- ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ ಪರೋಕ್ಷ ಸುಳಿವು
ಬೆಂಗಳೂರು: ಹಾಲಿನ ದರ ಏರಿಕೆಗೆ ಸಂಬಂಧಿಸಿದಂತೆ ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ ಪರೋಕ್ಷವಾಗಿ ಸುಳಿವು ನೀಡಿದ್ದಾರೆ. ರಾಜ್ಯದಲ್ಲಿ ಇತರೆ ರಾಜ್ಯಗಳಿಗಿಂತ ಹಾಲಿನ ಬೆಲೆ ಕಡಿಮೆಯಾಗಿದೆ ಎಂದು ಅವರು ತಿಳಿಸಿದ್ದಾರೆ.
“ನಮ್ಮ ರಾಜ್ಯದಲ್ಲಿ ಹಾಲಿನ ದರ ಇತರೆ ರಾಜ್ಯಗಳಿಗಿಂತ ಕಡಿಮೆಯಾಗಿದೆ. ದರ ಏರಿಕೆಗಾಗಿ ನೇರ ಪ್ರಸ್ತಾವನೆ ಸಲ್ಲಿಸಿಲ್ಲ, ಆದರೆ ಮಂಡಳಿಗೆ ಮನವಿ ಮಾಡಿದ್ದೇವೆ. ಅರ್ಧ ಲೀಟರ್ ಮಾರಾಟ ಮಾಡಿದರೆ ನಷ್ಟವಾಗುತ್ತದೆ, ಒಂದು ಲೀಟರ್ ಮಾರಿದರೆ ಲಾಭವಾಗುತ್ತದೆ,” ಎಂದು ಅವರು ಹೇಳಿದರು.
ಸುರೇಶ್ ಅವರು ಹಾಲು ಮತ್ತು ತುಪ್ಪದ ಬೆಲೆ ಸ್ಥಿತಿಗತಿಗಳ ಬಗ್ಗೆ ಮಾತನಾಡಿ, “ತುಪ್ಪದ ದರ ಇಂದು ಹೆಚ್ಚಿಸಲಾಗಿದೆ. ಬೇರೆ ಕಂಪನಿಗಳು ಆನ್‌ಲೈನ್‌ನಲ್ಲಿ ಹೆಚ್ಚು ಮಾರಾಟ ಮಾಡುತ್ತಿವೆ. ನಾವು ರೈತರಿಗೆ ತಕ್ಷಣ ಹಣ ನೀಡಬೇಕು. ಬೇರೆ ರಾಜ್ಯಗಳು ಹಾಲಿನ ಹಣ ಬಾಕಿ ಉಳಿಸಿಕೊಳ್ಳುವುದಿಲ್ಲ ಎಂದು ತಿಳಿಸಿದರು.”
“ಹಾಲಿನ ದರ ಏರಿಕೆ ಅನಿವಾರ್ಯ” – ಡಿ.ಕೆ. ಸುರೇಶ್
“ರಾಜ್ಯದಲ್ಲಿ ಪ್ರತಿದಿನ 95 ಲಕ್ಷದಿಂದ 1 ಕೋಟಿ ಲೀಟರ್ ಹಾಲು ಉತ್ಪಾದನೆ ಆಗುತ್ತದೆ. ಆದರೆ 50 ಲಕ್ಷ ಲೀಟರ್ ಮಾತ್ರ ಮಾರಾಟವಾಗುತ್ತದೆ. ಸರ್ಕಾರ ಹಾಲಿನ ಮೇಲೆ ಹೆಚ್ಚಿಸಿದ 4 ರೂಪಾಯಿಯನ್ನ ರೈತರಿಗೆ ಕೊಡಲು ಸೂಚಿಸಲಾಗಿದೆ. ಉಳಿದ ಹಾಲಿಗೆ ನಮ್ಮ ಕೈಯಿಂದಲೇ ರೈತರಿಗೆ ಹಣ ಕೊಡುತ್ತೇವೆ,” ಎಂದರು.
“ತುಪ್ಪ ಮತ್ತು ಬೆಣ್ಣೆಗೆ ಈಗ ಬೇಡಿಕೆ ಹೆಚ್ಚಿದೆ. ತುಪ್ಪದ ಮಾರುಕಟ್ಟೆ ಬೆಲೆಯಿಗಿಂತ ನಾವು ಕಡಿಮೆ ನಿಗದಿ ಮಾಡಿದ್ದೇವೆ. ಆದರೆ ಗುಣಮಟ್ಟದ ವಿಷಯದಲ್ಲಿ ನಾವೇ ಮುಂಚೂಣಿಯಲ್ಲಿದ್ದೇವೆ. ಒಕ್ಕೂಟಗಳ ಮನವಿ ಮೇರೆಗೆ ತುಪ್ಪದ ದರ ಏರಿಸಲಾಗಿದೆ. ಹಾಲಿನ ಮಾರಾಟದಲ್ಲಿ ಕೆಲವು ಕಡೆ ನಷ್ಟವಾಗುತ್ತಿದೆ. ಸರ್ಕಾರ ಏನು ತೀರ್ಮಾನ ತೆಗೆದುಕೊಳ್ಳುತ್ತದೆ ನೋಡಬೇಕಿದೆ,” ಎಂದು ತಿಳಿಸಿದರು.
“ಹಾಲಿನ ದರ ಏರಿಕೆ ಮಾಡಲು ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ನಮ್ಮ ನಷ್ಟದ ಬಗ್ಗೆ ಮಾಹಿತಿ ನೀಡಿದ್ದೇವೆ. ತುಪ್ಪದ ದರ ಹೆಚ್ಚಳದಂತೆ ಬೆಣ್ಣೆಯ ದರವನ್ನೂ ಪರಿಷ್ಕರಿಸಲು ಯೋಜನೆ ಇದೆ,” ಎಂದು ಅವರು ಹೇಳಿದರು.ಇದನ್ನು ಓದಿ –ಡಿಕೆಶಿ ಸಿಎಂ ಆಗೋದಿಲ್ಲ – ಬಿ. ಶ್ರೀರಾಮುಲು
ನಂದಿನಿ ತುಪ್ಪದ ದರ 90 ರೂ. ಏರಿಕೆ
ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳ ನಂದಿನಿ ತುಪ್ಪದ ದರವನ್ನು ಪ್ರತಿ ಕೆಜಿಗೆ 90 ರೂ. ಏರಿಕೆ ಮಾಡಿದೆ.
ಈ ಹಿಂದೆ ನಂದಿನಿ ತುಪ್ಪದ ದರ ಪ್ರತಿ ಕೆಜಿಗೆ 610 ರೂ. ಇತ್ತು, ಈಗ ಅದು 700 ರೂ.ಗೆ ಏರಿಕೆಯಾಗಿದೆ. ತುಪ್ಪ ಹೊರತುಪಡಿಸಿ ಇತರ ನಂದಿನಿ ಉತ್ಪನ್ನಗಳ ದರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಕೆಎಂಎಫ್ ಸ್ಪಷ್ಟಪಡಿಸಿದೆ.
ಅಧಿಕಾರಿಗಳ ಪ್ರಕಾರ, ತುಪ್ಪದ ಉತ್ಪಾದನಾ ವೆಚ್ಚ ಮತ್ತು ಮಾರುಕಟ್ಟೆ ಬೇಡಿಕೆ ಹೆಚ್ಚಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಆದರೆ ದರ ಏರಿಕೆಯಿಂದ ಗ್ರಾಹಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.








