ಬೆಂಗಳೂರು, ಜೂನ್ 17: ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಭಾರತೀಯ ರೈಲ್ವೆಯಿಂದ ಭರ್ಜರಿ ಸುದ್ದಿಯೊಂದು ಬಂದಿದೆ. ಭಾರತೀಯ ರೈಲ್ವೆ ನೇಮಕಾತಿ ಮಂಡಳಿ (RRB) 6374 ತಂತ್ರಜ್ಞ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭಿಸಲು ಅಧಿಕೃತವಾಗಿ ಪ್ರಕಟಣೆ ಹೊರಡಿಸಿದೆ. ಈ ಹುದ್ದೆಗಳ ನೇಮಕಾತಿ ಟೆಕ್ನಿಷಿಯನ್ ಗ್ರೇಡ್-1 ಮತ್ತು ಟೆಕ್ನಿಷಿಯನ್ ಗ್ರೇಡ್-3 ಕ್ಕೆ ಸಂಬಂಧಿಸಿದೆ.
ಅರ್ಜಿ ಪ್ರಕ್ರಿಯೆ:
ನೇಮಕಾತಿಗೆ ಸಂಬಂಧಿಸಿದ ಸಂಪೂರ್ಣ ಅಧಿಸೂಚನೆ ಜಾರಿ ಆಗಲಿದ್ದು, ಆನ್ಲೈನ್ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ ಮತ್ತು ಕೊನೆಯ ದಿನಾಂಕವನ್ನು ಇದೇ ಅಧಿಸೂಚನೆಯಲ್ಲೇ ನೀಡಲಾಗುತ್ತದೆ. ಅಭ್ಯರ್ಥಿಗಳು RRB ಅಧಿಕೃತ ವೆಬ್ಸೈಟ್ ಅನ್ನು ನಿಯಮಿತವಾಗಿ ಪರಿಶೀಲಿಸಿ ನವೀಕರಣಗಳನ್ನು ತಿಳಿದುಕೊಳ್ಳುವುದು ಅಗತ್ಯ.
ಹುದ್ದೆಗಳ ವಿಂಗಡನೆ (ಪ್ರಮುಖ ವಲಯವಾರು):
- ದಕ್ಷಿಣ ರೈಲ್ವೆ (SR): 1215 ಹುದ್ದೆಗಳು
- ಪೂರ್ವ ರೈಲ್ವೆ (ER): 1119 ಹುದ್ದೆಗಳು
- ಪಶ್ಚಿಮ ರೈಲ್ವೆ (WR): 849 ಹುದ್ದೆಗಳು
- ಇಂಟಿಗ್ರಲ್ ಕೋಚ್ ಫ್ಯಾಕ್ಟರಿ (ICF): 404 ಹುದ್ದೆಗಳು
- ಉತ್ತರ ರೈಲ್ವೆ (NR): 478 ಹುದ್ದೆಗಳು
- ಉತ್ತರ ಮಧ್ಯ ರೈಲ್ವೆ (NCR): 241 ಹುದ್ದೆಗಳು
- ಮಧ್ಯ ರೈಲ್ವೆ (CR): 305 ಹುದ್ದೆಗಳು
- ಪೂರ್ವ ಮಧ್ಯ ರೈಲ್ವೆ (ECR): 31 ಹುದ್ದೆಗಳು
- ಇತರ ವಲಯಗಳು ಸೇರಿ ಒಟ್ಟು: 6374 ಹುದ್ದೆಗಳು
ಅರ್ಹತೆ ಹಾಗೂ ವಯೋಮಿತಿ:
- ಗ್ರೇಡ್-1 ಟೆಕ್ನಿಷಿಯನ್ ಹುದ್ದೆಗಳಿಗೆ: ಕನಿಷ್ಠ ವಯಸ್ಸು 18 ವರ್ಷಗಳು, ಗರಿಷ್ಠ 36 ವರ್ಷಗಳು
- ಗ್ರೇಡ್-3 ಹುದ್ದೆಗಳಿಗೆ: ಗರಿಷ್ಠ ವಯಸ್ಸು 33 ವರ್ಷಗಳು
- ಶೈಕ್ಷಣಿಕ ಅರ್ಹತೆ: ಸಂಬಂಧಿತ ವಿಭಾಗದಲ್ಲಿ ಡಿಪ್ಲೊಮಾ ಅಥವಾ ಬಿ.ಎಸ್ಸಿ ಪದವಿ ಕಡ್ಡಾಯ
ಇದನ್ನು ಓದಿ –ಬೈಕ್ ಟ್ಯಾಕ್ಸಿ ಸೇವೆಯಿಂದ ಹಿಂದೆ ಸರಿದ ರಾಪಿಡೋ
ಚಯನ ಪ್ರಕ್ರಿಯೆ:
ಅಭ್ಯರ್ಥಿಗಳನ್ನು ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT), ದಾಖಲೆ ಪರಿಶೀಲನೆ, ಹಾಗೂ ವೈದ್ಯಕೀಯ ಪರೀಕ್ಷೆಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.