ಬೆಂಗಳೂರು: ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಐಪಿಎಲ್ ಪಂದ್ಯಗಳ ಟಿಕೆಟ್ ಹೊಂದಿರುವವರಿಗೆ ನಮ್ಮ ಮೆಟ್ರೋದಲ್ಲಿ ಉಚಿತ ಪ್ರಯಾಣದ ಸೌಲಭ್ಯ ಕಲ್ಪಿಸಲಾಗಿದೆ ಎಂದು ಆರ್‌ಸಿಬಿ ಆಡಳಿತ ಮಂಡಳಿ ತಿಳಿಸಿದೆ.
ಮಾರ್ಚ್ 28ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಆರ್‌ಸಿಬಿ ಉದ್ಘಾಟನಾ ಪಂದ್ಯ ಆಡಲಿದ್ದು, ಏಪ್ರಿಲ್ 5ರಂದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧವೂ ಇದೇ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ.
ಈ ಪಂದ್ಯಗಳ ಟಿಕೆಟ್ ತೋರಿಸಿ ಅಭಿಮಾನಿಗಳು ಮೆಟ್ರೋ ಮೂಲಕ ಸ್ಟೇಡಿಯಂಗೆ ಹೋಗಿ ಬರಲು ಉಚಿತ ಪ್ರಯಾಣ ಮಾಡಬಹುದು. ಇದರ ಉದ್ದೇಶ ಸಂಚಾರ ದಟ್ಟಣೆ ಕಡಿಮೆ ಮಾಡುವುದು ಮತ್ತು ಸಾರ್ವಜನಿಕ ಸಾರಿಗೆ ಬಳಕೆಯನ್ನು ಉತ್ತೇಜಿಸುವುದಾಗಿದೆ.ಇದನ್ನು ಓದಿ –ಚಿಕಿತ್ಸೆ ವೇಳೆ ನೀರಾನೆ ದಾಳಿ: ಯುವ ವೈದ್ಯೆ ಸಾವು
ಈ ಯೋಜನೆ ಜಾರಿಗೆ ತರಲು ಬಿಎಂಆರ್‌ಸಿಎಲ್ ಮತ್ತು ಆರ್‌ಸಿಬಿ ನಿರ್ವಹಣಾ ಮಂಡಳಿ ನಡುವೆ ನಡೆದ ಚರ್ಚೆಗಳು ಯಶಸ್ವಿಯಾಗಿದ್ದು, ಅಭಿಮಾನಿಗಳಿಗೆ ಈ ಸೌಲಭ್ಯ ಒದಗಿಸಲಾಗಿದೆ.








