ಬೆಂಗಳೂರು: ಬೆಂಗಳೂರು–ಮುಂಬೈ ನಡುವೆ ವಂದೇ ಭಾರತ್ ಸ್ಲೀಪರ್ ರೈಲು ಸೇವೆ ಆರಂಭಿಸಲು ಕೇಂದ್ರ ರೈಲ್ವೆ ಇಲಾಖೆ ಗ್ರೀನ್ ಸಿಗ್ನಲ್ ನೀಡಿದೆ. ಈ ಕುರಿತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮಾಹಿತಿ ನೀಡಿದ್ದಾರೆ.
ಈ ರೈಲು ಸೇವೆಗೆ ಬೆಂಗಳೂರು ಕೇಂದ್ರ ಕ್ಷೇತ್ರದ ಸಂಸದ ಪಿ.ಸಿ. ಮೋಹನ್ ಬೇಡಿಕೆ ಇಟ್ಟಿದ್ದರು. ಸಂಸದರಿಗೆ ಪತ್ರದ ಮೂಲಕ ಹೊಸ ರೈಲುಗೆ ಅನುಮತಿ ನೀಡಿರುವ ಬಗ್ಗೆ ಸಚಿವರು ತಿಳಿಸಿರುವರು.
ಡಿಸೆಂಬರ್ 2ರಂದು ನೈಋತ್ಯ ರೈಲ್ವೆಯ ಸ್ಥಾಯಿ ಸಮಿತಿಯ ಅಧ್ಯಯನ ಭೇಟಿಯ ವೇಳೆ ಪಿ.ಸಿ. ಮೋಹನ್ ಈ ವಿಷಯವನ್ನು ಮುಂದಿಟ್ಟಿದ್ದರು. SMVT ಬೆಂಗಳೂರು ನಿಲ್ದಾಣವನ್ನು ಮೂಲ/ಅಂತ್ಯ ಕೇಂದ್ರವಾಗಿ ವಂದೇ ಭಾರತ್ ಸ್ಲೀಪರ್ ರೈಲು ಆರಂಭಿಸಲು ಅವರು ಒತ್ತಾಯಿಸಿದ್ದರು.
ಈಗಿರುವ ರೈಲುಗಳು ಬೆಂಗಳೂರು–ಮುಂಬೈ ಪ್ರಯಾಣಕ್ಕೆ 24 ರಿಂದ 30 ಗಂಟೆಗಳವರೆಗೆ ಸಮಯ ತೆಗೆದುಕೊಳ್ಳುತ್ತವೆ. ಆದರೆ ಬಸ್‌ಗಳು 16 ರಿಂದ 18 ಗಂಟೆಗಳಲ್ಲಿ ಗಮ್ಯಸ್ಥಾನ ತಲುಪುತ್ತವೆ. ಇದರಿಂದ ವೇಗವಾದ ರೈಲು ಸೇವೆಯ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದರು.ಏ.16ರಂದು ರಾಜ್ಯ ಸಚಿವ ಸಂಪುಟ ಸಭೆ; ಮಹತ್ವದ ನಿರ್ಧಾರಗಳ ನಿರೀಕ್ಷೆ
ಹೊಸ ವಂದೇ ಭಾರತ್ ಸ್ಲೀಪರ್ ರೈಲು ಸೇವೆಯಿಂದ ಪ್ರಯಾಣ ಸಮಯ ಕಡಿಮೆಯಾಗುವ ನಿರೀಕ್ಷೆ ಇದ್ದು, ಪ್ರಯಾಣಿಕರಿಗೆ ಹೆಚ್ಚಿನ ಸೌಲಭ್ಯ ಸಿಗಲಿದೆ.








