ತಾಪಮಾನ ವಿಪರೀತವಾಗಿ ಹೆಚ್ಚುತ್ತಿದೆ ಸ್ವಲ್ಪ ಹೊತ್ತು ಹೊರಗೆ ಹೋದರೂ, ನಮ್ಮಲ್ಲಿರುವ ಎಲ್ಲಾ ಶಕ್ತಿಯನ್ನು ಯಾರೋ ಹೀರುವಂತೆ ಭಾಸವಾಗುತ್ತದೆ. ಅಲ್ಲದೆ, ಬೇಸಿಗೆಯ ಬಿಸಿಲಿನಿಂದ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಅನ್ನ ತಿನ್ನಲು ಮನಸ್ಸು ಬರಲ್ಲ, ತಿನ್ನದಿದ್ದರೆ ಹಸಿವಿನ ಸಮಸ್ಯೆ ನಿರ್ಜಲೀಕರಣ ಹೀಟ್ ಸ್ಟ್ರೋಕ್ ಇತ್ಯಾದಿ ಸಮಸ್ಯೆಗಳು ಕಾಡುತ್ತವೆ. ಬೇಸಿಗೆಗೆ ಸಂಬಂಧಿಸಿದ ಇಂತಹ ಸಮಸ್ಯೆಗಳನ್ನು ಬಾರ್ಲಿ ನೀರಿನಿಂದ ಪರಿಹರಿಸಬಹುದು ಎಂದು ತಜ್ಞರು ಹೇಳುತ್ತಾರೆ. ಬಾರ್ಲಿಯು ಬೇಸಿಗೆಯ ಸಮಸ್ಯೆಗಳಿಗೆ ಮಾತ್ರವಲ್ಲದೆ ಅನೇಕ ಆರೋಗ್ಯ ಸಮಸ್ಯೆಗಳಿಗೂ ಚೆನ್ನಾಗಿ ಕೆಲಸ ಮಾಡುತ್ತದೆ ಎಂದು ಹೇಳುತ್ತಾರೆ. ಆ ಪ್ರಯೋಜನಗಳೇನು ಎಂಬುದನ್ನು ನಾವಿಂದು ನೋಡೋಣ….
ಬಾರ್ಲಿ

ಬಾರ್ಲಿಯು ಪ್ರಪಂಚದ ಸಮಶೀತೋಷ್ಣ ಹವಾಮಾನದಲ್ಲಿ ಕಂಡುಬರುವ ಒಂದು ಬಗೆಯ ಬೀಜಭರಿತ ಮತ್ತು ಸೌಮ್ಯವಾದ ಪರಿಮಳವನ್ನು ಹೊಂದಿರುವ ಏಕದಳ ಧಾನ್ಯವಾಗಿದೆ. ಇದರಲ್ಲಿ ಖನಿಜಗಳು, ಜೀವಸತ್ವಗಳು, ಫೈಬರ್, ರಂಜಕ, ಕ್ಯಾಲ್ಸಿಯಂ, ಮ್ಯಾಂಗನೀಸ್, ಮೆಗ್ನೀಸಿಯಮ್ ಮತ್ತು ತಾಮ್ರ, ವಿಟಮಿನ್ ಬಿ 12, ಕಬ್ಬಿಣ ಮತ್ತು ಪ್ರೋಟೀನ್ ಸಮೃದ್ಧವಾಗಿದೆ ಮತ್ತು ಕೊಬ್ಬು, ಕೊಲೆಸ್ಟ್ರಾಲ್ ಮತ್ತು ಸಕ್ಕರೆ ಅಂಶವು ತುಂಬಾ ಕಡಿಮೆಯಾಗಿದೆ
ಬೆಳಗಿನ ಸಮಯದಲ್ಲಿ ತಿಂಡಿ ತಿನ್ನುವ ಮುಂಚೆ ಒಂದು ಲೋಟ ಬಾರ್ಲಿ ನೀರು ಕುಡಿದರೆ ಹಲವು ಆರೋಗ್ಯಕರ ಪ್ರಯೋಜನಗಳು ನಮ್ಮದಾಗುತ್ತವೆ.
1) ಬಾರ್ಲಿಯು ಆ್ಯಂಟಿಆಕ್ಸಿಡೆಂಟ್ಸ್ ಸಮೃದ್ಧವಾಗಿದ್ದು ಇವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ.
2) ಬಾರ್ಲಿ ನೀರನ್ನು ಸೇವಿಸುವುದರಿಂದ ಜೀರ್ಣಕ್ರಿಯೆ ಸಮಸ್ಯೆ ನಿವಾರಣೆಯಾಗುತ್ತದೆ. ಬಾರ್ಲಿಯಲ್ಲಿರುವ ಫೈಬರ್ ಅಂಶವು ಜೀರ್ಣಾಂಗವನ್ನು ಆರೋಗ್ಯಕರವಾಗಿಸುತ್ತದೆ. ಅಜೀರ್ಣ, ಮಲಬದ್ಧತೆ, ವಾಯು, ಎದೆಯುರಿ, ಅಸಿಡಿಟಿ, ಗ್ಯಾಸ್ ಮುಂತಾದ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.
