ನವದೆಹಲಿ: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಇರಾನ್ ಯುದ್ಧದ ಹಿನ್ನೆಲೆ ಜಾಗತಿಕ ಮಾರುಕಟ್ಟೆಯಲ್ಲಿ ಅಸ್ಥಿರತೆ ಕಂಡುಬಂದಿದ್ದು, ಚಿನ್ನ ಮತ್ತು ಬೆಳ್ಳಿ ದರದಲ್ಲಿ ಭಾರೀ ಇಳಿಕೆ ದಾಖಲಾಗಿದೆ.
ಚಿನ್ನದ ದರ ಸುಮಾರು ₹1,200 ಇಳಿಕೆಯಾಗಿದ್ದು, 10 ಗ್ರಾಂ 24 ಕ್ಯಾರೆಟ್ ಚಿನ್ನದ ದರ ₹14,722ರಿಂದ ₹13,514ಕ್ಕೆ ಇಳಿದಿದೆ. 22 ಕ್ಯಾರೆಟ್ ಚಿನ್ನದ ದರ ₹14,369ರಿಂದ ₹13,190ಕ್ಕೆ ಕುಸಿದಿದೆ.
ಬೆಳ್ಳಿಯ ದರದಲ್ಲಿ ದೊಡ್ಡ ಮಟ್ಟದ ಇಳಿಕೆ ಕಂಡುಬಂದಿದ್ದು, 1 ಕೆಜಿ ಬೆಳ್ಳಿ ದರ ₹2,32,364ರಿಂದ ₹2,01,500ಕ್ಕೆ ಇಳಿಕೆಯಾಗಿದೆ. ಅಂದರೆ ಸುಮಾರು ₹30,864 ಕಡಿಮೆಯಾಗಿದೆ.
ಈ ದರ ಇಳಿಕೆಯಿಂದ ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್ (MCX) ಷೇರು ಮೌಲ್ಯವೂ ಕುಸಿದಿದ್ದು, ಒಂದು ದಿನದಲ್ಲಿ ₹100.10 (4.15%) ಇಳಿಕೆಯಾಗಿದೆ.ಇದನ್ನು ಓದಿ –ಇತಿಹಾಸದಲ್ಲೇಇದನ್ನು ಓದಿ – ರೂಪಾಯಿ ಮೌಲ್ಯ ಭಾರೀ ಕುಸಿತ
ಚಿನ್ನ ಮತ್ತು ಬೆಳ್ಳಿ ದರಗಳು ನಗರದಿಂದ ನಗರಕ್ಕೆ ಹಾಗೂ ಅಂಗಡಿಯಿಂದ ಅಂಗಡಿಗೆ ಬದಲಾಗುವ ಸಾಧ್ಯತೆ ಇದೆ ಎಂದು ತಜ್ಞರು ತಿಳಿಸಿದ್ದಾರೆ.








