ಬೆಂಗಳೂರು: ರಾಜ್ಯದಲ್ಲಿ ಕೆಪಿಎಸ್‌ಸಿ ಹಾಳಾಗಲು ಕಾಂಗ್ರೆಸ್ ಕಾರಣ. ಇವರ ಅವಧಿಯಲ್ಲಿ ಎಷ್ಟು ಬಾರಿ ಪೇಪರ್ ಲೀಕ್ ಆಗಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದರು.
ನೀಟ್ ಮರು ಪರೀಕ್ಷೆ ವಿಚಾರವಾಗಿ ವಿಪಕ್ಷಗಳ ಟೀಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ರಾಜ್ಯದಲ್ಲಿ ಎಷ್ಟು ಬಾರಿ ಪರೀಕ್ಷೆ ಮುಂದೆ ಹಾಕಿದ್ದೀರಿ? ಕಾಂಗ್ರೆಸ್ ಕಾಲದಲ್ಲಿ ಎಷ್ಟು ಅನಾಹುತ ಆಗಿಲ್ಲ? ನಮ್ಮ ರಾಜ್ಯದಲ್ಲಿ ಕೆಪಿಎಸ್‌ಸಿ ಸಂಸ್ಥೆಯನ್ನು ಸರಿಪಡಿಸಲು ಆಗಲಿಲ್ಲ. ಕಾಂಗ್ರೆಸ್‌ನಿAದಲೇ ಕೆಪಿಎಸ್‌ಸಿ ಹಾಳಾಗಿದ್ದು.
ಸಿದ್ದರಾಮಯ್ಯ ಅವರು ಎಲ್ಲಾ ತೊಳೆಯುತ್ತೇವೆ ಎಂದಿದ್ದರು. ಯಾವ ರೀತಿ ತೊಳೆದರು? ಪೋಸ್ಟ್ ಗಳಿಗೆ ಹಣ ನಿಗದಿ ಮಾಡಿರುವುದು ಬೀದಿ ಬೀದಿಯಲ್ಲಿ ಚರ್ಚೆ ಆಯ್ತು. ಆ ವಾತಾವರಣ ತಂದಿದ್ದು ಕಾಂಗ್ರೆಸ್ ಎಂದು ವಾಗ್ದಾಳಿ ನಡೆಸಿದರು.
ರಾಜಸ್ತಾನದಲ್ಲಿ ಪೇಪರ್ ಲೀಕ್ ಆಗಿದೆ. ಒಂದೊAದು ಬಾರಿ ಯಾರೋ ಮಾಡಿದ ತಪ್ಪಿಗೆ ಸರ್ಕಾರದ ಮೇಲೆ ತಪ್ಪು ಹೊರೆಸಲು ಆಗಲ್ಲ. ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತದಲ್ಲಿ ಅನೇಕ ಬಾರಿ ಇಂತಹ ಸಂದರ್ಭ ಎದುರಾಗಿದೆ. ಚರ್ಚೆ ಮಾಡೋಕೆ ಕಾಂಗ್ರೆಸ್ ಅವರಿಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.
ಜಿಬಿಎ ಚುನಾವಣೆ ಮುಂದೂಡಿಕೆಗೆ ಸರ್ಕಾರದ ಪ್ರಯತ್ನ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಎಚ್.ಡಿ.ಕುಮಾರಸ್ವಾಮಿ, ಜಿಬಿಎ ಚುನಾವಣೆ ಮಾಡಬೇಕು ಅಂತ ಸಿಎಂ ಎಲೆಕ್ಷನ್ ಸಿಬ್ಬಂದಿಯನ್ನು ಡಿಸಿಎಂ ಅನುಪಸ್ಥಿತಿಯಲ್ಲಿ ಕರೆದರು. ಕರೆದು ಜಿಬಿಎ ಚುನಾವಣೆ ಮಾಡೋಕೆ ಒತ್ತಡ ಹಾಕಿದರು. ನಂತರ ಡಿಸಿಎಂ ಬಂದು ಮತ್ತೊಂದು ಸಭೆ ಕರೆದು ಯಾವುದೇ ಕಾರಣಕ್ಕೂ ಚುನಾವಣೆ ಮಾಡಬಾರದು ಅಂತ ಸಿಎಂ ಮೇಲೆ ಒತ್ತಡ ಹಾಕಿದ್ದಾರೆ. ಈಗ ಸುಪ್ರೀಂಕೋರ್ಟ್ ಮುಂದೆ ಅರ್ಜಿ ಹಾಕಿದ್ದಾರೆ. ಜನಗಣತಿ ಅದು, ಇದು ಅಂತ ಹೇಳಿ ಸೆಪ್ಟೆಂಬರ್‌ವರೆಗೂ ಚುನಾವಣೆ ಆಗಲ್ಲ ಅಂತ ಮುಂದೂಡಲು ಮುಂದಾಗಿದ್ದಾರೆAದು ಆರೋಪಿಸಿದರು.ಇದನ್ನು ಓದಿ –ಅಕ್ರಮ ಆರೋಪ: NEET ಪರೀಕ್ಷೆ ರದ್ದು
ಜಿಬಿಎ ಚುನಾವಣೆ ಘೋಷಣೆಯಾದರೆ ಸಿಎಂ ಸಿದ್ದರಾಮಯ್ಯ ಸ್ಥಾನ ಮತ್ತೆ 6 ತಿಂಗಳು ಭದ್ರ ಆಗುತ್ತದೆ. ಡಿಸಿಎಂಗೆ ಚುನಾವಣೆ ಆದರೆ ನನ್ನ ಸ್ಥಾನಕ್ಕೆ ಚ್ಯುತಿ ಆಗುತ್ತದೆ. ಸಿಎಂ-ಡಿಸಿಎಂ ನಡುವೆ ಗಲಾಟೆ ನಡೆಯುತ್ತಿದೆ. ಅಂತಿಮವಾಗಿ ಡಿಸಿಎಂ ಒತ್ತಡದ ಮೇರೆಗೆ ಸುಪ್ರೀಂಕೋರ್ಟ್ ಮುಂದೆ ಅರ್ಜಿ ಹಾಕಿದ್ದಾರೆ. ಸಿಎಂ-ಡಿಸಿಎಂ ನಡುವೆ ಚುನಾವಣೆ ವಿಚಾರದಲ್ಲಿ ಸಂಘರ್ಷ ನಡೆಯುತ್ತಿದೆ ಎಂದು ಆರೋಪಿಸಿದರು.








