By using this site, you agree to the Privacy Policy and Terms of Use.
Accept
VarthamanVarthamanVarthaman
Notification Show More
Font ResizerAa
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
    ArticlesShow More
    “ಅಕ್ಷರಗಳ ಮೇಲಿನ‌ ಅತ್ಯಾಚಾರ”
    April 25, 2026
    “ಸವಾಲು ಎದುರಿಸಿ,ಸಾರ್ಥಕತೆ ಪಡೆಯಿರಿ”
    April 25, 2026
    ಅಗಣಿತ ಆರೋಗ್ಯ ಭಾಗ್ಯಗಳ ರಾಜ ಈ ಕರಬೂಜ ಬೀಜ
    April 25, 2026
    “ಅಂಕಗಳಿಗಿಂತ ಅಚೀವ್ಮೆಂಟ್ ದೊಡ್ಡದು”
    April 24, 2026
    ಹಳ್ಳಿಗಳ ಪಾಲಿನ ನಡೆದಾಡುವ ಸಂಜೀವಿನಿ
    April 22, 2026
  • Sports
  • National
  • International
  • Crime
Reading: “ಸವಾಲು ಎದುರಿಸಿ,ಸಾರ್ಥಕತೆ ಪಡೆಯಿರಿ”
Share
Font ResizerAa
VarthamanVarthaman
  • Home
  • Karnataka
  • Articles
  • Sports
  • National
  • International
  • Crime
Search
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
  • Sports
  • National
  • International
  • Crime
Follow US
Varthaman > Karnataka – Latest Breaking News > Articles > “ಸವಾಲು ಎದುರಿಸಿ,ಸಾರ್ಥಕತೆ ಪಡೆಯಿರಿ”
Articles

“ಸವಾಲು ಎದುರಿಸಿ,ಸಾರ್ಥಕತೆ ಪಡೆಯಿರಿ”

Team Varthaman
Last updated: April 25, 2026 9:56 AM
Team Varthaman
Published: April 25, 2026
Share
SHARE

ಬದುಕು ಅನಿಶ್ಚಿತತೆಗಳ ಸಾಗರ. ಇಲ್ಲಿ ಎದುರಾಗುವ ಸವಾಲುಗಳು ಬದುಕನ್ನು ಆಸಕ್ತಿದಾಯಕವಾಗಿಸಿದರೆ, ಅವುಗಳನ್ನು ಮೆಟ್ಟಿ ನಿಲ್ಲುವ ಛಲವು ಜೀವನವನ್ನು ಅರ್ಥಪೂರ್ಣವಾಗಿಸುತ್ತದೆ. ಇಂದಿನ ಯುವ ಪೀಳಿಗೆಗೆ ಸೋಲು ಎನ್ನುವುದು ಅಂತ್ಯವಲ್ಲ, ಅದು ಹೊಸ ಅಧ್ಯಾಯದ ಮುನ್ನುಡಿ ಎಂಬ ಸತ್ಯದ ಅರಿವಾಗಬೇಕಿದೆ.

ಪಾಂಡವರ ಅಶ್ವಮೇಧ ಯಾಗದ ಸಂದರ್ಭದಲ್ಲಿ, ಮಹಾವೀರ ಅರ್ಜುನನಿಗೇ ಸವಾಲು ಹಾಕಿದವನು ಅವನ ಪುತ್ರ ಬಬ್ರುವಾಹನ. ತನ್ನೆದುರಿಗಿರುವುದು ಅಜೇಯ ವೀರ ಅರ್ಜುನನೆಂದು ತಿಳಿದಿದ್ದರೂ ಬಬ್ರುವಾಹನ ಎದೆಗುಂದಲಿಲ್ಲ. ಮಮಕಾರ ಮತ್ತು ಅಹಂಕಾರದ ಸವಾಲುಗಳನ್ನು ಮೀರಿ ನಿಂತ ಆತ, ತನ್ನ ಗುರಿನಿಷ್ಠೆಯಿಂದ ಅರ್ಜುನನನ್ನೇ ಮಣಿಸಿದನು. ಈ ಕಥೆ ನಮಗೆ ಕಲಿಸುವುದು ಏನೆಂದರೆ ಸವಾಲು ಎಷ್ಟೇ ದೊಡ್ಡದಿದ್ದರೂ, ಅಚಲ ಆತ್ಮವಿಶ್ವಾಸವಿದ್ದರೆ ಅಸಾಧ್ಯವಾದುದನ್ನೂ ಸಾಧಿಸಬಹುದು.

