By using this site, you agree to the Privacy Policy and Terms of Use.
Accept
VarthamanVarthamanVarthaman
Notification Show More
Font ResizerAa
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
    ArticlesShow More
    ಅಜವಾನ ಅಜೀರ್ಣಕ್ಕೆ ಪ್ರಕೃತಿ ನೀಡಿದ ವರದಾನ
    February 1, 2026
    ಹೀಗೆ ಬಂದು ಹಾಗೆ ಹೋಗುವ ಸ್ನೇಹ ಸಾವಿರ
    February 1, 2026
    ಸಾವು ಬದುಕಿನ ನಡುವೆ
    January 28, 2026
    ವಾಸ್ತವ ವರ್ತಮಾನ
    January 24, 2026
    ಅರೋಗ್ಯ ಭಾಗ್ಯ
    January 24, 2026
  • Sports
  • National
  • International
  • Crime
Reading: ಮಹಿಳಾ ಶಿಕ್ಷಣ ಕ್ರಾಂತಿಯ ಸಾವಿತ್ರಿ ಬಾಯಿ ಫುಲೆ
Share
Font ResizerAa
VarthamanVarthaman
  • Home
  • Karnataka
  • Articles
  • Sports
  • National
  • International
  • Crime
Search
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
  • Sports
  • National
  • International
  • Crime
Follow US
Varthaman > Karnataka – Latest Breaking News > Articles > ಮಹಿಳಾ ಶಿಕ್ಷಣ ಕ್ರಾಂತಿಯ ಸಾವಿತ್ರಿ ಬಾಯಿ ಫುಲೆ
Articles

ಮಹಿಳಾ ಶಿಕ್ಷಣ ಕ್ರಾಂತಿಯ ಸಾವಿತ್ರಿ ಬಾಯಿ ಫುಲೆ

Team Varthaman
Last updated: January 4, 2026 8:34 PM
Team Varthaman
Published: January 5, 2026
Share
SHARE

ಸಮಾಜ ಸುಧಾರಕಿ, ಮಹಿಳಾ ಶಿಕ್ಷಣದ ಪ್ರತಿಪಾದಕಿ ಸಾವಿತ್ರಿ ಬಾಯಿ ಫುಲೆ ಇವರ ಜನನ 3ನೇ ಜನವರಿ 1831ರಲ್ಲಿ ಸತಾರಾ ಜಿಲ್ಲೆಯ ನಾಯ್‌ಗಾವ್‌ನಲ್ಲಿ ಮಾಲಿ ಸಮುದಾಯದಲ್ಲಿ ಆಯಿತು. ಇವರ ತಾಯಿ ಲಕ್ಷ್ಮಿ ತಂದೆ ಪಾಟೀಲ ಇವರ ಮನೆಯಲ್ಲಿ ಕೊನೆಯ ಮಗಳಾಗಿ ಜನಿಸಿದ ಇವರ ವಿವಾಹವು ಅಂದಿನ ಕಾಲದಂತೆ ಸಣ್ಣ ವಯಸ್ಸಿನಲ್ಲಿಯೇ ಅಂದರೆ 9-10 ವರ್ಷ ಇರುವಾಗಲೇ ವಿವಾಹವು ಜ್ಯೋತಿರಾವ್‌ ಫುಲೆ ಇವರೊಂದಿಗೆ ಆಯಿತು.

