By using this site, you agree to the Privacy Policy and Terms of Use.
Accept
VarthamanVarthamanVarthaman
Notification Show More
Font ResizerAa
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
    ArticlesShow More
    ” ರಿಜೆಕ್ಷನ್ ಟು ರೆವಲ್ಯೂಷನ್ “
    May 5, 2026
    “ಸೂರ್ಯನಿಗೆ ಸವಾಲೆಸೆದವರು”
    May 3, 2026
    ಸ್ವಭಾವದ ಸ್ವರೂಪ
    May 3, 2026
    “ರೈಟ್ ಟು ಡ್ರೈ”
    May 3, 2026
    ಸುಡುವ ಸೂರ್ಯನಿಗೊಂದು ಪತ್ರ
    May 3, 2026
  • Sports
  • National
  • International
  • Crime
Reading: IPL 2025 – ಆರ್‌ಸಿಬಿಗೆ ಶುಭಾರಂಭ, ಹಾಲಿ ಚಾಂಪಿಯನ್‌ ಕೆಕೆಆರ್‌ಗೆ ಸೋಲು!
Share
Font ResizerAa
VarthamanVarthaman
  • Home
  • Karnataka
  • Articles
  • Sports
  • National
  • International
  • Crime
Search
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
  • Sports
  • National
  • International
  • Crime
Follow US
Varthaman > Karnataka – Latest Breaking News > Sports > IPL 2025 > IPL 2025 – ಆರ್‌ಸಿಬಿಗೆ ಶುಭಾರಂಭ, ಹಾಲಿ ಚಾಂಪಿಯನ್‌ ಕೆಕೆಆರ್‌ಗೆ ಸೋಲು!
IPL 2025SportsTrending

IPL 2025 – ಆರ್‌ಸಿಬಿಗೆ ಶುಭಾರಂಭ, ಹಾಲಿ ಚಾಂಪಿಯನ್‌ ಕೆಕೆಆರ್‌ಗೆ ಸೋಲು!

Team Varthaman
Last updated: March 31, 2025 1:31 PM
Team Varthaman
Published: March 22, 2025
Share
SHARE

ಕೋಲ್ಕತಾ: ಹಾಲಿ ಚಾಂಪಿಯನ್‌ ಕೆಕೆಆರ್‌ಗೆ 7 ವಿಕೆಟ್‌ ಸೋಲುಣಿಸಿದ ಆರ್‌ಸಿಬಿ 18ನೇ IPL ಪಂದ್ಯಾವಳಿಯನ್ನು ಅಧಿಕಾರಯುತವಾಗಿ ಆರಂಭಿಸಿದೆ. ರಜತ್‌ ಪಾಟಿದಾರ್‌ ನಾಯಕತ್ವಕ್ಕೂ ಗೆಲುವಿನ ಆರಂಭ ಲಭಿಸಿತು.

ಶನಿವಾರ ಈಡನ್‌ ಗಾರ್ಡನ್ಸ್‌ನಲ್ಲಿ ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಕೆಕೆಆರ್‌ 8 ವಿಕೆಟಿಗೆ 174 ರನ್‌ ಗಳಿಸಿದರೆ, ಆರ್‌ಸಿಬಿ 16.2 ಓವರ್‌ಗಳಲ್ಲಿ 3 ವಿಕೆಟಿಗೆ 177 ರನ್‌ ಬಾರಿಸಿ ಜಯಭೇರಿ ಮೊಳಗಿಸಿತು.

Contents
  • ಕೋಲ್ಕತಾ: ಹಾಲಿ ಚಾಂಪಿಯನ್‌ ಕೆಕೆಆರ್‌ಗೆ 7 ವಿಕೆಟ್‌ ಸೋಲುಣಿಸಿದ ಆರ್‌ಸಿಬಿ 18ನೇ IPL ಪಂದ್ಯಾವಳಿಯನ್ನು ಅಧಿಕಾರಯುತವಾಗಿ ಆರಂಭಿಸಿದೆ. ರಜತ್‌ ಪಾಟಿದಾರ್‌ ನಾಯಕತ್ವಕ್ಕೂ ಗೆಲುವಿನ ಆರಂಭ ಲಭಿಸಿತು.
  • ರಹಾನೆ ವೇಗದ ಅರ್ಧ ಶತಕ

ಆರ್‌ಸಿಬಿಗೆ ಸಾಲ್ಟ್-ಕೊಹ್ಲಿ ಪ್ರಚಂಡ ಆರಂಭ ಒದಗಿಸಿದರು. ಇಬ್ಬರಿಂದಲೂ ಅರ್ಧ ಶತಕ ದಾಖಲಾಯಿತು. ಸಾಲ್ಟ್ ಮೊದಲ ಎಸೆತವನ್ನೇ ಬೌಂಡರಿಗೆ ಬಡಿದಟ್ಟಿ ಸಿಡಿತಕ್ಕೆ ನಾಂದಿ ಹಾಡಿದರು.

