ಮೈಸೂರು: ಮಾನಸಿಕ ಖಿನ್ನತೆ ಹಿನ್ನಲೆ ದೇವರಾಜ ಪೊಲೀಸ್ ಠಾಣೆ ಮುಖ್ಯಪೇದೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಮೈಸೂರಿನ ಪೊಲೀಸ್ ಲೇಔಟ್ ನಲ್ಲಿ ನಡೆದಿದೆ.
ಶ್ಯಾಂಪ್ರಸಾದ್ (46) ಮೃತ ದುರ್ದೈವಿ. ಪೊಲೀಸ್ ಲೇಔಟ್ ನಲ್ಲಿ ಸ್ವಂತ ಮನೆ ಹೊಂದಿರುವ ಶ್ಯಾಂಪ್ರಸಾದ್ ದೇವರಾಜ ಪೊಲೀಸ್ ಠಾಣೆಯಲ್ಲಿ ಕಳೆದ 5 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದರು.
ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣಿಗೆ ಶರಣಾಗಿದ್ದಾರೆ. ಬೆಳಿಗ್ಗೆ ಶುಭೋದಯ ಕೆಲಸಕ್ಕೆ ಶ್ಯಾಂಪ್ರಸಾದ್ ರನ್ನ ನಿಯೋಜಿಸಲಾಗಿತ್ತು.ಇದನ್ನು ಓದಿ – ಗ್ಯಾರಂಟಿ ಯೋಜನೆಗಳು ಕೈಹಿಡಿದವು; ಕೇರಳದಲ್ಲಿ ಅಧಿಕಾರ ನಿರೀಕ್ಷಿತ: ಡಿ.ಕೆ. ಶಿ
ಕರ್ತವ್ಯಕ್ಕೆ ಹಾಜರಾಗದ ಹಿನ್ನಲೆ ಪರಿಶೀಲನೆ ನಡೆಸಿದಾಗ ಆತ್ಮಹತ್ಯೆಗೆ ಶರಣಾಗಿರುವ ಮಾಹಿತಿ ತಿಳಿದು ಬಂದಿದೆ. ನಜರಬಾದ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.








