By using this site, you agree to the Privacy Policy and Terms of Use.
Accept
VarthamanVarthamanVarthaman
Notification Show More
Font ResizerAa
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
    ArticlesShow More
    “ಸೂರ್ಯನಿಗೆ ಸವಾಲೆಸೆದವರು”
    May 3, 2026
    ಸ್ವಭಾವದ ಸ್ವರೂಪ
    May 3, 2026
    “ರೈಟ್ ಟು ಡ್ರೈ”
    May 3, 2026
    ಸುಡುವ ಸೂರ್ಯನಿಗೊಂದು ಪತ್ರ
    May 3, 2026
    “ಯಶಸ್ಸಿಗಿಂತ ಸಂಸ್ಕಾರ ದೊಡ್ಡದು”
    May 1, 2026
  • Sports
  • National
  • International
  • Crime
Reading: “ಯಶಸ್ಸಿಗಿಂತ ಸಂಸ್ಕಾರ ದೊಡ್ಡದು”
Share
Font ResizerAa
VarthamanVarthaman
  • Home
  • Karnataka
  • Articles
  • Sports
  • National
  • International
  • Crime
Search
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
  • Sports
  • National
  • International
  • Crime
Follow US
Varthaman > Karnataka – Latest Breaking News > Articles > “ಯಶಸ್ಸಿಗಿಂತ ಸಂಸ್ಕಾರ ದೊಡ್ಡದು”
Articles

“ಯಶಸ್ಸಿಗಿಂತ ಸಂಸ್ಕಾರ ದೊಡ್ಡದು”

Team Varthaman
Last updated: May 1, 2026 11:47 AM
Team Varthaman
Published: May 1, 2026
Share
SHARE

ಜಗತ್ತಿನಾದ್ಯಂತ ಕೋಟ್ಯಂತರ ಅಭಿಮಾನಿಗಳಿಂದ ಕ್ರಿಕೆಟ್ ದೇವರು ಎಂದೇ ಆರಾಧಿಸಲ್ಪಡುವ ದಂತಕಥೆ ಸಚಿನ್ ತೆಂಡೂಲ್ಕರ್. ಶತಮಾನದ ಸಾಧನೆ,ನೂರಾರು ದಾಖಲೆಗಳು ಮತ್ತು ಭಾರತರತ್ನದಂತಹ ಅತ್ಯುನ್ನತ ಗೌರವಗಳು ಅವರ ಮುಡಿಗೇರಿವೆ. ಆದರೆ,ಇತ್ತೀಚೆಗೆ ಆಂಧ್ರ ವಿಶ್ವವಿದ್ಯಾಲಯದ ಶತಮಾನೋತ್ಸವದ ವೇದಿಕೆಯ ಮೇಲೆ ಅವರು ತೋರಿದ ಒಂದು ನಡೆ, ಅವರ ಬ್ಯಾಟಿಂಗ್‌ಗಿಂತಲೂ ಹೆಚ್ಚು ಸ್ಫೂರ್ತಿದಾಯಕವಾಗಿತ್ತು. ಮುಖ್ಯಮಂತ್ರಿಗಳಿಂದ ವೇಂಕಟೇಶ್ವರ ಸ್ವಾಮಿಯ ಮೂರ್ತಿಯನ್ನು ಸ್ವೀಕರಿಸುವ ಮುನ್ನ, ಸಚಿನ್ ತಮ್ಮ ಪಾದರಕ್ಷೆಗಳನ್ನು ಕಳಚಿ ಪಕ್ಕಕ್ಕಿಟ್ಟು ಮೌನವಾಗಿ ನಮಿಸಿದರು. ಆ ಕ್ಷಣ ಸಾರಿದ ಸಂದೇಶವೊಂದೇ ಸಾಧನೆಗಿಂತ ಸಂಸ್ಕಾರ ಶ್ರೇಷ್ಠ.

