ಮೈಸೂರು: ಸಚಿವ ಸಂಪುಟ ಪುನಾರಚನೆ ಮಾಡಬೇಕು. ಆದರೆ, ಹೈಕಮಾಂಡ್ ಕರೆದರೆ ಮಾತ್ರ ನಾನು ದೆಹಲಿಗೆ ಹೋಗುತ್ತೇನೆ. ನಾಳೆ 15ನೇ ತಾರೀಖು ದೆಹಲಿಗೆ ಹೋಗುತಿಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ತಮ್ಮ ಮೈಸೂರಿನ ಮನೆಯ ಮುಂಭಾಗ ಗುರುವಾರ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಹಿಜಾಬ್ ನಿಷೇಧ ಹಿಂದಕ್ಕೆ ಪಡೆದ ವಿಚಾರದಲ್ಲಿ ಬಿಜೆಪಿಯವರು ವಿರೋಧ ಮಾಡಿದ್ದರ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಹಿಜಾಬ್ ಒಂದೇ ಅಲ್ಲ, ಜನಿವಾರ, ಶಿವವಾರ, ರುದ್ರಾಕ್ಷಿ ಎಲ್ಲವನ್ನು 12ನೇ ತರಗತಿಯವರೆಗೆ ಮಾತ್ರ ಹಾಕಲು ಅವಕಾಶ ಇದೆ. ಆದರೆ, ಕೇಸರಿ ಶಾಲು ಹಾಕಿಕೊಳ್ಳಲು ಅವಕಾಶ ಇಲ್ಲ. ಆದರೆ, ಕೇಸರಿ ಪೇಟ ಹಾಕಿಕೊಳ್ಳಲು ಅವಕಾಶ ಇದೆ ಎಂದರು.
ನಮ್ಮಲ್ಲಿ ಸದ್ಯಕ್ಕೆ ಆಚರಣೆಯಲ್ಲಿ ಇರುವ ಪದ್ಧತಿಗಳನ್ನು ಅನುಸರಣೆ ಮಾಡಲು ಅವಕಾಶ ಇದೆ. ಹೊಸ ಪದ್ದತಿಗಳಿಗೆ ಅವಕಾಶವಿಲ್ಲ ಎಂದು ಹೇಳಿದ್ದಾರೆ.
ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮಿತ ಬಳಕೆಯ ಹಿನ್ನೆಲೆಯಲ್ಲಿ ಪ್ರಧಾನಿಯವರು ತಮ್ಮ ಬೆಂಗಾವಲು ವಾಹನ ಕಡಿಮೆ ಮಾಡಿರುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.ಇದನ್ನು ಓದಿ –ಸರ್ಕಾರದ ‘ರಿಯಲ್ ಎಸ್ಟೇಟ್’ ಕೆಲಸ :ಡಿಕೆಶಿ ವಿರುದ್ಧ ಹೆಚ್.ಡಿ.ಕೆ ವಾಗ್ದಾಳಿ
ರಾಜ್ಯದಲ್ಲಿ ಇದನ್ನು ಬೆಂಬಲಿಸುವ ಬಗ್ಗೆ ಮಾತನಾಡಿದ ಅವರು, ಈ ಬಗ್ಗೆ ಬೇರೆ ರಾಜ್ಯಗಳಲ್ಲಿನ ಪ್ರಕ್ರಿಯೆಗಳನ್ನ ಪರಿಶೀಲನೆ ಮಾಡುತ್ತೇವೆ. ಆದರೆ, ಪ್ರಧಾನಿಯವರ ಮಿತ ಬಳಕೆ ಹೇಳಿಕೆ ಸರಿಯಲ್ಲ. ಇದೊಂದು ತಾತ್ಕಾಲಿಕ ಪರಿಹಾರ. ಸದ್ಯ ಈ ಪರಿಸ್ಥಿತಿಯಲ್ಲಿ ಪ್ರಧಾನಿ ಬೇರೆ ದೇಶಗಳ ಜೊತೆ ಮಾತನಾಡಬೇಕು ಎಂದಿದ್ದಾರೆ.








