By using this site, you agree to the Privacy Policy and Terms of Use.
Accept
VarthamanVarthamanVarthaman
Notification Show More
Font ResizerAa
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
    ArticlesShow More
    ಶುದ್ಧ ಪ್ರೀತಿಯಿರದ ಪ್ರೇಮ…… ಅದು ಪ್ರೇಮವೇ….?
    February 14, 2026
    ಗುಲಾಬಿ ಪ್ರೀತಿಯ ಸಂಕೇತವಷ್ಟೇ ಅಲ್ಲ, ಉತ್ತಮ ಆರೋಗ್ಯಕ್ಕೂ ವರದಾನ
    February 13, 2026
    ತಾಯಿ ಗುರುವಾದಾಗ
    February 11, 2026
    ಅಹಂ ಅಳಿಸಿ ಬನ್ನಿ ಎನ್ನುವ ದೈವ ಸ್ಥಾನ
    February 10, 2026
    ಶರಣ ಲೋಕದ ಧ್ರುವತಾರೆ…ಸಮಗಾರ ಹರಳಯ್ಯ
    February 10, 2026
  • Sports
  • National
  • International
  • Crime
Reading: ಗುಲಾಬಿ ಪ್ರೀತಿಯ ಸಂಕೇತವಷ್ಟೇ ಅಲ್ಲ, ಉತ್ತಮ ಆರೋಗ್ಯಕ್ಕೂ ವರದಾನ
Share
Font ResizerAa
VarthamanVarthaman
  • Home
  • Karnataka
  • Articles
  • Sports
  • National
  • International
  • Crime
Search
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
  • Sports
  • National
  • International
  • Crime
Follow US
Varthaman > Karnataka – Latest Breaking News > Articles > ಗುಲಾಬಿ ಪ್ರೀತಿಯ ಸಂಕೇತವಷ್ಟೇ ಅಲ್ಲ, ಉತ್ತಮ ಆರೋಗ್ಯಕ್ಕೂ ವರದಾನ
Articles

ಗುಲಾಬಿ ಪ್ರೀತಿಯ ಸಂಕೇತವಷ್ಟೇ ಅಲ್ಲ, ಉತ್ತಮ ಆರೋಗ್ಯಕ್ಕೂ ವರದಾನ

Team Varthaman
Last updated: February 13, 2026 5:41 PM
Team Varthaman
Published: February 13, 2026
Share
SHARE

ಗುಲಾಬಿ, ರೋಸ್ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ಗುಲಾಬಿಯು ಹೂವುಗಳ ರಾಣಿ. ಅಷ್ಟೆ ಅಲ್ಲಾ ಇದು ಪ್ರೀತಿ ಮತ್ತು ಸೌಂದರ್ಯದ ಸಂಕೇತ. ಮುಳ್ಳಿನ ಗಿಡದಲ್ಲಿದ್ದರು, ಸದಾ ನಗು ನಗುವ ಗುಲಾಬಿಯ ಅಂದ ಎಂತವರನ್ನು ನಾಚಿಸುತ್ತದೆ. ಸೌಂದರ್ಯ ಹಾಗೂ ಪ್ರೀತಿಯ ಪ್ರತೀಕವಾದ ಗುಲಾಬಿ ಹೂ ಆರೋಗ್ಯ ಪ್ರಯೋಜನಗಳನ್ನು ನೀಡುವಲ್ಲಿಯೂ ಸಹ ತನ್ನದೇ ಆದ ಛಾಪು ಹೊಂದಿದೆ.

ಚರ್ಮದ ಪ್ರಯೋಜನಗಳು ಸೇರಿದಂತೆ ಇನ್ನಿತರ ಆರೋಗ್ಯಕರ ಲಾಭಗಳಿಗೆ ಗುಲಾಬಿ ಹೂಗಳನ್ನು ಯಾವ ರೀತಿ ಬಳಸಬಹುದು ಎಂಬುದನ್ನು ನಾವಿಂದು ನೋಡೋಣ.

