- ಒಪ್ಪಂದ ಉಲ್ಲಂಘಿಸಿದರೆ ಭೀಕರ ದಾಳಿ
ವಾಷಿಂಗ್ಟನ್: ಅಮೆರಿಕ, ಇಸ್ರೇಲ್ ಹಾಗೂ ಇರಾನ್ ನಡುವಿನ ಕದನ ವಿರಾಮ ಘೋಷಣೆಯಾದ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‌ಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ. ಕದನ ವಿರಾಮ ಮುಂದುವರಿದಷ್ಟೂ ಇರಾನ್ ಮತ್ತು ಅದರ ಸುತ್ತಮುತ್ತ ಪ್ರದೇಶಗಳು ಸುರಕ್ಷಿತವಾಗಿರುತ್ತವೆ. ಆದರೆ ಒಪ್ಪಂದವನ್ನು ಉಲ್ಲಂಘಿಸಿದರೆ ಹಿಂದೆಂದಿಗಿಂತಲೂ ಭೀಕರ ದಾಳಿ ನಡೆಯಲಿದೆ ಎಂದು ಎಚ್ಚರಿಸಿದ್ದಾರೆ.
ಇನ್ನು ಮುಂದೆ ಹಾರ್ಮುಜ್ ಜಲಸಂಧಿ ಸುರಕ್ಷಿತವಾಗಿ ಮತ್ತು ಮುಕ್ತವಾಗಿ ಇರಲಿದೆ. ಇರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದುವುದಿಲ್ಲ ಎಂದು ಟ್ರಂಪ್ ಹೇಳಿದ್ದಾರೆ. ಒಪ್ಪಂದ ಅಂತಿಮಗೊಳ್ಳುವವರೆಗೆ ಇರಾನ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಮೆರಿಕ ಸೇನೆಯನ್ನು ನಿಯೋಜಿಸಲಾಗುವುದು ಎಂದು ತಿಳಿಸಿದ್ದಾರೆ.
“ನಮ್ಮ ಸೇನೆ ಸಜ್ಜಾಗಿದೆ, ವಿಶ್ರಾಂತಿ ಪಡೆಯುತ್ತಿದ್ದು, ಮುಂದಿನ ವಿಜಯಕ್ಕಾಗಿ ಕಾಯುತ್ತಿದೆ” ಎಂದು ಟ್ರಂಪ್ ಹೇಳಿದ್ದಾರೆ.
ಏಪ್ರಿಲ್ 7ರಂದು ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧಕ್ಕೆ 14 ದಿನಗಳ ಕದನ ವಿರಾಮ ಘೋಷಿಸಲಾಗಿತ್ತು. ಕದನ ವಿರಾಮಕ್ಕೂ ಮುನ್ನ ಇರಾನ್ 10 ಷರತ್ತುಗಳನ್ನು ಮುಂದಿರಿಸಿದ್ದು, ಅವುಗಳನ್ನು ಅಮೆರಿಕ ಹೇಗೆ ಸ್ವೀಕರಿಸುತ್ತದೆ ಎಂಬುದರ ಮೇಲೆ ಮುಂದಿನ ಬೆಳವಣಿಗೆಗಳು ಅವಲಂಬಿತವಾಗಿವೆ.ಇದನ್ನು ಓದಿ –ಲೋಕಾಯುಕ್ತ ದಾಳಿ; ಮೀನುಗಾರಿಕೆ ಅಧಿಕಾರಿ ಮನೆಯಲ್ಲಿ ಕೋಟಿ ಆಸ್ತಿ ಪತ್ತೆ
ಇರಾನ್ ಪ್ರಸ್ತಾಪಿಸಿದ 10 ಅಂಶಗಳನ್ನು ಮಾತುಕತೆಗೆ ಆಧಾರವಾಗಿ ಪರಿಗಣಿಸಲಾಗಿದ್ದು, ಈ ಎರಡು ವಾರಗಳ ಅವಧಿ ದೀರ್ಘಕಾಲದ ಶಾಂತಿ ಒಪ್ಪಂದಕ್ಕೆ ದಾರಿ ಮಾಡಿಕೊಡುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗಿದೆ.








