- 43 ಕೋಟಿ ರೂ. ವೆಚ್ಚದ ಲೆಕ್ಕ 7 ತಿಂಗಳ ಬಳಿಕ ಬಿಡುಗಡೆ
ಮೈಸೂರು: ಕಳೆದ ವರ್ಷದ ನಾಡಹಬ್ಬ ಮೈಸೂರು ದಸರಾ ಆಚರಣೆಯ ವೆಚ್ಚದ ವಿವರವನ್ನು ಮೈಸೂರು ಜಿಲ್ಲಾಡಳಿತ ಇದೀಗ ಬಹಿರಂಗಪಡಿಸಿದೆ. ದಸರಾ ಮುಗಿದು ಏಳು ತಿಂಗಳ ಬಳಿಕ ಈ ಲೆಕ್ಕ ಬಿಡುಗಡೆ ಮಾಡಲಾಗಿದೆ.
ಜಿಲ್ಲಾಡಳಿತ ನೀಡಿದ ಮಾಹಿತಿಯ ಪ್ರಕಾರ, ದಸರಾ ಆಚರಣೆಗೆ ಒಟ್ಟು 43 ಕೋಟಿ ರೂ. ವೆಚ್ಚ ಮಾಡಲಾಗಿದೆ. ಅದರಲ್ಲಿ ಯುವ ದಸರಾಗೆ 16 ಕೋಟಿ ರೂ., ಸಿವಿಲ್ ಕಾಮಗಾರಿಗಳಿಗೆ 6 ಕೋಟಿ ರೂ., ಏರ್ ಶೋಗೆ 55 ಲಕ್ಷ ರೂ. ವೆಚ್ಚ ಮಾಡಲಾಗಿದೆ.
ದಸರಾ ವಿಜೃಂಭಣೆಯಿಂದ ಆಚರಿಸಲು ಸರ್ಕಾರದಿಂದ 30 ಕೋಟಿ ರೂ., ಮೈಸೂರು ಅಭಿವೃದ್ಧಿ ಪ್ರಾಧಿಕಾರದಿಂದ 10 ಕೋಟಿ ರೂ., ಪ್ರಾಯೋಜಕತ್ವದಿಂದ 1.81 ಕೋಟಿ ರೂ., ಟಿಕೆಟ್ ಮಾರಾಟದಿಂದ 3.21 ಕೋಟಿ ರೂ. ಸೇರಿ ಒಟ್ಟು 45.3 ಕೋಟಿ ರೂ. ಸಂಗ್ರಹವಾಗಿದೆ.ಇದನ್ನು ಓದಿ –ಮಾನಸಿಕ ಖಿನ್ನತೆ: ಮುಖ್ಯಪೇದೆ ಆತ್ಮಹತ್ಯೆ
ಖರ್ಚಿನ ವಿವರದಲ್ಲಿ ಸ್ವಾಗತ ಮತ್ತು ಸ್ಥಳ ವ್ಯವಸ್ಥೆಗೆ 6 ಕೋಟಿ ರೂ., ಮೆರವಣಿಗೆಗೆ 1.60 ಕೋಟಿ ರೂ., ಪಂಜಿನ ಕವಾಯತಿಗೆ 1.48 ಕೋಟಿ ರೂ., ಸ್ತಬ್ಧಚಿತ್ರಗಳಿಗೆ 7 ಲಕ್ಷ ರೂ., ರೈತ ದಸರಾಗೆ 52 ಲಕ್ಷ ರೂ., ಸಾಂಸ್ಕೃತಿಕ ದಸರಾಗೆ 3 ಕೋಟಿ ರೂ., ಲಲಿತಕಲೆಗೆ 22 ಲಕ್ಷ ರೂ., ಕವಿಗೋಷ್ಠಿಗೆ 70 ಲಕ್ಷ ರೂ. ವೆಚ್ಚ ಮಾಡಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.