ಸಾವಿತ್ರಿ ಬಾಯಿಯವರ ಶಿಕ್ಷಣವು ಮನೆಯಲ್ಲಿ ಪತಿಯ ಆಸೆ ಆಶಯದಂತೆ ಮದುವೆಯ ಅಶಿಕ್ಷಿತರಾಗಿದ್ದ ಸಾವಿತ್ರಿ ಬಾಯಿಯವರಿಗೂ ಮತ್ತು ಅವರ ಸಹೋದರ ಸಂಬಂಧಿ ಸಗುಣಬಾಯಿ ಶೀರಸಾಗರ ಇವರಿಬ್ಬರನ್ನು ಜ್ಯೋತಿರಾವ್ ಫುಲೆಯವರು ವಿದ್ಯಾಭ್ಯಾಸ ಕೊಡಿಸಲು ಆರಂಭಿಸಿದರು ಮೊದಲಿಗೆ ಮನೆಯಲ್ಲಿಯೇ ಕಲಿಯುತ್ತಿದ್ದ ಈ ಇಬ್ಬರೂ ಮಹಿಳೆಯರು ನಂತರದಲ್ಲಿ ಸಖರಾಮ್‌ ಯಶವಂತ ಪರಾಂಜಪೆ ಮತ್ತು ಕೇಶವ ಶಿವರಾಮ್‌ ಭಾವಲ್‌ಕರ್‌ ಇವರ ಮಾರ್ಗದರ್ಶನದಲ್ಲಿ ನಡೆಯಿತು. ಸಾವಿತ್ರಿಬಾಯಿಯವರು ತಮ್ಮ ಶಿಕ್ಷಕ ತರಬೇತಿಯನ್ನು ಪುಣೆ ಮತ್ತು ಅಹಮದ್‌ನಗರದಲ್ಲಿ ಪಡೆದುಕೊಂಡು ಭಾರತದ ಮೊದಲ ಮಹಿಳಾ ಶಿಕ್ಷಕಿಯಾದರು.

Join WhatsApp Group

ಇವರ ಶಿಕ್ಷಣವು ಆಂಗ್ಲ ಭಾಷೆಯಲ್ಲಿ ಕೂಡ ನಡೆಯಿತು 1846-47ರ ಹೊತ್ತಿಗೆ ಇವರು ತಮ್ಮ 3ನೇ ಮತ್ತು ನಾಲ್ಕನೇಯ ತರಬೇತಿ ಪೂರೈಸಿದ ನಂತರ ಸಗುಣಬಾಯಿ ಶೀರ ಸಾಗರ ಅವರು ನಿರ್ಮಿಸಲು ಇಚ್ಛಿಸಿದ ಹೆಣ್ಣುಮಕ್ಕಳ ಶಾಲೆಯ ಬೆನ್ನೆಲುಬಾಗಿ ನಿಂತು, ಹಿಂದುಳಿದ ವರ್ಗಗಳ ಮಹಿಳೆಯರ ಉತ್ಥಾನಕ್ಕಾಗಿ ಮಹಿಳಾ ಶಾಲೆಯನ್ನು ಆರಂಭಿಸುವ ಮಹಾನ್ ಕಾರ್ಯದಲ್ಲಿ ತಮ್ಮ ಕೊಡುಗೆಯನ್ನು ನೀಡಿ ಇವರು ಭಾರತದ ಮೊದಲ ತರಬೇತಿ ಪಡೆದ ಮಹಿಳಾ ಮುಖ್ಯೋಪಾಧ್ಯಯಿನಿಯಾದರು. ಇವರು 1848ರಲ್ಲಿ ಭಾರತ ಮೊದಲ ಹೆಣ್ಣು ಮಕ್ಕಳ ಶಾಲೆಯನ್ನು ಪತಿ ಜ್ಯೋತಿರಾವ್‌ ಮತ್ತು ಸಗುಣಬಾಯಿ ಶೀರ ಸಾಗರ ಅವರೊಟ್ಟಿಗೆ ಪುಣೆಯ ಭೀಡೆವಾಡಾದಲ್ಲಿ ಅರಂಭ ಮಾಡಿದ ಆ ಶಾಲೆಯ ಪಠ್ಯಕ್ರಮದಲ್ಲಿ ಗಣಿತ, ವಿಜ್ಞಾನ, ಸಮಾಜ ಶಾಸ್ತ್ರಗಳನ್ನು ಓದಿಸುವ ಮೂಲಕ ಕ್ರಾಂತಿಯನ್ನು ತಂದರು, ಸಮಾಜದಿಂದ ಇದ್ದ ತೀವ್ರ ವಿರೋಧದ ನಡುವೆ ಯಶಸ್ವಿಯಾಗಿ ಹೆಣ್ಣು ಮಕ್ಕಳಿಗಾಗಿ ಶಾಲೆಯನ್ನಾರಂಭಿಸಿದ ದಿಟ್ಟ ಮಹಿಳೆ ಸಾವಿತ್ರಿ ಬಾಯಿ ಫುಲೆ. ಆಧುನಿಕ ಭಾರತದ ಮಹಿಳಾ ಶಿಕ್ಷಣ ಮಾತೆಯಾಗಿ ಗುರುತಿಸಲ್ಪಟ್ಟರು.

