By using this site, you agree to the Privacy Policy and Terms of Use.
Accept
VarthamanVarthamanVarthaman
Notification Show More
Font ResizerAa
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
    ArticlesShow More
    ಉಡುಗೊರೆ ಹೊರೆಯಾಗದಿರಲಿ
    May 16, 2026
    ಅಸಹಾಯಕತೆಗೆ ಸ್ಪಂದಿಸುವ ಕನ್ನಡಿಗರ ಸೌಜನ್ಯಕ್ಕೆ ಸಾಟಿಯುಂಟೇ……?
    May 16, 2026
    ” ರಿಜೆಕ್ಷನ್ ಟು ರೆವಲ್ಯೂಷನ್ “
    May 5, 2026
    “ಸೂರ್ಯನಿಗೆ ಸವಾಲೆಸೆದವರು”
    May 3, 2026
    ಸ್ವಭಾವದ ಸ್ವರೂಪ
    May 3, 2026
  • Sports
  • National
  • International
  • Crime
Reading: ಅಗಣಿತ ಆರೋಗ್ಯ ಭಾಗ್ಯಗಳ ರಾಜ ಈ ಕರಬೂಜ ಬೀಜ
Share
Font ResizerAa
VarthamanVarthaman
  • Home
  • Karnataka
  • Articles
  • Sports
  • National
  • International
  • Crime
Search
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
  • Sports
  • National
  • International
  • Crime
Follow US
Varthaman > Karnataka – Latest Breaking News > Articles > ಅಗಣಿತ ಆರೋಗ್ಯ ಭಾಗ್ಯಗಳ ರಾಜ ಈ ಕರಬೂಜ ಬೀಜ
Articles

ಅಗಣಿತ ಆರೋಗ್ಯ ಭಾಗ್ಯಗಳ ರಾಜ ಈ ಕರಬೂಜ ಬೀಜ

Team Varthaman
Last updated: April 25, 2026 9:38 AM
Team Varthaman
Published: April 25, 2026
Share
SHARE

ಬೇಸಿಗೆಯ ಸುಡುವ ಬಿಸಿಲು ಮತ್ತು ಬಿಸಿಲಿನ ವಾತಾವರಣದಲ್ಲಿ, ದೇಹಕ್ಕೆ ತಂಪು ಮತ್ತು ತಾಜಾತನವನ್ನು ನೀಡುವ ಹಣ್ಣುಗಳಲ್ಲಿ, ಬಹಳ ಜನಪ್ರಿಯವಾದ ಹಣ್ಣು ಕರಬೂಜ. ಈ ಹಣ್ಣು ಮಸ್ಕ್ ಮೆಲನ್, ಶಮಾಮ್, ಕರಬೂಜ ಎಂಬ ವಿವಿಧ ಹೆಸರುಗಳಿಂದ ಕರೆಯಲ್ಪಡುತ್ತದೆ. ಇದು ಸಿಹಿ ರುಚಿ, ನೀರಿನ ಅಂಶದಿಂದ ಸಮೃದ್ಧವಾಗಿದ್ದು ದೇಹಕ್ಕೆ ಉಲ್ಲಾಸವನ್ನು ಕೊಡುವುದಲ್ಲದೆ ಶಾಖದಿಂದ ಪರಿಹಾರ ನೀಡಿ ಆರೋಗ್ಯಕ್ಕೂ ಹಲವು ವಿಧಗಳಲ್ಲಿ ಪ್ರಯೋಜನಕಾರಿಯಾಗಿದೆ. ಕರಬೂಜ ಹಣ್ಣಿನಲ್ಲಿ ಸುಮಾರು 90% ನೀರು ಇದ್ದು, ಬೇಸಿಗೆಯಲ್ಲಿ ನಿರ್ಜಲೀಕರಣವನ್ನು ತಡೆಯಲು ಸಹಾಯ ಮಾಡುತ್ತದೆ. ದಿನದ ಗದ್ದಲ ಮತ್ತು ಬಿಸಿಲಿನ ನಂತರ ಕರಬೂಜ ತಿನ್ನುವುದು ದೇಹವನ್ನು ತಂಪಾಗಿಸುತ್ತದೆ.

