ಐಪಿಎಲ್ 2026ರಲ್ಲಿ ಏಪ್ರಿಲ್ 28ರಂದು ನಡೆದ ಪಂಜಾಬ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯದಲ್ಲಿ ರಾಜಸ್ಥಾನ್ ನಾಯಕ ರಿಯಾನ್ ಪರಾಗ್ ನಿಷೇಧಿತ ಇ-ಸಿಗರೇಟ್ ಅನ್ನು ಡ್ರೆಸಿಂಗ್ ರೂಮಿನಲ್ಲಿ ಬಳಸುತ್ತಿರುವುದು ಕ್ಯಾಮೆರಾದಲ್ಲಿ ಸೆರೆಹಿಡಿಯಲ್ಪಟ್ಟಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿತ್ತು.
ಈ ಘಟನೆ ಬಳಿಕ ರಿಯಾನ್ ಪರಾಗ್ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂಬ ಮಾತುಗಳು ಕೇಳಿಬಂದಿದ್ದವು. ಇದೀಗ ಐಪಿಎಲ್ ನಿಯಮ ಉಲ್ಲಂಘಿಸಿರುವ ಕಾರಣಕ್ಕೆ ಅವರಿಗೆ ದಂಡ ವಿಧಿಸಲಾಗಿದೆ.
ಡ್ರೆಸಿಂಗ್ ರೂಮಿನಲ್ಲಿ ಇ-ಸಿಗರೇಟ್ ಬಳಸಿದ ಕಾರಣ, ರಿಯಾನ್ ಪರಾಗ್ ಅವರ ಪಂದ್ಯ ಶುಲ್ಕದ ಶೇಕಡಾ 25ರಷ್ಟು ಮೊತ್ತವನ್ನು ಕಡಿತಗೊಳಿಸಲಾಗಿದೆ. ಜೊತೆಗೆ ಅವರಿಗೆ ಒಂದು ಡಿಮೆರಿಟ್ ಪಾಯಿಂಟ್ ಕೂಡ ನೀಡಲಾಗಿದೆ.
ಐಪಿಎಲ್ ನಿಯಮಾವಳಿಗಳ ಉಲ್ಲಂಘನೆ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದ್ದು, ಮ್ಯಾಚ್ ರೆಫರಿಯ ಮುಂದೆ ಪರಾಗ್ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಹೀಗಾಗಿ ಹೆಚ್ಚಿನ ವಿಚಾರಣೆಯ ಅಗತ್ಯವಿಲ್ಲ ಎಂದು ತಿಳಿಸಲಾಗಿದೆ.
ಭಾರತದಲ್ಲಿ 2019ರಿಂದ ಇ-ಸಿಗರೇಟ್ ಬಳಕೆ ನಿಷೇಧಿತವಾಗಿದೆ. ಬಿಸಿಸಿಐ ಸಹ ಧೂಮಪಾನ ಮತ್ತು ವೇಪಿಂಗ್ ವಿರುದ್ಧ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಿದೆ.ಇದನ್ನು ಓದಿ –ಲೇಹ್- ಲಡಾಖ್‌ನಲ್ಲಿ 4.1 ತೀವ್ರತೆಯ ಭೂಕಂಪ
ಈ ನಿಯಮಗಳನ್ನೇ ಉಲ್ಲಂಘಿಸಿದ ಕಾರಣಕ್ಕೆ ರಿಯಾನ್ ಪರಾಗ್‌ಗೆ ದಂಡ ವಿಧಿಸಲಾಗಿದೆ.