ಪ್ರಮುಖವಾಗಿ ಸಾವಿತ್ರಿ ಬಾಯಿಯವರ ಪ್ರಯತ್ನ ಹಿಂದುಳಿದ ಮಹಿಳೆಯರ ಉತ್ಥಾನವಾಗಿದ್ದಿತು. ಸಮಾಜದಲ್ಲಿ ನಡೆಯುತ್ತಿದ್ದ ಲಿಂಗ ಮತ್ತು ಜಾತಿಯ ಅಸಮಾನತೆಯನ್ನು ವಿರೋಧಿಸಿ ಇವರ ಹೋರಾಟ ಬಹಳ ಮಹತ್ವವನ್ನು ಪಡೆಯುತ್ತದೆ. ಇವರು ಶಾಲೆಯನ್ನು ಆರಂಭಿಸಿ 2 ವರ್ಷಗಳಲ್ಲಿ ಅಂದರೆ 1851ರ ಹೊತ್ತಿಗೆ ಒಟ್ಟು 150 ಹೆಣ್ಣು ಮಕ್ಕಳಿಗೆ 18 ಶಾಲೆಗಳಲ್ಲಿ ವಿದ್ಯಾಭ್ಯಾಸವನ್ನು ನೀಡಲು ಆರಂಭಿಸಿದ್ದರು. ಸಾವಿತ್ತಿ ಬಾಯಿಯವರ ಈ ಸಮಾಜ ಸುಧಾರಣೆ ಮತ್ತು ಶಿಕ್ಷಣದ ಪ್ರಯತ್ನಗಳಿಗೆ ಅಪಾರ ವಿರೋಧವು ಸಮಾಜದ ಎಲ್ಲ ಕಡೆಗಳಿಂದ ದೊರೆಯಿತು. ಸಮಾಜದ ಒಳಗಿಂದ ಮಾತ್ರವಲ್ಲದೇ ಜ್ಯೋತಿರಾವ್ ಅವರ ತಂದೆಯಿಂದ ದಂಪತಿಗಳನ್ನು ಪಾಪ ಮಾಡಿರುವಿರಿ ಎಂಬ ಕಾರಣ ನೀಡಿ ಮನೆಯಿಂದ ಹೊರ ಹಾಕಲಾಯಿತು.

ಇದರ ಜೊತೆಗೆ ಮಹಿಳಾ ಸೇವಾ ಮಂಡಳ ಎಂಬ ಸಂಸ್ಥೆಯ ಮೂಲಕ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿದ್ದರು ಈ ಸಂಸ್ಥೆಯ ಮೂಲಕ ಮಹಿಳೆಯ ಹಕ್ಕುಗಳ ಬಗ್ಗೆ ಮಾಹಿತಿ ನೀಡಿ ತಮ್ಮ ಅಧಿಕಾರಕ್ಕಾಗಿ ಹೋರಾಡುವಂತೆ ಮಹಿಳೆಯರಲ್ಲಿ ಜಾಗೃತಿಯನ್ನು ಮೂಡಿಸುವ ಕಾರ್ಯವನ್ನು ಮಾಡಿದರು. ಅಂದಿನ ಕಾಲದಲ್ಲಿ ನಡೆಯುತ್ತಿದ್ದ ಸತಿ ಪದ್ಧತಿ ಮತ್ತು ಬಾಲ ವಿಧವೆಯರ ಮೇಲೆ ನಡೆಯುತ್ತಿದ್ದ ದೌರ್ಜನ್ಯ ತಪ್ಪಿಸಲು 1863ರಲ್ಲಿ ಜ್ಯೋತಿರಾವ ಇವರ ಸ್ನೇಹಿತ ಸದಾಶಿವ ಬಲ್ಲಾಲ್ ಗೋವಂದೇಯವರ ಜೊತೆಗೂಡಿ “ಬಾಲಹತ್ಯಾ ಪ್ರತಿಬಂಧಕ ಗೃಹ” ಎಂಬ ಹೆಸರಿನ ವಿಧವಾ ಆಶ್ರಮವನ್ನು ವಿಶೇಷವಾಗಿ ಗರ್ಭಿಣಿ ವಿಧವಾ ಸ್ತ್ರೀಯರ ರಕ್ಷಣೆಗಾಗಿ ಸ್ಥಾಪಿಸಿದ್ದರು. ವಿಧವಾ ಸ್ತ್ರೀ ಮಗುವಿನ ಜನನದ ನಂತರ ಮತ್ತೆ ಮದುವೆಯಾಗುವ ಉದ್ದೇಶ ಇದ್ದಲ್ಲಿ ಮಕ್ಕಳನ್ನು ಆಶ್ರಮದಲ್ಲಿಟ್ಟುಕೊಂಡು ಬೆಳಸಲಾಗುತ್ತಿತ್ತು ಈ ವಿಧವಾ ಸಂರಕ್ಷಣೆಯ ಆಶ್ರಮವನ್ನು 1880ರ ಮಧ್ಯದ ವರೆಗೂ ನಡೆಸಿದರು.

