By using this site, you agree to the Privacy Policy and Terms of Use.
Accept
VarthamanVarthamanVarthaman
Notification Show More
Font ResizerAa
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
    ArticlesShow More
    ಅಜವಾನ ಅಜೀರ್ಣಕ್ಕೆ ಪ್ರಕೃತಿ ನೀಡಿದ ವರದಾನ
    February 1, 2026
    ಹೀಗೆ ಬಂದು ಹಾಗೆ ಹೋಗುವ ಸ್ನೇಹ ಸಾವಿರ
    February 1, 2026
    ಸಾವು ಬದುಕಿನ ನಡುವೆ
    January 28, 2026
    ವಾಸ್ತವ ವರ್ತಮಾನ
    January 24, 2026
    ಅರೋಗ್ಯ ಭಾಗ್ಯ
    January 24, 2026
  • Sports
  • National
  • International
  • Crime
Reading: ಯೋಗಾ ಯೋಗ..
Share
Font ResizerAa
VarthamanVarthaman
  • Home
  • Karnataka
  • Articles
  • Sports
  • National
  • International
  • Crime
Search
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
  • Sports
  • National
  • International
  • Crime
Follow US
Varthaman > Karnataka – Latest Breaking News > Articles > ಯೋಗಾ ಯೋಗ..
Articles

ಯೋಗಾ ಯೋಗ..

Team Varthaman
Last updated: June 21, 2025 4:31 AM
Team Varthaman
Published: June 21, 2025
Share
SHARE

ಯೋಗ ಭಾರತೀಯ ಸಂಸ್ಕೃತಿಯ ಹೆಮ್ಮೆ. ವರ್ಷದ ಅತೀ ದೀರ್ಘ ದಿನವಾದ, ಅಥವಾ ಉತ್ತರ ಗೋಳಾರ್ಧದಲ್ಲಿ ವರ್ಷದ ಅತಿ ಉದ್ದದ ದಿನವಾದ ಜೂನ್ 21ನ್ನು ಅಂತರರಾಷ್ಟ್ರೀಯ ಯೋಗ ದಿನವನ್ನಾಗಿ ಆಚರಿಸಲಾಗುತ್ತದೆ.

ಮೊದಲು ಆದಿಯೋಗಿಯಾದ  ಶಿವ ಯೋಗವನ್ನು ಸಪ್ತರ್ಷಿಗಳಿಗೆ ಬೋಧಿಸಿದರೆಂದು, ನಂತರ ಯೋಗವೆಂಬುದು ಅಸ್ತಿತ್ವಕ್ಕೆ ಬಂತು ಎಂದು ಹೇಳಲಾಗುತ್ತದೆ. ಆನಂತರ ಆದಿಶೇಷ ಯೋಗದ ವಿಸ್ತಾರತೆಯನ್ನು ತಿಳಿಯುವ ಸಲುವಾಗಿ, ಮತ್ತು ಜಗತ್ತಿಗೆ ತಿಳಿಸುವ ಸಲುವಾಗಿ ಪತಂಜಲಿ ಮಹರ್ಷಿಯಾಗಿ ಜನ್ಮವೆತ್ತಿ ಯೋಗಾಭ್ಯಾಸ ಮಾಡಿ ಭೂಮಿಯಲ್ಲಿ ಯೋಗದ ಮಹತ್ವವನ್ನು ಸಾರಿದರು ಎಂದು ಪುರಾಣ ಗ್ರಂಥಗಳಲ್ಲಿ ಉಲ್ಲೇಖವಿದೆ. ಆದ್ದರಿಂದಲೇ ಪತಂಜಲಿ ಮಹರ್ಷಿಯನ್ನು ಯೋಗದ ಪಿತಾಮಹ ಎಂದು ಕರೆಯುತ್ತಾರೆ.

Join WhatsApp Group

ಯೋಗ ಆಧ್ಯಾತ್ಮಿಕ ಮಾರ್ಗದಲ್ಲಿ ಸಾಗಲು ನಮ್ಮ ಮನಸ್ಸು ಮತ್ತು ದೇಹವನ್ನು ಸಜ್ಜುಗೊಳಿಸುವ ಅತ್ಯುತ್ತಮ ಸಾಧನ. ಯೋಗದ ಆಸನಗಳನ್ನು ನಿರಂತರ ಅಭ್ಯಾಸದಿಂದ ದೇಹ ಸದೃಢಗೊಳ್ಳುತ್ತದೆ ಮತ್ತು ದೇಹ ಸ್ಥಿರವಾದರೆ ಮನಸ್ಸು ಧ್ಯಾನಕ್ಕೆ ಸಹಕರಿಸುತ್ತದೆ. ಧ್ಯಾನ ಆತ್ಮ ಮತ್ತು ಪರಮಾತ್ಮನನ್ನು ಸಾಕ್ಷಾತ್ಕರಿಸಿಕೊಳ್ಳಲು ಇರುವ ಸುಲಭ ಮಾರ್ಗ. ಮನಯೇವ ಮನುಷ್ಯಾಣಾಂ ಕಾರಣಯೋ ಬಂಧನ ಮೋಕ್ಷಯಃ (ಯಾವುದೇ ಬಂಧನಕ್ಕೂ ಮತ್ತು ಮೋಕ್ಷಕ್ಕೂ ಮನಸ್ಸೆ ಕಾರಣ).
ಜೀವನ್ಮರಣಗಳ ಸರಪಳಿಯಿಂದ ಪಡೆಯುವ ಮುಕ್ತಿಯೇ ಮೋಕ್ಷ. ಮತ್ತು ಯೋಗೋ ಉಪಾಯ ಉದ್ದಿಷ್ಟಃ (ಮೋಕ್ಷಕ್ಕೆ ಉತ್ತಮ ಉಪಾಯ ಯೋಗ).