3) ಬಾರ್ಲಿಯನ್ನು ಸೇವಿಸುವುದರಿಂದ ಅದರಲ್ಲಿರುವ ಪೋಷಕಾಂಶಗಳು ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ. ಇದು ರಕ್ತದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಸಹ ಕರಗಿಸುತ್ತದೆ.
4) ಬಾರ್ಲಿ ಪುಡಿಯನ್ನು ಬಿಸಿ ನೀರಿನಲ್ಲಿ ಬೆರೆಸಿ ಕುಡಿದರೆ ಮೂತ್ರ ಸರಾಗವಾಗಿ ವಿಸರ್ಜನೆಯಾಗುತ್ತದೆ.
5) ಗರ್ಭಿಣಿಯರು ಪ್ರತಿದಿನ ಬಾರ್ಲಿ ನೀರನ್ನು ಕುಡಿಯುವುದರಿಂದ ಕಾಲಿನ ಊತದ ಸಮಸ್ಯೆ ಅವರ ಮೇಲೆ ಪರಿಣಾಮ ಬೀರುವುದಿಲ್ಲ. ಆಯಾಸವೂ ಆಗುವುದಿಲ್ಲ. ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಬಾರ್ಲಿ ನೀರನ್ನು ಕುಡಿದರೆ ಹುಟ್ಟುವ ಮಗು ಕೂಡ ಆರೋಗ್ಯವಾಗಿರುತ್ತದೆ.
6) ಬಾರ್ಲಿ ನೀರನ್ನು ದಿನನಿತ್ಯ ಸೇವಿಸುತ್ತಿದ್ದರೆ ಕೂದಲಿನ ಆರೋಗ್ಯಕ್ಕೆ ಒಳ್ಳೆಯದು.
7) ಬಾರ್ಲಿ ನೀರು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವ ಮೂಲಕ ಹೃದಯದ ಆರೋಗ್ಯಕ್ಕೆ ಕೊಡುಗೆ ನೀಡುತ್ತದೆ.
8) ಬಾರ್ಲಿ ನೀರನ್ನು ಸೇವಿಸುವುದರಿಂದ ರಕ್ತದ ಒತ್ತಡ, ಹೊಟ್ಟೆ ಹುಣ್ಣು, ಕರುಳಿನ ಬೇನೆ ಸಮಸ್ಯೆಯು ದೂರವಾಗುತ್ತದೆ.
9) ಬಾರ್ಲಿಯು ಕಡಿಮೆ ಕ್ಯಾಲೋರಿ ಮತ್ತು ಹೆಚ್ಚಿನ ಫೈಬರ್ ಆಹಾರವಾಗಿದ್ದು ಅದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.
10) ಕಿಡ್ನಿ ಸ್ಟೋನ್ ಸಮಸ್ಯೆಯಿಂದ ಬಳಲುತ್ತಿರುವವರು ಬಾರ್ಲಿಯನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ, ಶೋಧಿಸಿ ಸೇವಿಸುವುದರಿಂದ ಈ ಸಮಸ್ಯೆಯಿಂದ ಮುಕ್ತರಾಗಬಹುದು.
11 ) ಬಾರ್ಲಿ ನೀರು ಮೂಳೆಗಳಲ್ಲಿರುವ ಕೊಳಕು ಯೂರಿಕ್ ಆಸಿಡ್ ಹರಳುಗಳನ್ನು ಒಡೆದು ಕೀಲು ಮತ್ತು ಮೊಣಕಾಲು ನೋವನ್ನು ಕಡಿಮೆ ಮಾಡುತ್ತದೆ.
12) ಬಾರ್ಲಿ ಗಂಜಿಯನ್ನು ಮಜ್ಜಿಗೆ ಮತ್ತು ನಿಂಬೆರಸದೊಂದಿಗೆ ಸೇವಿಸಿದರೆ ತಲೆನೋವು ಕಡಿಮೆಯಾಗುತ್ತದೆ.
.
13) ಗಾಯದ ಕಲೆಗಳಿದ್ದರೆ ಒಂದು ಚಮಚದಷ್ಟು ಚಾರ್ಲಿ ಪುಡಿ, ಮೊಸರು, ಒಂದು ಚಿಟಿಕೆಯಷ್ಟು ಅರಶಿನ ಹಾಗೂ ನಿಂಬೆರಸ ಬೆರೆಸಿ ಹಚ್ಚುವುದರಿಂದ ಕಲೆ ಮಾಸುತ್ತದೆ.
