ನವದೆಹಲಿ: ದೇಶದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹದಲ್ಲಿ ಸ್ಥಿರ ಬೆಳವಣಿಗೆ ಮುಂದುವರಿದಿದೆ. ಮೇ 2026ರಲ್ಲಿ ಒಟ್ಟು ಜಿಎಸ್‌ಟಿ ಸಂಗ್ರಹ ₹1,94,184 ಕೋಟಿಗೆ ತಲುಪಿದ್ದು, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ. 3.2ರಷ್ಟು ಹೆಚ್ಚಳ ದಾಖಲಾಗಿದೆ ಎಂದು ಅಧಿಕೃತ ಅಂಕಿ-ಅಂಶಗಳು ತಿಳಿಸಿವೆ.
ತೆರಿಗೆ ಮರುಪಾವತಿಗಳನ್ನು ಕಡಿತಗೊಳಿಸಿದ ಬಳಿಕ ಮೇ ತಿಂಗಳ ನಿವ್ವಳ ಜಿಎಸ್‌ಟಿ ಆದಾಯ ₹1,66,904 ಕೋಟಿಯಾಗಿದ್ದು, ಇದು ವಾರ್ಷಿಕ ಆಧಾರದ ಮೇಲೆ ಶೇ. 3.3ರಷ್ಟು ಬೆಳವಣಿಗೆ ಕಂಡಿದೆ.
ಪ್ರಸಕ್ತ ಹಣಕಾಸು ವರ್ಷದ ಮೊದಲ ಎರಡು ತಿಂಗಳುಗಳಾದ ಏಪ್ರಿಲ್ ಮತ್ತು ಮೇ ಅವಧಿಯಲ್ಲಿ ಜಿಎಸ್‌ಟಿ ಸಂಗ್ರಹದಲ್ಲಿ ಗಮನಾರ್ಹ ಏರಿಕೆ ದಾಖಲಾಗಿದೆ. ಈ ಅವಧಿಯಲ್ಲಿ ಒಟ್ಟು ಜಿಎಸ್‌ಟಿ ಆದಾಯ ₹4.37 ಲಕ್ಷ ಕೋಟಿಗೆ ತಲುಪಿದ್ದು, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ. 6.2ರಷ್ಟು ಹೆಚ್ಚಳ ಕಂಡಿದೆ.ಇದನ್ನು ಓದಿ –Bitcoin ಪ್ರಕರಣ: ಮೊಹಮ್ಮದ್ ನಲಪಾಡ್‌ಗೆ ಇಡಿ ಸಮನ್ಸ್
ದೇಶೀಯ ಆರ್ಥಿಕ ಚಟುವಟಿಕೆಗಳ ಚುರುಕುತನ ಹಾಗೂ ತೆರಿಗೆ ಪಾವತಿಯಲ್ಲಿ ಸುಧಾರಿತ ಅನುಸರಣೆ ಜಿಎಸ್‌ಟಿ ಸಂಗ್ರಹ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.








