By using this site, you agree to the Privacy Policy and Terms of Use.
Accept
VarthamanVarthamanVarthaman
Notification Show More
Font ResizerAa
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
    ArticlesShow More
    ಹಳ್ಳಿಗಳ ಪಾಲಿನ ನಡೆದಾಡುವ ಸಂಜೀವಿನಿ
    April 22, 2026
    ಸ್ಪಷ್ಟ ನಿರ್ಧಾರ ತೆಗೆದುಕೊಳ್ಳುವ ಶಕ್ತಿಯ ತಡೆಗಳು ಹಾಗೂ ಪರಿಹಾರಗಳು
    April 21, 2026
    ನಮ್ಮ ಮಕ್ಕಳ ಶಿಕ್ಷಣ
    April 20, 2026
    ಅಮಂಡಾ ನ್ಗುಯೆನ್…. ಬದುಕು, ಉದ್ದೇಶ ಹಾಗೂ ಹೋರಾಟ 
    April 18, 2026
    ಅತ್ಯಧಿಕ ಪ್ರೋಟೀನ್ , ಕಡಿಮೆ ಕ್ಯಾಲರಿಯ : ಆರೋರೂಟ್
    April 18, 2026
  • Sports
  • National
  • International
  • Crime
Reading: ಹಳ್ಳಿಗಳ ಪಾಲಿನ ನಡೆದಾಡುವ ಸಂಜೀವಿನಿ
Share
Font ResizerAa
VarthamanVarthaman
  • Home
  • Karnataka
  • Articles
  • Sports
  • National
  • International
  • Crime
Search
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
  • Sports
  • National
  • International
  • Crime
Follow US
Varthaman > Karnataka – Latest Breaking News > Articles > ಹಳ್ಳಿಗಳ ಪಾಲಿನ ನಡೆದಾಡುವ ಸಂಜೀವಿನಿ
Articles

ಹಳ್ಳಿಗಳ ಪಾಲಿನ ನಡೆದಾಡುವ ಸಂಜೀವಿನಿ

Team Varthaman
Last updated: April 22, 2026 11:40 AM
Team Varthaman
Published: April 22, 2026
Share
SHARE

ಇಂದಿನ ಉನ್ನತ ಶಿಕ್ಷಣದ ಓಟದಲ್ಲಿ ಪದವಿಗಳು ಕೇವಲ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಿಸುವ ಸಾಧನಗಳಾಗಿ ಬದಲಾಗುತ್ತಿವೆ. ಆದರೆ, ತಾನು ಕಲಿತ ಉನ್ನತ ವಿದ್ಯೆ ಮತ್ತು ಕೌಶಲಗಳು ತನ್ನ ಮಣ್ಣಿನ ಬಡ ಜನರ ಕಣ್ಣೀರು ಒರೆಸಲು ಬಳಕೆಯಾಗಬೇಕು ಎಂದು ನಂಬಿ, ಅದನ್ನು ಕಾರ್ಯರೂಪಕ್ಕೆ ತಂದವರು ಖ್ಯಾತ ನರರೋಗ ತಜ್ಞೆ ಡಾ. ಬಿಂದು ಮೆನನ್.

ನಗರದ ಐಷಾರಾಮಿ ಆಸ್ಪತ್ರೆಗಳಲ್ಲಿ ಎಸಿ ರೂಮಿನ ಸುಖವನ್ನೇ ಜೀವನ ಎಂದು ಭಾವಿಸಬಹುದಾಗಿದ್ದ ಇವರು, ಇಂದು ಹಳ್ಳಿಗಳ ಪಾಲಿನ ನಡೆದಾಡುವ ಸಂಜೀವಿನಿಯಾಗಿದ್ದಾರೆ.

Join WhatsApp Group

ಪಾರ್ಶ್ವವಾಯು ಮತ್ತು ಅಪಸ್ಮಾರದಂತಹ ಭಯಾನಕ ಕಾಯಿಲೆಗಳು ಬಂದಾಗ ದಾರಿ ಕಾಣದೆ ಕತ್ತಲಲ್ಲಿ ತಡಕಾಡುವ ಗ್ರಾಮೀಣ ಬಡವರ ಮನೆಬಾಗಿಲಿಗೇ ವೈದ್ಯಕೀಯ ಸೇವೆಯನ್ನು ಒಯ್ದ ಇವರ ಶ್ರಮ ಯುವಜನತೆಗೆ ದೊಡ್ಡ ಪಾಠ. ಡಾ. ಬಿಂದು ಮೆನನ್ ಅವರಿಗೆ ಅಂತರಾಷ್ಟ್ರೀಯ ಸಾಧಕ ಪ್ರಶಸ್ತಿ ಮತ್ತು ಅಮೆರಿಕನ್ ಅಕಾಡೆಮಿ ಆಫ್ ನ್ಯೂರಾಲಜಿಯಂತಹ ವಿಶ್ವದ ಪ್ರತಿಷ್ಠಿತ ಗೌರವಗಳು ಲಭಿಸಿವೆ.