Join WhatsApp Group
  1. ಗುಲಾಬಿ ಹೂಗಳ ದಳಗಳು ದೇಹದ ಮೆಟಬಾಲಿಸಂ ಪ್ರಕ್ರಿಯೆಯನ್ನು ಉತ್ತೇಜಿಸುವಲ್ಲಿ ಮತ್ತು ದೇಹದಿಂದ ವಿಷಕಾರಿ ಅಂಶಗಳನ್ನು ದೂರ ಮಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಮತ್ತು ದೇಹದ ತೂಕ ಕೂಡ ಇದರಿಂದ ನಿರ್ವಹಣೆಯಾಗುತ್ತದೆ.
  2. ದೇಹದಲ್ಲಿ ವಿಪರೀತ ಉಷ್ಣದ ಪ್ರಕಾರದಿಂದ ಅಥವಾ ಹೆಚ್ಚು ಹೊತ್ತು ನಿರಂತರವಾಗಿ ಪ್ರತಿ ದಿನ ಕುಳಿತು ಕೆಲಸ ಮಾಡುವವರಿಗೆ ದೇಹದಿಂದ ವಿಷಕಾರಿ ಅಂಶಗಳನ್ನು ದೂರ ಮಾಡುವ ಜೊತೆಗೆ ಮೂಲವ್ಯಾಧಿ ಸಮಸ್ಯೆಗೆ ಪರಿಹಾರ ನೀಡಿ ನೋವು ನಿವಾರಣೆ ಮಾಡುತ್ತದೆ.

3.ಗುಲಾಬಿ ಹೂವಿನ ದಳಗಳನ್ನು ತಿನ್ನುತ್ತಾ ಹೋದರೆ ಮುಖದ ಮೇಲಿನ ಕಲೆಗಳು ದೂರವಾಗುತ್ತವೆ. ದಿನಂಪ್ರತಿ ಸೇವಿಸಿದರೆ ನಿಮ್ಮ ಸೌಂದರ್ಯ ಹೆಚ್ಚಾಗುತ್ತಾ ಹೋಗುತ್ತೆ. ಅದಕ್ಕೆ ಸಾಧ್ಯವಾದ್ರೆ ದಿನ ಗುಲಾಬಿ ದಳಗಳನ್ನು ತಿನ್ನಿರಿ.

4.ದಿನವೂ ಗುಲಾಬಿ ದಳಗಳನ್ನು ತಿನ್ನುತ್ತಾ ಹೋದರೆ, ಹೃದಯ ಸಮಸ್ಯೆ ನಿಯಂತ್ರಣ ಮಾಡುವುದರ ಜೊತೆಗೆ ಮಾನಸಿಕ ಹಾಗೂ ದೈಹಿಕ ಶಕ್ತಿಯನ್ನು ಸಹ ಹೆಚ್ಚಿಸುತ್ತದೆ.

5.ತಾಜಾ ಗುಲಾಬಿ ದಳಗಳನ್ನು ಕುದಿಯುವ ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ, ಸ್ವಲ್ಪ ಜೇನುತುಪ್ಪ ಮತ್ತು ದಾಲ್ಚಿನಿ ಪುಡಿ ಹಾಕಿ ಮಿಶ್ರಣ ಮಾಡಬೇಕು. ಬೆಳಗಿನ ಸಮಯದಲ್ಲಿ ಖಾಲಿಹೊಟ್ಟೆಯಲ್ಲಿ ಕುಡಿದ್ರೆ ಬೊಜ್ಜು ಕರಗಲು ಸಹಾಯವಾಗುತ್ತೆ.

