ಅಮೆರಿಕ ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯ 41 ಪೈಸೆ ಚೇತರಿಕೆ ಕಂಡಿದೆ. ಸತತ ಆರು ದಿನಗಳ ಕುಸಿತದ ಬಳಿಕ ರೂಪಾಯಿ ಮೌಲ್ಯ ಇಂದು ಸುಧಾರಣೆ ಕಂಡಿದೆ.
ಹಿಂದಿನ ವಹಿವಾಟಿನಲ್ಲಿ ಸಾರ್ವಕಾಲಿಕ ಕನಿಷ್ಠ ಮಟ್ಟವಾದ ₹96.86ಕ್ಕೆ ಕುಸಿದಿದ್ದ ರೂಪಾಯಿ, ಇಂದು ಆರಂಭಿಕ ವಹಿವಾಟಿನಲ್ಲಿ ₹98.25ಕ್ಕೆ ತಲುಪಿತ್ತು. ಬಳಿಕ ಚೇತರಿಕೆ ಕಂಡು ₹96.45ಕ್ಕೆ ಏರಿಕೆಯಾಯಿತು.
ಪಶ್ಚಿಮ ಏಷ್ಯಾದ ಉದ್ವಿಗ್ನತೆ ಹಾಗೂ ಕಚ್ಚಾ ತೈಲದ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಹೂಡಿಕೆದಾರರು ಎಚ್ಚರಿಕೆಯಿಂದ ವಹಿವಾಟು ನಡೆಸುತ್ತಿದ್ದಾರೆ ಎಂದು ಫಾರೆಕ್ಸ್ ತಜ್ಞರು ತಿಳಿಸಿದ್ದಾರೆ.
ಡಾಲರ್ ಬೇಡಿಕೆ ಹೆಚ್ಚಳ ಹಾಗೂ ತೈಲದ ಬೆಲೆ ಏರಿಕೆಯಿಂದ ರೂಪಾಯಿ ಮೇಲಿನ ಒತ್ತಡ ಮುಂದುವರಿದಿದೆ. ಆದರೆ ಆರ್‌ಬಿಐ ಕೈಗೊಂಡಿರುವ ಕ್ರಮಗಳು ಮತ್ತು ದ್ರವ್ಯತೆ ಬೆಂಬಲದಿಂದ ಅಲ್ಪಾವಧಿಯಲ್ಲಿ ಸ್ಥಿರತೆ ಸಾಧ್ಯ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.ಇದನ್ನು ಓದಿ –ಜಿಬಿಎ ಚುನಾವಣೆ ಗಡುವು ಆಗಸ್ಟ್ 31ರವರೆಗೆ ವಿಸ್ತರಣೆ
ಇನ್ನೊಂದೆಡೆ, ದೇಶೀಯ ಷೇರು ಮಾರುಕಟ್ಟೆಯಲ್ಲೂ ಏರಿಕೆ ಕಂಡುಬಂದಿದ್ದು, ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ಆರಂಭಿಕ ವಹಿವಾಟಿನಲ್ಲಿ ಲಾಭ ದಾಖಲಿಸಿವೆ.