ಇಷ್ಟೆಲ್ಲಾ ಕೀರ್ತಿ ಇದ್ದರೂ, ವಾರಾಂತ್ಯದ ರಜೆಗಳಲ್ಲಿ ಅವರು ವಿಶ್ರಾಂತಿ ಪಡೆಯುವ ಬದಲು ಹಳ್ಳಿಗಳ ಧೂಳಿನ ಹಾದಿಯಲ್ಲಿ ಸಂಚರಿಸುತ್ತಾ ಉಚಿತ ಚಿಕಿತ್ಸೆ ನೀಡುತ್ತಾರೆ.

ಯುವ ತರುಣ ತರುಣಿಯರೇ, ಇವರಿಂದ ನಾವು ಕಲಿಯಬೇಕಾದದ್ದು ಕೇವಲ ವೈದ್ಯಕೀಯ ಸೇವೆಯನ್ನಲ್ಲ, ಬದಲಾಗಿ ನಮ್ಮ ವೃತ್ತಿಯ ಬಗ್ಗೆ ನಮಗಿರಬೇಕಾದ ಸಾಮಾಜಿಕ ಜವಾಬ್ದಾರಿಯನ್ನು.

ನೀವು ಇಂಜಿನಿಯರ್ ಆಗಿರಲಿ, ಶಿಕ್ಷಕರಾಗಿರಲಿ ಅಥವಾ ಕೃಷಿಕರಾಗಿರಲಿ; ನಿಮ್ಮ ಜ್ಞಾನ ಸಮಾಜದ ಕಟ್ಟಕಡೆಯ ವ್ಯಕ್ತಿಯ ಮುಖದಲ್ಲಿ ನಗು ಮೂಡಿಸಿದರೆ ಮಾತ್ರ ನಿಮ್ಮ ಸಾಧನೆಗೆ ನಿಜವಾದ ಬೆಲೆ ಸಿಗುತ್ತದೆ.

ಕೇವಲ ಸಾಮಾಜಿಕ ಜಾಲತಾಣಗಳಲ್ಲಿನ ಲೈಕ್ಸ್ ಅಥವಾ ವ್ಯವಸ್ಥೆಯ ಮೇಲಿನ ದೂರುಗಳು ಸಮಾಜವನ್ನು ಬದಲಿಸುವುದಿಲ್ಲ. ಬದಲಿಗೆ, ಬದಲಾವಣೆಯ ಕಿಡಿ ನಮ್ಮ ಒಳಗೇ ಆರಂಭವಾಗಬೇಕು.

ನಮ್ಮ ವೃತ್ತಿ ನಮಗೆ ಬದುಕು ನೀಡಿದರೆ, ನಮ್ಮ ಪ್ರವೃತ್ತಿ ಸಮಾಜಕ್ಕೆ ನೆಮ್ಮದಿ ನೀಡಬೇಕು ಎನ್ನುವ ಬಿಂದು ಮೆನನ್ ಅವರ ಮಾತುಗಳು ನಿಮ್ಮನ್ನು ಹುರಿದುಂಬಿಸಲಿ. ದೊಡ್ಡ ಬಜೆಟ್ ಇಲ್ಲದೆಯೂ, ಕೇವಲ ಮಿಡಿಯುವ ಮನಸ್ಸಿದ್ದರೆ ಅದ್ಭುತಗಳನ್ನು ಮಾಡಬಹುದು ಎಂಬುದಕ್ಕೆ ಇವರೇ ಸಾಕ್ಷಿ.

ಬನ್ನಿ, ನಿಮ್ಮಲ್ಲಿರುವ ಪ್ರತಿಭೆಯನ್ನು ಕೇವಲ ಸ್ವಾರ್ಥಕ್ಕಾಗಿ ಬಳಸದೆ, ಈ ದೇಶದ ಅಭಿವೃದ್ಧಿಗೆ ಮತ್ತು ನೊಂದವರ ಸೇವೆಗೆ ಧಾರೆ ಎರೆಯಿರಿ.

ಜ್ಞಾನವು ಸೇವೆಯೊಂದಿಗೆ ಬೆರೆತಾಗ ಮಾತ್ರ ಅದು ಪವಿತ್ರವಾಗುತ್ತದೆ ಎಂಬ ಸತ್ಯವನ್ನು ಅರಿತು, ಹೊಸ ಭಾರತದ ನಿರ್ಮಾಣಕ್ಕೆ ಇಂದೇ ಕೈಜೋಡಿಸಿ. ನಿಮ್ಮ ಒಂದು ಸಣ್ಣ ಸಮಾಜಮುಖಿ ಹೆಜ್ಜೆ ಲಕ್ಷಾಂತರ ಜೀವಗಳಿಗೆ ಭರವಸೆಯ ಬೆಳಕಾಗಬಹುದು.