6.ದೇಹದ ಆಯಾಸ ಮತ್ತು ಒತ್ತಡ, ನಿದ್ರಾಹೀನತೆ ಮತ್ತು ಸುಸ್ತು ಜೊತೆಗೆ ದೇಹದ ಕಿರಿಕಿರಿಯನ್ನು ಗುಲಾಬಿ ಹೂವಿನ ದಳಗಳು ಕಡಿಮೆ ಮಾಡುತ್ತವೆ. ಮಾನಸಿಕ ಒತ್ತಡ ಮತ್ತು ಖಿನ್ನತೆಯನ್ನು ದೂರ ಮಾಡುತ್ತದೆ

  1. ಗುಲಾಬಿ ಹೂವಿನ ವಾಸನೆಯನ್ನು ಕುಡಿಯುವುದರಿಂದ ಶ್ವಾಸಕೋಶದ ಸಮಸ್ಯೆ ಪರಿಹಾರವಾಗುತ್ತದೆಯಂತೆ. ಸ್ನಾನ ಮಾಡುವಾಗ ಬಿಸಿ ನೀರಿಗೆ ಗುಲಾಬಿ ಹೂವಿನ ದಳಗಳನ್ನು ಹಾಕಿ ಸ್ವಲ್ಪ ಹೊತ್ತು ಬಿಟ್ಟು ಆನಂತರ ಸ್ನಾನ ಮಾಡಿದರೆ, ಗುಲಾಬಿ ಹೂವಿನ ಸುವಾಸನೆ ನಿಮ್ಮ ಮನಸ್ಸನ್ನು ಮುದಗೊಳಿಸುತ್ತದೆ.

ಬಾಯಲ್ಲಿ ನೀರೂರಿಸುವ ಗುಲ್ಕನ್ ತಿನಿಸಿನಲ್ಲಿದೆ ಔಷಧೀಯ ಗುಣಾಂಶಗಳು

ಗುಲ್ಕನ್ ಅಥವಾ ರೋಸ್ ಪೆಟಲ್ ಜಾಮ್ ಎನ್ನುವುದು ಒಂದು ಸಿಹಿ ಪದಾರ್ಥ. ಇದರಲ್ಲಿನ ಪೋಷಕಾಂಶಗಳ ಮಹತ್ವವನ್ನು ಗುರುತಿಸಿ ಔಷಧೀಯ ವಸ್ತುವನ್ನಾಗಿ ಬಳಸಲಾಗುತ್ತಿದೆ.

1.ದೇಹವನ್ನು ತಂಪು ಮಾಡುವ ಗುಣ ಹೊಂದಿರುವ ಗುಲ್ಕನ್, ಮೌತ್ ಫ್ರೆಶನರ್ ಆಗಿ ಕೆಲಸ ಮಾಡುತ್ತದೆ. ಸುಸ್ತು, ಅಲಸ್ಯ, ತುರಿಕೆ, ನೋವನ್ನು ನಿಯಂತ್ರಿಸುವ ಗುಣಗಳನ್ನು ಹೊಂದಿದೆ.

2.ಅಲ್ಲದೆ ಅಂಗೈ ಮತ್ತು ಅಂಗಾಲುಗಳಲ್ಲಿ ಸೆಕೆ, ಉರಿ ಆಗುತ್ತಿದ್ದಲ್ಲಿ ಅದನ್ನು ನಿಯಂತ್ರಿಸಲು ಸಹಕಾರಿ. ಆಂಟಿ ಆಕ್ಸಿಡೆಂಟ್ ಗಳಿಂದ ತುಂಬಿರುವಂತಹ ಇದು ದೇಹದ ಕೋಶಗಳು ಪುನರ್ ಉತ್ಪತ್ತಿಯಾಗಲು ನೆರವಾಗುತ್ತದೆ.

3.ಒಂದರಿಂದ 2 ಚಮಚ ಗುಲ್ಕನ್ ಸೇವಿಸುವುದರಿಂದ ವೇಗವಾಗಿ ಹೈಪ‌ರ್ ಅಸಿಡಿಟಿ ಹಾಗೂ ಹೊಟ್ಟೆ ಉರಿ ಕಡಿಮೆ ಮಾಡಬಹುದು. ಹಾಗೆ ಅಲ್ಸರ್ ಹಾಗೂ ಕರುಳಿನಲ್ಲಿ ಬಾವು ಇದ್ದರೆ ಅದನ್ನು ಕಡಿಮೆ ಮಾಡುತ್ತದೆ.