ಸಾವಿತ್ರಿಬಾಯಿ ಫುಲೆಯವರು 1854ರಲ್ಲಿ ಕಾವ್ಯ ಫುಲೆ ಮತ್ತು 1892ರಲ್ಲಿ ಬಾವನ್ ಕಾಶಿ ಸುಬೋಧ ರತ್ನಾಕರ ಎಂಬ ಗ್ರಂಥಗಳನ್ನು ಬರೆದಿದ್ದರು. ಇವರ ಪ್ರಮುಖ ಗೀತೆ ಹೋಗಿ ನಿಮ್ಮ ಶಿಕ್ಷಣ ಪಡೆಯಿರಿ ಅತೀ ಪ್ರಸಿದ್ಧವಾದ ಗೀತೆಯಾಗಿತ್ತು.

ಸಾವಿತ್ರಿ ಬಾಯಿ ಫುಲೆಯವರಿಗೆ ಸ್ವಂತ ಮಕ್ಕಳು ಇದ್ದಿಲ್ಲ ಮಗ ಯಶವಂತನನ್ನು ಇವರು ದತ್ತು ತೆಗೆದುಕೊಂಡಿದ್ದರು. 1897ರಲ್ಲಿ ಪ್ರಾಣಾಂತಿಕವಾದ ಪ್ಲೇಗ್ ಕಾಯಿಲೆಯು ಹರಡಿದಾಗ ಸಾವಿತ್ರಿ ಬಾಯಿ ಮತ್ತು ಅವರ ಮಗ ಯಶವಂತ ರೋಗಿಗಳನ್ನು ಉಳಿಸಲು ಚಿಕಿತ್ಸಾಲಯವನ್ನು ಆರಂಭಿಸಿದ್ದರು. ಪುಣೆಯ ಹೊರ ಭಾಗದಲ್ಲಿ ಈ ಚಿಕಿತ್ಸಾಲಯವನ್ನು ಸ್ಥಾಪಿಸಲಾಗಿತ್ತು. ಪಾಂಡುರಂಗ ಬಾಬಾಜಿ ಗಾಯಕವಾಡರ ಮಗನ ಶೂಶೃಷೆಯನ್ನು ಉಳಿಸಲು ಅವನ ಶುಶ್ರೂಷೆಯನ್ನು ಮಾಡುತ್ತಾ ಸಾವಿತ್ರಿ ಬಾಯಿ ಬುಬಾನಿಕ್ ಪ್ಲೇಗ್ ರೋಗಕ್ಕೆ ಬಲಿಯಾಗಿ ಮರಣವನ್ನು ಹೊಂದಿದರು.

