ಬೆಂಗಳೂರು: ಜಿಎಸ್‌ಟಿ ಸ್ಲ್ಯಾಬ್ ಪರಿಷ್ಕರಣೆಯ ನಂತರ ಕಾರು ಮತ್ತು ಬೈಕುಗಳ ಬೆಲೆಯಲ್ಲಿ ಭಾರೀ ಇಳಿಕೆ ಕಂಡುಬಂದಿದೆ. 40 ಸಾವಿರ ರೂ. ನಿಂದ ಹಿಡಿದು ಐಷಾರಾಮಿ ಕಾರುಗಳ ಬೆಲೆ 18 ಲಕ್ಷ ರೂ.ವರೆಗೆ ಇಳಿಕೆಯಾಗಿದೆ.
ಮೊದಲು ಕಾರು ಮತ್ತು ಬೈಕುಗಳಿಗೆ 28% ಜಿಎಸ್‌ಟಿ ವಿಧಿಸಲಾಗುತ್ತಿತ್ತು. ಈಗ 350 ಸಿಸಿ ಒಳಗಿನ ಬೈಕ್‌ಗಳು ಮತ್ತು 1200 ಸಿಸಿ ಒಳಗಿನ ಸಣ್ಣ ಕಾರುಗಳಿಗೆ ತೆರಿಗೆ ಶೇ.28ರಿಂದ ಶೇ.18ಕ್ಕೆ ಇಳಿಕೆಯಾಗಿದೆ. ಐಷಾರಾಮಿ ವಾಹನಗಳಿಗೆ 40% ತೆರಿಗೆ ಮುಂದುವರೆದರೂ, ಹೆಚ್ಚುವರಿ ಸೆಸ್ ರದ್ದು ಮಾಡಲಾಗಿದೆ. ಇದರಿಂದಲೇ ಬೆಲೆ ಇಳಿಕೆ ಸಾಧ್ಯವಾಗಿದೆ.
Contents
ಕೆಳಗಿನ ಬೆಲೆಪಟ್ಟಿ ಶೋರೂಂ ದರ ಆಗಿದ್ದು, ಪ್ರತಿ ರಾಜ್ಯ ಮತ್ತು ಸ್ಥಳಕ್ಕೆ ಬದಲಾಗಬಹುದು. ಇದಕ್ಕೆ ರೋಡ್ ಟ್ಯಾಕ್ಸ್, ರಿಜಿಸ್ಟ್ರೇಷನ್ ಫೀಸ್ ಮತ್ತು ಇನ್ಶುರೆನ್ಸ್ ಸೇರ್ಪಡೆಯಾಗುತ್ತವೆ.
ಮಾರುತಿ ಸುಜುಕಿ
- ಆಲ್ಟೊ ಕೆ10: ₹40,000 ಇಳಿಕೆ
- ವ್ಯಾಗನ್‌ಆರ್: ₹57,000
- ಸ್ವಿಫ್ಟ್: ₹58,000
- ಡಿಜೈರ್: ₹61,000
- ಬಲೆನೊ: ₹60,000
- ಫ್ರಾಂಕ್ಸ್: ₹68,000
- ಬ್ರೆಝಾ: ₹78,000
- ಇಕೊ: ₹51,000
- ಎರ್ಟಿಗಾ: ₹41,000
- ಸೆಲೆರಿಯೊ: ₹50,000
- ಎಸ್-ಪ್ರೆಸ್ಸೊ: ₹38,000
- ಇಗ್ನಿಸ್: ₹52,000
- ಜಿಮ್ನಿ: ₹1.14 ಲಕ್ಷ
- XL6: ₹35,000
- ಇನ್ವಿಕ್ಟೋ: ₹2.25 ಲಕ್ಷ
ಮಹೀಂದ್ರಾ
- ಬೊಲೆರೊ ನಿಯೋ: ₹1.27 ಲಕ್ಷ
- XUV 3XO: ₹1.40 ಲಕ್ಷ (ಪೆಟ್ರೋಲ್), ₹1.56 ಲಕ್ಷ (ಡೀಸೆಲ್)
- ಥಾರ್: ₹1.35 ಲಕ್ಷ
- ಥಾರ್ ರಾಕ್ಸ್: ₹1.33 ಲಕ್ಷ
- ಸ್ಕಾರ್ಪಿಯೋ ಕ್ಲಾಸಿಕ್: ₹1.01 ಲಕ್ಷ
- ಸ್ಕಾರ್ಪಿಯೋ N: ₹1.45 ಲಕ್ಷ
- XUV700: ₹1.43 ಲಕ್ಷ
ಟಾಟಾ ಮೋಟಾರ್ಸ್
- ಟಿಯಾಗೊ: ₹75,000
- ಟಿಗೋರ್: ₹80,000
