ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟವಾಗಿದ್ದು, ಇತಿಹಾಸದಲ್ಲೇ ಇದೇ ಮೊದಲ ಬಾರಿ ಶೇ.94.10ರಷ್ಟು ಉತ್ತೀರ್ಣ ಪ್ರಮಾಣ ದಾಖಲಾಗಿದೆ. ಪರೀಕ್ಷಾ ಮಂಡಳಿ ಅಧಿಕೃತ ವೆಬ್‌ಸೈಟ್‌ನಲ್ಲಿ ಫಲಿತಾಂಶ ಪ್ರಕಟಿಸಿದ್ದು, ಎಸ್ ಎಂ ಎಸ್ ಹಾಗೂ ವಾಟ್ಸಪ್ ಮೂಲಕವೂ ವಿದ್ಯಾರ್ಥಿಗಳಿಗೆ ಮಾಹಿತಿ ಕಳುಹಿಸಲಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಈ ಬಾರಿ ಪರೀಕ್ಷೆಗೆ 7,70,209 ವಿದ್ಯಾರ್ಥಿಗಳು ಹಾಜರಾಗಿದ್ದು, ಅವರಲ್ಲಿ 7,24,794 ಮಂದಿ ಉತ್ತೀರ್ಣರಾಗಿದ್ದಾರೆ ಎಂದು ಮಾಹಿತಿ ನೀಡಿದರು.
ಇವರಲ್ಲಿ 3,77,922 ಬಾಲಕಿಯರು ಶೇ.96.18ರಷ್ಟು ಉತ್ತೀರ್ಣರಾಗಿದ್ದು, 3,46,871 ಬಾಲಕರು ಶೇ.91.94ರಷ್ಟು ಪಾಸ್ ಆಗಿದ್ದಾರೆ. ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದರೂ, ಬಾಲಕರ ಫಲಿತಾಂಶದಲ್ಲೂ ಗಮನಾರ್ಹ ಏರಿಕೆ ಕಂಡುಬಂದಿದೆ ಎಂದು ಅವರು ಶ್ಲಾಘಿಸಿದರು.
ನಗರ ಪ್ರದೇಶದಲ್ಲಿ 3,05,533 ವಿದ್ಯಾರ್ಥಿಗಳು ಶೇ.93.2ರಷ್ಟು ಉತ್ತೀರ್ಣರಾಗಿದ್ದು, ಗ್ರಾಮೀಣ ಭಾಗದಲ್ಲಿ 4,19,261 ವಿದ್ಯಾರ್ಥಿಗಳು ಶೇ.94.80ರಷ್ಟು ಪಾಸ್ ಆಗಿದ್ದಾರೆ.ಇದನ್ನು ಓದಿ –ಬೆಂಗಳೂರಿನ ಒನ್8 ಕಮ್ಯೂನ್‌ಗೆ ಬೀಗ
ಗ್ರೇಡ್ ಪ್ರಕಾರ, 68,207 ವಿದ್ಯಾರ್ಥಿಗಳು A+ ಪಡೆದಿದ್ದಾರೆ. 1,30,403 ವಿದ್ಯಾರ್ಥಿಗಳು A ಗ್ರೇಡ್, 1,40,963 ವಿದ್ಯಾರ್ಥಿಗಳು B+, 1,42,645 ವಿದ್ಯಾರ್ಥಿಗಳು B ಗ್ರೇಡ್ ಪಡೆದಿದ್ದಾರೆ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು C ಗ್ರೇಡ್ ಪಡೆದು ಉತ್ತೀರ್ಣರಾಗಿದ್ದಾರೆ.