Join WhatsApp Group

ಕರ್ಬೂಜ ಹಣ್ಣನ್ನು ಕತ್ತರಿಸುವ ಸಂದರ್ಭದಲ್ಲಿ ಸಿಪ್ಪೆಯ ಜೊತೆಯಲ್ಲಿ ಅದರ ಬೀಜವನ್ನು ಎಸೆದುಬಿಡುತ್ತೇವೆ. ಈ ರೀತಿ ಮಾಡುವುದರಿಂದ ನಮಗೆ ತಿಳಿಯದಂತೆ ನಮ್ಮ ದೇಹಕ್ಕೆ ಸೇರಬೇಕಿದ್ದ ಉತ್ತಮ ಪೋಷಕಾಂಶವನ್ನು ಕಳೆದುಕೊಳ್ಳುತ್ತೇವೆ.

ಖರ್ಬೂಜದ ಬೀಜಗಳು ವಿಟಮಿನ್ ಎ. ಕೆ ,ಸಿ , ಬಿ1, ಇ ಹಾಗೂ ಸತು, ಪ್ರೊಟೀನ್, ಆರೋಗ್ಯಕರ ಕೊಬ್ಬುಗಳು ಮತ್ತು ಕಾರ್ಬೋಹೈಡ್ರೇಟ್ ಅಂಶಗಳನ್ನು ಹೇರಳವಾಗಿ ಹೊಂದಿರುತ್ತದೆ. ಭಾರತೀಯ ಅಡುಗೆ ಮನೆಗಳಲ್ಲಿ ಕರ್ಬೂಜದ ಬೀಜಗಳನ್ನು ನಾನಾ ರೀತಿಯಲ್ಲಿ ಬಳಕೆ ಮಾಡುತ್ತಾರೆ. ಕರ್ಬೂಜದ ಬೀಜಗಳ ಪ್ರಯೋಜನಗಳನ್ನು ನಾವಿಲ್ಲಿ ತಿಳಿದುಕೊಳ್ಳೋಣ.

ಸೇವಿಸುವ ಆಹಾರದಲ್ಲಿ ಕರ್ಬೂಜಬೀಜದ ಸತ್ವವಿರಲಿ

ಕರ್ಬೂಜದ ಬೀಜಗಳನ್ನು ಅಡುಗೆಯಲ್ಲಿ ಬಳಕೆ ಮಾಡುವ ಮುನ್ನ ಇದನ್ನು ಚೆನ್ನಾಗಿ ತೊಳೆದು ಒಣಗಿಸಿಕೊಳ್ಳಬೇಕು. ಬೀಜಗಳನ್ನು ತಿರುಳಿನಿಂದ ಬೇರ್ಪಡಿಸಿದ ಬಳಿಕ ಅದನ್ನು ಚೆನ್ನಾಗಿ ತೊಳೆದುಕೊಳ್ಳಿ. ಸಂಪೂರ್ಣವಾಗಿ ಬೀಜಗಳು ತಿರುಳಿನಿಂದ ಹೊರಬಂದ ಬಳಿಕ ಸಾಮಾನ್ಯ ಶಾಖದಲ್ಲಿ ಅದನ್ನು ಒಣಗಿಸಲು ಬಿಡಿ. ಬೀಜದ ತೇವಾಂಶಗಳೆಲ್ಲ ಮಾಯವಾಗಿ ಅವುಗಳು ಒಣಗಿದ ಬಳಿಕ ಬೀಜಗಳನ್ನು ನೇರವಾಗಿ ಹಾಗೆಯೇ ಸೇವಿಸಬಹುದು. ಇಲ್ಲವಾದಲ್ಲಿ ಸಲಾಡ್ಗಳಲ್ಲಿ, ಬ್ರೆಡ್, ಬನ್ ಇಲ್ಲವೇ ಕೇಕ್ಗಳಲ್ಲಿ ಸಿಂಪಡಿಸಿ ಕೂಡ ತಿನ್ನಬಹುದು. ಯಾವುದೇ ಸಿಹಿತಿಂಡಿಗಳು, ಸ್ಮೂದಿಗಳಲ್ಲಿ ಕೂಡ ಕರ್ಬೂಜದ ಬೀಜಗಳನ್ನು ಬಳಕೆ ಮಾಡ ಬಹುದಾಗಿದೆ.

