By using this site, you agree to the Privacy Policy and Terms of Use.
Accept
VarthamanVarthamanVarthaman
Notification Show More
Font ResizerAa
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
    ArticlesShow More
    ನಾವೇನು ಕೊಟ್ವಿ
    April 6, 2026
    ನೇರವಾಗಿ ಮಾತನಾಡೋರು ಎಲ್ಲರ ಪಾಲಿನ ಡಾರ್ಲಿಂಗ್ ಆಗಲು ಸಾಧ್ಯವೇ….?
    April 4, 2026
    “ಈ ಸಮಯ ಕಳೆದು ಹೋಗುತ್ತದೆ”
    March 29, 2026
    ಬೇಸಿಗೆಯ ತಂಪಿಗೆ ಬಾರ್ಲಿ ಎಂಬ ಸಂಜೀವಿನಿ
    March 28, 2026
    ರಾಮ ನಾಮ ಜಪದ ಮಹಿಮೆ
    March 27, 2026
  • Sports
  • National
  • International
  • Crime
Reading: ಇನ್ನೂ ಎರಡು ವರ್ಷ ಸಿದ್ದು ಸಿಎಂ; ಹೈಕಮಾಂಡ್ ಸ್ಪಷ್ಟನೆ ಬೇಡ: ಪರಮೇಶ್ವರ್
Share
Font ResizerAa
VarthamanVarthaman
  • Home
  • Karnataka
  • Articles
  • Sports
  • National
  • International
  • Crime
Search
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
  • Sports
  • National
  • International
  • Crime
Follow US
Varthaman > Karnataka – Latest Breaking News > Karnataka > Mysore > ಇನ್ನೂ ಎರಡು ವರ್ಷ ಸಿದ್ದು ಸಿಎಂ; ಹೈಕಮಾಂಡ್ ಸ್ಪಷ್ಟನೆ ಬೇಡ: ಪರಮೇಶ್ವರ್
KarnatakaMysoreTrending

ಇನ್ನೂ ಎರಡು ವರ್ಷ ಸಿದ್ದು ಸಿಎಂ; ಹೈಕಮಾಂಡ್ ಸ್ಪಷ್ಟನೆ ಬೇಡ: ಪರಮೇಶ್ವರ್

Team Varthaman
Last updated: April 6, 2026 5:40 PM
Team Varthaman
Published: April 6, 2026
Share
SHARE

ಮೈಸೂರು: ರಾಜ್ಯದಲ್ಲಿ ಸಿಎಂ ಬದಲಾವಣೆ ಕುರಿತು ಹರಿದಾಡುತ್ತಿರುವ ವದಂತಿಗಳಿಗೆ ತೆರೆ ಎಳೆಯುವಂತೆ ಗೃಹಸಚಿವ ಜಿ. ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ. ಇನ್ನೂ ಎರಡು ವರ್ಷ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿ ಮುಂದುವರಿಯಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಪರಮೇಶ್ವರ್, 2023ರಲ್ಲಿ ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯರನ್ನು ಮುಖ್ಯಮಂತ್ರಿ ಎಂದು ಘೋಷಿಸಿದ್ದು, ಅದರ ಅವಧಿ 2028ರವರೆಗೆ ಇದೆ. ಹೀಗಾಗಿ ಪ್ರತ್ಯೇಕವಾಗಿ “ಐದು ವರ್ಷ ಸಿಎಂ” ಎಂದು ಹೈಕಮಾಂಡ್ ಮತ್ತೆ ಸ್ಪಷ್ಟನೆ ನೀಡುವ ಅಗತ್ಯವಿಲ್ಲ ಎಂದರು.

Join WhatsApp Group

2013ರಲ್ಲಿ ಸಿದ್ದರಾಮಯ್ಯ ಐದು ವರ್ಷ ಸಿಎಂ ಆಗಿರುತ್ತಾರೆ ಎಂದು ಹೈಕಮಾಂಡ್ ಸ್ಪಷ್ಟವಾಗಿ ಹೇಳಿರಲಿಲ್ಲ. ಆದರೂ ಅವರು ಪೂರ್ಣಾವಧಿ ಮುಖ್ಯಮಂತ್ರಿ ಆಗಿದ್ದರು. ಈ ಬಾರಿಯೂ ಅವರು ಸಂಪೂರ್ಣ ಅವಧಿ ಮುಗಿಸಬೇಕು ಎಂಬುದೇ ಉದ್ದೇಶ ಎಂದು ಹೇಳಿದರು.

