ಮಂಗಳೂರು: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಏಪ್ರಿಲ್ 27 ಮತ್ತು 28ರಂದು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಪ್ರವಾಸ ಕೈಗೊಳ್ಳಲಿದ್ದಾರೆ.
ಏಪ್ರಿಲ್ 27ರಂದು ರಾತ್ರಿ 7.15ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಅವರು, ಬಳಿಕ ಕೊಲ್ಲೂರಿಗೆ ತೆರಳಿ ವಾಸ್ತವ್ಯ ಮಾಡುವರು.
ಏಪ್ರಿಲ್ 28ರಂದು ಬೆಳಿಗ್ಗೆ 11 ಗಂಟೆಗೆ ಉಡುಪಿಯ ಐಐಜಿಜೆ ಕ್ಯಾಂಪಸ್‌ಗೆ ಭೇಟಿ ನೀಡಲಿದ್ದಾರೆ. ನಂತರ ಮಧ್ಯಾಹ್ನ 2.45ಕ್ಕೆ ಮಂಗಳೂರಿಗೆ ಆಗಮಿಸುವರು.
ಮಧ್ಯಾಹ್ನ 3.30ಕ್ಕೆ ನಗರದ ನಿಟ್ಟೆ ಡೀಮ್ಡ್ ವಿಶ್ವವಿದ್ಯಾನಿಲಯದಲ್ಲಿ ನಡೆಯುವ ಎನ್. ವಿನಯ ಹೆಗ್ಡೆ ಸ್ಮಾರಕ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.ಇದನ್ನು ಓದಿ –AICC ಅಧ್ಯಕ್ಷರನ್ನು ನಾನು ಭೇಟಿ ಮಾಡದೇ ಇನ್ಯಾರು ಮಾಡುತ್ತಾರೆ?: ಡಿಕೆಶಿ ಪ್ರಶ್ನೆ
ಸಂಜೆ 5.40ಕ್ಕೆ ವಿಮಾನದ ಮೂಲಕ ಬೆಂಗಳೂರಿಗೆ ತೆರಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.