ಆಧ್ಯಾತ್ಮಿಕ ಪಥದಲ್ಲಿ ಯೋಗವೇ ಮೂಲ. ಆತ್ಮ ನೊಂದಿಗೆ ಪರಮಾತ್ಮನನ್ನು ಸೇರಿಸುವ ಸೇತುವೆ. ವಿಶ್ವಕ್ಕೆ ಯೋಗವನ್ನು ಪರಿಚಯಿಸಿದ ಹೆಮ್ಮೆ ನನ್ನ ದೇಶದ್ದು. ಜಗತ್ತಿನ ಜನರ ಸ್ವಾಸ್ಥ್ಯದ ದೃಷ್ಟಿಯಲ್ಲಿ ಯೋಗವನ್ನು ವಿಶ್ವಕ್ಕೆ ಕೊಡುಗೆಯಾಗಿ ನೀಡಿದ್ದು, ನನ್ನ ಭಾರತದ ದೊಡ್ಡ ಮೈಲಿಗಲ್ಲು. ನಮ್ಮ ಆಚರಣೆಗಳು, ಸಂಸ್ಕೃತಿ, ಪರಂಪರೆಯೇ ಭಾರತವನ್ನು ವಿಶ್ವಗುರುವಾಗಿಸಿದ್ದು. ಜಗತ್ತಿನಲ್ಲಿ ನಾಗರಿಕತೆ ಅಂಬೆಗಾಲಿಡುತ್ತ ತೆವಳುತ್ತಿರುವಾಗ, ಭಾರತದ ಸಂಸ್ಕೃತಿ ಎದ್ದು ನಡೆಯುತ್ತಿತ್ತು. ವಿಶ್ವಕ್ಕೆ ಭಾರತದ ಕೊಡುಗೆ ಅಪಾರ. ಅದರಲ್ಲಿ ಯೋಗ ಮೇರುಶಿಖರ.

ಯೋಗ ಬಲ್ಲವನು ಯೋಗಿಯಾಗಬಲ್ಲ ಎಂಬಂತೆ, ಯೋಗ ಅನೇಕ ರೀತಿಯ ರೋಗಗಳನ್ನು ದೂರವಿಟ್ಟು ನಮ್ಮ ದೇಹವನ್ನು ಮತ್ತು ಮನಸ್ಸನ್ನು ಕಾಪಾಡುತ್ತದೆ. ಇನ್ನೂ ಯೋಗದ ಸಾಧನೆಯಲ್ಲಿ ಆಳವಾಗಿ ಇಳಿದಾಗ ಸೃಷ್ಟಿಯ ರಹಸ್ಯ ಬಯಲಾಗುತ್ತಾ ಹೋಗುತ್ತದೆ, ಮನಕ್ಕೆ ಕವಿದ ಮಬ್ಬು ಕರಗಿ, ಜ್ಞಾನದ ಮಾರ್ಗ ಗೋಚರವಾಗುತ್ತದೆ. ಯೋಗಿಗಳು ತಮ್ಮ ಕಠಿಣ ಸಾಧನೆಗೆ ಆರಿಸಿಕೊಳ್ಳುವ ಮಾರ್ಗ ಯೋಗ.

ಪತಂಜಲಿ ಮಹರ್ಷಿಗಳ ಪ್ರಕಾರ ಯೋಗ ಎಂದರೆ ‘ಯೋಗಶ್ಚಿತ್ತ ವೃತ್ತಿ ನಿರೋಧಃ (ಚಿತ್ತವೃತ್ತಿಯನ್ನು ನಿರೋಧಿಸುವುದು)’ ಯೋಗದ ಉದ್ದೇಶ ಎನ್ನುತ್ತಾರೆ. ಇಂತಹ ಅದ್ಭುತ ಇತಿಹಾಸವಿರುವ ಯೋಗವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಆರೋಗ್ಯಕರ ಜೀವನವನ್ನು ಸಂಭ್ರಮಿಸೋಣ. ‘ನೈಜ ಸುಖಾನುಭೂತಿಃ’ ಎಂಬಂತೆ ನಿಜವಾದ ಸುಖಾನುಭೂತಿ ಹೊಂದೋಣ.

ಯೋಗ ದಿನಾಚರಣೆಯ ಶುಭಾಶಯಗಳು.

