By using this site, you agree to the Privacy Policy and Terms of Use.
Accept
VarthamanVarthamanVarthaman
Notification Show More
Font ResizerAa
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
    ArticlesShow More
    ತನು -ಮನ ತಂಪಾಗಿಸೋ ತಂಪು ಬೀಜಗಳು
    March 21, 2026
    ಪತ್ರಿಕೋದ್ಯಮದ ದಿಗ್ಗಜ ಬ್ರಹ್ಮಪುರಿಯ ಅಲೆಮಾರಿ
    March 17, 2026
    ಅತಿಥಿ ದೇವೋಭವ 
    March 15, 2026
    ಖನಿಜದ ಆಗರ ಅಳಿವೆ ( ಹಲೀಮ್ ಸೀಡ್ಸ್ )
    March 15, 2026
    ದ್ವೇಷಕ್ಕೆ ಬೆಂಕಿ ಹಚ್ಚಬೇಕು
    March 8, 2026
  • Sports
  • National
  • International
  • Crime
Reading: ದ್ವೇಷ ಭಾಷಣ ಮಸೂದೆ ಅಂಗೀಕಾರ
Share
Font ResizerAa
VarthamanVarthaman
  • Home
  • Karnataka
  • Articles
  • Sports
  • National
  • International
  • Crime
Search
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
  • Sports
  • National
  • International
  • Crime
Follow US
Varthaman > Karnataka – Latest Breaking News > Karnataka > Belgavi > ದ್ವೇಷ ಭಾಷಣ ಮಸೂದೆ ಅಂಗೀಕಾರ
BelgaviKarnatakaMain News

ದ್ವೇಷ ಭಾಷಣ ಮಸೂದೆ ಅಂಗೀಕಾರ

Team Varthaman
Last updated: December 18, 2025 7:00 PM
Team Varthaman
Published: December 18, 2025
Share
SHARE
  • ವಿಪಕ್ಷಗಳ ತೀವ್ರ ವಿರೋಧ

ಬೆಳಗಾವಿ: ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳನ್ನು ತಡೆಗಟ್ಟುವ ಉದ್ದೇಶದಿಂದ ರಾಜ್ಯ ಸರ್ಕಾರ ಮಂಡಿಸಿದ್ದ ಮಸೂದೆಯನ್ನು ವಿಧಾನಸಭೆಯಲ್ಲಿ ತೀವ್ರ ವಿರೋಧದ ನಡುವೆಯೇ ಅಂಗೀಕರಿಸಲಾಗಿದೆ.

ವಿಪಕ್ಷ ಸದಸ್ಯರು ಮಸೂದೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಸದನದ ಬಾವಿಗಿಳಿದು ಧರಣಿ ನಡೆಸಿದರು. ಮಸೂದೆ ಪ್ರತಿಗಳನ್ನು ಹರಿದು ಬಿಸಾಕಿ ಆಕ್ರೋಶ ವ್ಯಕ್ತಪಡಿಸಿದ ವಿಪಕ್ಷ ಸದಸ್ಯರು, ಸರ್ಕಾರದ ನಿರ್ಧಾರಕ್ಕೆ ವಿರೋಧ ಸೂಚಿಸಿದರು. ಆದರೆ ಗದ್ದಲ ಮತ್ತು ಗೊಂದಲದ ನಡುವೆಯೇ ಸರ್ಕಾರ ಮಸೂದೆಯನ್ನು ಪಾಸ್ ಮಾಡಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು.

Join WhatsApp Group

ಸದನದಲ್ಲಿ ಈ ವೇಳೆ ಬಿಜೆಪಿ ಸದಸ್ಯರು ಸಚಿವ ಬೈರತಿ ಸುರೇಶ್ ಕರಾವಳಿ ಬಗ್ಗೆ ನೀಡಿದ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಕರಾವಳಿಯಲ್ಲಿ ಬೆಂಕಿ ಹಚ್ಚಿ ಇಲ್ಲೂ ಬೆಂಕಿ ಹಚ್ಚುತ್ತಿದ್ದಾರೆ ಎಂಬ ಬೈರತಿ ಸುರೇಶ್ ಹೇಳಿಕೆ ಕೋಲಾಹಲಕ್ಕೆ ಕಾರಣವಾಯಿತು. ಇದರಿಂದ ಕರಾವಳಿ ಭಾಗದ ಶಾಸಕರು ಆಕ್ರೋಶಗೊಂಡು ಏಕಾಏಕಿ ಸದನದ ಬಾವಿಗಿಳಿದರು.

ಈ ಬೆಳವಣಿಗೆಯಿಂದ ಸದನದಲ್ಲಿ ಗೊಂದಲ ಮತ್ತಷ್ಟು ಹೆಚ್ಚಾಯಿತು. ಕೊನೆಗೆ ಗದ್ದಲದ ನಡುವೆಯೇ ಸರ್ಕಾರ ಮಸೂದೆಯನ್ನು ಅಂಗೀಕರಿಸಿತು. ಈ ಸಂದರ್ಭದಲ್ಲಿ ಅಶೋಕ್ ಸೇರಿದಂತೆ ಹಲವು ಬಿಜೆಪಿ ಸದಸ್ಯರು ಮಸೂದೆ ಪ್ರತಿಗಳನ್ನು ಹರಿದು ಹಾಕಿ ತಮ್ಮ ವಿರೋಧವನ್ನು ವ್ಯಕ್ತಪಡಿಸಿದರು.