4.ಬಾಯಿ ಹುಣ್ಣು ಕಡಿಮೆ ಮಾಡಲು, ಹಲ್ಲಿನ ಬಲವನ್ನು ಹೆಚ್ಚಿಸಲು, ಮುಟ್ಟಿನ ಸಮಯದಲ್ಲಿ ಕಾಡುವ ಹೊಟ್ಟೆ ನೋವನ್ನು ಕಡಿಮೆ ಮಾಡಲು, ಜೀರ್ಣಶಕ್ತಿಯನ್ನು ಹೆಚ್ಚಿಸಲು ಇದು ಸಹಾಯ ಮಾಡುತ್ತದೆ.

5.ದೇಹದಿಂದ ವಿಷ ವಸ್ತುಗಳನ್ನು ಹೊರ ಹಾಕಿ ಶುದ್ದಿ ಮಾಡುವ ಕಾರ್ಯವನ್ನು ಗುಲ್ಕನ್ ಮಾಡುತ್ತದೆ. ಅಷ್ಟೇ ಅಲ್ಲದೆ ಚರ್ಮದ ಆರೋಗ್ಯಕ್ಕೂ ಉತ್ತಮ.

ಇಷ್ಟೆಲ್ಲಾ ಉಪಯೋಗ ಹೊಂದಿರುವ ಗುಲ್ಕನ್‌ ತಯಾರಿಯಲ್ಲಿ ಸಕ್ಕರೆಯನ್ನು ಬಳಸಲಾಗುತ್ತದೆ. ಆದ್ದರಿಂದ ತೊಳೆದ ಗುಲಾಬಿಗಳನ್ನು ನೆರಳಿನಲ್ಲಿ ಒಣಗಿಸಿ ಜೇನುತುಪ್ಪವನ್ನು ಉಪಯೋಗಿಸಿ ಮನೆಯಲ್ಲಿಯೇ ಗುಲ್ಕನ್ ತಯಾರಿಸಿ ಬಳಸುವುದು ಉತ್ತಮ.

ರೋಸ್ ವಾಟರ್ ನ ಪ್ರಯೋಜನಗಳು ಮತ್ತು ಅದನ್ನು ಹೇಗೆ ಬಳಸುವುದು

ಮುಖದ ಅಂದ ಹೆಚ್ಚಿಸಲು ಉಪಯೋಗಕ್ಕೆ ಬರುವ ಯಾವ ಅಪಾಯವೂ ಇಲ್ಲದಂತಹ ಒಂದು ಸುರಕ್ಷಿತ ದ್ರವ ಎಂದರೆ ರೋಸ್ ವಾಟರ್. ರೋಸ್ ವಾಟರ್ ಅನ್ನು ಕೇವಲ ಬ್ಯೂಟಿ ಹೆಚ್ಚಿಸಲು ಮಾತ್ರ ಬಳಸಲಾಗುತ್ತದೆ ಎಂಬುವುದಕ್ಕಿಂತ ಅದರಿಂದ ಇನ್ನೂ ಹಲವಾರು ಪ್ರಯೋಜನಗಳಿವೆ ಎಂದರೆ ತಪ್ಪಾಗಲಾರದು. ದೇಹದ ಚರ್ಮದ ಕಾಂತಿ ಹೆಚ್ಚಿಸುವುದರಿಂದ, ಕೂದಲಿಗೆ ಹೊಳಪು ನೀಡುವವರೆಗು ಇದರ ಉಪಯೋಗ ಬಹಳ.

