ಬೆಂಗಳೂರು: ಸೋಮವಾರ (ಸೆ.22) ರಿಂದಲೇ ನಂದಿನಿ ಉತ್ಪನ್ನಗಳ ದರ ಇಳಿಕೆಯಾಗಲಿದ್ದು, ಪರಿಷ್ಕೃತ ದರ ಪಟ್ಟಿ ಪ್ರಕಟಿಸಲಾಗಿದೆ.
ಹೊಸ ಜಿಎಸ್‌ಟಿ ದರ ಇಳಿಕೆಯಿಂದಾಗಿ ತುಪ್ಪ, ಬೆಣ್ಣೆ, ಚೀಸ್, ಪನ್ನೀರ್, ಹಾಲು ಸೇರಿದಂತೆ ಹಲವು ಉತ್ಪನ್ನಗಳ ಬೆಲೆಯಲ್ಲಿ ಕಡಿತ ಮಾಡಲಾಗಿದೆ. ಜಿಎಸ್‌ಟಿ ದರ ಶೇ.12ರಿಂದ 5ಕ್ಕೆ ಹಾಗೂ ಕೆಲ ಉತ್ಪನ್ನಗಳ ಮೇಲೆ ಶೇ.5ರಿಂದ ಶೂನ್ಯಕ್ಕೆ ಇಳಿಕೆಯಾಗಿದ್ದು, ಅದರ ಪ್ರಯೋಜನ ಗ್ರಾಹಕರಿಗೆ ದೊರಕಲಿದೆ.
ಸೋಮವಾರದಿಂದಲೇ ಪರಿಷ್ಕೃತ ದರ ಜಾರಿಯಾಗಲಿದ್ದು, ಉತ್ಪನ್ನಗಳ ಹೊಸ ಬೆಲೆ ಹೀಗಿದೆ:
ಇದನ್ನು ಓದಿ –USA ಎಚ್-1ಬಿ ವೀಸಾ ಶುಲ್ಕ ಹೆಚ್ಚಳ: ತಂತ್ರಜ್ಞಾನ ಉದ್ಯೋಗಿಗಳಿಗೆ ಹೊಸ ಸವಾಲು
- ತುಪ್ಪ (1000 ಮಿ.ಲಿ): ಹಳೆ ದರ ₹650 → ಹೊಸ ದರ ₹610
- ಬೆಣ್ಣೆ (500 ಗ್ರಾಂ): ₹305 → ₹286
- ಪನ್ನೀರ್ (1000 ಗ್ರಾಂ): ₹425 → ₹408
- ಗುಡ್ ಲೈಫ್ ಹಾಲು (1000 ಮಿ.ಲಿ): ₹70 → ₹68
- ಸಂಸ್ಕರಿಸಿದ ಚೀಸ್: ₹530 → ₹497
- ಐಸ್‌ಕ್ರೀಮ್ ಫ್ಯಾಮಿಲಿ ಪ್ಯಾಕ್ (5000 ಮಿ.ಲಿ): ₹645 → ₹574
- ಐಸ್‌ಕ್ರೀಮ್ ವೆನಿಲಾ ಟಬ್ (1000 ಮಿ.ಲಿ): ₹200 → ₹178
- ಐಸ್‌ಕ್ರೀಮ್ ಚಾಕಲೇಟ್ ಸಂಡೇ: ₹115 → ₹102
- ಐಸ್‌ಕ್ರೀಮ್ ಮ್ಯಾಂಗೋ ನ್ಯಾಚುರಲ್ಸ್: ₹35 → ₹31
- ಖಾರಾ ಉತ್ಪನ್ನಗಳು: ₹60 → ₹56
- ಮಫಿನ್‌ಗಳು: ₹50 → ₹45
- ನಂದಿನಿ ನೀರು (1000 ಮಿ.ಲಿ): ₹20 → ₹18
- ಜಾಮೂನು ಮಿಶ್ರಣ: ₹80 → ₹71
- ಬಾದಾಮ್ ಹಾಲಿನ ಪುಡಿ (200 ಗ್ರಾಂ): ₹120 → ₹107
- ಕುಕೀಸ್ (100 ಗ್ರಾಂ): ₹35 → ₹31
- ರೈಸ್ ಕ್ರಿಸ್ಪಿ ಮಿಲ್ಕ್ ಚಾಕೋ (80 ಗ್ರಾಂ): ₹65 → ₹58
- ಕೇಕ್‌ಗಳು (200 ಗ್ರಾಂ): ₹110 → ₹98
- ಬೌನ್ಸ್ (200 ಮಿ.ಲಿ): ₹15 → ₹15 (ಅದೇ ದರ)








