ನೆಲಮಂಗಲ: ಹಾವನೂರು ಲೇಔಟ್‌ನಲ್ಲಿರುವ ಎಂಬಿ ಜ್ಯುವೆಲರ್ಸ್ ಅಂಗಡಿಯಲ್ಲಿ ಭಾರಿ ಕಳ್ಳತನ ನಡೆದಿದೆ. ಕಳ್ಳರು ಗೋಡೆ ಕೊರೆದು ಅಂಗಡಿಯೊಳಗೆ ನುಗ್ಗಿ, ಸುಮಾರು 70 ಕೆಜಿ ಬೆಳ್ಳಿಯ ಆಭರಣಗಳನ್ನು ಕಳವು ಮಾಡಿದ್ದಾರೆ.
ಕಳವಾದ ಬೆಳ್ಳಿಯ ಮೌಲ್ಯ ಸುಮಾರು ₹1.2 ಕೋಟಿ ಎಂದು ಅಂದಾಜಿಸಲಾಗಿದೆ. ಈ ಘಟನೆ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕಳ್ಳರು ಗೋಡೆಯನ್ನು ಕೊರೆದು, ಹಿಂಬದಿಯ ಕೊಠಡಿಯ ಬಾಗಿಲು ಒಡೆದು ಅಂಗಡಿಗೆ ಪ್ರವೇಶಿಸಿದ್ದಾರೆ. ರಾತ್ರೋರಾತ್ರಿ ಈ ಕೃತ್ಯ ಎಸಗಿರುವುದು ತಿಳಿದುಬಂದಿದೆ.ಇದನ್ನು ಓದಿ –ವಾಣಿಜ್ಯ LPG ದರ ಭಾರೀ ಏರಿಕೆ
ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಆರೋಪಿಗಳನ್ನು ಪತ್ತೆಹಚ್ಚುವ ಕಾರ್ಯ ಮುಂದುವರಿದಿದೆ.








