ಮುಂಬೈ: ನಟ ರಣವೀರ್ ಸಿಂಗ್ ವಿರುದ್ಧ ಮೂರು ವರ್ಷಗಳ ನಿಷೇಧ ಹೇರಲಾಗಿದೆ ಎಂಬ ಸುದ್ದಿಯನ್ನು ಪಶ್ಚಿಮ ಭಾರತ ಚಲನಚಿತ್ರ ನೌಕರರ ಒಕ್ಕೂಟ (FWICE) ತಳ್ಳಿಹಾಕಿದೆ.
ಇದು ಬ್ಯಾನ್ ಅಲ್ಲ, ನಾನ್-ಕೋಆಪರೇಷನ್ ಮಾತ್ರ ಎಂದು ಎಫ್‌ಡಬ್ಲುಐಸಿಇ ಮುಖ್ಯ ಸಲಹೆಗಾರ ಅಶೋಕ್ ಪಂಡಿತ್ ಸ್ಪಷ್ಟಪಡಿಸಿದ್ದಾರೆ.
‘ಡಾನ್ 3’ ಸಿನಿಮಾ ವಿವಾದದ ಬಳಿಕ ರಣವೀರ್ ಸಿಂಗ್ ವಿರುದ್ಧ ನಾನ್-ಕೋಆಪರೇಷನ್ ಘೋಷಿಸಲಾಗಿತ್ತು. ಆದರೆ ಅವರನ್ನು ಚಿತ್ರರಂಗದಿಂದ ಬ್ಯಾನ್ ಮಾಡಿಲ್ಲ ಎಂದು ಸಂಘಟನೆ ತಿಳಿಸಿದೆ.
ನಿರ್ಮಾಪಕರಾದ ಫರ್ಹಾನ್ ಅಖ್ತರ್ ಮತ್ತು ರಿತೇಶ್ ಸಿಧ್ವಾನಿ ಸಿನಿಮಾದ ಪ್ರೀ-ಪ್ರೊಡಕ್ಷನ್‌ಗೆ ಸುಮಾರು ₹45 ಕೋಟಿ ವೆಚ್ಚ ಮಾಡಿರುವುದಾಗಿ ಹೇಳಲಾಗಿದೆ. ಈ ಹಿನ್ನೆಲೆ ಸಮಸ್ಯೆ ಬಗೆಹರಿಯುವವರೆಗೆ ಸದಸ್ಯರು ರಣವೀರ್ ಜೊತೆ ಕೆಲಸ ಮಾಡಬಾರದು ಎಂದು ಸೂಚಿಸಲಾಗಿದೆ.ಇದನ್ನು ಓದಿ –ನಾಳೆ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ?
ಇದಕ್ಕೆ ಪ್ರತಿಕ್ರಿಯಿಸಿದ ರಣವೀರ್ ಆಪ್ತರು, ಚಿತ್ರರಂಗ ಹಾಗೂ ಡಾನ್ ಫ್ರಾಂಚೈಸಿಗೆ ಗೌರವ ನೀಡಿ ರಣವೀರ್ ಮೌನವಾಗಿದ್ದಾರೆ ಎಂದು ತಿಳಿಸಿದ್ದಾರೆ.








