By using this site, you agree to the Privacy Policy and Terms of Use.
Accept
VarthamanVarthamanVarthaman
Notification Show More
Font ResizerAa
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
    ArticlesShow More
    ಉಡುಗೊರೆ ಹೊರೆಯಾಗದಿರಲಿ
    May 16, 2026
    ಅಸಹಾಯಕತೆಗೆ ಸ್ಪಂದಿಸುವ ಕನ್ನಡಿಗರ ಸೌಜನ್ಯಕ್ಕೆ ಸಾಟಿಯುಂಟೇ……?
    May 16, 2026
    ” ರಿಜೆಕ್ಷನ್ ಟು ರೆವಲ್ಯೂಷನ್ “
    May 5, 2026
    “ಸೂರ್ಯನಿಗೆ ಸವಾಲೆಸೆದವರು”
    May 3, 2026
    ಸ್ವಭಾವದ ಸ್ವರೂಪ
    May 3, 2026
  • Sports
  • National
  • International
  • Crime
Reading: “ಅರಿವಿನೊಂದಿಗೆ ಶಿವರಾತ್ರಿ”
Share
Font ResizerAa
VarthamanVarthaman
  • Home
  • Karnataka
  • Articles
  • Sports
  • National
  • International
  • Crime
Search
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
  • Sports
  • National
  • International
  • Crime
Follow US
Varthaman > Karnataka – Latest Breaking News > Articles > “ಅರಿವಿನೊಂದಿಗೆ ಶಿವರಾತ್ರಿ”
Articles

“ಅರಿವಿನೊಂದಿಗೆ ಶಿವರಾತ್ರಿ”

Team Varthaman
Last updated: February 15, 2026 10:11 AM
Team Varthaman
Published: February 15, 2026
Share
SHARE

ಇಂದು ಶಿವರಾತ್ರಿ, ಕೈಲಾಸವಾಸಿಯಾದ ದಿಗಂದರ, ಗಂಗಾಧರ,ಗೌರಿ ವರ, ಮಹಾಕಾಯ ಮಹಾಯೋಗಿ, ಮಹೇಶ್ವರ, ಇನ್ನು ಮುಂತಾದ ನಾಮಾಂಕಿತಗಳಿಂದ ಲೋಕವನ್ನ ರಕ್ಷಿಸುತ್ತಿರುವ ಪರಮೇಶ್ವರನ ಆರಾಧನೆಯ ಸಮಯ.

ಭೂಲೋಕದಲ್ಲಿ ಇಂದು ಭೋಲೆನಾಥನಿಗೆ ನೃತ್ಯ ಸಂಗೀತ, ಹಾಡು, ಕೀರ್ತನೆ, ಜಪ- ತಪ, ಜಾಗರಣೆ, ಅಲಂಕಾರ, ದೂಪ ದೀಪ, ಅಭಿಷೇಕ,ಹೂ ಹಣ್ಣು ಫಲಹಾರಗಳಿಂದ ವೈಭವದಿಂದ ವಿಜೃಂಭಣೆಯಿಂದ ವಿಭೂತಿಯೊಂದಿಗೆ ಆಚರಣೆ ಮಾಡುತ್ತಿದ್ದೇವೆ ಇದು ನಮ್ಮೆಲ್ಲರ ಪೂರ್ವಜನ್ಮದ ಪುಣ್ಯವೇ ಸರಿ.

Join WhatsApp Group

ಲೋಕಕಲ್ಯಾಣಕಾರಿಯಾದ ಶಿವನಿಗೆ ವಿಭಿನ್ನ ರೀತಿಯಲ್ಲಿ ಅಲಂಕರಿಸಿ ಬಾಹ್ಯ ರೂಪವನ್ನು ನೋಡಿ ಕಣ್ತುಂಬಿ ಕೊಳ್ಳುವುದರ ಜೊತೆಗೆ ಶಿವನ ಆಂತರಿಕ ರೂಪವನ್ನ ನಮ್ಮ ಅಂತರ್ ಕಣ್ಣಿನಿಂದ ನಮ್ಮ ಅಂತರ್ ಪ್ರಜ್ಞೆಯನ್ನು ಜಾಗೃತಗೊಳಿಸುವುದರ ಮೂಲಕ ಶಿವನ ಅಂತರಿಕ ರೂಪವನ್ನು ಸಹ ನಾವು ಅಲಂಕರಿಸಿ ವಿಜೃಂಭಿಸೋಣ.

