By using this site, you agree to the Privacy Policy and Terms of Use.
Accept
VarthamanVarthamanVarthaman
Notification Show More
Font ResizerAa
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
    ArticlesShow More
    ಕೋಪವೆಂಬುದನರ್ಥ
    July 2, 2026
    ಉಡುಗೊರೆ ಹೊರೆಯಾಗದಿರಲಿ
    May 16, 2026
    ಅಸಹಾಯಕತೆಗೆ ಸ್ಪಂದಿಸುವ ಕನ್ನಡಿಗರ ಸೌಜನ್ಯಕ್ಕೆ ಸಾಟಿಯುಂಟೇ……?
    May 16, 2026
    ” ರಿಜೆಕ್ಷನ್ ಟು ರೆವಲ್ಯೂಷನ್ “
    May 5, 2026
    “ಸೂರ್ಯನಿಗೆ ಸವಾಲೆಸೆದವರು”
    May 3, 2026
  • Sports
  • National
  • International
  • Crime
Reading: 8 ಜಿಲ್ಲೆಗಳ ಜಿ.ಪಂ ಕ್ಷೇತ್ರ ಮರು ವಿಂಗಡಣೆ
Share
Font ResizerAa
VarthamanVarthaman
  • Home
  • Karnataka
  • Articles
  • Sports
  • National
  • International
  • Crime
Search
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
  • Sports
  • National
  • International
  • Crime
Follow US
Varthaman > Karnataka – Latest Breaking News > Karnataka > Bengaluru > 8 ಜಿಲ್ಲೆಗಳ ಜಿ.ಪಂ ಕ್ಷೇತ್ರ ಮರು ವಿಂಗಡಣೆ
BengaluruKarnatakaMain News

8 ಜಿಲ್ಲೆಗಳ ಜಿ.ಪಂ ಕ್ಷೇತ್ರ ಮರು ವಿಂಗಡಣೆ

Team Varthaman
Last updated: April 27, 2026 10:05 AM
Team Varthaman
Published: April 27, 2026
Share
SHARE
  • ರಾಜ್ಯ ಸರ್ಕಾರ ಅಧಿಸೂಚನೆ

ಬೆಂಗಳೂರು: ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಬೆಂಗಳೂರು ದಕ್ಷಿಣ, ಹಾಸನ, ಉತ್ತರ ಕನ್ನಡ, ಯಾದಗಿರಿ, ಬೀದರ್ ಹಾಗೂ ಕೊಪ್ಪಳ ಸೇರಿದಂತೆ ಎಂಟು ಜಿಲ್ಲೆಗಳ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಗಡಿ ಗುರುತು ಹಾಗೂ ಸದಸ್ಯರ ಸಂಖ್ಯೆ ನಿಗದಿಪಡಿಸಿ ರಾಜ್ಯ ಸರ್ಕಾರ ಹೊಸ ಅಧಿಸೂಚನೆ ಹೊರಡಿಸಿದೆ.

ಹಿಂದೆ ಹೊರಡಿಸಿದ್ದ ಅಧಿಸೂಚನೆಯ ಬಳಿಕ ನಡೆದ ಆಡಳಿತಾತ್ಮಕ ಬದಲಾವಣೆಗಳು ಹಾಗೂ ಕೆಲವು ಗ್ರಾಮೀಣ ಪ್ರದೇಶಗಳನ್ನು ನಗರ ಸ್ಥಳೀಯ ಸಂಸ್ಥೆಗಳಾಗಿ ಪರಿವರ್ತಿಸಿರುವ ಹಿನ್ನೆಲೆ ಕ್ಷೇತ್ರಗಳ ಮರು ವಿಂಗಡಣೆ ಮಾಡಲಾಗಿದೆ.

ಕಂದಾಯ ಇಲಾಖೆಯು ಮಾಗಡಿ ಮತ್ತು ನೆಲಮಂಗಲ ತಾಲ್ಲೂಕುಗಳ ಭೌಗೋಳಿಕ ಗಡಿಗಳನ್ನು ಪುನರ್ ರಚಿಸಿದ್ದರಿಂದ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಗಡಿಗಳನ್ನು ಮತ್ತೆ ಪರಿಷ್ಕರಿಸುವುದು ಅನಿವಾರ್ಯವಾಗಿದೆ.