_ಪಲ್ಲವಿ ಚೆನ್ನಬಸಪ್ಪ✍

  • ಅಜವಾನ ಅಜೀರ್ಣಕ್ಕೆ ಪ್ರಕೃತಿ ನೀಡಿದ ವರದಾನ
    by Team Varthaman
    February 1, 2026
  • ಹೀಗೆ ಬಂದು ಹಾಗೆ ಹೋಗುವ ಸ್ನೇಹ ಸಾವಿರ
    by Team Varthaman
    February 1, 2026
  • ಐಟಿ ದಾಳಿ ಭೀತಿ: ಕಾನ್ಫಿಡೆಂಟ್ ಅಧ್ಯಕ್ಷ ಡಾ.ಸಿ.ಜೆ.ರಾಯ್ ಆತ್ಮಹತ್ಯೆ
    by Team Varthaman
    January 30, 2026
  • ಅಕ್ರಮ ವಲಸಿಗರ ಪತ್ತೆ–ಗಡಿಪಾರಿಗೆ ವಿಶೇಷ ತಂಡ ರಚನೆ: ರಾಜ್ಯ ಸರ್ಕಾರ
    by Team Varthaman
    January 30, 2026
  • ತಿರುಪತಿ ಲಡ್ಡು ಕಲಬೆರಕೆ ಪ್ರಕರಣ: ₹234 ಕೋಟಿ ವಂಚನೆ ಬಯಲು
    by Team Varthaman
    January 30, 2026
ಕಾಲ್ತುಳಿತ ದುರಂತ: ಮೃತರ ಕುಟುಂಬಗಳಿಗೆ RCB ಹಾಗೂ KSCA ಯಿಂದ ಒಟ್ಟು ₹25 ಲಕ್ಷ ಪರಿಹಾರ
ಗುಪ್ತಚರ ಇಲಾಖೆ: 3717 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
ಲಂಚ ಪ್ರಕರಣ: ತಾಂತ್ರಿಕ ಸಹಾಯಕಿ ಲೋಕಾಯುಕ್ತ ಬಲೆಗೆ
ಸಿಎಂ ಪತ್ನಿ ಪಾರ್ವತಿ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲು
ಚಿತ್ರದುರ್ಗ ಬಸ್ ದುರಂತ: ಡಿಎನ್‌ಎ ವರದಿ ಬಳಿಕ ಶವ ಹಸ್ತಾಂತರ
TAGGED:International Yoga dayKannada ArticlelatestnewsLifestyleYoga Day 2025
Share This Article
Facebook Email Print
Leave a Comment

Leave a Reply Cancel reply

Your email address will not be published. Required fields are marked *

Follow US

Find US on Social Medias
FacebookLike
XFollow
YoutubeSubscribe
TelegramFollow

Weekly Newsletter

Subscribe to our newsletter to get our newest articles instantly!
[mc4wp_form]
Popular News
Blog

ಅರ್ಜುನ್ ತೆಂಡೂಲ್ಕರ್–ಸಾನಿಯಾ ಚಂದೋಕ್ ನಿಶ್ಚಿತಾರ್ಥ

Team Varthaman
Team Varthaman
August 14, 2025
ತಾಯಿ
ಮೈಸೂರು ವಿಮಾನ ನಿಲ್ದಾಣದಲ್ಲಿ ರಾಹುಲ್ ಗಾಂಧಿ ಕ್ಷಿಪ್ರ ಭೇಟಿ
ಬಿಗ್ ಬಾಸ್ ಗೆ ಬಿತ್ತು ಬೀಗ – ಶೋ ಬಂದ್‌ ಸಾಧ್ಯತೆ
ಚಾಮುಂಡಿ ಬೆಟ್ಟದಲ್ಲಿ ಅಸಭ್ಯ ವರ್ತನೆ ಮಾಡಿದ ಹೊರರಾಜ್ಯದ ಯುವಕರು ವಶಕ್ಕೆ
- Advertisement -
Ad imageAd image
Global Coronavirus Cases

Confirmed

0

Death

0

More Information:Covid-19 Statistics

Categories

  • Articles
  • Sports
  • Latest News
  • Karnataka News

About US

Since its inception in 1957, Varthamana has stood tall as one of the most trusted and respected Kannada daily newspapers. With deep roots in the rich cultural landscape of Karnataka, Varthamana continues to be the voice of the people, championing truth, transparency, and the values that define the region. Established with a strong commitment to ethical journalism, our newspaper has consistently provided comprehensive coverage, authentic news, and insightful editorials for over six decades. Today, under the dynamic leadership of Editor K. N. Ravi, Varthamana shines even brighter, blending a proud heritage with a modern outlook to meet the evolving needs of readers across the state. Our presence in the digital space, through Varthamana Digital, ensures that our trusted news and regional stories reach a wider audience faster and with greater impact.

Contact Us

© Varthaman. All Rights Reserved.
Welcome Back!

Sign in to your account

Username or Email Address
Password

Lost your password?