ಬ್ರಹ್ಮಾಂಡದ ಸತ್ಯವನ್ನ ನೋಡುತ್ತಿರುವ ಮಹೇಶ್ವರನ ಮೂರನೇ ಕಣ್ಣು ನಮ್ಮ ಒಳಗಣ್ಣನ್ನು ಸೂಚಿಸುತ್ತದೆ, ಈ ಹೊಳಗಣ್ಣಿನಿಂದ ನಮ್ಮ ಜೀವನದ ಆಳವಾದ ತಿಳುವಳಿಕೆಯನ್ನು ಅನುಭವಿಸುವ ಸತ್ಯದ ದಾರಿಯನ್ನು ಹುಡುಕೋಣ.

ತನ್ನ ಜಟೆ ಮೇಲೆ ಇರುವ ಗಂಗೆಯು ಅಮೃತದ ಧಾರೆಯಾಗಿ ನಮ್ಮ ಎಲ್ಲಾ ಚಿಂತೆ, ಒತ್ತಡ,ನೋವು, ದುಃಖ ದುಮ್ಮಾನಗಳನ್ನೆಲ್ಲ ಸರಾಗವಾಗಿ ತೊಳೆಯುತ್ತಾ ನಮ್ಮ ಜೀವನದ ದಾರಿಯನ್ನ ಸುಗಮವಾಗಿ ಸಾಗಿಸುವ ಸಾಮರ್ಥ್ಯವನ್ನು ದಯಪಾಲಿಸಿದೆ ಎಂದು ಅನುಭವಿಸೋಣ.

ತ್ರಿಲೋಕ ಜ್ಞಾನಿಯಾದ ಶಿವನ ಕೈಯಲ್ಲಿ ಹಿಡಿದಿರುವ ಜೀವನದ ಮೂರು ಶಕ್ತಿಯನ್ನ ಪ್ರತಿಬಿಂಬಿಸುವ ತ್ರಿಶೂಲವು ಸೃಷ್ಟಿ ಸ್ಥಿತಿ ಲಯಗಳ ರಹಸ್ಯವನ್ನು ಹೇಗೆ ಸೃಷ್ಟಿಗೆ ತಿಳಿಸುತ್ತಿದೆಯೋ ಹಾಗೆಯೇ ನಮ್ಮ ಎಲ್ಲಾ ಶಕ್ತಿಗಳು ನಮ್ಮೊಳಗೆ ಸೌಹಾರ್ದತೆಯಿಂದ ಕಾರ್ಯನಿರ್ವಹಿಸುತ್ತಿದೆ ಎಂಬ ಭಾವನೆಯನ್ನು ಮೂಡಿಸಿಕೊಳ್ಳೋಣ.

ಶಿವನನ್ನ ಆವರಿಸಿರುವ ಸರ್ಪವು ನಮ್ಮೊಳಗಿನ ಆಧ್ಯಾತ್ಮಿಕ ಶಕ್ತಿಯನ್ನು ಪ್ರತಿಬಿಂಬಿಸುವುದರ ಮೂಲಕ ನಮ್ಮಲ್ಲಿ ಇನ್ನು ಹೆಚ್ಚು ಆಳವಾದ ಶಾಂತಿಯನ್ನು ನೆಲೆಗೊಳಿಸಿದೆ ಹಾಗೆ ನಮ್ಮ ಎಲ್ಲಾ ಕಷ್ಟ ಸಂದರ್ಭದಲ್ಲೂ ಹೇಗೆ ಸರ್ಪವು ಶಿವನನ್ನ ಆವರಿಸಿದೆಯೋ ಹಾಗೆ ಪ್ರತಿಯೊಂದು ಸಂದರ್ಭದಲ್ಲಿ ಇವನು ನಮ್ಮನ್ನು ರಕ್ಷಿಸುತ್ತಿದ್ದಾನೆ ಅವನ ರಕ್ಷಣೆಯು ನಮ್ಮನ್ನು ಆವರಿಸಿದೆ ಎಂದು ಮುಂದೆ ಸಾಗೋಣ.

ನಟರಾಜನಾದ ಶಂಕರನ ನೃತ್ಯ ಭಂಗಿಯನ್ನು ನೋಡುತ್ತಾ ನಮ್ಮ ಜೀವನವೆಂಬ ವೇದಿಕೆಯ ಮೇಲೆ ಯಾವುದೇ ಅಡೆತಡೆಗಳು ಬಂದರೂ ನಿರಂತರವಾಗಿ ಪರಮಾನಂದದ ನೃತ್ಯವನ್ನು ನಮ್ಮ ಆತ್ಮ ಆನಂದಿಸಬೇಕು ಎನ್ನುವ ಪರಮ ಸತ್ಯವನ್ನ ಅರಿತುಕೊಳ್ಳೋಣ .