1.ತಣ್ಣನೆಯ ನೀರಿಗೆ ಸ್ವಲ್ಪ ಕೋಲ್ಡ್ ರೋಸ್ ವಾಟರ್ ಅನ್ನು ಹಾಕಿ ಬೆರೆಸಿ ಅದರಿಂದ ಮುಖದ ಮೇಲೆ ಎರಚುವಂತೆ ಮಾಡಿ ಮುಖ ತೊಳೆದುಕೊಂಡರೆ ಮುಖದ ಮೇಲಿನ ಮೊಡವೆಗಳ ಸಮೇತ ಮುಖದ ಮೇಲಿನ ಕಲೆಗಳೂ ಸಹ ಮಾಯವಾಗುತ್ತವೆ . ಇದನ್ನು ದಿನಕ್ಕೆ ಮೂರು ಬಾರಿ ಮಾಡುವುದರಿಂದ ಉತ್ತಮ ಫಲಿತಾಂಶ ಕಾಣಬಹುದು . ಅಷ್ಟೇ ಅಲ್ಲದೆ ಕೋಲ್ಡ್ ರೋಸ್ ವಾಟರ್ ಅನ್ನು ಮುಲ್ತಾನಿ ಮಿಟ್ಟಿಯ ಜೊತೆ ಕೂಡ ಉಪಯೋಗಿಸಬಹುದು.

2.ರೋಸ್‌ ವಾಟರ್‌ ಕೂದಲಿಗೆ ಬಳಸುವುದರಿಂದ ಕೂದಲನ್ನು ಮೃದುಗಳಿಸುತ್ತದೆ. ಪ್ರತಿನಿತ್ಯ ನಿಯಮಿತವಾಗಿ ರೋಸ್‌ ವಾಟರ್‌ ಅನ್ನು ಕೂದಲಿಗೆ ಬಳಸುವುದರಿಂದ ತಲೆಹೊಟ್ಟು, ಎಣ್ಣೆಯಾಗುವುದನ್ನು ತಡೆಯಬಹುದು. ರೋಸ್‌ ವಾಟರ್‌ನಲ್ಲಿ ವಿಟಮಿನ್‌ ಎ, ಬಿ 3, ಸಿ ಮತ್ತು ಇ ಹೊಂದಿದ್ದು, ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.

3.ಸ್ನಾನ ಮಾಡುವಾಗ ಕೆಲವೊಂದು ಹನಿಗಳಷ್ಟು ರೋಸ್ ವಾಟರ್ ಅನ್ನು ನೀವು ಸ್ನಾನ ಮಾಡುವ ನೀರಿಗೆ ಹಾಕಿ ಬಿಸಿ ಮಾಡಿ . ಅದರ ಘಮಗುಡುವ ಪರಿಮಳ ನಿಮ್ಮನ್ನು ನಿಜಕ್ಕೂ ರಿಲಾಕ್ಸ್ ಮಾಡುತ್ತದೆ . ಮನಸ್ಸಿನ ತಳಮಳವೆಲ್ಲಾ ದೂರವಾಗಿ , ಹೊಸ ಉಲ್ಲಾಸ ನಿಮ್ಮ ಮನಸ್ಸಿನಲ್ಲಿ ಮನೆ ಮಾಡುತ್ತದೆ . ಅಷ್ಟೇ ಅಲ್ಲದೆ ರೋಸ್ ವಾಟರ್ ಹಾಕಿ ಸ್ನಾನ ಮಾಡುವುದರಿಂದ ನಿಮ್ಮ ದೇಹದ ಚರ್ಮಕ್ಕೆ ಕೂಡ ಬಹಳ ಉಪಯೋಗ ಇದೆ . ಚರ್ಮದ ರೋಗಗಳಿಂದ ದೂರ ಮಾಡಿ ಚರ್ಮವನ್ನು ಕಾಂತಿಯುಕ್ತ ಮಾಡುತ್ತದೆ .