ಸಿಎಂ ಬದಲಾವಣೆ ಬಗ್ಗೆ ಯಾವುದೇ ಚರ್ಚೆ ಅಥವಾ ನಿರ್ಧಾರ ಹೈಕಮಾಂಡ್ ಮಟ್ಟದಲ್ಲೇ ಆಗಬೇಕು. ಅಲ್ಲಿಯವರೆಗೆ ಯಾರೇ ಏನೇ ಹೇಳಿದರೂ ಅದು ವೈಯಕ್ತಿಕ ಅಭಿಪ್ರಾಯ ಮಾತ್ರ ಎಂದು ಪರಮೇಶ್ವರ್ ಹೇಳಿದರು. ಹೈಕಮಾಂಡ್ ಈ ವಿಷಯದಲ್ಲಿ ಯಾವುದೇ ಗೊಂದಲ ಸೃಷ್ಟಿಸಿಲ್ಲ ಎಂದು ಕೂಡ ಅವರು ಸ್ಪಷ್ಟಪಡಿಸಿದರು.

ಡಿ.ಕೆ. ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರೂ ಆಗಿದ್ದು, ಡಿಸಿಎಂ ಆಗಿದ್ದಾರೆ. ಅವರು ನಮ್ಮ ನಾಯಕರಾಗಿದ್ದು, ಅವರಿಗೆ ಯಾವುದೇ ಸಮಸ್ಯೆ ಇಲ್ಲ. ರಾಜ್ಯದ ಎಲ್ಲಾ ಶಾಸಕರು ಸಿಎಂ ಹುದ್ದೆಗೆ ಅರ್ಹರು ಎಂದು ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲೇ ಹೇಳಿದ್ದಾರೆ. ಹೀಗಾಗಿ “ಯಾರು ಅರ್ಹರು?” ಎಂಬ ಪ್ರಶ್ನೆ ಅರ್ಥವಿಲ್ಲ ಎಂದು ಹೇಳಿದರು.

ಉಪಚುನಾವಣೆ ಫಲಿತಾಂಶಕ್ಕೂ ಸರ್ಕಾರದ ಸ್ಥಿತಿಗೂ ಯಾವುದೇ ಸಂಬಂಧ ಇಲ್ಲ. ಉಪಚುನಾವಣೆ ಫಲಿತಾಂಶ ಸರ್ಕಾರಕ್ಕೆ ನೀಡುವ ಅಂಕಗಳಲ್ಲ. ಅದರ ಆಧಾರದ ಮೇಲೆ ಯಾವುದೇ ಬದಲಾವಣೆ ಆಗುವುದಿಲ್ಲ. ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ. ಗ್ಯಾರಂಟಿ ಯೋಜನೆಗಳ ಜೊತೆಗೆ ಸರ್ಕಾರದ ಆಡಳಿತ ದಕ್ಷತೆಗೆ ಜನ ಬೆಂಬಲ ನೀಡುತ್ತಾರೆ ಎಂದು ಪರಮೇಶ್ವರ್ ವಿಶ್ವಾಸ ವ್ಯಕ್ತಪಡಿಸಿದರು.