Join WhatsApp Group

ಸಸ್ಯಾಹಾರಿಗಳು ತಮ್ಮ ದೇಹದಲ್ಲಿ ಪ್ರೊಟೀನ್ ಶೇಖರಣೆಯನ್ನು ಹೆಚ್ಚಿಸಿಕೊಳ್ಳಲು ಕರ್ಬೂಜದ ಬೀಜಗಳು ಒಳ್ಳೆಯ ಕೊಡುಗೆ ನೀಡುತ್ತವೆ. ಅಲ್ಲದೇ ಹಾರ್ಮೋನ್ಗಳ ಆರೋಗ್ಯಕ್ಕೆ ಕೂಡ ಸಹಾಯ ಮಾಡುತ್ತವೆ. ದೇಹದಲ್ಲಿ ಕೊಲೆಸ್ಟ್ರಾಲ್ ಕಡಿಮೆ ಮಾಡುವ ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಸಾಮರ್ಥ್ಯ ಕೂಡ ಈ ಬೀಜಗಳಿಗೆ ಇದೆ. ಈ ಬೀಜಗಳು ಗಾತ್ರದಲ್ಲಿ ಚಿಕ್ಕದಾಗಿದ್ದರೂ ಸಹ ಹೃದಯದ ಆರೋಗ್ಯವನ್ನು ಸುಧಾರಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ.

1) ತೂಕ ಇಳಿಸುವ ಯೋಚನೆಯಲ್ಲಿದ್ದರೆ ಕರ್ಬೂಜ ಹಣ್ಣಿನ ಬೀಜಗಳನ್ನು ಸೇವಿಸಬೇಕು. ಈ ಬೀಜಗಳು ಫೈಬರ್ ಅಂಶದಲ್ಲಿ ಸಮೃದ್ಧವಾಗಿವೆ, ಇದು ತೂಕವನ್ನು ಕಡಿಮೆ ಮಾಡಲು ಸಹಕಾರಿ.

2) ಕರ್ಬೂಜ ಹಣ್ಣಿನ ಬೀಜಗಳನ್ನು ಸೇವಿಸುವುದರಿಂದ ಮೆದುಳಿನಲ್ಲಿ ಉತ್ತಮ ರಕ್ತ ಪರಿಚಲನೆ ಉಂಟಾಗುತ್ತದೆ, ಇದರಿಂದ ಮನಸ್ಸು ಶಾಂತವಾಗಿರುತ್ತದೆ

3) ಕರಬೂಜ ಹಣ್ಣು ಬೀಟಾ ಕ್ಯಾರೋಟಿನ್ ಅಂಶ ಹೊಂದಿದ್ದು, ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ, ಇದು ದೃಷ್ಟಿಗೆ ಹೊಳಪು ನೀಡುವುದಲ್ಲದೇ ಕಣ್ಣಿನ ಪೊರೆಯನ್ನು ತಡೆಯುತ್ತದೆ.

4) ಕರಬೂಜವು ಹೆಚ್ಚಿನ ಶೇಕಡಾವಾರು ನೀರನ್ನು ಹೊಂದಿರುತ್ತದೆ, ಇದು ಅಜೀರ್ಣ, ಮಲಬದ್ಧತೆ ಮತ್ತು ಗ್ಯಾಸ್ ಸೇರಿದಂತೆ ಎಲ್ಲಾ ರೀತಿಯ ಜೀರ್ಣಕಾರಿ ಸಮಸ್ಯೆಗಳಿಗೆ ಸಹಾಯ ಮಾಡುತ್ತದೆ.