Join WhatsApp Group

ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಗೆಲುವಿನ ಬೆನ್ನತ್ತಿರುವ ಯುವ ಪೀಳಿಗೆಗೆ ಈ ಸನ್ನಿವೇಶವು ಒಂದು ದಿವ್ಯ ದರ್ಶನ.ಯಶಸ್ಸಿನ ಉತ್ತುಂಗದಲ್ಲಿರುವಾಗ ಮನುಷ್ಯನಿಗೆ ಅಹಂಕಾರ ಆವರಿಸುವುದು ಸಹಜ. ಆದರೆ, ಸಚಿನ್ ಅವರು ಅಷ್ಟೊಂದು ಎತ್ತರಕ್ಕೆ ಬೆಳೆದಿದ್ದರೂ,ಸಂಪ್ರದಾಯ ಮತ್ತು ದೈವಿಕತೆಯ ಮುಂದೆ ತಮ್ಮ ವಿನಯವನ್ನು ಪ್ರದರ್ಶಿಸಿದರು. ನಾವು ಎಷ್ಟೇ ಎತ್ತರಕ್ಕೆ ಹಾರಿದರೂ ನಮ್ಮ ಪಾದಗಳು ನೆಲದ ಮೇಲಿರಬೇಕು ಎಂಬ ಜೀವನ ಸತ್ಯಕ್ಕೆ ಅವರು ಕನ್ನಡಿ ಹಿಡಿದರು.

ಯುವ ಕಣ್ಮಣಿಗಳೇ ಗಮನಿಸಿ
ಕೇವಲ ಪದವಿಗಳು ಅಥವಾ ಬ್ಯಾಂಕ್ ಬ್ಯಾಲೆನ್ಸ್ ನಿಮ್ಮ ವ್ಯಕ್ತಿತ್ವವನ್ನು ನಿರ್ಧರಿಸುವುದಿಲ್ಲ. ಬದಲಾಗಿ,ನೀವು ನೀಡುವ ಗೌರವ ಮತ್ತು ಪಾಲಿಸುವ ಸಂಸ್ಕಾರಗಳು ನಿಮ್ಮನ್ನು ಮಹಾಪುರುಷರನ್ನಾಗಿ ಮಾಡುತ್ತವೆ. ಆಧುನಿಕತೆಯ ಹೆಸರಿನಲ್ಲಿ ನಮ್ಮ ಬೇರುಗಳನ್ನು ಕತ್ತರಿಸಿಕೊಳ್ಳುವುದು ಪ್ರಗತಿಯಲ್ಲ. ಸಚಿನ್ ಅವರ ಈ ಸರಳತೆ ನಮಗೆ ಕಲಿಸುವುದು ಏನೆಂದರೆ ವಿನಯವೇ ನಿಜವಾದ ವಿಜಯದ ಸಂಕೇತ.

ನೀವು ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಿ,ಆ ಸಾಧನೆಯ ಶಿಖರದಲ್ಲೂ ತಲೆಬಾಗುವ ಗುಣ ನಿಮ್ಮದಾಗಿರಲಿ.ಅಹಂಕಾರವನ್ನು ಕಳಚಿ ಸಂಸ್ಕಾರವನ್ನು ಮೈಗೂಡಿಸಿಕೊಂಡಾಗ ಮಾತ್ರ ನೀವು ಸಮಾಜದಲ್ಲಿ ಅಳಿಸಲಾಗದ ಛಾಪು ಮೂಡಿಸಲು ಸಾಧ್ಯ. ನೆನಪಿಡಿ,ಯಶಸ್ಸು ತಾತ್ಕಾಲಿಕ, ಆದರೆ ಸಂಸ್ಕಾರವಂತ ವ್ಯಕ್ತಿತ್ವ ಶಾಶ್ವತ.

ಡಾ.ಸುಧಾಕರ.ಜಿ.ಲಕ್ಕವಳ್ಳಿ.