4.ಮೊಸರಿಗೆ ಸ್ವಲ್ಪ ರೋಸ್ ವಾಟರ್ ಹಾಕಿ ಮುಖದ ಮೇಲೆ ಹಚ್ಚಿ ಅರ್ಧ ಗಂಟೆಗಳ ಕಾಲ ಹಾಗೆ ಬಿಡಿ . ಇದರಿಂದ ಚರ್ಮದ ಕಾಂತಿ ಇಮ್ಮಡಿ ಗೊಳ್ಳುತ್ತದೆ. ಮುಖದಲ್ಲಿ ಕಲೆಯಿದ್ದರೆ ಅರಿಶಿಣವನ್ನು ರೋಸ್‌ ವಾಟರ್‌ ಜತೆ ಮಿಕ್ಸ್ ಮಾಡಿ ಹಚ್ಚಿದರೆ ಕಲೆ ಮಾಯವಾಗುವುದು.

5.ಇದು ನಂಜುನಿರೋಧಕ ಗುಣಗಳನ್ನು ಹೊಂದಿರುವುದರಿಂದ ಯಾವುದೇ ಸೋಂಕನ್ನು ಗುಣಪಡಿಸಲು ರೋಸ್ ವಾಟರ್ ಅನ್ನು ವಿವಿಧ ನೈಸರ್ಗಿಕ ಔಷಧಿಗಳಲ್ಲಿ, ಚಿಕಿತ್ಸೆಗಳಲ್ಲಿ ಬಳಸಲಾಗುತ್ತದೆ

ರೋಸ್ ವಾಟರ್ ಮಾಡುವ ವಿಧಾನ

8-10 ಗುಲಾಬಿ ದಳಗಳನ್ನು ಮತ್ತು ಕುದಿಸಿದ ನೀರನ್ನು ತೆಗೆದುಕೊಂಡು ಗುಲಾಬಿ ದಳಗಳನ್ನು(Rose petals) ಚೆನ್ನಾಗಿ ಸ್ವಚ್ಛಗೊಳಿಸಿ, ಇದರಿಂದ ಬ್ಯಾಕ್ಟೀರಿಯಾಗಳು ನಿವಾರಣೆಯಾಗುತ್ತವೆ. ಒಂದು ದೊಡ್ಡ ಪಾತ್ರೆಯಲ್ಲಿ ನೀರನ್ನು ಕುದಿಸಿ ಅದರಲ್ಲಿ ಗುಲಾಬಿ ದಳಗಳನ್ನು ಹಾಕಿ. ಮಡಕೆಯನ್ನು ಮುಚ್ಚಿ ಮತ್ತು ಗ್ಯಾಸ್ ನಲ್ಲಿ ಸಣ್ಣ ಉರಿಯಲ್ಲಿ ಇಟ್ಟಾಗ. ಸ್ವಲ್ಪ ಸಮಯದ ನಂತರ, ಗುಲಾಬಿ ದಳಗಳ ಬಣ್ಣವು ನೀರಿನ ಬಣ್ಣಕ್ಕೆ ತಿರುಗಲು ಪ್ರಾರಂಭಿಸುತ್ತದೆ ಅಂದರೆ ಗುಲಾಬಿ ದಳ ಬಣ್ಣ ಬಿಡುತ್ತಿದೆ ಎಂದು ಅರ್ಥ. ಗ್ಯಾಸ್ ಆಫ್ ಮಾಡಿ ನೀರನ್ನು ಸ್ವಲ್ಪ ಸಮಯದವರೆಗೆ ತಣ್ಣಗಾಗಲು ಬಿಟ್ಟು ನಂತರ ನೀರನ್ನು ಬಸಿದು ಸೇವಿಸಬಹುದು.

ಸೌಮ್ಯ ಸನತ್.

