ಬೆಂಗಳೂರು ಮೂಲದ ಬೈಜೂಸ್ ಎಡ್ಯುಟೆಕ್ ಕಂಪನಿ ಸಂಸ್ಥಾಪಕ ಬೈಜು ರವೀಂದ್ರನ್ ಅವರಿಗೆ ಸಿಂಗಪುರ ನ್ಯಾಯಾಲಯ 6 ತಿಂಗಳ ಜೈಲು ಶಿಕ್ಷೆ ವಿಧಿಸಿದೆ ಎಂದು ವರದಿಯಾಗಿದೆ.
ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಈ ಶಿಕ್ಷೆ ವಿಧಿಸಲಾಗಿದ್ದು, ಆಸ್ತಿಗೆ ಸಂಬಂಧಿಸಿದ ನ್ಯಾಯಾಲಯದ ಆದೇಶಗಳನ್ನು ಪಾಲಿಸದ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ಕೋರ್ಟ್ ತಿಳಿಸಿದೆ.
ಪ್ರಕರಣ ಸಂಬಂಧ ಅಧಿಕಾರಿಗಳ ಮುಂದೆ ಶರಣಾಗಬೇಕು ಹಾಗೂ 90 ಸಾವಿರ ಸಿಂಗಪುರ ಡಾಲರ್ (ಸುಮಾರು ₹67.5 ಲಕ್ಷ) ವೆಚ್ಚ ಪಾವತಿಸಲು ನ್ಯಾಯಾಲಯ ಸೂಚಿಸಿದೆ.ಇದನ್ನು ಓದಿ –ನಾಲ್ಕು ಡಿಸಿಎಂ? ರಾಜ್ಯಸಭೆಗೆ ಸಿದ್ದು?
ಇದಲ್ಲದೆ, ‘ಬೀಯಾರ್ ಇನ್ವೆಸ್ಟ್‌ಕೋ ಪ್ರೈವೇಟ್ ಲಿಮಿಟೆಡ್’ ಸಂಸ್ಥೆಯ ಮೇಲಿನ ತಮ್ಮ ಕಾನೂನುಬದ್ಧ ಮಾಲೀಕತ್ವದ ದಾಖಲೆಗಳನ್ನು ಸಲ್ಲಿಸುವಂತೆಯೂ ಕೋರ್ಟ್ ಆದೇಶಿಸಿದೆ.