ದ್ವೇಷ ಭಾಷಣಕ್ಕೆ ಗರಿಷ್ಠ 7 ವರ್ಷ ಜೈಲು: ಪರಮೇಶ್ವರ್
ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಪ್ರತಿಬಂಧಕ ಮಸೂದೆಯಡಿ ಮೊದಲ ಬಾರಿ ತಪ್ಪು ಮಾಡಿದರೆ 1ರಿಂದ 7 ವರ್ಷ ಜೈಲು ಹಾಗೂ 50 ಸಾವಿರ ರೂ. ದಂಡ, ಪುನರಾವರ್ತನೆಯಾದರೆ 2ರಿಂದ 7 ವರ್ಷ ಜೈಲು ಮತ್ತು 1 ಲಕ್ಷ ರೂ. ದಂಡ ವಿಧಿಸಲು ಅವಕಾಶ ಇದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದರು. ಈ ಹಿಂದೆ ಇದ್ದ 10 ವರ್ಷ ಜೈಲು ಶಿಕ್ಷೆಯನ್ನು 7 ವರ್ಷಕ್ಕೆ ಇಳಿಸಲಾಗಿದೆ ಎಂದು ಸ್ಪಷ್ಟಪಡಿಸಿದರು. ಹಳೆಯ ಪುಸ್ತಕಗಳಲ್ಲಿ ದ್ವೇಷ ಅಂಶಗಳಿದ್ದರೂ ಈ ಕಾನೂನಿನಡಿ ಕ್ರಮ ಹಾಗೂ ನಿಷೇಧ ಸಾಧ್ಯ ಎಂದರು. ವಿಪಕ್ಷ ನಾಯಕ ಆರ್. ಅಶೋಕ್, ಈ ಮಸೂದೆಯನ್ನು ರಾಜಕೀಯ ದ್ವೇಷಕ್ಕೆ ದುರುಪಯೋಗ ಮಾಡಬಹುದು ಎಂದು ಆತಂಕ ವ್ಯಕ್ತಪಡಿಸಿದರು.ಇದನ್ನು ಓದಿ –ರಾಮನಗರ: 19 ವರ್ಷದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ

ಮಸೂದೆಯ ಪ್ರಮುಖ ಅಂಶಗಳು:

