By using this site, you agree to the Privacy Policy and Terms of Use.
Accept
VarthamanVarthamanVarthaman
Notification Show More
Font ResizerAa
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
    ArticlesShow More
    ಉಡುಗೊರೆ ಹೊರೆಯಾಗದಿರಲಿ
    May 16, 2026
    ಅಸಹಾಯಕತೆಗೆ ಸ್ಪಂದಿಸುವ ಕನ್ನಡಿಗರ ಸೌಜನ್ಯಕ್ಕೆ ಸಾಟಿಯುಂಟೇ……?
    May 16, 2026
    ” ರಿಜೆಕ್ಷನ್ ಟು ರೆವಲ್ಯೂಷನ್ “
    May 5, 2026
    “ಸೂರ್ಯನಿಗೆ ಸವಾಲೆಸೆದವರು”
    May 3, 2026
    ಸ್ವಭಾವದ ಸ್ವರೂಪ
    May 3, 2026
  • Sports
  • National
  • International
  • Crime
Reading: ಮೇ 1ರಿಂದ ಮದ್ಯದ ದರ ಭಾರಿ ಏರಿಕೆ ಸಾಧ್ಯತೆ
Share
Font ResizerAa
VarthamanVarthaman
  • Home
  • Karnataka
  • Articles
  • Sports
  • National
  • International
  • Crime
Search
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
  • Sports
  • National
  • International
  • Crime
Follow US
Varthaman > Karnataka – Latest Breaking News > Karnataka > Bengaluru > ಮೇ 1ರಿಂದ ಮದ್ಯದ ದರ ಭಾರಿ ಏರಿಕೆ ಸಾಧ್ಯತೆ
BengaluruKarnatakaTrending

ಮೇ 1ರಿಂದ ಮದ್ಯದ ದರ ಭಾರಿ ಏರಿಕೆ ಸಾಧ್ಯತೆ

Team Varthaman
Last updated: April 25, 2026 9:48 AM
Team Varthaman
Published: April 25, 2026
Share
SHARE

ಬೆಂಗಳೂರು: ಕರ್ನಾಟಕದಲ್ಲಿ ಮದ್ಯದ ದರವನ್ನು ಮತ್ತೆ ಏರಿಸುವ ಸಾಧ್ಯತೆ ಇದ್ದು, ಮೇ 1ರಿಂದ ಹೊಸ ದರಗಳು ಜಾರಿಗೆ ಬರುವ ನಿರೀಕ್ಷೆಯಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಈಗಾಗಲೇ ಹಲವು ಬಾರಿ ಮದ್ಯದ ಬೆಲೆ ಏರಿಕೆಯಾಗಿದ್ದು, ಇದೀಗ ಐದನೇ ಬಾರಿಗೆ ಅಬಕಾರಿ ಸುಂಕ ಪರಿಷ್ಕರಣೆ ನಡೆಯಲಿದೆ.

ಸರ್ಕಾರ ಹೊರಡಿಸಿರುವ ಕರಡು ಅಧಿಸೂಚನೆಯ ಪ್ರಕಾರ, ಇನ್ನು ಮುಂದೆ ಮದ್ಯದಲ್ಲಿರುವ ಆಲ್ಕೋಹಾಲ್ ಪ್ರಮಾಣದ ಆಧಾರದ ಮೇಲೆ ತೆರಿಗೆ ವಿಧಿಸುವ ವ್ಯವಸ್ಥೆ ಜಾರಿಯಾಗಲಿದೆ. ಮದ್ಯದಲ್ಲಿ ಆಲ್ಕೋಹಾಲ್ ಪ್ರಮಾಣ ಹೆಚ್ಚಿದ್ದಷ್ಟೂ ತೆರಿಗೆ ಹೆಚ್ಚಾಗಲಿದೆ.

Contents
  • ಬೆಂಗಳೂರು: ಕರ್ನಾಟಕದಲ್ಲಿ ಮದ್ಯದ ದರವನ್ನು ಮತ್ತೆ ಏರಿಸುವ ಸಾಧ್ಯತೆ ಇದ್ದು, ಮೇ 1ರಿಂದ ಹೊಸ ದರಗಳು ಜಾರಿಗೆ ಬರುವ ನಿರೀಕ್ಷೆಯಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಈಗಾಗಲೇ ಹಲವು ಬಾರಿ ಮದ್ಯದ ಬೆಲೆ ಏರಿಕೆಯಾಗಿದ್ದು, ಇದೀಗ ಐದನೇ ಬಾರಿಗೆ ಅಬಕಾರಿ ಸುಂಕ ಪರಿಷ್ಕರಣೆ ನಡೆಯಲಿದೆ.
    • ಸಂಭಾವ್ಯ ದರ ಏರಿಕೆ ಹೀಗಿದೆ:
Join WhatsApp Group

