದ್ಧವಾಗಿದೆ.ಇದು ಗ್ಲುಟನ್ ಮುಕ್ತವಾಗಿದ್ದು, ಗೋಧಿ ಅಥವಾ ಅಕ್ಕಿ ಹಿಟ್ಟಿಗೆ ಉತ್ತಮ ಪರ್ಯಾಯವಾಗಿ ಬಳಸಬಹುದು. ಹಲಸಿನ ಬೀಜದ ಪುಡಿಯನ್ನು ನಿಯಮಿತವಾಗಿ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು. ಹೆಚ್ಚಿನ ನಾರಿನಂಶ (Fiber) ಇರುವುದರಿಂದ ಮಲಬದ್ಧತೆ ಮತ್ತು ಅಜೀರ್ಣ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ವಿಟಮಿನ್ ಎ, ಬಿ, ಸಿ, ಕಬ್ಬಿಣ, ಕ್ಯಾಲ್ಸಿಯಂ ಮತ್ತು ಸತು (Zinc) ಅಂಶಗಳನ್ನು ಹೊಂದಿದೆ. ಹಾಲಿನೊಂದಿಗೆ ಈ ಪುಡಿಯನ್ನು ಬೆರೆಸಿ ಮುಖಕ್ಕೆ ಹಚ್ಚುವುದರಿಂದ ಸುಕ್ಕುಗಳನ್ನು ಕಡಿಮೆ ಮಾಡಬಹುದು.ರಕ್ತಹೀನತೆಯ ವಿರುದ್ಧ ಹೋರಾಡುತ್ತದೆ: ಹಲಸಿನ ಬೀಜಗಳಲ್ಲಿ ಉತ್ತಮ ಪ್ರಮಾಣದ ಕಬ್ಬಿಣದ ಅಂಶವಿದೆ. ಕಣ್ಣಿನ ದೃಷ್ಟಿಯನ್ನು ಉತ್ತಮಗೊಳಿಸಲು ನೆರವಾಗುತ್ತದೆ: ಅಧ್ಯಯನಗಳ ಪ್ರಕಾರ, ಹಲಸಿನ ಬೀಜಗಳಲ್ಲಿರುವ ವಿಟಮಿನ್ ಎ ಕಣ್ಣುಗಳ ಆರೋಗ್ಯವನ್ನು ಉತ್ತಮಗೊಳಿಸುತ್ತದೆ ಹಾಗೂ ಕ್ಯಾಟರಾಕ್ಟ್ ಮತ್ತು ಮ್ಯಾಕ್ಯುಲಾರ್ ಡೀಜೆನರೇಶನ್ ಎಂಬ ಸ್ಥಿತಿಗಳು ಎದುರಾಗದಂತೆ ಕಾಪಾಡುತ್ತದೆ. ಅಧ್ಯಯನದ ಪ್ರಕಾರ, ಹಲಸಿನ ಬೀಜಗಳಲ್ಲಿರುವ ಮೆಗ್ನೀಶಿಯಂ ದೇಹದಲ್ಲಿ ರಕ್ತದ ಹೆಪ್ಪುಗಟ್ಟುವಿಕೆಯನ್ನು ತಡೆಯಲು ನೆರವಾಗುತ್ತದೆ.ಹಲಸಿನ ಬೀಜದಲ್ಲಿರುವ ವಿಟಮಿನ್ ಎ ಕೂದಲ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಅಲ್ಲದೇ ನೆತ್ತಿಯ ಕೂದಲ ಬುಡಗಳಿಗೆ ಹೆಚ್ಚಿನ ರಕ್ತ ಪರಿಚಲನೆಯನ್ನು ಒದಗಿಸಿ ಬುಡಗಳನ್ನು ದೃಢಗೊಳಿಸಿ ಕೂದಲು ಉದುರುವುದನ್ನು ತಪ್ಪಿಸುತ್ತದೆ. ಇಷ್ಟೆಲ್ಲ ಉಪಯೋಗಕಾರಿಯಾದ ಈ ಬೀಜದ ಪುಡಿಯನ್ನು ಹೇಗೆ ತಯಾರಿಸಲಾಗುತ್ತದೆ ಎಂದು ನಾವಿಂದು ನೋಡೋಣ.