ಪವರ್‌ ಪ್ಲೇಯಲ್ಲಿ ಬರೋಬ್ಬರಿ 80 ರನ್‌ ಹರಿದು ಬಂತು. ಇದು ಮೊದಲ 6 ಓವರ್‌ಗಳಲ್ಲಿ ಆರ್‌ಸಿಬಿ ದಾಖಲಿಸಿದ 2ನೇ ಅತ್ಯಧಿಕ ಗಳಿಕೆ. ಸಾಲ್ಟ್ ಆರ್‌ಸಿಬಿ ಪರ ಆಡಿದ ಪದಾರ್ಪಣ ಪಂದ್ಯದಲ್ಲೇ ಅರ್ಧ ಶತಕ ಬಾರಿಸಿ ಮಿಂಚಿದರು. ಮೊದಲ ವಿಕೆಟಿಗೆ 8.3 ಓವರ್‌ಗಳಿಂದ 95 ರನ್‌ ಒಟ್ಟುಗೂಡಿತು. ಇದರಲ್ಲಿ ಸಾಲ್ಟ್ ಕೊಡುಗೆ 31 ಎಸೆತಗಳಿಂದ 56 ರನ್‌ (9 ಬೌಂಡರಿ, 2 ಸಿಕ್ಸರ್‌). 10 ಓವರ್‌ಗಳಲ್ಲಿ ತಂಡದ ಸ್ಕೋರ್‌ 104ಕ್ಕೆ ಏರಿತು.

ಈ ನಡುವೆ ಕೊಹ್ಲಿ ಕೆಕೆಆರ್‌ ವಿರುದ್ಧ ಸಾವಿರ ರನ್‌ ಪೂರ್ತಿಗೊಳಿಸಿದರು. ಕೊಹ್ಲಿ ಕೊಡುಗೆ ಅಜೇಯ 59 ರನ್‌ (36 ಎಸೆತ, 4 ಬೌಂಡರಿ, 3 ಸಿಕ್ಸರ್‌). ನಾಯಕ ರಜತ್‌ ಪಾಟಿದಾರ್‌ ರಭಸದ ಬ್ಯಾಟಿಂಗ್‌ ಮೂಲಕ 34 ರನ್‌ ಬಾರಿಸಿದರು (16 ಎಸೆತ, 5 ಬೌಂಡರಿ, 1 ಸಿಕ್ಸರ್‌).

ರಹಾನೆ ವೇಗದ ಅರ್ಧ ಶತಕ

ಕೆಕೆಆರ್‌ಗೆ ವೇಗಿ ಜೋಶ್‌ ಹೇಝಲ್‌ವುಡ್‌ ಆರಂಭಿಕ ಓವರ್‌ನಲ್ಲೇ ಆಘಾತವಿಕ್ಕಿದರು. ಅಪಾಯಕಾರಿ ಆರಂಭಕಾರ ಕ್ವಿಂಟನ್‌ ಡಿ ಕಾಕ್‌ (4) ಅವರನ್ನು 5ನೇ ಎಸೆತದಲ್ಲೇ ಪೆವಿಲಿಯನ್‌ಗೆ ರವಾನಿಸಿದರು. ಇದಕ್ಕೂ ಮುನ್ನ ಅವರು ಈ ಐಪಿಎಲ್‌ನ ಬೌಂಡರಿ ಖಾತೆ ತೆರೆದಿದ್ದರು. ದ್ವಿತೀಯ ವಿಕೆಟಿಗೆ ಜತೆಗೂಡಿದ ಸುನೀಲ್‌ ನಾರಾಯಣ್‌ ಮತ್ತು ಇದೇ ಮೊದಲ ಸಲ ಕೆಕೆಆರ್‌ ತಂಡವನ್ನು ಮುನ್ನಡೆಸುತ್ತಿರುವ ಅಜಿಂಕ್ಯ ರಹಾನೆ ಸೇರಿಕೊಂಡು ಬಿರುಸಿನ ಆಟಕ್ಕೆ ಮುಂದಾದರು. ಪವರ್‌ ಪ್ಲೇಯಲ್ಲಿ 65 ರನ್‌ ಬಂತು. ಈ ಜೋಡಿಯಿಂದ ಕೇವಲ 55 ಎಸೆತಗಳಿಂದ 103 ರನ್‌ ಒಟ್ಟುಗೂಡಿತು. ಅಂತಿಮವಾಗಿ 20 ಓವರ್‌ಗಳಲ್ಲಿ ಎಂಟು ವಿಕೆಟ್‌ ನಷ್ಟಕ್ಕೆ 174 ರನ್‌ಗಳಿಸಿತು.