ಮಾಧುರಿ ದೇಶಪಾಂಡೆ , ಬೆಂಗಳೂರು

  • ಅಜವಾನ ಅಜೀರ್ಣಕ್ಕೆ ಪ್ರಕೃತಿ ನೀಡಿದ ವರದಾನ
    by Team Varthaman
  • ಹೀಗೆ ಬಂದು ಹಾಗೆ ಹೋಗುವ ಸ್ನೇಹ ಸಾವಿರ
    by Team Varthaman
  • ಐಟಿ ದಾಳಿ ಭೀತಿ: ಕಾನ್ಫಿಡೆಂಟ್ ಅಧ್ಯಕ್ಷ ಡಾ.ಸಿ.ಜೆ.ರಾಯ್ ಆತ್ಮಹತ್ಯೆ
    by Team Varthaman
  • ಅಕ್ರಮ ವಲಸಿಗರ ಪತ್ತೆ–ಗಡಿಪಾರಿಗೆ ವಿಶೇಷ ತಂಡ ರಚನೆ: ರಾಜ್ಯ ಸರ್ಕಾರ
    by Team Varthaman
  • ತಿರುಪತಿ ಲಡ್ಡು ಕಲಬೆರಕೆ ಪ್ರಕರಣ: ₹234 ಕೋಟಿ ವಂಚನೆ ಬಯಲು
    by Team Varthaman
ತಾಯ್ತಂದೆಯರ ಪ್ರೀತಿಗೆ ಸಮವುಂಟೇ?
ಸಾವು ಬದುಕಿನ ನಡುವೆ
ಹತ್ತೂರಿನ ಸುಗ್ಗಿ ನೋಡುವ ಮೊದಲು ಹೆತ್ತೂರಿನ ಸುಗ್ಗಿ ನೋಡು
ಪೆಟ್ಟು‌ ಬಿದ್ದ ಜಾಗಕ್ಕೇ ಮತ್ತೆಮತ್ತೆ ಪೆಟ್ಟು ಬೀಳೋ ಬದುಕಿನ ವಿಸ್ಮಯ!
ವಾಸ್ತವ ವರ್ತಮಾನ
Share This Article
Facebook Email Print
Leave a Comment

Leave a Reply Cancel reply

Your email address will not be published. Required fields are marked *

Follow US

Find US on Social Medias
FacebookLike
XFollow
YoutubeSubscribe
TelegramFollow

Weekly Newsletter

Subscribe to our newsletter to get our newest articles instantly!
[mc4wp_form]
Popular News
KarnatakaMysore

ಹಿರಿಯ ಪತ್ರಕರ್ತರಾದ ಕೆ.ಬಿ.ಗಣಪತಿ ಇನ್ನಿಲ್ಲ

Team Varthaman
Team Varthaman
July 13, 2025
ಕುರುಬರನ್ನು ಎಸ್‌ಟಿಗೆ ಸೇರಿಸಿದರೆ ಮೀಸಲಾತಿ ಹೆಚ್ಚಿಸಬೇಕು: ಸಿಎಂ
ವೇದ ಉಪನಿಷತ್ತು ಪುರಾಣಗಳಲ್ಲಿ ದೀಪಾವಳಿ 
ವಾಲ್ಮೀಕಿ ಹಗರಣ: ಸಂಸದ, ಶಾಸಕರ ಮನೆ ಮೇಲೆ ಇಡಿ ದಾಳಿ
ನೇಪಾಳದಲ್ಲಿ ಏ.22 ರಂದು ಮಾಳವಿ ಮಂಜುನಾಥ್ ಅವರಿಂದ ಪಿಟೀಲು ವಾದನ
- Advertisement -
Ad imageAd image
Global Coronavirus Cases

Confirmed

0

Death

0

More Information:Covid-19 Statistics

Categories

  • Articles
  • Sports
  • Latest News
  • Karnataka News

About US

Since its inception in 1957, Varthamana has stood tall as one of the most trusted and respected Kannada daily newspapers. With deep roots in the rich cultural landscape of Karnataka, Varthamana continues to be the voice of the people, championing truth, transparency, and the values that define the region. Established with a strong commitment to ethical journalism, our newspaper has consistently provided comprehensive coverage, authentic news, and insightful editorials for over six decades. Today, under the dynamic leadership of Editor K. N. Ravi, Varthamana shines even brighter, blending a proud heritage with a modern outlook to meet the evolving needs of readers across the state. Our presence in the digital space, through Varthamana Digital, ensures that our trusted news and regional stories reach a wider audience faster and with greater impact.

Contact Us

© Varthaman. All Rights Reserved.
Welcome Back!

Sign in to your account

Username or Email Address
Password

Lost your password?