- ಫಾರ್ಮಾ ಕಂಪನಿಗಳಿಗೆ ಟ್ರಂಪ್ ಶಾಕ್
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬ್ರಾಂಡೆಡ್ ಔಷಧಗಳ ಮೇಲೆ 100% ಸುಂಕ ವಿಧಿಸುವ ಕಾರ್ಯಾದೇಶಕ್ಕೆ ಸಹಿ ಹಾಕಿದ್ದು, ಜಾಗತಿಕ ಫಾರ್ಮಾ ಕಂಪನಿಗಳಿಗೆ ದೊಡ್ಡ ಆಘಾತ ನೀಡಿದ್ದಾರೆ.
ಪೇಟೆಂಟ್ ಹೊಂದಿರುವ ಹಾಗೂ ಬ್ರಾಂಡೆಡ್ ಔಷಧಗಳನ್ನು ಅಮೆರಿಕಕ್ಕೆ ಆಮದು ಮಾಡುವ ಕಂಪನಿಗಳ ಮೇಲೆ ಈ ಸುಂಕ ಅನ್ವಯವಾಗಲಿದೆ. ಈ ಕ್ರಮದ ಮೂಲಕ ಔಷಧ ಉತ್ಪಾದನಾ ಘಟಕಗಳನ್ನು ಅಮೆರಿಕದಲ್ಲೇ ಸ್ಥಾಪಿಸಲು ಕಂಪನಿಗಳ ಮೇಲೆ ಒತ್ತಡ ತರಲಾಗುತ್ತಿದೆ.
ಅಮೆರಿಕದೊಳಗೆ ಉತ್ಪಾದನೆ ಹೆಚ್ಚಿಸುವುದು, ವಿದೇಶಿ ಅವಲಂಬನೆ ಕಡಿಮೆ ಮಾಡುವುದು ಮತ್ತು ಉದ್ಯೋಗ ಸೃಷ್ಟಿಸುವುದು ಈ ನೀತಿಯ ಮುಖ್ಯ ಉದ್ದೇಶವಾಗಿದೆ.
ಸುಂಕ ರಿಯಾಯಿತಿ:
ಮುಂದಿನ ನಾಲ್ಕು ವರ್ಷಗಳಲ್ಲಿ ಅಮೆರಿಕದಲ್ಲಿ ಕಾರ್ಖಾನೆ ಸ್ಥಾಪಿಸಲು ಒಪ್ಪುವ ಕಂಪನಿಗಳಿಗೆ ಸುಂಕವನ್ನು 20%ಕ್ಕೆ ಇಳಿಸಲಾಗುತ್ತದೆ. ಆದರೆ 2030ರೊಳಗೆ ಉತ್ಪಾದನೆ ಪೂರ್ಣಗೊಳ್ಳದಿದ್ದರೆ ಮತ್ತೆ 100% ಸುಂಕ ವಿಧಿಸಲಾಗುತ್ತದೆ.
ಅಮೆರಿಕದಲ್ಲೇ ಉತ್ಪಾದನೆ ಮಾಡಿ ಕಡಿಮೆ ದರದಲ್ಲಿ ಔಷಧ ನೀಡಲು ಒಪ್ಪಿದ ಕಂಪನಿಗಳಿಗೆ ಸುಂಕದಿಂದ ಸಂಪೂರ್ಣ ವಿನಾಯಿತಿ ನೀಡಲಾಗುತ್ತದೆ.
ಗಡುವು ಮತ್ತು ನಿಯಮಗಳು:
ದೊಡ್ಡ ಕಂಪನಿಗಳಿಗೆ ಯೋಜನೆ ಸಲ್ಲಿಸಲು 120 ದಿನಗಳ ಕಾಲಾವಕಾಶ ನೀಡಲಾಗಿದ್ದು, ಸಣ್ಣ ಕಂಪನಿಗಳಿಗೆ 180 ದಿನಗಳ ಗಡುವು ನೀಡಲಾಗಿದೆ. ಯುರೋಪಿಯನ್ ಯೂನಿಯನ್, ಜಪಾನ್, ದಕ್ಷಿಣ ಕೊರಿಯಾ ಹಾಗೂ ಸ್ವಿಟ್ಜರ್ಲೆಂಡ್ ದೇಶಗಳ ಔಷಧಗಳಿಗೆ ಸುಮಾರು 15% ಸುಂಕ ವಿಧಿಸಲಾಗುತ್ತದೆ.
ಜನರಿಕ್ ಔಷಧಗಳಿಗೆ ವಿನಾಯಿತಿ:
ಈ ನಿಯಮವು ಜನರಿಕ್ ಔಷಧಗಳಿಗೆ ಅನ್ವಯಿಸುವುದಿಲ್ಲ. ಅಮೆರಿಕದಲ್ಲಿ ಬಳಸುವ ಸುಮಾರು 90% ಔಷಧಗಳು ಜನರಿಕ್ ಆಗಿರುವುದರಿಂದ, ಸಾಮಾನ್ಯ ರೋಗಿಗಳಿಗೆ ತಕ್ಷಣದ ಬೆಲೆ ಏರಿಕೆಯ ಹೊರೆ ಬೀಳದಂತೆ ಕ್ರಮ ಕೈಗೊಳ್ಳಲಾಗಿದೆ.ಇದನ್ನು ಓದಿ –12 ವರ್ಷಗಳ ಬಳಿಕ ಡಾಲರ್ ಎದುರು ರೂಪಾಯಿ ಭಾರೀ ಏರಿಕೆ
ಈ ನಿರ್ಧಾರದಿಂದ ಭಾರತದಂತಹ ದೇಶಗಳಿಗೆ ತಕ್ಷಣದ ದೊಡ್ಡ ಆರ್ಥಿಕ ಪರಿಣಾಮ ಇರುವುದಿಲ್ಲ ಎಂದು ವಿಶ್ಲೇಷಿಸಲಾಗಿದೆ.