ಆರ್‌ಸಿಬಿ ಪರ ಕೃಣಾಲ್‌ ಪಾಂಡ್ಯ 29ಕ್ಕೆ 3 ವಿಕೆಟ್‌ ಕೆಡವಿ ಹೆಚ್ಚಿನ ಯಶಸ್ಸು ಕಂಡರು. ಹೇಝಲ್‌ವುಡ್‌ ಪಂದ್ಯದ ಮೊದಲ ಹಾಗೂ ಅಂತಿಮ ಓವರ್‌ಗಳಲ್ಲಿ ವಿಕೆಟ್‌ ಕೆಡವಿದರು.

  • ದೌರ್ಜನ್ಯ ಆರೋಪ: ವಚನಾನಂದ ಶ್ರೀ ವಿರುದ್ಧ ಪೋಕ್ಸೊ ಪ್ರಕರಣ
    by Team Varthaman
    May 13, 2026
    ದಾವಣಗೆರೆ: ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದಲ್ಲಿ ಶಿಕ್ಷಣ ಪಡೆಯುತ್ತಿದ್ದ ಬಾಲಕನ ಮೇಲೆ… Read more: ದೌರ್ಜನ್ಯ ಆರೋಪ: ವಚನಾನಂದ ಶ್ರೀ ವಿರುದ್ಧ ಪೋಕ್ಸೊ ಪ್ರಕರಣ
  • ಹೃದಯಾಘಾತದಿಂದ ನಟ ದಿಲೀಪ್ ರಾಜ್ ನಿಧನ
    by Team Varthaman
    May 13, 2026
    ಬೆಂಗಳೂರು: ದಿಲೀಪ್ ರಾಜ್ ಅವರು ಇಂದು ಬೆಳಗಿನ ಜಾವ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ… Read more: ಹೃದಯಾಘಾತದಿಂದ ನಟ ದಿಲೀಪ್ ರಾಜ್ ನಿಧನ
  • ರಾಜ್ಯದಲ್ಲಿ ಜಲಕಂಟಕ :ಕೋಡಿ ಶ್ರೀ ಭವಿಷ್ಯ
    by Team Varthaman
    May 12, 2026
    ಶಿವಮೊಗ್ಗ: ರಾಜ್ಯದಲ್ಲಿ ಆಕಾಲಿಕ ಮಳೆಯಿಂದ ಜಲಕಂಟಕ ಎದುರಾಗಲಿದೆ ಎಂದು ಕೋಡಿಮಠದ ಶಿವಾನಂದ ಶಿವಯೋಗಿ… Read more: ರಾಜ್ಯದಲ್ಲಿ ಜಲಕಂಟಕ :ಕೋಡಿ ಶ್ರೀ ಭವಿಷ್ಯ
  • ಕೆಪಿಎಸ್‌ಸಿ ಹಾಳಾಗಲು ಕಾಂಗ್ರೆಸ್ ಕಾರಣ – ಹೆಚ್.ಡಿ.ಕೆ
    by Team Varthaman
    May 12, 2026
    ಬೆಂಗಳೂರು: ರಾಜ್ಯದಲ್ಲಿ ಕೆಪಿಎಸ್‌ಸಿ ಹಾಳಾಗಲು ಕಾಂಗ್ರೆಸ್ ಕಾರಣ. ಇವರ ಅವಧಿಯಲ್ಲಿ ಎಷ್ಟು ಬಾರಿ… Read more: ಕೆಪಿಎಸ್‌ಸಿ ಹಾಳಾಗಲು ಕಾಂಗ್ರೆಸ್ ಕಾರಣ – ಹೆಚ್.ಡಿ.ಕೆ
  • ಅಕ್ರಮ ಆರೋಪ: NEET ಪರೀಕ್ಷೆ ರದ್ದು
    by Team Varthaman
    May 12, 2026
    ನವದೆಹಲಿ: ವೈದ್ಯಕೀಯ ಶಿಕ್ಷಣ ಪ್ರವೇಶಾತಿಗೆ ದೇಶಾದ್ಯಂತ ನಡೆಸಿದ್ದ ನೀಟ್ ಯುಜಿ ಪರೀಕ್ಷೆಯನ್ನು ಅಕ್ರಮದ… Read more: ಅಕ್ರಮ ಆರೋಪ: NEET ಪರೀಕ್ಷೆ ರದ್ದು