Join WhatsApp Group

5) ಬಿ ಜೀವಸತ್ವಗಳು, ವಿಶೇಷವಾಗಿ ಬಿ6, ನರಮಂಡಲವನ್ನು ಬೆಂಬಲಿಸುತ್ತವೆ ಮತ್ತು ಮೆದುಳಿಗೆ “ಹಿತವಾದ ಭಾವನೆ” ನೀಡುವ ರಾಸಾಯನಿಕವಾದ ಸಿರೊಟೋನಿನ್ ಅನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ.

6) ಜೀರ್ಣತೆ ಹಾಗೂ ಮಲಬದ್ಧತೆಯ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಕರ್ಬುಜ ಹಣ್ಣು ಒಂದು ಒಳ್ಳೆಯ ಔಷಧಿಯಾಗಿದೆ.

7) ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿರುವವರು ಕರ್ಬೂಜ ಹಣ್ಣನ್ನು ನಿಯಮಿತವಾಗಿ ಸೇವಿಸುವುದು ಉತ್ತಮ.

8) ಕರ್ಬೂಜಹಣ್ಣಿನಲ್ಲಿ ವಿಟಮಿನ್‌ ಸಿ ಅಂಶ ಅಧಿಕವಾಗಿದೆ. ಇದರಲ್ಲಿರುವ ಆಂಟಿ ಆಕ್ಸಿಡೆಂಟ್‌ ಅಂಶಗಳು ರೋಗ ನಿರೋಧಕ ಶಕ್ತಿಯ ಹೆಚ್ಚಳಕ್ಕೆ ಸಹಾಯ ಮಾಡುತ್ತವೆ.

9) ಕರ್ಬೂಜದ ಬೀಜಗಳು ಉತ್ತಮ ಪೋಷಕಾಂಶಗಳನ್ನು ಅಗಾಧ ಪ್ರಮಾಣದಲ್ಲಿ ಹೊಂದಿರುವುದರಿಂದ ಸೂಪರ್ ಫುಡ್ ಎಂದೇ ಕರೆಯಬಹುದಾಗಿದೆ.

10) ಕರಬೂಜ ಬೀಜಗಳಲ್ಲಿ ಮೈಗ್ರೇನ್, ನಿದ್ರಾಹೀನತೆ, ಖಿನ್ನತೆಯ ಅಸ್ವಸ್ಥತೆ ಮುಂತಾದ ರೋಗಲಕ್ಷಣಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

11) ಕರಬೂಜದ ಜ್ಯೂಸ್‌ ಕುಡಿಯುತ್ತಿದ್ದರೆ ಕಜ್ಜಿ, ಗಜಕರ್ಣದಂತಹ ಚರ್ಮರೋಗ ವಾಸಿಯಾಗುತ್ತದೆ

12) ನಿದ್ರಾಹೀನತೆಯಿಂದ ಬಳಲುತ್ತಿರುವವರು ಈ ಹಣ್ಣು ಸೇವನೆ ಮಾಡಿದರೆ ಪರಿಹಾರ ಕಾಣಬಹುದು.

13) ಇದರಲ್ಲಿರುವ ವಿಟಮಿನ್‌ ಬಿ ಅಂಶ ಕೂದಲು ಉದುರುವುದನ್ನು ನಿಯಂತ್ರಿಸುತ್ತದೆ. ಶ್ಯಾಂಪೂ ಹಾಕಿ ಕೂದಲು ತೊಳೆದು ಕರಬೂಜ ಹಣ್ಣಿನ ತಿರುಳಿನಿಂದ ಮಸಾಜ್‌ ಮಾಡಿ, 10 ನಿಮಿಷದ ಬಳಿಕ ತೊಳೆಯಬೇಕು.

14) ಈ ಹಣ್ಣಿನಲ್ಲಿ ವಿಟಮಿನ್‌ ಸಿ ಚರ್ಮ ಸುಕ್ಕಾಗದಂತೆ ತಡೆಯುತ್ತದೆ. ಅಕಾಲ ಮುಪ್ಪನ್ನು ತಡೆಯುತ್ತದೆ.