ಇಂತಹ ನಿಸ್ವಾರ್ಥ ಹಾದಿಯಲ್ಲಿ ಸಾಗಲು ಇಂದೇ ಸನ್ನದ್ಧರಾಗಿ. ನಿಮ್ಮ ಪ್ರತಿಭೆ ಮಣ್ಣಿನ ಸೇವೆಗೆ ಮುಡಿಪಾಗಿರಲಿ.

ಡಾ.ಸುಧಾಕರ.ಜಿ.ಲಕ್ಕವಳ್ಳಿ.

  • ಲೋಕಾಯುಕ್ತ ದಾಳಿ: ಲಂಚ ಪಡೆಯುತ್ತಿದ್ದ ಇನ್‌ಸ್ಪೆಕ್ಟರ್ ವಶಕ್ಕೆ
    by Team Varthaman
  • ಹಳ್ಳಿಗಳ ಪಾಲಿನ ನಡೆದಾಡುವ ಸಂಜೀವಿನಿ
    by Team Varthaman
  • ಪಹಲ್ಗಾಮ್ ದಾಳಿ ವಾರ್ಷಿಕ: ಹುತಾತ್ಮರಿಗೆ ಮೋದಿ ಗೌರವ
    by Team Varthaman
  • ಸ್ಪಷ್ಟ ನಿರ್ಧಾರ ತೆಗೆದುಕೊಳ್ಳುವ ಶಕ್ತಿಯ ತಡೆಗಳು ಹಾಗೂ ಪರಿಹಾರಗಳು
    by Team Varthaman
  • ಖರ್ಗೆ ವಿವಾದಾತ್ಮಕ ಹೇಳಿಕೆ: ಮೋದಿ ವಿರುದ್ಧ ಟೀಕೆ, ಬಳಿಕ ಸ್ಪಷ್ಟನೆ
    by Team Varthaman
ಒಂದೇ ಬಳ್ಳಿಯ ಹೂಗಳಲ್ಲೂ ಅಸೂಯೆಯ ಮುಳ್ಳುಗಳೇ.?
ದಸರಾ ಬರೀ ಹಬ್ಬವಲ್ಲ ನಾಡಿನ ಸಾಂಸ್ಕೃತಿಕ ಪ್ರತಿಬಿಂಬ
ಸಮಯ ಕಳೆದು ಹೋಗಿದೆ,ಕಳೆದದ್ದು ತಿಳಿಯಲೇ ಇಲ್ಲ
“ಬುದ್ಧ ಪೌರ್ಣಮಿ ವಿಶೇಷ “
ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ
Share This Article
Facebook Email Print
Leave a Comment

Leave a Reply Cancel reply

Your email address will not be published. Required fields are marked *

Follow US

Find US on Social Medias
FacebookLike
XFollow
YoutubeSubscribe
TelegramFollow

Weekly Newsletter

Subscribe to our newsletter to get our newest articles instantly!
[mc4wp_form]
Popular News
BengaluruKarnataka

ಹಿರಿಯ ಪತ್ರಕರ್ತ ಟಿಜೆಎಸ್ ಜಾರ್ಜ್ ನಿಧನ

Team Varthaman
Team Varthaman
October 3, 2025
ಬಾಂಧವ್ಯದ ಸಂಕೇತ ರಕ್ಷಾ ಬಂಧನ
ಮೈಸೂರು : ಕುಡಿತಕ್ಕೆ ಹಣ ನೀಡದ ಪತಿಯನ್ನೇ ಕೊಂದ ಪತಿ
ನಾಳೆ ಬೆಳಗ್ಗೆ 6ರಿಂದ ರಾಜ್ಯಾದ್ಯಂತ ಬಸ್ ಸಂಚಾರ ಸ್ಥಗಿತ
ಜಮೀನಿನ ವಿದ್ಯುತ್ ಬೇಲಿಗೆ ಬಲಿಯಾದ ಎರಡು ಕಾಡಾನೆಗಳು
- Advertisement -
Ad imageAd image
Global Coronavirus Cases

Confirmed

0

Death

0

More Information:Covid-19 Statistics

Categories

  • Articles
  • Sports
  • Latest News
  • Karnataka News

About US

Since its inception in 1957, Varthamana has stood tall as one of the most trusted and respected Kannada daily newspapers. With deep roots in the rich cultural landscape of Karnataka, Varthamana continues to be the voice of the people, championing truth, transparency, and the values that define the region. Established with a strong commitment to ethical journalism, our newspaper has consistently provided comprehensive coverage, authentic news, and insightful editorials for over six decades. Today, under the dynamic leadership of Editor K. N. Ravi, Varthamana shines even brighter, blending a proud heritage with a modern outlook to meet the evolving needs of readers across the state. Our presence in the digital space, through Varthamana Digital, ensures that our trusted news and regional stories reach a wider audience faster and with greater impact.

Contact Us

© Varthaman. All Rights Reserved.
Welcome Back!

Sign in to your account

Username or Email Address
Password

Lost your password?