- ಬೆಂಗಳೂರಿನಲ್ಲಿ 3,198 ರೂ.ಗೆ ತಲುಪಿದ ಬೆಲೆ
ಬೆಂಗಳೂರು: ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ದರವನ್ನು ಕೇಂದ್ರ ಸರ್ಕಾರ ಮತ್ತೊಮ್ಮೆ ಹೆಚ್ಚಿಸಿದೆ. ಪರಿಷ್ಕೃತ ದರಗಳು ಇಂದಿನಿಂದಲೇ ಜಾರಿಗೆ ಬಂದಿದ್ದು, ವ್ಯಾಪಾರ ವಲಯದ ಮೇಲೆ ಹೆಚ್ಚುವರಿ ಹೊರೆ ಬಿದ್ದಿದೆ.
ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ 42 ರೂ. ಏರಿಕೆಯಾಗಿ 3,113.50 ರೂ.ಗಳಿಗೆ ತಲುಪಿದೆ. ಬೆಂಗಳೂರಿನಲ್ಲಿ 46 ರೂ. ಹೆಚ್ಚಳವಾಗಿದ್ದು, ಪ್ರತಿ ಸಿಲಿಂಡರ್ ದರ 3,198 ರೂ. ಆಗಿದೆ. ಕೋಲ್ಕತ್ತಾದಲ್ಲಿ 53.50 ರೂ. ಏರಿಕೆಯೊಂದಿಗೆ ಸಿಲಿಂಡರ್ ಬೆಲೆ 3,255.50 ರೂ.ಗಳಿಗೆ ತಲುಪಿದೆ.
ಇದರ ಜೊತೆಗೆ 5 ಕೆಜಿ ಫ್ರೀ ಟ್ರೇಡ್ ಎಲ್‌ಪಿಜಿ ಸಿಲಿಂಡರ್ ದರವೂ 11 ರೂ. ಹೆಚ್ಚಳಗೊಂಡಿದ್ದು, ಹೊಸ ದರ 821.50 ರೂ. ಆಗಿದೆ. ಆದರೆ ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಕಳೆದ ತಿಂಗಳಲ್ಲೇ ಎರಡನೇ ಬಾರಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರ ಏರಿಕೆಯಾಗಿದ್ದು, ಮೇ 1ರಂದು ಕೂಡ ಸರ್ಕಾರ ಬೆಲೆ ಹೆಚ್ಚಿಸಿತ್ತು. ತೈಲ ಮಾರುಕಟ್ಟೆ ಕಂಪನಿಗಳು ನಷ್ಟ ಅನುಭವಿಸುತ್ತಿರುವ ಕಾರಣ ಬೆಲೆ ಪರಿಷ್ಕರಣೆ ಅನಿವಾರ್ಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಇದನ್ನು ಓದಿ –RCB ಸತತ ಎರಡನೇ ಬಾರಿ IPL ಚಾಂಪಿಯನ್ಸ್
ಇದೇ ವೇಳೆ ದೇಶದ ಇಂಧನ ಭದ್ರತೆಯನ್ನು ಬಲಪಡಿಸಲು ಕಾರ್ಯತಂತ್ರದ ಎಲ್‌ಪಿಜಿ ಸಂಗ್ರಹ ವ್ಯವಸ್ಥೆ ರೂಪಿಸುವ ಕಾರ್ಯ ನಡೆಯುತ್ತಿದೆ. ತೈಲ ಕಂಪನಿಗಳು ಕನಿಷ್ಠ 30 ದಿನಗಳ ಎಲ್‌ಪಿಜಿ ಸಂಗ್ರಹವನ್ನು ಕಾಯ್ದುಕೊಳ್ಳುವಂತೆ ಸೂಚಿಸಲಾಗಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ತಿಳಿಸಿದೆ.








