By using this site, you agree to the Privacy Policy and Terms of Use.
Accept
VarthamanVarthamanVarthaman
Notification Show More
Font ResizerAa
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
    ArticlesShow More
    “ದೂರು ಬಿಡಿ, ದಾರಿ ಹುಡುಕಿ”
    April 28, 2026
    ಭಾವುಕತೆಗೆ ಬಲವಾಗಿ ನಿಲ್ಲುವ ಗಳಿಗೆಗಳು.
    April 26, 2026
    ” ಸರಳತೆಯೇ ಸೌರಭ “
    April 26, 2026
    ಮತ್ತೇ ಬರಲಿ ಆ ಕಾಲ
    April 26, 2026
    “ಅಕ್ಷರಗಳ ಮೇಲಿನ‌ ಅತ್ಯಾಚಾರ”
    April 25, 2026
  • Sports
  • National
  • International
  • Crime
Reading: “ದೂರು ಬಿಡಿ, ದಾರಿ ಹುಡುಕಿ”
Share
Font ResizerAa
VarthamanVarthaman
  • Home
  • Karnataka
  • Articles
  • Sports
  • National
  • International
  • Crime
Search
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
  • Sports
  • National
  • International
  • Crime
Follow US
Varthaman > Karnataka – Latest Breaking News > Articles > “ದೂರು ಬಿಡಿ, ದಾರಿ ಹುಡುಕಿ”
Articles

“ದೂರು ಬಿಡಿ, ದಾರಿ ಹುಡುಕಿ”

Team Varthaman
Last updated: April 28, 2026 9:45 AM
Team Varthaman
Published: April 28, 2026
Share
SHARE

ಸೃಜನಶೀಲತೆ ಎಂಬುದು ಕೇವಲ ಸುಖದ ಸುಪ್ಪತ್ತಿಗೆಯಲ್ಲಿ ಅರಳುವ ಹೂವಲ್ಲ; ಅದು ಕೊರತೆ ಮತ್ತು ನೋವಿನ ಬೆಂಕಿಯಲ್ಲಿ ಅರಳುವ ಕೆಂದಾವರೆ. ಸುಮಾರು ನಾಲ್ಕು ಶತಮಾನಗಳ ಹಿಂದೆ,ಕವಿ ಸರ್ ಜಾನ್ ಹ್ಯಾರಿಂಗ್ಟನ್ ಅರಮನೆಯ ಅನೈರ್ಮಲ್ಯದಿಂದ ಕಂಗೆಟ್ಟಿದ್ದರು.ಆದರೆ ಅವರು ಆ ಪರಿಸ್ಥಿತಿಯನ್ನು ಕಂಡು ಕೇವಲ ಮೂಗು ಮುಚ್ಚಿ ಕೂರಲಿಲ್ಲ. ತಮ್ಮ ಕಾವ್ಯದ ಲೇಖನಿಯನ್ನು ಬದಿಗಿಟ್ಟು, ತಾಂತ್ರಿಕ ಕುತೂಹಲವನ್ನು ಕೈಗೆತ್ತಿಕೊಂಡರು.ಅದರ ಫಲವಾಗಿ ಅವರು ವಾಟರ್ ಕ್ಲೋಸೆಟ್ (ಕಮೋಡ್) ಅನ್ನು ಕಂಡುಹಿಡಿದರು.

ಯಾತನೆಯ ಹಾದಿಯಲ್ಲಿ ಯೋಗಕ್ಷೇಮದ ದಾರಿ ಹುಡುಕಿದ ಅವರ ಈ ಆವಿಷ್ಕಾರವೇ ಇಂದು ಕಾಲು ನೋವಿನಿಂದ ಬಳಲುವ ಕೋಟ್ಯಂತರ ವಯಸ್ಕರಿಗೆ ಕುಳಿತುಕೊಳ್ಳುವ ಸೌಲಭ್ಯ ನೀಡಿ,ಗೌರವಯುತ ಬದುಕನ್ನು ಉಡುಗೊರೆಯಾಗಿ ನೀಡಿದೆ.ಇತಿಹಾಸದ ಈ ರೋಚಕ ಪುಟ ನಮಗೆ ಕಲಿಸುವ ಪಾಠವೆಂದರೆ, ಸಮಸ್ಯೆಗಳೇ ಸಂಶೋಧನೆಯ ಗರ್ಭಗುಡಿ.

Join WhatsApp Group

ದುರದೃಷ್ಟವಶಾತ್,ಇಂದಿನ ಯುವಶಕ್ತಿ ಸ್ಮಾರ್ಟ್‌ಫೋನ್‌ಗಳ ಮಾಯಾಲೋಕದಲ್ಲಿ ಸಿಲುಕಿ, ಅಡೆತಡೆಗಳು ಎದುರಾದಾಗ ದಾರಿ ಹುಡುಕುವ ಬದಲು ದಿಕ್ಕು ತಪ್ಪುತ್ತಿದೆ. ಕಾಲಹರಣದ ವ್ಯಸನಗಳು ನಮ್ಮೊಳಗಿನ ಜ್ಞಾನದ ದೀಪವನ್ನು ಆರಿಸುತ್ತಿವೆ. ನೆನಪಿಡಿ, ಹ್ಯಾರಿಂಗ್ಟನ್ ಅಂದು ಕೇವಲ ದೂರು ನೀಡುತ್ತಾ ಕುಳಿತಿದ್ದರೆ, ಇಂದು ಮಾನವನ ಮೂಲಭೂತ ಅಗತ್ಯವೊಂದು ಈ ಘನತೆಯನ್ನು ಪಡೆಯುತ್ತಿರಲಿಲ್ಲ. ನಿಮ್ಮ ಸುತ್ತಲಿರುವ ಅನಾನುಕೂಲಗಳನ್ನೇ ಸವಾಲಾಗಿ ಸ್ವೀಕರಿಸಿ; ಏಕೆಂದರೆ ಜಗತ್ತು ನಿಮ್ಮ ಮೌನಕ್ಕೆ ಬೆಲೆ ನೀಡುವುದಿಲ್ಲ, ನಿಮ್ಮ ಕ್ರಿಯಾಶೀಲತೆಗೆ ಮಾತ್ರ ತಲೆಬಾಗುತ್ತದೆ.