- ಆಲ್ಟ್ರೋಜ್: ₹1.10 ಲಕ್ಷ
- ಪಂಚ್: ₹85,000
- ನೆಕ್ಸಾನ್: ₹1.55 ಲಕ್ಷ
- ಹ್ಯಾರಿಯರ್: ₹1.40 ಲಕ್ಷ
- ಸಫಾರಿ: ₹1.45 ಲಕ್ಷ
- ಕರ್ವ್: ₹65,000
ಟೊಯೋಟಾ
- ಫಾರ್ಚೂನರ್: ₹3.49 ಲಕ್ಷ
- ಲೆಜೆಂಡರ್: ₹3.34 ಲಕ್ಷ
- ಹಿಲಕ್ಸ್: ₹2.52 ಲಕ್ಷ
- ವೆಲ್‌ಫೈರ್: ₹2.78 ಲಕ್ಷ
- ಕ್ಯಾಮ್ರಿ: ₹1.01 ಲಕ್ಷ
- ಇನ್ನೋವಾ ಕ್ರಿಸ್ಟಾ: ₹1.80 ಲಕ್ಷ
- ಇನ್ನೋವಾ ಹೈಕ್ರಾಸ್: ₹1.15 ಲಕ್ಷ
ಲ್ಯಾಂಡ್ ರೋವರ್
- ರೇಂಜ್ ರೋವರ್ 4.4P SV LWB: ₹30.4 ಲಕ್ಷ
- ರೇಂಜ್ ರೋವರ್ 3.0D SV LWB: ₹27.4 ಲಕ್ಷ
- ರೇಂಜ್ ರೋವರ್ 3.0P: ₹18.3 ಲಕ್ಷ
- ಡಿಸ್ಕವರಿ: ₹9.9 ಲಕ್ಷ
- ಡಿಸ್ಕವರಿ ಸ್ಪೋರ್ಟ್: ₹4.6 ಲಕ್ಷ
ಕಿಯಾ
- ಸೋನೆಟ್: ₹1.64 ಲಕ್ಷ
- ಸಿರೋಸ್: ₹1.86 ಲಕ್ಷ
- ಸೆಲ್ಟೋಸ್: ₹75,372
- ಕ್ಯಾರೆನ್ಸ್: ₹48,513
- ಕ್ಯಾರೆನ್ಸ್ ಕ್ಲಾವಿಸ್: ₹78,674
- ಕಾರ್ನಿವಲ್: ₹4.48 ಲಕ್ಷ
ಸ್ಕೋಡಾ
- ಕೊಡಿಯಾಕ್: ₹3.3 ಲಕ್ಷ + ₹2.5 ಲಕ್ಷ ಹಬ್ಬದ ಕೊಡುಗೆ
- ಕುಶಾಕ್: ₹66,000 + ₹2.5 ಲಕ್ಷ ಹಬ್ಬದ ಕೊಡುಗೆ
- ಸ್ಲಾವಿಯಾ: ₹63,000 + ₹1.2 ಲಕ್ಷ ಹಬ್ಬದ ಕೊಡುಗೆ
ಹುಂಡೈ
- ಗ್ರ್ಯಾಂಡ್ i10 ನಿಯೋಸ್: ₹73,808
- ಔರಾ: ₹78,465
- ಎಕ್ಸ್‌ಟರ್: ₹89,209
- i20: ₹98,053 (ಎನ್-ಲೈನ್ ₹1.08 ಲಕ್ಷ)
- ವೆನ್ಯೂ: ₹1.23 ಲಕ್ಷ (ಎನ್-ಲೈನ್ ₹1.19 ಲಕ್ಷ)
- ವರ್ನಾ: ₹60,640
- ಕ್ರೆಟಾ: ₹72,145 (ಎನ್-ಲೈನ್ ₹71,762)
- ಅಲ್ಕಾಜರ್: ₹75,376
- ಟಕ್ಸನ್: ₹2.4 ಲಕ್ಷ
ರೆನಾಲ್ಟ್
- ಕಿಗರ್: ₹96,395
ನಿಸ್ಸಾನ್
- ಮ್ಯಾಗ್ನೈಟ್ ವಿಸಿಯಾ ಎಂಟಿ: ₹6 ಲಕ್ಷ
- ಮ್ಯಾಗ್ನೈಟ್ ಸಿವಿಟಿ ಟೆಕ್ನಾ: ₹97,300
- ಮ್ಯಾಗ್ನೈಟ್ ಸಿವಿಟಿ ಟೆಕ್ನಾ+: ₹1,00,400
- ಸಿಎನ್‌ಜಿ ರೆಟ್ರೋಫಿಟ್ ಕಿಟ್: ₹71,999