  • ವ್ಯಕ್ತಿ, ಸಮೂಹ ಅಥವಾ ಸಂಸ್ಥೆಗಳ ವಿರುದ್ಧ ದ್ವೇಷ ಹುಟ್ಟಿಸುವ ಅಪರಾಧಗಳಿಗೆ ಕಾನೂನು ಕ್ರಮ
  • ದ್ವೇಷ ಭಾಷಣ ಪ್ರಕರಣಗಳು ಜಾಮೀನು ರಹಿತ
  • ಮೊದಲ ತಪ್ಪಿಗೆ 1–7 ವರ್ಷ ಜೈಲು ಹಾಗೂ ₹50 ಸಾವಿರ ದಂಡ
  • ಪುನರಾವರ್ತಿತ ತಪ್ಪಿಗೆ 2–7 ವರ್ಷ ಜೈಲು ಹಾಗೂ ₹1 ಲಕ್ಷ ದಂಡ
  • ಪ್ರಥಮ ದರ್ಜೆ ನ್ಯಾಯಿಕ ಮ್ಯಾಜಿಸ್ಟ್ರೇಟ್ ಮೂಲಕ ವಿಚಾರಣೆ
  • ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಅಥವಾ ಡಿವೈಎಸ್‌ಪಿ ಹಂತದ ಅಧಿಕಾರಿ ತನಿಖೆಗೆ ಅಧಿಕಾರ
  • ನೋಂದಾಯಿತ–ನೋಂದಾಯಿತವಲ್ಲದ ಸಂಘ ಸಂಸ್ಥೆಗಳಿಗೂ ಹೊಣೆಗಾರಿಕೆ
  • ದ್ವೇಷ ಭಾಷಣ ವಿಷಯಗಳನ್ನು ಬ್ಲಾಕ್ ಅಥವಾ ತೆಗೆದುಹಾಕುವ ಅಧಿಕಾರ
  • ರಾಜ್ಯದಲ್ಲಿ ಏ.1ರವರೆಗೆ ಆಲಿಕಲ್ಲು ಮಳೆ: ಹಲವು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್
    by Team Varthaman
    March 26, 2026
  • ಏ.1ರಿಂದ ನೀರಿನ ದರ ಏರಿಕೆ
    by Team Varthaman
    March 26, 2026
  • ಹಾರ್ಮುಜ್ ಜಲಸಂಧಿ ತೆರೆ :ಭಾರತಕ್ಕೆ ಇರಾನ್ ಸಡಿಲಿಕೆ
    by Team Varthaman
    March 26, 2026
  • ಹೈಕಮಾಂಡ್ ತೀರ್ಮಾನದವರೆಗೆ ನಾನೇ ಸಿಎಂ: ಸಿದ್ದರಾಮಯ್ಯ ಸ್ಪಷ್ಟನೆ
    by Team Varthaman
    March 25, 2026
  • LPG ಬುಕ್ಕಿಂಗ್ ಅವಧಿಯಲ್ಲಿ ಬದಲಾವಣೆ ಇಲ್ಲ: ಕೇಂದ್ರ ಸ್ಪಷ್ಟನೆ
    by Team Varthaman
    March 25, 2026
ಗ್ರಾಹಕರಿಗೆ ವಂಚನೆ: 2,334 ಕಂಪನಿಗಳ ವಿರುದ್ಧ ಪ್ರಕರಣಗಳು ದಾಖಲು
ಪತ್ರಕರ್ತ ಶಿವಕುಮಾರ್ ಸೇರಿ ನಾಲ್ವರಿಗೆ ಎಂಎಲ್ ಸಿ ಸ್ಥಾನ
ಭಾರತದ ಆಮದುಗಳ ಮೇಲೆ 24 ಗಂಟೆಗಳಲ್ಲಿ ಭಾರೀ ಸುಂಕ ಹೆಚ್ಚಳ: ಟ್ರಂಪ್
ವಿ.ಬಿ–ಜಿ ರಾಮ್ ಜಿ ಕಾಯ್ದೆ ವಿರೋಧ: ಪ್ರಧಾನಿಗೆ ಸಿಎಂ ಪತ್ರ
ಮೈಸೂರಿಗೆ ಬಂದಿಳಿದ ರಾಷ್ಟ್ರಪತಿ ದ್ರೌಪದಿ ಮುರ್ಮು: ಸಿಎಂ ಹಾಗೂ ರಾಜ್ಯಪಾಲರಿಂದ ಭವ್ಯ ಸ್ವಾಗತ
TAGGED:breakingnewsHate Speech BillKarnataka Govtlatestnewsಅಂಗೀಕಾರದ್ವೇಷ ಭಾಷಣ
Share This Article
Facebook Email Print
Leave a Comment

Leave a Reply Cancel reply

Your email address will not be published. Required fields are marked *

Follow US

Find US on Social Medias
FacebookLike
XFollow
YoutubeSubscribe
TelegramFollow

Weekly Newsletter

Subscribe to our newsletter to get our newest articles instantly!
[mc4wp_form]
Popular News
KarnatakaMysoreTrending

KRS ಜಲಾಶಯದಲ್ಲಿ ನಾಲ್ಕು ದಿನದಲ್ಲಿ 11 ಅಡಿ ನೀರಿನ ಹೆಚ್ಚಳ

Team Varthaman
Team Varthaman
May 30, 2025
ರಾಜ್ಯೋತ್ಸವ ಪ್ರಶಸ್ತಿ 2025–26 ಪ್ರಕಟ: 70 ಸಾಧಕರ ಆಯ್ಕೆ
ಋತುಚಕ್ರ ರಜೆ ಆದೇಶಕ್ಕೆ ಹೈಕೋರ್ಟ್ ಸ್ಥಗಿತ
‘ನಾನು ಮುಖ್ಯಮಂತ್ರಿ ಆಗುವುದಕ್ಕೆ ಕಾಲವೇ ಉತ್ತರ ನೀಡಲಿದೆ’ : ಡಿಸಿಎಂ ಡಿ.ಕೆ.ಶಿ
ಸಚಿವರಿಗೆ ಡಿನ್ನರ್ ಪಾರ್ಟಿ: ಮಾ. 16ರಂದು ಸಿಎಂ ಆಹ್ವಾನ
- Advertisement -
Ad imageAd image
Global Coronavirus Cases

Confirmed

0

Death

0

More Information:Covid-19 Statistics

Categories

  • Articles
  • Sports
  • Latest News
  • Karnataka News

About US

Since its inception in 1957, Varthamana has stood tall as one of the most trusted and respected Kannada daily newspapers. With deep roots in the rich cultural landscape of Karnataka, Varthamana continues to be the voice of the people, championing truth, transparency, and the values that define the region. Established with a strong commitment to ethical journalism, our newspaper has consistently provided comprehensive coverage, authentic news, and insightful editorials for over six decades. Today, under the dynamic leadership of Editor K. N. Ravi, Varthamana shines even brighter, blending a proud heritage with a modern outlook to meet the evolving needs of readers across the state. Our presence in the digital space, through Varthamana Digital, ensures that our trusted news and regional stories reach a wider audience faster and with greater impact.

Contact Us

© Varthaman. All Rights Reserved.
Welcome Back!

Sign in to your account

Username or Email Address
Password

Lost your password?