ಹಾಸನ: ಕರ್ತವ್ಯ ಲೋಪ ಮತ್ತು ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ ಬೇಲೂರು ಬಿಇಒ ರಾಜೇಗೌಡ ಅವರನ್ನು ಸರ್ಕಾರ ಅಮಾನತುಗೊಳಿಸಿದೆ.
ಈ ಕುರಿತು ಶಿಕ್ಷಣ ಇಲಾಖೆಯ ಅಧೀನ ಕಾರ್ಯದರ್ಶಿ ಮಲ್ಲಿಕಾರ್ಜುನ ರಾಮಚಂದ್ರಪ್ಪ ಆದೇಶ ಹೊರಡಿಸಿದ್ದಾರೆ.
ಹಾಸನ ಜಿಲ್ಲೆಯ ಡಿಡಿಪಿಐ ವರದಿ ಆಧರಿಸಿ ಬಿಇಒ ರಾಜೇಗೌಡ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಅವರ ಮೇಲೆ ಭ್ರಷ್ಟಾಚಾರ, ಲೈಂಗಿಕ ಕಿರುಕುಳ, ಕೊಲೆ ಬೆದರಿಕೆ ಸೇರಿದಂತೆ ಅನೇಕ ಗಂಭೀರ ಆರೋಪಗಳು ಕೇಳಿಬಂದಿದ್ದು, ಪ್ರಾಥಮಿಕ ತನಿಖೆಯಲ್ಲಿ ಸಾಬೀತಾದ ಹಿನ್ನೆಲೆಯಲ್ಲಿ ಅಮಾನತು ಮಾಡಲಾಗಿದೆ.ಇದನ್ನು ಓದಿ –ಇಂದು ಪ್ರಧಾನಿ ಮೋದಿಯಿಂದ ಭಾರತದ ಅತಿದೊಡ್ಡ ಕ್ರೂಸ್ ಟರ್ಮಿನಲ್ ಉದ್ಘಾಟನೆ
ಇತ್ತೀಚೆಗೆ ಶಾಸಕ ಎಚ್.ಕೆ. ಸುರೇಶ್ ಅವರೊಂದಿಗೆ ರಾಜೇಗೌಡ ವಾಗ್ವಾದ ನಡೆಸಿದ ಘಟನೆ ಕೂಡಾ ವಿವಾದ ಸೃಷ್ಟಿಸಿತ್ತು. ಇದೀಗ ಅಧಿಕೃತ ಆದೇಶ ಹೊರಬೀಳುತ್ತಿದ್ದಂತೆ, ಬೇಲೂರು ಬಿಇಒ ರಾಜೇಗೌಡನ ಅಮಾನತು ಕಾರ್ಯರೂಪಕ್ಕೆ ಬಂದಿದೆ.