  • ಶುದ್ಧ ಪ್ರೀತಿಯಿರದ ಪ್ರೇಮ…… ಅದು ಪ್ರೇಮವೇ….?
    by Team Varthaman
  • ಲಕ್ಷ ಕಂಠಗಳ ಹನುಮಾನ್ ಚಾಲೀಸಾ
    by Team Varthaman
  • ಗುಲಾಬಿ ಪ್ರೀತಿಯ ಸಂಕೇತವಷ್ಟೇ ಅಲ್ಲ, ಉತ್ತಮ ಆರೋಗ್ಯಕ್ಕೂ ವರದಾನ
    by Team Varthaman
  • ನಿಯಮ ಉಲ್ಲಂಘಿಸಿದ 89 ಪಿಜಿಗಳಿಗೆ ದಂಡ; 19 ಮೆಸ್‌ಗಳಿಗೆ ಬೀಗ
    by Team Varthaman
  • ಜವಳಿ ಉತ್ಪನ್ನಗಳಿಗೆ ಅಮೆರಿಕದಲ್ಲಿ ಶೂನ್ಯ ಸುಂಕ ಸಾಧ್ಯತೆ: ಪಿಯೂಷ್ ಗೋಯಲ್
    by Team Varthaman
ಕನ್ನಡವನ್ನು ನಾವೆಷ್ಟು ಪ್ರೀತಿಸುತ್ತೇವೆ…… ?
ಅರೋಗ್ಯ ಭಾಗ್ಯ
ಕೆಲವು ವ್ಯಕ್ತಿತ್ವಗಳೇ ಹಾಗೆ , ತಂಗಾಳಿ ಬೀಸಿದಂತೆ…!
ಕರುಳಿನ ಉತ್ತಮ ಆರೋಗ್ಯಕ್ಕೆ ಪ್ರೊಬಯೋಟಿಕ್ಸ್ ಆಹಾರಗಳು
ಬಂದದ್ದೆಲ್ಲ ಬರಲಿ…. ಭಗವಂತನ ದಯೆ ಒಂದಿರಲಿ
TAGGED:roseValentines dayಗುಲಾಬಿ
Share This Article
Facebook Email Print
Leave a Comment

Leave a Reply Cancel reply

Your email address will not be published. Required fields are marked *

Follow US

Find US on Social Medias
FacebookLike
XFollow
YoutubeSubscribe
TelegramFollow

Weekly Newsletter

Subscribe to our newsletter to get our newest articles instantly!
[mc4wp_form]
Popular News
BengaluruEducationKarnatakaTrending

SSLC ಫಲಿತಾಂಶ ಪ್ರಕಟ: ದಕ್ಷಿಣ ಕನ್ನಡ ಜಿಲ್ಲೆ ಮೊದಲ ಸ್ಥಾನ, ಕಲಬುರಗಿ ಕೊನೆಯ ಸ್ಥಾನ

Team Varthaman
Team Varthaman
May 2, 2025
ಮಹಿಳಾ ಶಿಕ್ಷಣ ಕ್ರಾಂತಿಯ ಸಾವಿತ್ರಿ ಬಾಯಿ ಫುಲೆ
RBI ರೆಪೊ ದರ ಯಥಾಸ್ಥಿತಿ
9 ವರ್ಷದ ಬಾಲಕಿ ಮೇಲೆ ಲೈಂಗಿಕ ಕಿರುಕುಳ: ವೃದ್ಧ ಅರೆಸ್ಟ್
ಚಂದ್ರಘಂಟಾದೇವಿ
- Advertisement -
Ad imageAd image
Global Coronavirus Cases

Confirmed

0

Death

0

More Information:Covid-19 Statistics

Categories

  • Articles
  • Sports
  • Latest News
  • Karnataka News

About US

Since its inception in 1957, Varthamana has stood tall as one of the most trusted and respected Kannada daily newspapers. With deep roots in the rich cultural landscape of Karnataka, Varthamana continues to be the voice of the people, championing truth, transparency, and the values that define the region. Established with a strong commitment to ethical journalism, our newspaper has consistently provided comprehensive coverage, authentic news, and insightful editorials for over six decades. Today, under the dynamic leadership of Editor K. N. Ravi, Varthamana shines even brighter, blending a proud heritage with a modern outlook to meet the evolving needs of readers across the state. Our presence in the digital space, through Varthamana Digital, ensures that our trusted news and regional stories reach a wider audience faster and with greater impact.

Contact Us

© Varthaman. All Rights Reserved.
Welcome Back!

Sign in to your account

Username or Email Address
Password

Lost your password?