Join WhatsApp Group

ಭೌಗೋಳಿಕ ವ್ಯಾಪ್ತಿಗೆ ಅನುಗುಣವಾಗಿ ಕ್ಷೇತ್ರಗಳ ಗಡಿಗಳನ್ನು ಮರುನಿಗದಿಪಡಿಸಲಾಗಿದ್ದು, ಹಳೆಯ ಅಧಿಸೂಚನೆಗಳನ್ನು ಹಿಂಪಡೆದು ಹೊಸ ಕ್ರಮಸಂಖ್ಯೆಗಳೊಂದಿಗೆ ಕ್ಷೇತ್ರಗಳ ಹೆಸರು ಹಾಗೂ ವ್ಯಾಪ್ತಿಯನ್ನು ಪ್ರಕಟಿಸಲಾಗಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಒಟ್ಟು 28 ಏಕ ಸದಸ್ಯ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳನ್ನು ಗುರುತಿಸಲಾಗಿದೆ. ಇದರಲ್ಲಿ ಹೊಸಕೋಟೆ 8, ದೇವನಹಳ್ಳಿ 7, ದೊಡ್ಡಬಳ್ಳಾಪುರ 7 ಹಾಗೂ ನೆಲಮಂಗಲ 6 ಕ್ಷೇತ್ರಗಳು ಸೇರಿವೆ.

ಮೇ 5ರಂದು ಅದಾಲತ್

ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗವು ಗ್ರಾಮ ಪಂಚಾಯಿತಿಗಳ ಚುನಾಯಿತ ಸದಸ್ಯ ಸ್ಥಾನಗಳ ಕರಡು ಪ್ರಕಟಣೆಗೆ ಆಕ್ಷೇಪಣೆ ಸಲ್ಲಿಸುವ ಅವಧಿಯನ್ನು ಮೇ 2ರ ಸಂಜೆ 5.30ರವರೆಗೆ ವಿಸ್ತರಿಸಿದೆ.

ರಾಜ್ಯದ 31 ಜಿಲ್ಲೆಗಳ ಗ್ರಾಮ ಪಂಚಾಯಿತಿಗಳ ಸದಸ್ಯರ ಸಂಖ್ಯೆಗೆ ಸಂಬಂಧಿಸಿದ ಆಕ್ಷೇಪಣೆ ಹಾಗೂ ಅಹವಾಲುಗಳ ಪರಿಶೀಲನೆಗಾಗಿ ನಿಗದಿಯಾಗಿದ್ದ ಅದಾಲತ್ತನ್ನು ಏಪ್ರಿಲ್ 27ರಿಂದ ಮೇ 5ಕ್ಕೆ ಮುಂದೂಡಲಾಗಿದೆ.

ಅಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕಚೇರಿಯಲ್ಲಿ ಅದಾಲತ್ ನಡೆಯಲಿದೆ.

ಬೆಳಿಗ್ಗೆ 11ರಿಂದ 1.30ರವರೆಗೆ ಕಲಬುರಗಿ, ಯಾದಗಿರಿ, ಬೀದರ್, ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯನಗರ, ಧಾರವಾಡ, ಬೆಳಗಾವಿ, ಬಾಗಲಕೋಟೆ, ಗದಗ, ವಿಜಯಪುರ, ಹಾವೇರಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ವಿಚಾರಣೆ ನಡೆಯಲಿದೆ.ಇದನ್ನು ಓದಿ –ರಾಜ್ಯದ ಎಲ್ಲಾ ಶಾಲೆಗಳಲ್ಲಿ ಪತ್ರಿಕೆ ಓದುವುದು ಕಡ್ಡಾಯ

ಮಧ್ಯಾಹ್ನ 2.30ರಿಂದ 5ರವರೆಗೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಬೆಂಗಳೂರು ದಕ್ಷಿಣ, ತುಮಕೂರು, ದಾವಣಗೆರೆ, ಕೋಲಾರ, ಚಿತ್ರದುರ್ಗ, ಶಿವಮೊಗ್ಗ, ಕೊಡಗು, ಚಾಮರಾಜನಗರ, ಮೈಸೂರು, ಮಂಡ್ಯ, ಹಾಸನ, ದಕ್ಷಿಣ ಕನ್ನಡ, ಚಿಕ್ಕಮಗಳೂರು ಹಾಗೂ ಉಡುಪಿ ಜಿಲ್ಲೆಗಳ ಅದಾಲತ್ ನಡೆಯಲಿದೆ.

