ವಾಷಿಂಗ್ಟನ್:“ನಾನು ಸಂತೋಷವಾಗಿದ್ದೇನೆ” ಎಂದು ಹೇಳಿದ ಕೆಲವೇ ಗಂಟೆಗಳ ನಂತರ, ಅಮೆರಿಕದ ಜಾರ್ಜಿಯಾದಲ್ಲಿ ಸಂಭವಿಸಿದ ಹೆಲಿಕಾಪ್ಟರ್ ಪತನದಲ್ಲಿ ಭಾರತೀಯ ಮೂಲದ ಪೈಲಟ್ ಒಬ್ಬರು ಮೃತಪಟ್ಟಿದ್ದಾರೆ.
ಡೆಲ್ಟಾ ಏರ್ ಲೈನ್ಸ್ ಪೈಲಟ್ ಆಗಿ ಕೆಲಸ ಮಾಡುತ್ತಿದ್ದ ಕೇರಳದ ಮೂಲದ 26 ವರ್ಷದ ಡೇವ್ ಫಿಜಿ ಅವರು, ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಂತರ ತನ್ನ ಪತ್ನಿಯೊಂದಿಗೆ ಹನಿಮೂನ್ಗೆ ತೆರಳುತ್ತಿದ್ದರು. ಈ ವೇಳೆ ಸ್ವತಃ ಡೇವ್ ಹಾರಿಸುತ್ತಿದ್ದ ರಾಬಿನ್ಸನ್ R66 ಹೆಲಿಕಾಪ್ಟರ್ ಡಾಸನ್ವಿಲ್ಲೆ ಮದುವೆ ಮಂಟಪದ ಬಳಿಯೇ ಪತನಗೊಂಡಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಅಟ್ಲಾಂಟಾ ನ್ಯೂಸ್ ಫಸ್ಟ್ ವರದಿಯ ಪ್ರಕಾರ, ಅಧಿಕಾರಿಗಳು ಇನ್ನೂ ಗುರುತಿಸಲಾಗದ ಮತ್ತೊಬ್ಬ ಚಾಪರ್ ಪೈಲಟ್ ಕೂಡ ಅಪಘಾತದಲ್ಲಿ ಮೃತಪಟ್ಟಿದ್ದಾರೆ.ಇದನ್ನು ಓದಿ –ಮೇ ತಿಂಗಳಲ್ಲಿ ₹1.94 ಲಕ್ಷ ಕೋಟಿ GST ಸಂಗ್ರಹ; ಶೇ. 3.2ರಷ್ಟು ಏರಿಕೆ
ವೃತ್ತಿಯಲ್ಲಿ ನರ್ಸ್ ಆಗಿರುವ ಡೇವ್ ಫಿಜಿ ಅವರ ವಧು ಜೆಸ್ನಿ ಅವರು ಭೀಕರ ಅಪಘಾತದಲ್ಲಿ ಬದುಕುಳಿದಿದ್ದಾರೆ ಮತ್ತು ಮೆಟ್ರೋ ಅಟ್ಲಾಂಟಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿ ತಿಳಿಸಿದೆ.