ipl

ಶಾಲಿನಿ ರಜನೀಶ್ ಬಗ್ಗೆ ಅಸಭ್ಯ ಹೇಳಿಕೆ: MLC ರವಿಕುಮಾರ್ ವಿರುದ್ಧ FIR ದಾಖಲು
ಏ.೧೮ಕ್ಕೆ ಮೌನ ಪ್ರತಿಭಟನೆಗೆ ಪರಿಸರ ಬಳಗ ನಿರ್ಧಾರ
ಪಹಲ್ಗಾಮ್ ದಾಳಿಗೆ ತಕ್ಕ ಪ್ರತೀಕಾರಕ್ಕೆ ಸೇನೆಗೆ ಸಂಪೂರ್ಣ ಹಸಿರು ನಿಶಾನೆ: ಪ್ರಧಾನಿ ಮೋದಿ
ಖಾಸಗಿ ಶಾಲೆ ದಾಖಲಾತಿಗೆ ಹೊಸ ಸರ್ಕಾರಿ ನಿಯಮಗಳು
20 ಗಂಟೆಗಳ ವಿಚಾರಣೆ ಬಳಿಕ ಸ್ನೇಹಮಯಿ ಕೃಷ್ಣ ಬಿಡುಗಡೆ
Share This Article
Facebook Email Print
Leave a Comment

Leave a Reply Cancel reply

Your email address will not be published. Required fields are marked *

Follow US

Find US on Social Medias
FacebookLike
XFollow
YoutubeSubscribe
TelegramFollow

Weekly Newsletter

Subscribe to our newsletter to get our newest articles instantly!
[mc4wp_form]
Popular News
Main NewsTrending

RCBಗೆ ರೋಚಕ ಜಯ, 18 ವರ್ಷಗಳ ವನವಾಸಕ್ಕೆ ಅಂತ್ಯ : ಮೊದಲ ಟ್ರೋಫಿ ಎತ್ತಿಹಿಡಿದ ವಿರಾಟ್

Team Varthaman
Team Varthaman
June 3, 2025
ಇಂದಿನಿಂದ 5 ದಿನಗಳ ಕಾವೇರಿ ಆರತಿ ಆರಂಭ
ಯುದ್ಧ ನೌಕೆಗಳ ನಿರ್ಮಾಣ ಈಗ ಭಾರತದಲ್ಲೇ: ರಾಜನಾಥ್ ಸಿಂಗ್ ಘೋಷಣೆ
ಭಾರತಕ್ಕೆ ಶೇ 25ರಷ್ಟು ಸುಂಕ ವಿಧಿಸಿದ ಅಮೆರಿಕ
ಶಿವಾಜಿ ಜಯಂತಿ ಗಲಾಟೆ: 8 ಮಂದಿ ಬಂಧನ
- Advertisement -
Ad imageAd image
Global Coronavirus Cases

Confirmed

0

Death

0

More Information:Covid-19 Statistics

Categories

  • Articles
  • Sports
  • Latest News
  • Karnataka News

About US

Since its inception in 1957, Varthamana has stood tall as one of the most trusted and respected Kannada daily newspapers. With deep roots in the rich cultural landscape of Karnataka, Varthamana continues to be the voice of the people, championing truth, transparency, and the values that define the region. Established with a strong commitment to ethical journalism, our newspaper has consistently provided comprehensive coverage, authentic news, and insightful editorials for over six decades. Today, under the dynamic leadership of Editor K. N. Ravi, Varthamana shines even brighter, blending a proud heritage with a modern outlook to meet the evolving needs of readers across the state. Our presence in the digital space, through Varthamana Digital, ensures that our trusted news and regional stories reach a wider audience faster and with greater impact.

Contact Us

© Varthaman. All Rights Reserved.
Welcome Back!

Sign in to your account

Username or Email Address
Password

Lost your password?