  • “ಸೂರ್ಯನಿಗೆ ಸವಾಲೆಸೆದವರು”
    by Team Varthaman
    May 3, 2026
  • ಸ್ವಭಾವದ ಸ್ವರೂಪ
    by Team Varthaman
    May 3, 2026
  • “ರೈಟ್ ಟು ಡ್ರೈ”
    by Team Varthaman
    May 3, 2026
  • ಸುಡುವ ಸೂರ್ಯನಿಗೊಂದು ಪತ್ರ
    by Team Varthaman
    May 3, 2026
  • ಗಂಡು ಮಗುವಿಗೆ ಜನ್ಮ ನೀಡಿದ ಡಾಲಿ ಧನಂಜಯ್–ಧನ್ಯತಾ ದಂಪತಿ
    by Team Varthaman
    May 2, 2026
ಪೆಟ್ಟು‌ ಬಿದ್ದ ಜಾಗಕ್ಕೇ ಮತ್ತೆಮತ್ತೆ ಪೆಟ್ಟು ಬೀಳೋ ಬದುಕಿನ ವಿಸ್ಮಯ!
ಪಾರಂಪರಿಕ ಹಣ್ಣು ಬೇಲದ ಉಪಯೋಗಗಳು
“ನಥಿಂಗ್ ಈಸ್ ಇಂಪಾಸಿಬಲ್: ಕೀನ್ಯಾ ಸಾವೆ”
ಚಾತುರ್ಮಾಸ
ಶಿವರಾತ್ರಿ…. ಶಿವನ ಆರಾಧನೆಯ ದಿನ
TAGGED:sachinSuccessಸಚಿನ್ ತೆಂಡೂಲ್ಕರ್ಸಂಸ್ಕಾರ
Share This Article
Facebook Email Print
Leave a Comment

Leave a Reply Cancel reply

Your email address will not be published. Required fields are marked *

Follow US

Find US on Social Medias
FacebookLike
XFollow
YoutubeSubscribe
TelegramFollow

Weekly Newsletter

Subscribe to our newsletter to get our newest articles instantly!
[mc4wp_form]
Popular News
Trending

24 ಕ್ಯಾರಟ್ ಚಿನ್ನದಲ್ಲಿ ₹12,000 ಭಾರಿ ಏರಿಕೆ!

Team Varthaman
Team Varthaman
May 16, 2025
ಘಾನಾದಿಂದ ಪ್ರಧಾನಿ ಮೋದಿಗೆ ರಾಷ್ಟ್ರೀಯ ಗೌರವ
ಚಾಮುಂಡೇಶ್ವರಿ ದೇವಾಲಯದಲ್ಲಿ ಭಕ್ತರಿಗೆ ಡ್ರೈಫ್ರೂಟ್ಸ್‌ ಪಾಕೆಟ್, ಬಾದಾಮಿ ಹಾಲು ವಿತರಣೆಗೆ ನಿರ್ಧಾರ
ಸ್ನೇಹಮಯಿ ಕೃಷ್ಣಗೆ ಆಮಿಷ ? ಮುಡಾ ಮಾಜಿ ಆಯುಕ್ತ ವಿರುದ್ಧ ಆರೋಪ
ಮೇ 5 ರಿಂದ CET ದಾಖಲೆ ಪರಿಶೀಲನೆ ಪ್ರಾರಂಭ: ವಿಶೇಷ ವರ್ಗದ ಅಭ್ಯರ್ಥಿಗಳಿಗೆ ಮುಂಜಾಗ್ರತಾ ಸೂಚನೆಗಳು
- Advertisement -
Ad imageAd image
Global Coronavirus Cases

Confirmed

0

Death

0

More Information:Covid-19 Statistics

Categories

  • Articles
  • Sports
  • Latest News
  • Karnataka News

About US

Since its inception in 1957, Varthamana has stood tall as one of the most trusted and respected Kannada daily newspapers. With deep roots in the rich cultural landscape of Karnataka, Varthamana continues to be the voice of the people, championing truth, transparency, and the values that define the region. Established with a strong commitment to ethical journalism, our newspaper has consistently provided comprehensive coverage, authentic news, and insightful editorials for over six decades. Today, under the dynamic leadership of Editor K. N. Ravi, Varthamana shines even brighter, blending a proud heritage with a modern outlook to meet the evolving needs of readers across the state. Our presence in the digital space, through Varthamana Digital, ensures that our trusted news and regional stories reach a wider audience faster and with greater impact.

Contact Us

© Varthaman. All Rights Reserved.
Welcome Back!

Sign in to your account

Username or Email Address
Password

Lost your password?