Join WhatsApp Group

ಸೋಲು ಎಂಬುದು ನಮಗೆ ವಿಧಿಸಿದ ಶಿಕ್ಷೆಯಲ್ಲ, ಬದಲಿಗೆ ಅದು ನಮ್ಮ ದೋಷಗಳನ್ನು ತಿದ್ದಿ ಮತ್ತಷ್ಟು ಗಟ್ಟಿಗೊಳಿಸುವ ಉತ್ತಮ ಶಿಕ್ಷಕ. ಜೀವನದ ಸವಾಲುಗಳಿಗೆ ಶರಣಾಗುವ ಬದಲು, ಅವುಗಳನ್ನು ಎದುರಿಸುವ ಧೈರ್ಯ ತೋರಿದಾಗ ಮಾತ್ರ ಬದುಕಿನಲ್ಲಿ ನಿಜವಾದ ಸಾರ್ಥಕತೆ ಲಭಿಸುತ್ತದೆ. ನಮ್ಮ ಗುರಿ ಸದಾ ಸ್ಪಷ್ಟವಾಗಿರಲಿ; ಏಕೆಂದರೆ ಯಾವುದೇ ಶ್ರಮವಿಲ್ಲದೆ ಸುಲಭವಾಗಿ ಸಿಗುವ ಗೆಲುವಿಗಿಂತ, ಹೋರಾಡಿ ಪಡೆಯುವ ಯಶಸ್ಸು ಹೆಚ್ಚು ಮೌಲ್ಯಯುತವಾದುದು ಮತ್ತು ದೀರ್ಘಕಾಲ ಬಾಳುವಂತದ್ದು.

ಯುವ ಮಿತ್ರರೇ, ಸವಾಲುಗಳು ನಿಮ್ಮನ್ನು ಸೋಲಿಸಲು ಬರುವುದಿಲ್ಲ, ಬದಲಿಗೆ ನಿಮ್ಮೊಳಗಿನ ಸುಪ್ತ ಶಕ್ತಿಯನ್ನು ಜಾಗೃತಗೊಳಿಸಲು ಬರುತ್ತವೆ. ಸಂಕಷ್ಟಗಳ ಸುಳಿಯಿಂದ ಧೀರತನದಿಂದ ಮೇಲೆದ್ದು ಬಂದಾಗ ಮಾತ್ರ ನಿಮ್ಮ ವ್ಯಕ್ತಿತ್ವಕ್ಕೆ ಮೆರುಗು ಸಿಗುತ್ತದೆ. ಬಬ್ರುವಾಹನನಂತೆ ಸವಾಲುಗಳನ್ನು ಸ್ವಾಗತಿಸಿ, ಛಲದಿಂದ ಹೋರಾಡಿ ನಿಮ್ಮ ಜೀವನವನ್ನು ಸಾರ್ಥಕವಾಗಿಸಿಕೊಳ್ಳಿ.

ಡಾ.ಸುಧಾಕರ.ಜಿ.ಲಕ್ಕವಳ್ಳಿ.