ನಾವು ಜೀವಿಸುವ ಸೃಷ್ಟಿಯ ಅನಂತ ಶಕ್ತಿಗಳ ಜೊತೆ ಶಿವನ ಶಕ್ತಿಯನ್ನು ಎಳೆಯಾಗಿ ಅನಾವರಣಗೊಳಿಸುತ್ತಾ ಈ ಶಿವರಾತ್ರಿಯನ್ನ ಅಂತರ್ ಪ್ರಜ್ಞೆಯಿಂದ ಇಂದ ಆಚರಿಸೋಣ ಎಲ್ಲರಿಗೂ ಶಿವರಾತ್ರಿಯ ಹಾರ್ದಿಕ ಶುಭಾಶಯಗಳು.

  • ಮಾಜಿ ಪುರಸಭೆ ಅಧ್ಯಕ್ಷೆಯ ಪುತ್ರಿ ಅನುಮಾನಾಸ್ಪದ ಸಾವು
    by Team Varthaman
  • ಮುಂಗಾರು ಅಬ್ಬರ: 19 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
    by Team Varthaman
  • ರಾಜೀನಾಮೆ ಹಿಂಪಡೆದ ರಾಮಲಿಂಗಾರೆಡ್ಡಿ
    by Team Varthaman
  • ರಾಜ್ಯಸಭೆ ಟಿಕೆಟ್‌ಗೆ ಸುಮಲತಾ ಲಾಬಿ; ಬಿಜೆಪಿ ವರಿಷ್ಠರ ಮೇಲೆ ಒತ್ತಡ
    by Team Varthaman
  • ರಾಜ್ಯಕ್ಕೆ ಮುಂಗಾರು ಎಂಟ್ರಿ; ಬೆಂಗಳೂರು ಸೇರಿ ಹಲವೆಡೆ ಭಾರೀ ಮಳೆ
    by Team Varthaman
ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ
ಕಣ್ಣಿನ ಮೇಕಪ್ ಬದಿಗೊತ್ತಿ ಕಣ್ಣನ್ನು ಕಾಪಾಡಿ
ಅಕ್ಷಯ ತೃತೀಯ 2025: ಅದೃಷ್ಟ ಮತ್ತು ಸಮೃದ್ಧಿಗಾಗಿ ಈ 6 ವಸ್ತುಗಳನ್ನು ಖರೀದಿಸಿ!
ತಾಯ್ತಂದೆಯರ ಪ್ರೀತಿಗೆ ಸಮವುಂಟೇ?
(ಬ್ಯಾಂಕರ್ಸ್ ಡೈರಿ)
TAGGED:Maha ShivaRatrishivaRatri
Share This Article
Facebook Email Print
Leave a Comment

Leave a Reply Cancel reply

Your email address will not be published. Required fields are marked *

Follow US

Find US on Social Medias
FacebookLike
XFollow
YoutubeSubscribe
TelegramFollow

Weekly Newsletter

Subscribe to our newsletter to get our newest articles instantly!
[mc4wp_form]
Popular News
BengaluruCrimeKarnataka

ಬೆಂ–ತಿರುಪತಿ ಮಾರ್ಗದಲ್ಲಿ ಭೀಕರ ಅಪಘಾತ: ಮೂವರ ದುರ್ಮರಣ

Team Varthaman
Team Varthaman
March 28, 2026
(ಬ್ಯಾಂಕರ್ಸ್ ಡೈರಿ)
ಮಕ್ಕಳ ಬಾಲ್ಯ
ಅಪ್ರಾಪ್ತ ಮಕ್ಕಳಿಗೆ ಬೈಕ್ ಕೊಡುವ ಪೋಷಕರಿಗೆ ಎಚ್ಚರಿಕೆ: ₹25,000 ದಂಡ
ಹೊಸೂರು ರಸ್ತೆಯ ಟೋಲ್ ದರ ಏರಿಕೆ
- Advertisement -
Ad imageAd image
Global Coronavirus Cases

Confirmed

0

Death

0

More Information:Covid-19 Statistics

Categories

  • Articles
  • Sports
  • Latest News
  • Karnataka News

About US

Since its inception in 1957, Varthamana has stood tall as one of the most trusted and respected Kannada daily newspapers. With deep roots in the rich cultural landscape of Karnataka, Varthamana continues to be the voice of the people, championing truth, transparency, and the values that define the region. Established with a strong commitment to ethical journalism, our newspaper has consistently provided comprehensive coverage, authentic news, and insightful editorials for over six decades. Today, under the dynamic leadership of Editor K. N. Ravi, Varthamana shines even brighter, blending a proud heritage with a modern outlook to meet the evolving needs of readers across the state. Our presence in the digital space, through Varthamana Digital, ensures that our trusted news and regional stories reach a wider audience faster and with greater impact.

Contact Us

© Varthaman. All Rights Reserved.
Welcome Back!

Sign in to your account

Username or Email Address
Password

Lost your password?