ಮನೆಯಲ್ಲಿ ಪುಡಿ ತಯಾರಿಸುವ ವಿಧಾನ:

ಮಾರುಕಟ್ಟೆಯಿಂದ ಶುದ್ಧ ಹಸಿರು ಹಲಸಿನ ಹಣ್ಣುಗಳನ್ನು ಮನೆಗೆ ತಂದು ನಾಲ್ಕು ಭಾಗಗಳಾಗಿ ಕತ್ತರಿಸಿ ಅದರ ಬೀಜಗಳನ್ನು ತೆಗೆಯಿರಿ. ಈ ಬೀಜಗಳನ್ನು ಚೆನ್ನಾಗಿ ಒಣಗಿಸಿ ಬೀಜಗಳಿಂದ ಬಿಳಿ ಸಿಪ್ಪೆಯನ್ನು ತೆಗೆದು ಅವುಗಳನ್ನು ಮಿಕ್ಸಿಯಲ್ಲಿ ಪುಡಿ ಮಾಡಿದರೆ ಹಲಸಿನ ಬೀಜದ ಪುಡಿ ರೆಡಿಯಾಗಿರುತ್ತದೆ..

ಹೇಗೆ ಬಳಸುವುದು

  1. ಗೋಧಿ ಹಿಟ್ಟಿನಲ್ಲಿ ಸ್ವಲ್ಪ ಹಲಸಿನ ಬೀಜದ ಪುಡಿ (ನಾಲ್ಕನೇ ಒಂದು ಭಾಗ) ಬೆರೆಸಿ ಚೆನ್ನಾಗಿ ಬೆರೆಸಿ ನಂತರ ಚಪಾತಿ ಮಾಡಿ ತಿನ್ನಬಹುದು.
  2. ಬೇಕಿದ್ದರೆ ಹಲಸಿನ ಬೀಜದ ಪುಡಿಯನ್ನು ಇಡ್ಲಿ ಮತ್ತು ದೋಸೆಯ ಹಿಟ್ಟಿನಲ್ಲೂ ಸೇರಿಸಬಹುದು.
  3. ಇಷ್ಟೇ ಅಲ್ಲ, ಗ್ರೀನ್ ಟೀಯಲ್ಲಿ ಹಲಸಿನ ಪುಡಿಯನ್ನು ಬಳಸಬಹುದು.
  4. ಹಲಸಿನ ಬೀಜದ ಪುಡಿಯನ್ನು ಗಂಜಿಗೆ ಸೇರಿಸಿ ಕೂಡ ಸೇವಿಸಬಹುದು.
  5. ಸೂಪ್, ಗಂಜಿ (porridge), ಅಥವಾ ಸ್ಮೂಥಿಗಳಿಗೆ ಸೇರಿಸಿ ಬಳಸಬಹುದು.

ಸೂಚನೆ: ಅತಿಯಾದ ಸೇವನೆಯು ಜೀರ್ಣಕ್ರಿಯೆಯಲ್ಲಿ ಸಣ್ಣಪುಟ್ಟ ಸಮಸ್ಯೆಗಳನ್ನು ಉಂಟುಮಾಡಬಹುದು, ಆದ್ದರಿಂದ ಮಿತವಾಗಿ ಬಳಸುವುದು ಸೂಕ್ತ.