  • ಇನ್ನೂ ಎರಡು ವರ್ಷ ಸಿದ್ದು ಸಿಎಂ; ಹೈಕಮಾಂಡ್ ಸ್ಪಷ್ಟನೆ ಬೇಡ: ಪರಮೇಶ್ವರ್
    by Team Varthaman
  • ನಾವೇನು ಕೊಟ್ವಿ
    by Team Varthaman
  • ಹೊರ್ಮುಜ್ ನಂತರ ಬಬ್–ಎಲ್–ಮಂಡೇಬ್ ಜಲಸಂಧಿ ಬಂದ್ ಬೆದರಿಕೆ
    by Team Varthaman
  • ಇಂದೂ ಗುಡುಗು ಸಹಿತ ಮಳೆ; 10 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
    by Team Varthaman
  • ಹರಕೆ ತೀರಿಸಲು ಹೋದ ವಿದ್ಯಾರ್ಥಿಗಳು ಜಲಸಮಾಧಿ
    by Team Varthaman
ಮೋದಿ ಕಪ್‌ ದೇಹದಾಡ್ಯ ಸ್ಪರ್ಧೆಯ ಭಿತ್ತಿಪತ್ರ ಬಿಡುಗಡೆ
ಸಿಗರೇಟ್, ಬೀಡಿ, ಪಾನ್ ಮಸಾಲಾ ದುಬಾರಿ
ಖ್ಯಾತ ರಂಗಭೂಮಿ ಕಲಾವಿದ ಯಶವಂತ ಸರದೇಶಪಾಂಡೆ ನಿಧನ
ಮೈಸೂರಿನಲ್ಲಿ ವೈಯಕ್ತಿಕ ದ್ವೇಷದಿಂದ ಯುವಕನ ಬರ್ಬರ ಹತ್ಯೆ
USA ಎಚ್-1ಬಿ ವೀಸಾ ಶುಲ್ಕ ಹೆಚ್ಚಳ: ತಂತ್ರಜ್ಞಾನ ಉದ್ಯೋಗಿಗಳಿಗೆ ಹೊಸ ಸವಾಲು
TAGGED:breakingnewsG ParameshwaralatestnewsMysore NewsSiddaramaiah
Share This Article
Facebook Email Print
Leave a Comment

Leave a Reply Cancel reply

Your email address will not be published. Required fields are marked *

Follow US

Find US on Social Medias
FacebookLike
XFollow
YoutubeSubscribe
TelegramFollow

Weekly Newsletter

Subscribe to our newsletter to get our newest articles instantly!
[mc4wp_form]
Popular News
KarnatakaTrendingTumkur

ಮಾ.28ಕ್ಕೆ ವಿಶೇಷ ಸಂಪುಟ ಸಭೆ: ಒಳ ಮೀಸಲಾತಿ ಜಾರಿ ಸಾಧ್ಯತೆ

Team Varthaman
Team Varthaman
March 14, 2026
ಅಮೆರಿಕದಲ್ಲಿ ಮಂಡ್ಯ ಮೂಲದ ಉದ್ಯಮಿ ಪತ್ನಿ ಮತ್ತು ಪುತ್ರನನ್ನು ಕೊಂದು ಆತ್ಮಹತ್ಯೆ
ಅಧಿಕಾರ ಹಂಚಿಕೆ ಮಾದ್ಯಮ ಸೃಷ್ಠಿ: ಸಿಎಂ ಸಿದ್ಧರಾಮಯ್ಯ
ಜೂನ್ 16ರಿಂದ RTI ಅರ್ಜಿಗಳಿಗೆ ಓಟಿಪಿ ಮೂಲಕ ಇ-ಮೇಲ್ ಪರಿಶೀಲನೆ ಕಡ್ಡಾಯ
ಗುಜರಾತ್‌ ಕರಕುಶಲ ಉತ್ಸವಕ್ಕೆ ಅದ್ಧೂರಿ ಚಾಲನೆ  
- Advertisement -
Ad imageAd image
Global Coronavirus Cases

Confirmed

0

Death

0

More Information:Covid-19 Statistics

Categories

  • Articles
  • Sports
  • Latest News
  • Karnataka News

About US

Since its inception in 1957, Varthamana has stood tall as one of the most trusted and respected Kannada daily newspapers. With deep roots in the rich cultural landscape of Karnataka, Varthamana continues to be the voice of the people, championing truth, transparency, and the values that define the region. Established with a strong commitment to ethical journalism, our newspaper has consistently provided comprehensive coverage, authentic news, and insightful editorials for over six decades. Today, under the dynamic leadership of Editor K. N. Ravi, Varthamana shines even brighter, blending a proud heritage with a modern outlook to meet the evolving needs of readers across the state. Our presence in the digital space, through Varthamana Digital, ensures that our trusted news and regional stories reach a wider audience faster and with greater impact.

Contact Us

© Varthaman. All Rights Reserved.
Welcome Back!

Sign in to your account

Username or Email Address
Password

Lost your password?