  • ಜೆನೆರಿಕ್ ಔಷಧಗಳ ಮೇಲೆ ಟ್ರಂಪ್ ಟ್ಯಾರಿಫ್; ಭಾರತದ ಫಾರ್ಮಾ ಉದ್ಯಮಕ್ಕೆ ಆತಂಕ
    by Team Varthaman
    July 22, 2026
  • ಸಚಿವ ಸಂಪುಟ ವಿಸ್ತರಣೆ ಹೈ ತೀರ್ಮಾನ: ಡಿ.ಕೆ. ಶಿವಕುಮಾರ್
    by Team Varthaman
    July 22, 2026
  • ಅತ್ಯಾಚಾರ ಪ್ರಕರಣ: ಕ್ರಿಕೆಟಿಗ ಅಭಿಷೇಕ್ ಪೊರೆಲ್ ಬಂಧನಕ್ಕೆ ಆದೇಶ
    by Team Varthaman
    July 22, 2026
  • ಮನೆ ಬಾಗಿಲಿಗೆ ಶಾಶ್ವತ ನಿವಾಸ, ಜಾತಿ ಪತ್ರ ಸೇವೆ
    by Team Varthaman
    July 20, 2026
  • ಇಂದು ಹೊಳೆನರಸೀಪುರದಲ್ಲಿ ಚೆನ್ನಮ್ಮ ದೇವೇಗೌಡರ ಅಂತಿಮ ಸಂಸ್ಕಾರ
    by Team Varthaman
    July 20, 2026
ಶ್ರೀರಂಗಪಟ್ಟಣ-ಕುಶಾಲನಗರ ಹೆದ್ದಾರಿಗೆ ಸರ್ವೀಸ್ ರಸ್ತೆಯ ಭರವಸೆ
ಸಚಿವರಿಗೆ ಡಿನ್ನರ್ ಪಾರ್ಟಿ: ಮಾ. 16ರಂದು ಸಿಎಂ ಆಹ್ವಾನ
ಕಬಿನಿ ಜಲಾಶಯದಿಂದ 25 ಸಾವಿರ ಕ್ಯುಸೆಕ್‌ ನೀರು ಬಿಡುಗಡೆ
ಕಿತ್ತು ಬಂದ ಅರಮನೆ ವರಾಹ ಪ್ರವೇಶ ಛಾವಣಿ
ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ
TAGGED:breakingnewsKarnataka GovtlatestnewsReclassificationzilla Panchayatಜಿಲ್ಲಾ ಪಂಚಾಯಿತಿ
Share This Article
Facebook Email Print
Leave a Comment

Leave a Reply Cancel reply

Your email address will not be published. Required fields are marked *

Follow US

Find US on Social Medias
FacebookLike
XFollow
YoutubeSubscribe
TelegramFollow

Weekly Newsletter

Subscribe to our newsletter to get our newest articles instantly!
[mc4wp_form]
Popular News
Articles

ತುಪ್ಪ ಎಂಬ ಮಹಾ ಔಷಧಿ

Varthaman_Admin
Varthaman_Admin
January 3, 2025
ಇರಾನ್ vs ಇಸ್ರೇಲ್: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯ ಆತಂಕ
ಬೆಂಗಳೂರು ಸ್ಫೋಟದ ಪ್ರಮುಖ ಆರೋಪಿ ಅರೆಸ್ಟ್
ಬೆಂಗಳೂರು : ಆಗಸ್ಟ್ 1ರಿಂದ ಆಟೋ ದರ ಏರಿಕೆ
ಗ್ಯಾಸ್ ಕೊರತೆ: ‘ಹೈ’ ಮೆಟ್ಟಿಲೇರಿದ ಬೆಂಗಳೂರು ಹೋಟೆಲ್ ಅಸೋಸಿಯೇಷನ್
- Advertisement -
Ad imageAd image
Global Coronavirus Cases

Confirmed

0

Death

0

More Information:Covid-19 Statistics

Categories

  • Articles
  • Sports
  • Latest News
  • Karnataka News

About US

Since its inception in 1957, Varthamana has stood tall as one of the most trusted and respected Kannada daily newspapers. With deep roots in the rich cultural landscape of Karnataka, Varthamana continues to be the voice of the people, championing truth, transparency, and the values that define the region. Established with a strong commitment to ethical journalism, our newspaper has consistently provided comprehensive coverage, authentic news, and insightful editorials for over six decades. Today, under the dynamic leadership of Editor K. N. Ravi, Varthamana shines even brighter, blending a proud heritage with a modern outlook to meet the evolving needs of readers across the state. Our presence in the digital space, through Varthamana Digital, ensures that our trusted news and regional stories reach a wider audience faster and with greater impact.

Contact Us

© Varthaman. All Rights Reserved.
Welcome Back!

Sign in to your account

Username or Email Address
Password

Lost your password?