ಸೌಮ್ಯ ಸನತ್

  • ಖ್ಯಾತ ಗಾಯಕಿ ಆಶಾ ಭೋಸ್ಲೆ ವಿಧಿವಶ
    by Team Varthaman
  • ಮಧುಮೇಹವನ್ನ ಬುಡದಿಂದಲೇ ಕಿತ್ತೆಸೆಯುವ ದಿವೌಷಧ ಹಸಿರು ಹಲಸಿನ ಪುಡಿ
    by Team Varthaman
  • PUC ಯಲ್ಲಿ ಕಡಿಮೆ ಅಂಕ ಬಂದಿವೆಯಾ..? ಡೋಂಟ್ ವರೀ……ಬೀ ಹ್ಯಾಪ್ಪೀ.
    by Team Varthaman
  • ಯಮುನಾ ನದಿಯಲ್ಲಿ ಬೋಟ್ ದುರಂತ; 10 ಸಾವು, 5 ನಾಪತ್ತೆ
    by Team Varthaman
  • ಬೆಂ–ಮುಂಬೈ ವಂದೇ ಭಾರತ್ ಸ್ಲೀಪರ್ ರೈಲುಗೆ ಅಸ್ತು
    by Team Varthaman
ಅಕ್ಷಯ ತೃತೀಯ 2025: ಅದೃಷ್ಟ ಮತ್ತು ಸಮೃದ್ಧಿಗಾಗಿ ಈ 6 ವಸ್ತುಗಳನ್ನು ಖರೀದಿಸಿ!
ಶೃಂಗೇರಿ: ಅಪ್ರಕಟಿತ ಕೃತಿಗಳನ್ನು ಪುಸ್ತಕ ರೂಪದಲ್ಲಿ ಹೊರ ತರಲುಒಡಂಬಡಿಕೆ
ಆಸ್ಪತ್ರೆಯಲ್ಲಿ ಬೆಂಕಿ ದುರಂತ: ಐಸಿಯುನಲ್ಲಿ 8 ಮಂದಿ ರೋಗಿಗಳ ಸಜೀವ ದಹನ
ಮೈಸೂರು ವಿಮಾನ ನಿಲ್ದಾಣದಲ್ಲಿ ರಾಹುಲ್ ಗಾಂಧಿ ಕ್ಷಿಪ್ರ ಭೇಟಿ
ರಸ್ತೆ ಅಗಲೀಕರಣ ನೆಪದಲ್ಲಿ ಮರಗಳ ಹನನಕ್ಕೆ ಖಂಡನೆ
TAGGED:diabetesjujube powderದಿವೌಷಧಮಧುಮೇಹಹಲಸಿನ ಪುಡಿ
Share This Article
Facebook Email Print
Leave a Comment

Leave a Reply Cancel reply

Your email address will not be published. Required fields are marked *

Follow US

Find US on Social Medias
FacebookLike
XFollow
YoutubeSubscribe
TelegramFollow

Weekly Newsletter

Subscribe to our newsletter to get our newest articles instantly!
[mc4wp_form]
Popular News
BengaluruKarnatakaMain News

ಸಿದ್ದು ಬಜೆಟ್‌ನಲ್ಲಿ 7 ಹೊಸ ಯೋಜನೆಗಳು ಘೋಷಣೆ

Team Varthaman
Team Varthaman
March 6, 2026
ಸರ್ಕಾರಿ ಆಡಳಿತದಲ್ಲಿ ಕನ್ನಡ ಕಡ್ಡಾಯ
ಆಪರೇಷನ್ ಸಿಂದೂರ್‌ನಲ್ಲಿ ಮೋಸ್ಟ್ ವಾಂಟೆಂಡ್ ಉಗ್ರರು ಫಿನಿಶ್: ಇಲ್ಲಿದೆ ಭಾರತೀಯ ಸೇನೆ ಹತ್ಯೆಗೈದವರ ಲೀಸ್ಟ್
ರಾಜ್ಯದ ಹಲವು ಭಾಗಗಳಲ್ಲಿ ಮಳೆ: ಸಿಡಿಲಿಗೆ ಇಬ್ಬರು ಬಲಿ
ಅಮೆರಿಕ ಒತ್ತಡದ ನಡುವೆಯೂ ಭಾರತ–ರಷ್ಯಾ S-400 ಕ್ಷಿಪಣಿ ಒಪ್ಪಂದ ಚರ್ಚೆ
- Advertisement -
Ad imageAd image
Global Coronavirus Cases

Confirmed

0

Death

0

More Information:Covid-19 Statistics

Categories

  • Articles
  • Sports
  • Latest News
  • Karnataka News

About US

Since its inception in 1957, Varthamana has stood tall as one of the most trusted and respected Kannada daily newspapers. With deep roots in the rich cultural landscape of Karnataka, Varthamana continues to be the voice of the people, championing truth, transparency, and the values that define the region. Established with a strong commitment to ethical journalism, our newspaper has consistently provided comprehensive coverage, authentic news, and insightful editorials for over six decades. Today, under the dynamic leadership of Editor K. N. Ravi, Varthamana shines even brighter, blending a proud heritage with a modern outlook to meet the evolving needs of readers across the state. Our presence in the digital space, through Varthamana Digital, ensures that our trusted news and regional stories reach a wider audience faster and with greater impact.

Contact Us

© Varthaman. All Rights Reserved.
Welcome Back!

Sign in to your account

Username or Email Address
Password

Lost your password?