ಬೆಂಗಳೂರು: ರಾಜ್ಯದಲ್ಲಿ ಮುಂದಿನ ಐದು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ 6 ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಿದೆ. ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ ಸಂಭವಿಸಿದ ಕಾರಣ ಮಳೆ ಚುರುಕಾಗಿದ್ದು, ಮೇ 30ರವರೆಗೆ ಮಳೆಯಾಗುವ ಸಾಧ್ಯತೆ ಇದೆ.
ರೆಡ್ ಅಲರ್ಟ್ ಘೋಷಿತ ಜಿಲ್ಲೆಗಳು:
- ಉಡುಪಿ
- ಉತ್ತರ ಕನ್ನಡ
- ದಕ್ಷಿಣ ಕನ್ನಡ
- ಶಿವಮೊಗ್ಗ
- ಚಿಕ್ಕಮಗಳೂರು
- ಕೊಡಗು
ಈ ಜಿಲ್ಲೆಗಳಲ್ಲಿ ಬಹುಮಟ್ಟಿಗೆ ಭಾರೀ ಮಳೆ ಸುರಿಯುವ ಸಾಧ್ಯತೆ ಇದ್ದು, ಜನರು ಎಚ್ಚರಿಕೆಯಿಂದ ಇರಬೇಕೆಂದು ಹವಾಮಾನ ಇಲಾಖೆ ಸೂಚಿಸಿದೆ.
ಆರೆಂಜ್ ಅಲರ್ಟ್ ಘೋಷಿತ ಜಿಲ್ಲೆಗಳು:
- ಬೀದರ್
- ಕಲಬುರಗಿ
- ಯಾದಗಿರಿ
- ವಿಜಯಪುರ
- ಬೆಳಗಾವಿ
ಇಂದಿನ ಭಾರಿ ಮಳೆಯ ಅಂಕಿ-ಅಂಶಗಳು:
- ವಿರಾಜಪೇಟೆಯಲ್ಲಿ 27 ಸೆಂ.ಮೀ ಮಳೆ ದಾಖಲಾಗಿದೆ
- ಬಾಗಮಂಡಲದಲ್ಲಿ 23 ಸೆಂ.ಮೀ ಮಳೆ
- ಮುಲ್ಕಿಯಲ್ಲಿ 20 ಸೆಂ.ಮೀ ಮಳೆ
ಇದನ್ನು ಓದಿ –ಧಾರಾಕಾರ ಮಳೆ: ಕೊಡಗು–ಮೈಸೂರು ಜಿಲ್ಲೆಗಳಲ್ಲಿ ಅಂಗನವಾಡಿ ಮತ್ತು ಕಾಲೇಜುಗಳಿಗೆ ರಜೆ
ಬೆಂಗಳೂರು:
ರಾಜಧಾನಿ ಬೆಂಗಳೂರಿನಲ್ಲಿ ಮಾತ್ರ ಸಾಧಾರಣ ಮಳೆಯಾಗುತ್ತಿದೆ. ಇನ್ನೂ ಹೆಚ್ಚಿನ ಮಳೆಯ ಸಾಧ್ಯತೆ ಇರುವುದರಿಂದ ನಾಗರಿಕರು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಇಲಾಖೆ ಮನವಿ ಮಾಡಿದೆ.