ಈ ಹೊಸ ಕ್ರಮದಿಂದ ಕಡಿಮೆ ಆಲ್ಕೋಹಾಲ್ ಹೊಂದಿರುವ ಕೆಲವು ಪ್ರೀಮಿಯಂ ಮದ್ಯಗಳ ದರ ಸ್ವಲ್ಪ ಇಳಿಕೆಯಾಗುವ ಸಾಧ್ಯತೆ ಇದ್ದರೂ, ಸಾಮಾನ್ಯವಾಗಿ ಬಳಕೆಯಲ್ಲಿರುವ ಮದ್ಯಗಳ ದರ ಶೇಕಡಾ 20ರವರೆಗೆ ಏರಿಕೆಯಾಗಬಹುದು ಎನ್ನಲಾಗಿದೆ.

ರಾಜ್ಯದ ಅಬಕಾರಿ ಆದಾಯದಲ್ಲಿ ಪ್ರಮುಖ ಪಾಲು ಹೊಂದಿರುವ ಮೊದಲ ನಾಲ್ಕು ಸ್ಲ್ಯಾಬ್‌ಗಳ ಮದ್ಯದ ಬೆಲೆ ಹೆಚ್ಚಳವಾಗಲಿದೆ. ವಿಸ್ಕಿ, ರಮ್, ಬ್ರಾಂಡಿ ಹಾಗೂ ಜಿನ್‌ಗಳ ಕ್ವಾರ್ಟರ್ ಬಾಟಲ್‌ಗೆ ₹15ರಿಂದ ₹25ರವರೆಗೆ ಏರಿಕೆ ಸಾಧ್ಯತೆ ಇದೆ.

ಸಂಭಾವ್ಯ ದರ ಏರಿಕೆ ಹೀಗಿದೆ:

ಸ್ಲ್ಯಾಬ್-1: ₹80ರಿಂದ ₹95ಕ್ಕೆ
ಸ್ಲ್ಯಾಬ್-2: ₹95ರಿಂದ ₹110ಕ್ಕೆ
ಸ್ಲ್ಯಾಬ್-3: ₹120ರಿಂದ ₹135ಕ್ಕೆ
ಸ್ಲ್ಯಾಬ್-4: ₹150ರಿಂದ ₹170ಕ್ಕೆ

ಫುಲ್ ಬಾಟಲ್ ಮದ್ಯದ ಮೇಲೆ ₹50ರಿಂದ ₹100ರವರೆಗೆ ಹೆಚ್ಚಳವಾಗುವ ಸಾಧ್ಯತೆ ಇದ್ದು, ಬಾರ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಇದು ಇನ್ನಷ್ಟು ದುಬಾರಿಯಾಗಬಹುದು.ಇದನ್ನು ಓದಿ –ಅಗಣಿತ ಆರೋಗ್ಯ ಭಾಗ್ಯಗಳ ರಾಜ ಈ ಕರಬೂಜ ಬೀಜ

Join WhatsApp Group

ಮೂರು ವರ್ಷಗಳಲ್ಲಿ ಐದನೇ ಬಾರಿ ದರ ಏರಿಕೆ ಮಾಡಲಾಗುತ್ತಿದೆ ಎಂದು ಗ್ರಾಹಕರು ಹಾಗೂ ವ್ಯಾಪಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸರ್ಕಾರ ತನ್ನ ಯೋಜನೆಗಳಿಗೆ ಹಣ ಸಂಗ್ರಹಿಸಲು ಮದ್ಯಪ್ರಿಯರ ಮೇಲೆಯೇ ಮತ್ತೆ ಹೊರೆ ಹಾಕುತ್ತಿದೆ ಎಂದು ಟೀಕಿಸಿದ್ದಾರೆ.