  • “ಅಕ್ಷರಗಳ ಮೇಲಿನ‌ ಅತ್ಯಾಚಾರ”
    by Team Varthaman
    April 25, 2026
  • “ಸವಾಲು ಎದುರಿಸಿ,ಸಾರ್ಥಕತೆ ಪಡೆಯಿರಿ”
    by Team Varthaman
    April 25, 2026
  • ಮೇ 1ರಿಂದ ಮದ್ಯದ ದರ ಭಾರಿ ಏರಿಕೆ ಸಾಧ್ಯತೆ
    by Team Varthaman
    April 25, 2026
  • ಅಗಣಿತ ಆರೋಗ್ಯ ಭಾಗ್ಯಗಳ ರಾಜ ಈ ಕರಬೂಜ ಬೀಜ
    by Team Varthaman
    April 25, 2026
  • AAP ಗೆ ಬಿಗ್ ಶಾಕ್: 7 ರಾಜ್ಯಸಭಾ ಸಂಸದರು ಬಿಜೆಪಿಗೆ ಬೆಂಬಲ ಘೋಷಣೆ
    by Team Varthaman
    April 24, 2026
ಅದಮ್ಯ ಸ್ಫೂರ್ತಿ ಮತ್ತು ತಂತ್ರಜ್ಞಾನ ನಿಪುಣೆ ಜಿ. ಮಾಧವಿ ಲತಾ
“ಅರ್ಥಮಾಡಿಕೊಳ್ಳುವ‌ ಹೃದಯವೊಂದಿದ್ದರೆ ಸಾಕು..!
ಶಿವಾಜಿ ಮಹಾರಾಜ ಮತ್ತು ಕರ್ನಾಟಕ
ಎಳ್ಳಿನೊಳಗಿನ ಏಕತೆ – ಮಕರ ಸಂಕ್ರಾಂತಿಯ ಪೌರಾಣಿಕ ಮಹಿಮೆ
ಜಾತ್ಯತೀತ, ಸಮಾಜವಾದಿ ಪದಗಳನ್ನು ಕೈಬಿಟ್ಟಲ್ಲಿ ಮತ್ತಾವುದನ್ನು ಸೇರಿಸಬೇಕು…?
TAGGED:Kannada Article
Share This Article
Facebook Email Print
Leave a Comment

Leave a Reply Cancel reply

Your email address will not be published. Required fields are marked *

Follow US

Find US on Social Medias
FacebookLike
XFollow
YoutubeSubscribe
TelegramFollow

Weekly Newsletter

Subscribe to our newsletter to get our newest articles instantly!
[mc4wp_form]
Popular News
Articles

ಅಭಯಪ್ರದಾಯಿನಿ ಕಾಲರಾತ್ರಿ ದೇವಿ

Team Varthaman
Team Varthaman
September 28, 2025
ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದಾಳಿ: 24 ಗಂಟೆಗಳಲ್ಲಿ ಇಬ್ಬರ ಹತ್ಯೆ
ತಿರುಪತಿ ಲಡ್ಡು ಕಲಬೆರಕೆ ಪ್ರಕರಣ: ₹234 ಕೋಟಿ ವಂಚನೆ ಬಯಲು
USA ಎಚ್-1ಬಿ ವೀಸಾ ಶುಲ್ಕ ಹೆಚ್ಚಳ: ತಂತ್ರಜ್ಞಾನ ಉದ್ಯೋಗಿಗಳಿಗೆ ಹೊಸ ಸವಾಲು
ರಾಜ್ಯದಲ್ಲಿ ಬೈಕ್ ಟ್ಯಾಕ್ಸಿಗಳಿಗೆ ಸಂಪೂರ್ಣ ನಿಷೇಧ
- Advertisement -
Ad imageAd image
Global Coronavirus Cases

Confirmed

0

Death

0

More Information:Covid-19 Statistics

Categories

  • Articles
  • Sports
  • Latest News
  • Karnataka News

About US

Since its inception in 1957, Varthamana has stood tall as one of the most trusted and respected Kannada daily newspapers. With deep roots in the rich cultural landscape of Karnataka, Varthamana continues to be the voice of the people, championing truth, transparency, and the values that define the region. Established with a strong commitment to ethical journalism, our newspaper has consistently provided comprehensive coverage, authentic news, and insightful editorials for over six decades. Today, under the dynamic leadership of Editor K. N. Ravi, Varthamana shines even brighter, blending a proud heritage with a modern outlook to meet the evolving needs of readers across the state. Our presence in the digital space, through Varthamana Digital, ensures that our trusted news and regional stories reach a wider audience faster and with greater impact.

Contact Us

© Varthaman. All Rights Reserved.
Welcome Back!

Sign in to your account

Username or Email Address
Password

Lost your password?