ಬೆಂಗಳೂರು: ರಾಜ್ಯದಲ್ಲಿ ಮೂವರು IPS ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಸಂದೀಪ್ ಪಾಟೀಲ್ ಅವರನ್ನು ರಾಜ್ಯ ಮೀಸಲು ಪೊಲೀಸ್ (ಕೆಎಸ್‌ಆರ್‌ಪಿ) ಪಡೆಯ ಐಜಿಪಿ ಹುದ್ದೆಯಿಂದ ಬೆಳಗಾವಿ ಉತ್ತರ ವಲಯ ಐಜಿಪಿಯಾಗಿ ವರ್ಗಾವಣೆ ಮಾಡಲಾಗಿದೆ.
ಇದಕ್ಕೂ ಮುನ್ನ ಉತ್ತರ ವಲಯದ ಐಜಿಪಿಯಾಗಿದ್ದ ಚೇತನ್‌ಸಿಂಗ್ ರಾಠೋರ್ ಅವರನ್ನು ಸಿಐಡಿಯ ಆರ್ಥಿಕ ಅಪರಾಧಗಳ ವಿಭಾಗದ ಐಜಿಪಿಯಾಗಿ ನಿಯೋಜಿಸಲಾಗಿದೆ.
ಸ್ಥಳ ನಿರೀಕ್ಷಣೆಯಲ್ಲಿದ್ದ ಅನುಪಮ್ ಅಗ್ರವಾಲ್ ಅವರನ್ನು ಸಂದೀಪ್ ಪಾಟೀಲ್ ವರ್ಗಾವಣೆಯಿಂದ ತೆರವಾದ ಹಾಗೂ ಮೇಲ್ದರ್ಜೆಗೇರಿಸಲಾದ ಕೆಎಸ್‌ಆರ್‌ಪಿ ಪಡೆಯ ಐಜಿಪಿಯಾಗಿ ನೇಮಕ ಮಾಡಲಾಗಿದೆ.