  • ಕರ್ನಾಟಕದಿಂದ ರಾಜ್ಯಸಭೆಗೆ 4 ಮಂದಿ ಆಯ್ಕೆ
    by Team Varthaman
    June 11, 2026
  • ಕೆಐಎ: 1.37 ಕೋಟಿ ಚಿನ್ನ ,ಗಾಂಜಾ ಜಪ್ತಿ
    by Team Varthaman
    June 11, 2026
  • KRS ನೀರಿನ ಮಟ್ಟ ಕುಸಿತ: ನೀರು ಹಂಚಿಕೆ ಆತಂಕ
    by Team Varthaman
    June 11, 2026
  • ಸಂಪುಟ ಕಸರತ್ತು: ದೆಹಲಿಗೆ ಸಿಎಂ ಡಿಕೆಶಿ
    by Team Varthaman
    June 10, 2026
  • ಒಂದೇ ಕುಟುಂಬದ ಮೂವರ ಅನುಮಾನಾಸ್ಪದ ಸಾವು
    by Team Varthaman
    June 9, 2026
ಶಾಸಕರ ಸದಸ್ಯತ್ವ ರದ್ದು ಮಾಡುವ ಅಧಿಕಾರ ಸ್ಪೀಕರ್‌ಗೆ ಇಲ್ಲ: ಯು.ಟಿ. ಖಾದರ್
ರಾಜಕೀಯ ನನ್ನ ಗುರಿ, ಸಿನಿಮಾ ಅಲ್ಲ: ನಿಖಿಲ್
ದೌರ್ಜನ್ಯ ಆರೋಪ: ವಚನಾನಂದ ಶ್ರೀ ವಿರುದ್ಧ ಪೋಕ್ಸೊ ಪ್ರಕರಣ
ಜಾತಿವ್ಯವಸ್ಥೆ ಇರುವವರೆಗೆ ಬಸವ ತತ್ವಗಳು ಪ್ರಸ್ತುತ: ಸಿಎಂ ಸಿದ್ದರಾಮಯ್ಯ
ಐದು ಜಿಲ್ಲೆಗಳಲ್ಲಿ ಗುಡುಗು ಮಳೆ – ಬೆಂಗಳೂರಿನಲ್ಲಿ ಬಿಸಿಲು ಹೆಚ್ಚಳ
TAGGED:Liquor priceLiquor price hikeಮದ್ಯ ದರ
Share This Article
Facebook Email Print
Leave a Comment

Leave a Reply Cancel reply

Your email address will not be published. Required fields are marked *

Follow US

Find US on Social Medias
FacebookLike
XFollow
YoutubeSubscribe
TelegramFollow

Weekly Newsletter

Subscribe to our newsletter to get our newest articles instantly!
[mc4wp_form]
Popular News
KarnatakaMysoreTrending

ಸೆ.1ಕ್ಕೆ ಮೈಸೂರಿಗೆ  ರಾಷ್ಟ್ರಪತಿ ಆಗಮನ

Team Varthaman
Team Varthaman
August 21, 2025
ಪೌರಕಾರ್ಮಿಕರಿಗೆ ಉಚಿತ ಬಟ್ಟೆ ವಿತರಣೆ, ಸಹಪಂಕ್ತಿ ಭೋಜನ
ದಸರಾ ಉದ್ಘಾಟಕರಿಗೆ ಚಾಮುಂಡಿ ಇತಿಹಾಸ ತಿಳಿಸಿ: ವಿ.ಸೋಮಣ್ಣ
ಅ. 31ರೊಳಗೆ ಜಾತಿ ಗಣತಿ ಸಮೀಕ್ಷೆ ಪೂರ್ಣಗೊಳಿಸಬೇಕು – ಡಿಸಿಎಂ ಡಿ.ಕೆ. ಶಿ
ಅಪ್ರಾಪ್ತೆಯ ಮೇಲೆ ಅತ್ಯಾಚಾರ ಆರೋಪ: ಸ್ವಾಮೀಜಿ ಬಂಧನ
- Advertisement -
Ad imageAd image
Global Coronavirus Cases

Confirmed

0

Death

0

More Information:Covid-19 Statistics

Categories

  • Articles
  • Sports
  • Latest News
  • Karnataka News

About US

Since its inception in 1957, Varthamana has stood tall as one of the most trusted and respected Kannada daily newspapers. With deep roots in the rich cultural landscape of Karnataka, Varthamana continues to be the voice of the people, championing truth, transparency, and the values that define the region. Established with a strong commitment to ethical journalism, our newspaper has consistently provided comprehensive coverage, authentic news, and insightful editorials for over six decades. Today, under the dynamic leadership of Editor K. N. Ravi, Varthamana shines even brighter, blending a proud heritage with a modern outlook to meet the evolving needs of readers across the state. Our presence in the digital space, through Varthamana Digital, ensures that our trusted news and regional stories reach a wider audience faster and with greater impact.

Contact Us

© Varthaman. All Rights Reserved.
Welcome Back!

Sign in to your account

Username or Email Address
Password

Lost your password?