14) ಬಾರ್ಲಿಯ ನೀರನ್ನು ಸೋಸಿ ಮುಖವನ್ನು ತೊಳೆಯುವುದರಿಂದ ಮುಖದ ಚರ್ಮದ ಕಾಂತಿ ಹೆಚ್ಚಿಸಿ, ವೃದ್ಧಾಪ್ಯದ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ.
15) ಬಾರ್ಲಿಯನ್ನು ನೀರಿನಲ್ಲಿ ಕುದಿಸಿ ಕುಡಿಯುವುದರಿಂದ ಗಂಟಲು ನೋವು, ಟಾನ್ಸಿಲ್ ಸೇರಿದಂತೆ ಇನ್ನಿತ್ತರ ಸಮಸ್ಯೆಗಳು ನಿವಾರಣೆಯಾಗುತ್ತದೆ.
ಬಾರ್ಲಿ ನೀರನ್ನು ಹೇಗೆ ತಯಾರಿಸುವುದು?
ಬಾರ್ಲಿ ನೀರನ್ನು ತಯಾರಿಸಲು, 1 ಕಪ್ ಬಾರ್ಲಿ ಧಾನ್ಯಗಳನ್ನು 3 ರಿಂದ 4 ಕಪ್ ನೀರಿನಲ್ಲಿ 30-40 ನಿಮಿಷಗಳ ಕಾಲ ಕುದಿಸಿ. ಮಿಶ್ರಣವನ್ನು ಸೋಸಿ ತಣ್ಣಗಾಗಲು ಬಿಡಿ. ನೀವು ಸುವಾಸನೆಗಾಗಿ ನಿಂಬೆ ರಸ ಅಥವಾ ಜೇನುತುಪ್ಪವನ್ನು ಸೇರಿಸಬಹುದು. ಅಥವಾ ಈ ನೀರಿಗೆ ಚಿಟಿಕೆ ಉಪ್ಪು ಸೇರಿಸಿಯೂ ಸೇವಿಸಬಹುದು . ಅದರ ಹೊರತಾಗಿ, ಉಪ್ಪು ಜೊತೆಗೆ ಕಾಲು ಲೋಟ ಮಜ್ಜಿಗೆಯನ್ನು ಬೆರೆಸಿ ಕುಡಿಯಬಹುದು.
ಬಾರ್ಲಿ ಸಲಾಡ್
ಬಾರ್ಲಿಯನ್ನು ರುಚಿಕರವಾದ ಮತ್ತು ಪೌಷ್ಟಿಕ ಸಲಾಡ್ ಮಾಡಲು ಬಳಸಬಹುದು. ಬಾರ್ಲಿಯನ್ನು ಬೇಯಿಸಿ ಮತ್ತು ಸೌತೆಕಾಯಿಗಳು, ಟೊಮೆಟೊಗಳು ಮತ್ತು ಬೆಲ್ ಪೆಪರ್ಗಳಂತಹ ನಿಮ್ಮ ನೆಚ್ಚಿನ ತರಕಾರಿಗಳೊಂದಿಗೆ ಮಿಶ್ರಣ ಮಾಡಿ. ಇದು ನಿಮ್ಮ ಊಟಕ್ಕೆ ವಿವಿಧ ಟೆಕಶ್ಚರ್ ಮತ್ತು ಸುವಾಸನೆಗಳನ್ನು ಸೇರಿಸುವುದು ಮಾತ್ರವಲ್ಲದೆ ನಿಮ್ಮ ಜೀವಸತ್ವಗಳು ಮತ್ತು ಉತ್ಕರ್ಷಣ ನಿರೋಧಕಗಳ ಸೇವನೆಯನ್ನು ಹೆಚ್ಚಿಸುತ್ತದೆ.
ಬಾರ್ಲಿ ಎಲ್ಲರಿಗೂ ಒಳ್ಳೆಯದು ?
ಬಾರ್ಲಿಯನ್ನು ಸಾಮಾನ್ಯವಾಗಿ ಹೆಚ್ಚಿನ ಜನರು ಸೇವಿಸಲು ಸುರಕ್ಷಿತವೆಂದು ಪರಿಗಣಿಸಲಾಗುತ್ತದೆ. ಆದಾಗ್ಯೂ, ಉದರದ ಕಾಯಿಲೆ ಅಥವಾ ಗ್ಲುಟನ್ ಅಸಹಿಷ್ಣುತೆ ಹೊಂದಿರುವವರು ಅದನ್ನು ತಪ್ಪಿಸಬೇಕು, ಏಕೆಂದರೆ ಇದು ಗ್ಲುಟನ್ ಅನ್ನು ಹೊಂದಿರುತ್ತದೆ. ಹೆಚ್ಚುವರಿಯಾಗಿ, ಮಧುಮೇಹ ಹೊಂದಿರುವ ಜನರು ಬಾರ್ಲಿಯನ್ನು ಸೇವಿಸುವ ಮೊದಲು ತಮ್ಮ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ಸೌಮ್ಯಾ ಸನತ್