15) ಕರಬೂಜ ಹಣ್ಣು ಸೌಂದರ್ಯವರ್ಧಕವೂ ಆಗಿದೆ. ಈ ಹಣ್ಣಿನಲ್ಲಿ ನೀರಿನಾಂಶ ಹೆಚ್ಚಿರುವುದರಿಂದ ಇದರ ಸೇವನೆಯಿಂದ ಚರ್ಮ ಕಾಂತಿಯುಕ್ತಯಾಗುತ್ತದೆ.

ಯಾರೆಲ್ಲ ಸೇವಿಸಬಾರದು

1) ಅಲರ್ಜಿ ಅಥವಾ ಚರ್ಮದ ಸಮಸ್ಯೆಗಳಿಂದ ಬಳಲುತ್ತಿರುವವರು ಕರಬೂಜ ಹಣ್ಣನ್ನು ತಿನ್ನಬಾರದು ಎಂದು ತಜ್ಞರು ಹೇಳುತ್ತಾರೆ. ಏಕೆಂದರೆ ಕೆಲವರಿಗೆ ಈ ಹಣ್ಣನ್ನು ಸೇವಿಸಿದ ತಕ್ಷಣ ದದ್ದುಗಳು, ತುರಿಕೆ, ಊತ ಉಂಟಾಗುತ್ತದೆ. ಹಾಗಾಗಿ ಅಂತವರು ವೈದ್ಯರ ಸಲಹೆಯ ಮೇರೆಗೆ ಮಾತ್ರ ಈ ಹಣ್ಣಿನ ಸೇವನೆ ಮಾಡುವುದು ಬಹಳ ಉತ್ತಮ.

2) ಸಾಮಾನ್ಯವಾಗಿ ಸಕ್ಕರೆ ಕಾಯಿಲೆ ಇರುವವರು ಕರಬೂಜ ಹಣ್ಣನ್ನು ಹೆಚ್ಚು ತಿನ್ನಬಾರದು. ತಜ್ಞರ ಪ್ರಕಾರ, ಈ ಹಣ್ಣಿನ ಗ್ಲೈಸೆಮಿಕ್ ಸೂಚ್ಯಂಕವು 60- 80 ರ ನಡುವೆ ಇರುತ್ತದೆ. ಇದನ್ನು ಅತಿಯಾಗಿ ಸೇವಿಸಿದರೆ, ರಕ್ತದಲ್ಲಿನ ಸಕ್ಕರೆ ಮಟ್ಟವು ಹೆಚ್ಚಾಗಬಹುದು. ಆದ್ದರಿಂದ ಮಧುಮೇಹ ಹೊಂದಿರುವವರು ಇದನ್ನು ತಿನ್ನುವ ಮೊದಲು ವೈದ್ಯರ ಸಲಹೆ ಪಡೆಯುವುದು ಉತ್ತಮ.

ಸೂಚನೆ : ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.