ರಣಹೇಡಿಗಳಂತೆ ಸಂಕಷ್ಟಗಳಿಂದ ಪಲಾಯನ ಮಾಡುವ ಬದಲು, ಹ್ಯಾರಿಂಗ್ಟನ್ ಅವರಂತೆ ಸಮಾಜದ ಯಾತನೆಗೆ ಮದ್ದಾಗುವ ಕನಸು ಕಾಣಿ. ನಿಮ್ಮಲ್ಲಿರುವ ಅಪ್ರತಿಮ ಸಾಮರ್ಥ್ಯವನ್ನು ವ್ಯರ್ಥ ಮಾಡದೆ, ಸೃಜನಶೀಲತೆಯ ಹಾದಿಯಲ್ಲಿ ನಡೆಯಿರಿ. ನಿಮ್ಮ ಒಂದು ಸಣ್ಣ ಸಕಾರಾತ್ಮಕ ಬದಲಾವಣೆ ಇನ್ನೊಬ್ಬರ ಬದುಕಿನಲ್ಲಿ ಹೊಸ ಬೆಳಕನ್ನು ಮೂಡಿಸಲಿ. ಈ ಮೊಬೈಲ್ ಮತ್ತು ವ್ಯರ್ಥ ಹರಟೆಗಳು ನೀಡುವ ತಾತ್ಕಾಲಿಕ ಸುಖಕ್ಕಿಂತ, ಒಂದು ಉಪಯುಕ್ತ ಆವಿಷ್ಕಾರ ನೀಡುವ ತೃಪ್ತಿ ದೊಡ್ಡದು. ಇಂದೇ ಎದ್ದೇಳಿ, ಸವಾಲುಗಳನ್ನು ಸ್ವಾಗತಿಸಿ, ನಿಮ್ಮ ಯಶಸ್ಸಿನ ಕಾವ್ಯವನ್ನು ನೀವೇ ಬರೆಯಲು ಆರಂಭಿಸಿ.

-ಡಾ.ಸುಧಾಕರ.ಜಿ.ಲಕ್ಕವಳ್ಳಿ.

“ಅರ್ಥಮಾಡಿಕೊಳ್ಳುವ‌ ಹೃದಯವೊಂದಿದ್ದರೆ ಸಾಕು..!
ಕೆಲಸ ಮತ್ತು ಹಸಿವು
ಬಂದದ್ದೆಲ್ಲ ಬರಲಿ…. ಭಗವಂತನ ದಯೆ ಒಂದಿರಲಿ
ಪತಂಜಲಿ: ವ್ಯಾಕರಣ ಮತ್ತು ಯೋಗದ ಯುಗಪುರುಷ
ಶೋಷಣೆಯ ಮತ್ತೊಂದು ಮುಖ 
Share This Article
Facebook Email Print
Leave a Comment

Leave a Reply Cancel reply

Your email address will not be published. Required fields are marked *

Follow US

Find US on Social Medias
FacebookLike
XFollow
YoutubeSubscribe
TelegramFollow

Weekly Newsletter

Subscribe to our newsletter to get our newest articles instantly!
[mc4wp_form]
Popular News
Main NewsNationalTrending

ಪಹಲ್ಗಾಮ್ ನರಮೇಧ : ಪ್ರತೀಕಾರದ ನಿರೀಕ್ಷೆಯಲ್ಲಿ ಭಾರತೀಯರು

Team Varthaman
Team Varthaman
April 23, 2025
ಆನ್‌ಲೈನ್ ಗೇಮಿಂಗ್ ಮಸೂದೆ: ನಿಯಮ ಉಲ್ಲಂಘನೆಗೆ 3 ವರ್ಷ ಜೈಲು, 1 ಕೋಟಿ ರೂ. ದಂಡ
ಭೀಕರ ಅಗ್ನಿ ಅವಘಡ: ನಾಲ್ಕು ಗೋದಾಮುಗಳು ಭಸ್ಮ
ತುಪ್ಪ ಎಂಬ ಮಹಾ ಔಷಧಿ
ಬೆಂಗಳೂರು ತಲುಪಿದ H5N1 ಹಕ್ಕಿ ಜ್ವರ
- Advertisement -
Ad imageAd image
Global Coronavirus Cases

Confirmed

0

Death

0

More Information:Covid-19 Statistics

Categories

  • Articles
  • Sports
  • Latest News
  • Karnataka News

About US

Since its inception in 1957, Varthamana has stood tall as one of the most trusted and respected Kannada daily newspapers. With deep roots in the rich cultural landscape of Karnataka, Varthamana continues to be the voice of the people, championing truth, transparency, and the values that define the region. Established with a strong commitment to ethical journalism, our newspaper has consistently provided comprehensive coverage, authentic news, and insightful editorials for over six decades. Today, under the dynamic leadership of Editor K. N. Ravi, Varthamana shines even brighter, blending a proud heritage with a modern outlook to meet the evolving needs of readers across the state. Our presence in the digital space, through Varthamana Digital, ensures that our trusted news and regional stories reach a wider audience faster and with greater impact.

Contact Us

© Varthaman. All Rights Reserved.
Welcome Back!

Sign in to your account

Username or Email Address
Password

Lost your password?