ಬೆಂಗಳೂರು, ಮೇ 15: ರಾಜ್ಯ ಸರ್ಕಾರ ಜಾರಿಗೆ ತಂದಿರುವ ನೂತನ ಅಬಕಾರಿ ನೀತಿಯಿಂದ ಬಿಯರ್ ಹಾಗೂ ಪ್ರೀಮಿಯಂ ಸ್ಕಾಚ್ ವಿಸ್ಕಿಗಳ ಬೆಲೆಯಲ್ಲಿ ಗಣನೀಯ ಇಳಿಕೆಯಾಗಿದೆ. ಮೇ 11ರಿಂದ ಜಾರಿಗೆ ಬಂದಿರುವ ‘ಆಲ್ಕೋಹಾಲ್ ಇನ್ ಬೆವರೇಜ್’ (AiB) ನೀತಿಯ ಪರಿಣಾಮವಾಗಿ ಬಿಯರ್ ದರದಲ್ಲಿ ಶೇ. 20ರಿಂದ 25ರವರೆಗೆ ಇಳಿಕೆಯಾಗಿದೆ. ಆದರೆ ಕಡಿಮೆ ದರದ ಮದ್ಯದ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ.
ಹೊಸ ನೀತಿಯ ಪ್ರಕಾರ ಶೇ. 5ರಷ್ಟು ಆಲ್ಕೋಹಾಲ್ ಹೊಂದಿರುವ ಮೈಲ್ಡ್ ಮತ್ತು ಲಾಗರ್ ಬಿಯರ್‌ಗಳ ಬೆಲೆ ಕಡಿಮೆಯಾಗಿದೆ. ಕಿಂಗ್‌ಫಿಶರ್ ಪ್ರೀಮಿಯಂ ಮತ್ತು ಅಲ್ಟ್ರಾ 650 ಎಂಎಲ್ ಬಾಟಲಿಗಳ ಬೆಲೆಯಲ್ಲಿ ಸುಮಾರು 75 ರೂಪಾಯಿ ಇಳಿಕೆಯಾಗಿದ್ದು, ಹೈನೆಕೆನ್ ಮೇಲೆ 70 ರೂಪಾಯಿ, ಯುಬಿ ಎಕ್ಸ್‌ಪೋರ್ಟ್ ಮೇಲೆ 25 ರೂಪಾಯಿ ಹಾಗೂ ಬಡ್‌ವೈಸರ್ ಪ್ರೀಮಿಯಂ ಮೇಲೆ 20 ರೂಪಾಯಿವರೆಗೆ ಕಡಿತವಾಗಿದೆ.
ವಿದೇಶಿ ಬ್ರಾಂಡ್‌ನ ಪ್ರೀಮಿಯಂ ಸ್ಕಾಚ್ ವಿಸ್ಕಿಗಳ ಬೆಲೆಯೂ ಶೇ. 20ರಷ್ಟು ಇಳಿಕೆಯಾಗಿದೆ. ಬ್ಲ್ಯಾಕ್ ಲೇಬಲ್ ಮತ್ತು ಶಿವಾಸ್ ರೀಗಲ್ 750 ಎಂಎಲ್ ಬಾಟಲಿಯ ಬೆಲೆ 5,190 ರೂಪಾಯಿಯಿಂದ 4,100 ರೂಪಾಯಿಗೆ ಇಳಿದಿದೆ.ಇದನ್ನು ಓದಿ –ಪೆಟ್ರೋಲ್, ಡೀಸೆಲ್ ದರ ಲೀಟರ್‌ಗೆ 3 ರೂ. ಏರಿಕೆ
ಕರ್ನಾಟಕವು ದೇಶದಲ್ಲೇ ಮೊದಲ ಬಾರಿಗೆ ಈ ಎ.ಐ.ಬಿ ತೆರಿಗೆ ನೀತಿಯನ್ನು ಜಾರಿಗೆ ತಂದಿದೆ. ಈ ಹಿಂದೆ ಇದ್ದ 16 ತೆರಿಗೆ ಸ್ಲ್ಯಾಬ್‌ಗಳನ್ನು ಈಗ 8ಕ್ಕೆ ಇಳಿಸಲಾಗಿದೆ. ಮದ್ಯದಲ್ಲಿರುವ ಆಲ್ಕೋಹಾಲ್ ಪ್ರಮಾಣದ ಆಧಾರದ ಮೇಲೆ ತೆರಿಗೆ ವಿಧಿಸುವ ಹೊಸ ಪದ್ಧತಿಯನ್ನು ಸರ್ಕಾರ ಅಳವಡಿಸಿಕೊಂಡಿದೆ.