ಸೌಮ್ಯಸನತ್

  • ಹೃದಯಾಘಾತ ಶಂಕೆ: 4 ವರ್ಷದ ಬಾಲಕ ಸಾವು
    by Team Varthaman
    June 17, 2026
  • NEET ಸೋರಿಕೆ ಭೀತಿ: ಟೆಲಿಗ್ರಾಮ್‌ಗೆ ತಾತ್ಕಾಲಿಕ ಬ್ರೇಕ್‌
    by Team Varthaman
    June 16, 2026
  • ಅರ್ಹರಿಗಷ್ಟೇ ಗ್ಯಾರಂಟಿ ಸೌಲಭ್ಯ, ಯೋಜನೆಗಳು ನಿಲ್ಲುವುದಿಲ್ಲ : ಸಿಎಂ
    by Team Varthaman
    June 16, 2026
  • ಮೈಸೂರಿನ ಪಬ್‌ನಲ್ಲಿ ಅಗ್ನಿ ಅವಘಡ: ಇಬ್ಬರು ಸಜೀವ ದಹನ
    by Team Varthaman
    June 15, 2026
  • ಪಿ. ಲಂಕೇಶ್ ಪತ್ನಿ ಇಂದಿರಾ ಲಂಕೇಶ್ ಇನ್ನಿಲ್ಲ
    by Team Varthaman
    June 15, 2026
ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ
ತುಪ್ಪ ಎಂಬ ಮಹಾ ಔಷಧಿ
ಸೊಪ್ಪು ತರಕಾರಿ ಕೊಂಡು ಫೋನ್ ಪೇ ಮಾಡುವ‌ ಮುನ್ನ…!!
ಶತಮಾನ ಪೂರೈಸಿದ ರಾಷ್ಟ್ರೀಯ ಸ್ವಯಂಸೇವಕ ಸಂಘ.( ಆರ್ ಎಸ್ ಎಸ್ ) 
ಆಯ್ಕೆ, ಸ್ವಾತಂತ್ರ್ಯ, ಬದುಕು, ಮದುವೆ ಇತ್ಯಾದಿ
TAGGED:healthy fruitmuskmelon seedsಕರಬೂಜ ಬೀಜ
Share This Article
Facebook Email Print
Leave a Comment

Leave a Reply Cancel reply

Your email address will not be published. Required fields are marked *

Follow US

Find US on Social Medias
FacebookLike
XFollow
YoutubeSubscribe
TelegramFollow

Weekly Newsletter

Subscribe to our newsletter to get our newest articles instantly!
[mc4wp_form]
Popular News
BengaluruCrimeKarnataka

ನಕಲಿ BPO ಕಂಪನಿ ಮೂಲಕ ವಂಚನೆ – 16 ಮಂದಿ ಬಂಧನ

Team Varthaman
Team Varthaman
October 14, 2025
ಜಾತಿವ್ಯವಸ್ಥೆ ಇರುವವರೆಗೆ ಬಸವ ತತ್ವಗಳು ಪ್ರಸ್ತುತ: ಸಿಎಂ ಸಿದ್ದರಾಮಯ್ಯ
ಮಾರ್ಚ್ 6ರಂದು ರಾಜ್ಯ ಬಜೆಟ್ ಮಂಡನೆಗೆ ಸಿಎಂ ಸಜ್ಜು
ಪಹಲ್ಗಾಮ್ ದಾಳಿ: NIA ಬಿಡುಗಡೆ ಮಾಡಿದ ನಾಲ್ವರು ಶಂಕಿತ ಉಗ್ರರ ಚಿತ್ರಗಳು
ನನ್ನ ತಂದ ಅನುದಾನಕ್ಕೆ ಸಿಎಂ ಗುದ್ಧಲಿಪೂಜೆ: ಸಾ.ರಾ.ಮಹೇಶ್‌ ಕಿಡಿ
- Advertisement -
Ad imageAd image
Global Coronavirus Cases

Confirmed

0

Death

0

More Information:Covid-19 Statistics

Categories

  • Articles
  • Sports
  • Latest News
  • Karnataka News

About US

Since its inception in 1957, Varthamana has stood tall as one of the most trusted and respected Kannada daily newspapers. With deep roots in the rich cultural landscape of Karnataka, Varthamana continues to be the voice of the people, championing truth, transparency, and the values that define the region. Established with a strong commitment to ethical journalism, our newspaper has consistently provided comprehensive coverage, authentic news, and insightful editorials for over six decades. Today, under the dynamic leadership of Editor K. N. Ravi, Varthamana shines even brighter, blending a proud heritage with a modern outlook to meet the evolving needs of readers across the state. Our presence in the digital space, through Varthamana Digital, ensures that our trusted news and regional stories reach a wider audience faster and with greater impact.

Contact Us

© Varthaman. All Rights Reserved.
Welcome Back!

Sign in to your account

Username or Email Address
Password

Lost your password?